ದಯಾನಿಧೇ ಶ್ರೀರಾಘವೇಂದ್ರ ಗುರುವೇ ।

ಕಾಮಿತ ಸುರತರುವೇ ॥ ಪ | ದಯಾಕರನೆ ಭವ ಭಯಾ ಹರಿಸಿ ತವ |

ಜಯಾಕರ ಪಾದ ಪಯೋಜ ಯುಗ ತೋರೋ ।। ಆ ಪ ।।

ಧರಾತಳದಿ ಸುರತರೂ ಸುರಭಿವರ | ತೆರಾದಿ ಕಾಮಿತ ಕರಾದು ಮೆರೆಯೋ || ೧ || ಗಡಾನೆ ತವಪದ ಜಡಾಜ ಭಜಿಸುವ |

ದೃಢಾವೆ ಕೊಡೊ ಎನ್ನೊಡೇಯ ನೀನೇ ||

೨ ||

ಎಷ್ಟೋ ಪೇಳಲಿ ಎನ್ನ ಕಷ್ಟಾರಾಶಿಗಳ್ಯತಿ | ಶ್ರೇಷ್ಠಾನೆ ಕಳಿಯೊ ಉತ್ಕೃಷ್ಣಾ ಮಹಿಮ ಗುರೋ || ೩

||

ಮೋಕ್ಷಾದ ಎನ್ನನು ವೀಕ್ಷಿಸಿ ಈಗಲೆ |

ಸುಕ್ಷೇಮ ನೀಡುತ್ತಾ ಪೇಕ್ಷಾಪೂರ್ತಿಸೋ ಗುರೋ ||

೪ ||

ದಾತಾನೆ ಎನ್ನಯ ಮಾತಾನು ಲಾಲಿಸೋ |

ನೀತಾ ಗುರುಜಗನ್ನಾಥವಿಠಲ ಪ್ರಿಯ ||

೫ ||


0:16

Shared 2 months ago

12 views