Pallavi gowda kannada vlogs

Pallavi gowda kannada vlogs

"ಚಂದ್ರನಿಗೆ ಶಾಪ"


ಒಮ್ಮೆ ಗಣೇಶ ಇಲಿಯ ಮೇಲೆ ಸಂಚಾರ ಮಾಡುತ್ತ ಚಂದ್ರಲೊಕಕ್ಕೆ ಬರುತ್ತಾನೆ. ಚಂದ್ರನೊ ಸರ್ವಾಂಗ ಸುಂದರ. ಅವನಿಗೆ ತನ್ನ ಸೌಂದರ್ಯದ ಮೇಲೆ ಅಪಾರ ಮಮತೆ. ವಿಕಟರೂಪನಾದ ಗಣಪನನ್ನು ಕಂಡು ಅಪಹಾಸ್ಯ ಮಾಡುತ್ತಾನೆ. ಜೋರಾಗಿ ನಗುತ್ತಾನೆ. ಗಣಪನಿಗೆ ಅಪಮಾನವಾಗುತ್ತದೆ. ಚಂದ್ರನಿಗೆ ಹೀಗೆ ಶಾಪ ನೀಡುತ್ತಾನೆ. 'ಎಲೈ ಚಂದ್ರ ನೀನು ಸೌಂದರ್ಯ ಮದದಿಂದ ಬೀಗುತಿದೀಯ. ಮೂರ್ಖ! ಇದಕ್ಕೆ ತಕ್ಕ ಫಲವನ್ನು ಅನುಭವಿಸು. ನಿನ್ನೆಲ್ಲಾ ಗರ್ವ, ಅಜ್ಞಾನಕ್ಕೆ ಕಾರಣವಾದ ಸೌಂದರ್ಯ ಕುಂದಿ ಹೋಗಲಿ. ಭಾದ್ರಪದ ಶುದ್ಧ ಚೌತಿಯಂದು ನಿನ್ನನ್ನೂ ನೋಡುವವರು ಅಪವಾದಕ್ಕೆ ಗುರಿಯಾಗಲಿ!' ಎಂದು ಶಪಿಸುತಾನೆ. ಶಾಪಗ್ರಸ್ತನಾದ ಕೂಡಲೇ ಚಂದ್ರನ ಅಹಂಕಾರ ಇಳಿದು ಹೋಗುತ್ತದೆ. ಅವನಿಗೆ ತನ್ನ ತಪ್ಪು ಅರಿವಾಗುತ್ತದೆ. ಗಣೇಶನ ಮುಂದೆ ಭಯ-ಭಕ್ತಿಗಳಿದ ಕೈ ಮುಗಿದು ನಿಂತು, 'ಸ್ವಾಮಿ, ನನ್ನ ಅಜ್ಞಾನವನ್ನು ಕ್ಷಮಿಸಿಬಿಡು ನನಗೆ ಕೊಟ್ಟ ಶಾಪವನ್ನು ಹಿತೆಗೆದುಕೊಂಡು ಉದ್ದರಿಸು' ಎಂದು ಬೇಡಿಕೊಳುತ್ತಾನೆ.
ಗಣೇಶ ಚಂದ್ರನನ್ನು ಕ್ಷಮಿಸುತಾನೆ. ಚೌತಿಯ ದಿನ ನಿನ್ನನ್ನು ನೋಡಿ ವಿಥ್ಯಾಪ್ರವಾದಕ್ಕೆ ಗುರಿಯದವರು ಶುದ್ಧ ಬಿದಿಗೆಯ ದಿನ ನಿನ್ನ ದರ್ಶನ ಮಾಡಿದರೆ ಅಥವಾ ಸ್ಯಮಂತಕ ಮಣಿಯ ಕಥೆಯನ್ನು ಕೇಳಿದರೆ ಅಂಥವರು ಅಪವಾದದಿಂದ. ಮುಕ್ತರಾಗಲಿ' ಎಂದು ಹೇಳುತ್ತಾನೆ.


ನೀತಿ ಪಾಠ : "ಸೌಂದರ್ಯ ಇದೆ ಎಂದು ಅಹಂಕಾರ ಪಡಬೇಡಿ".

2 years ago | [YT] | 1