TARGET MY GOAL

APRIL 4TH CURRENT AFFAIRS HIGHLIGHTS


1.ಗೋದಾವರಿ-ಕೃಷ್ಣಾ-ಕಾವರಿ ನದಿಗಳ ಜೋಡಣೆಯಿಂದ 5 ರಾಜ್ಯಗಳಿಗೆ 147 ಟಿಎಂಸಿ ಹಂಚಿಕೆ ಮಾಡಲಾಗಿದ್ದು, ರಾಜ್ಯಕ್ಕೆ ಕೇವಲ 15 ಟಿಎಂಸಿ ಲಭ್ಯವಿದ್ದು, ಇದರಡಿ 2ಟಿಎಂಸಿ ಮಾತ್ರ ನೀರು ಲಭ್ಯವಾಗಲಿದ್ದು, ರಾಜ್ಯ ಸರ್ಕಾರ ಈ ಪ್ರಸ್ತಾವವನ್ನು ತಿರಸ್ಕರಿಸಿದೆ.

2. ಪೂನಂ ಗುಪ್ತಾ ಅವರನ್ನು RBI ನ ಡೆಪ್ಯೂಟಿ ಗವರ್ನರ್ ಆಗಿ ನೇಮಕ ಮಾಡಲಾಗಿದೆ.

3. ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನೀಡುವ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಯಾದ 'ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ' (ಕೆಎಎಸ್‌ಎಸ್) ಯಡಿ ಆರಂಭದಲ್ಲಿ (ಮೊದಲ ಹಂತ) ಒಳರೋಗಿ ವಿಭಾಗಕ್ಕೆ ಮಾತ್ರ ಸೇವಾ ಸೌಲಭ್ಯ ಒದಗಿಸಲಾಗುವುದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪರಿಷ್ಕೃತ ಆದೇಶ ಹೊರಡಿಸಿದೆ.

4. ಭೂಮಿಯ ಮೇಲಿನ ಎಲ್ಲಾ ಸಾಗರಗಳಿಗಿಂತ 100

ಟ್ರಿಲಿಯನ್ ಪಟ್ಟು ಹೆಚ್ಚು ನೀರನ್ನು ಹೊಂದಿರುವ ಬೃಹತ್ ನೀರಿನ ಜಲಾಶಯವನ್ನು ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ಕಂಡುಹಿಡಿದಿದ್ದಾರೆ. ಈ ಅಗಾಧವಾದ ಜಲರಾಶಿ ಸಕ್ರಿಯ ಕ್ವಾಸರ್ ಎಪಿಎಂ(ಆಟೊಮ್ಯಾಟಿಕ್ ಪ್ಲೇಟ್ ಮೆಷರಿಂಗ್ ಫೆಸಿಲಿಟಿ) 08279 + 5255 ಬಳಿ ಇದೆ. ಇದು ಸುಮಾರು 12 ಬಿಲಿಯನ್ ಬೆಳಕಿನ ವರ್ಷಗಳ ದೂರದಲ್ಲಿದೆ.ಈ ಕ್ವಾಸರ್‌ನ ಮಧ್ಯಭಾಗದಲ್ಲಿ ಒಂದು ಸೂಪರ್ ಮಾಸ್ಸಿವ್ ಕಪ್ಪು ರಂಧ್ರವಿದೆ.

5. 2031 ಮತ್ತು 2035ರ ಆವೃತ್ತಿಯ ಫಿಫಾ ಮಹಿಳಾ ವಿಶ್ವಕಪ್‌ಗಳ ಆತಿಥ್ಯವನ್ನು ಕ್ರಮವಾಗಿ ಅಮೆರಿಕ ಮತ್ತು ಬ್ರಿಟನ್ ದೇಶಗಳು ಪಡೆಯುವ ಸಾಧ್ಯತೆ ದಟ್ಟವಾಗಿದೆ. 2031ರ ಪಂದ್ಯಾವಳಿಯನ್ನು ಏರ್ಪಡಿಸುವ ಇಚ್ಛೆಯನ್ನು ವ್ಯಕ್ತಪಡಿಸಿ ಅಮೆರಿಕ ಸಲ್ಲಿಸಿರುವ ಪ್ರಸ್ತಾವವನ್ನು ಫಿಫಾ ಸ್ವೀಕರಿಸಿದೆ ಎಂದು ಯರೋಪಿಯನ್ ಫುಟ್ಬಾಲ್ ಅಧಿಕಾರಿಗಳಿಗೆ ಫಿಫಾ ಅಧ್ಯಕ್ಷಜಿಯಾನಿ ಇನ್‌ಫ್ಯಾಂಟಿನೊ ತಿಳಿಸಿದರು.

6. 2025 ರ BIMSTEC ಸಮಾವೇಶ ಥೈಲ್ಯಾಂಡ್ ನಲ್ಲಿ ನಡೆದಿರುವದು...

6 months ago | [YT] | 2