Vincent Selvakumar Kannada - ಕನ್ನಡ

ಸಹೋದರ ವಿನ್ಸೆಂಟ್ ಸೆಲ್ವಕುಮಾರ್ ರವರು ಸಾಧಾರಣ ಬಡಕುಟುಂಬದಲ್ಲಿ ಜನಿಸಿದರು. ಅವರು ತನ್ನ ಯವ್ವನದ ಪ್ರಯಾದಲ್ಲಿ ತನ್ನ ತಾಯಿಯನ್ನು ಕಳೆದುಕೊಂಡವರಾಗಿ ಕಠಿಣವಾದ ಪರಿಸ್ಥಿತಿಗಳನ್ನು ಅವರ ಜೀವನದಲ್ಲಿ ಹಾದುಬಂದರು. ಅವರ ಕಾಲೇಜಿನ ದಿನಗಳಲ್ಲಿ ಮಾರಕ ವಸ್ತುಗಳನ್ನು ಮಾತ್ರವಲ್ಲದೆ, ಧೂಮಪಾನವನ್ನು ಕೂಡಾ ಅಭ್ಯಾಸಿಸುವರಾಗಿದ್ದರು. ಇದರೊಟ್ಟಿಗೆ ಅವರು ನಾಸ್ತಿಕರಾಗಿದ್ದರು.
ಮೂವತ್ತು ವರ್ಷಗಳ ತಮ್ಮ ಸೇವೆಯ ಅವಧಿಯ ನಂತರ ಕರ್ತನು ಸಹೋದರನಿಗೆ ತನ್ನ ಎಲ್ಲಾ ಸೇವೆಯ ಕಾರ್ಯಗಳನ್ನು ಹಾಗೂ ಅವರ ಜವಾಬ್ದಾರಿಗಳನ್ನು ಬಿಟ್ಟು ತನ್ನನ್ನು ಪ್ರತ್ಯೇಕಿಸಿಕೊಳ್ಳಬೇಕೆಂದು ಪ್ರಕಟಿಸಿದನು. ಅಂತ್ಯಕಾಲದ ಪ್ರಕಟಣೆಗಳನ್ನು ಹಾಗೂ ಗೂಡಾರ್ಥಗಳನ್ನು ಮತ್ತು ರಹಸ್ಯಗಳನ್ನು ಪ್ರಕಟಿಸಲು ಅವರು ಪೂರ್ಣ ಸಮಯವು ಕರ್ತನಿಗೆ ಮುಡುಪಾಗಿಸಬೇಕಾಗಿತ್ತು. ಇದರ ಫಲಿತಾಂಶವಾಗಿ ಕರ್ತನು ಅಂತ್ಯಕಾಲದ ಪ್ರವಾದನೆಗಳನ್ನು ಹಾಗೂ ಆತ್ಮೀಕ ಸತ್ಯಾರ್ಥತೆಗಳನ್ನು ಪ್ರಕಟಿಸತೊಡಗಿದನು. ಸಹೋದರನ ಕರೆಯುವಿಕೆ ಹಳೆಯ ಒಡಂಬಡಿಕೆಯ ಪ್ರವಾದಿಗಳ ಕರೆಯುವಿಕೆಯಂತದ್ದು, ಕರ್ತನ ಜೊತೆಗಿನ ಅತ್ಯಧಿಕವಾದ ಅನ್ಯೋನ್ಯತೆ ಹಾಗೂ ದೇವರಾತ್ಮನ ಜೊತೆಗಿನ ಐಕ್ಯತೆ.
ಸಹೋದರ ವಿನ್ಸೆಂಟ್ ಸೆಲ್ವಕುಮಾರ್ ರವರಿಗೆ ಅಂತ್ಯಕಾಲದ ಪ್ರವಾದನೆಗಳನ್ನು ಅಪೇಕ್ಷವಾಗಿ ದಯಪಾಲಿಸಲ್ಪಟ್ಟಿರುತ್ತದೆ. ಸಹೋದರರು ಒಬ್ಬ ಪ್ರವಾದಿಯಾಗಿ ಅಂಗೀಕಾರವಾಗಿರುತ್ತಾರೆ.