Drishyakavya Kannada

ದೃಶ್ಯಕಾವ್ಯ - ಇದು 'ಕನ್ನಡ ದೃಶ್ಯಕಾವ್ಯ ಪ್ರತಿಷ್ಠಾನ' ಸಂಸ್ಥೆಯ ಯುಟ್ಯೂಬ್ ವಾಹಿನಿ. ತಾಳೆಗರಿ, ಶಾಸನಗಳು, ಶಿಲ್ಪಗಳು, ಗ್ರಂಥಗಳು, ಜಾನಪದ ಇತ್ಯಾದಿ ಆಕರಗಳಿಂದ ಆರಿಸಿ ತೆಗೆದ ಅಪರೂಪದ ಕಾವ್ಯಭಾಗಗಳು, ಹಾಡುಗಳು, ಕಥಾನಕಗಳು ಹಾಗೂ ಮಾಹಿತಿಗಳನ್ನು ದೃಶ್ಯಮಾಧ್ಯಮದ ಮೂಲಕ ಅನಾವರಣಗೊಳಿಸುವುದು ಈ ವಾಹಿನಿಯ ಮುಖ್ಯ ಗುರಿ. ಗಣಕ ಬಳಸುವ ಯುವಜನಾಂಗದ ಮನಸಿಗೆ, ಮಿದುಳಿಗೆ ಕನ್ನಡ ಸೇತು ಕಟ್ಟುವಲ್ಲಿ ಇದೊಂದು ಅಳಿಲುಸೇವೆ. ದೃಶ್ಯಕಾವ್ಯದ ರೂವಾರಿಗಳು- ಬರಹಗಾರ ಜಯಕುಮಾರ್ ವಿನಾಯಕ, ಶಾಸನ ಶಾಸ್ತ್ರಜ್ಞ ಅಚ್ಯುತ ಕಣಕಟ್ಟೆ ಹಾಗೂ ದೃಶ್ಯತಜ್ಞ ಗಣಪತಿ ಭಟ್. ಕನ್ನಡ ವಿದ್ವಾಂಸರ, ಪ್ರಾಜ್ಞರ, ಉದ್ಯಮಿಗಳ, ಕನ್ನಡಾಭಿಮಾನಿ ಸಹೃದಯರ ಮಾರ್ಗದರ್ಶನದೊಂದಿಗೆ ಮೂಡಿ ಬಂದಿದೆ 'ದೃಶ್ಯಕಾವ್ಯ'