Meghraj Shastri is dedicated to the spiritual, cultural, and philosophical heritage of Sanatana Dharma, with a focused exploration of the Veerashaiva tradition.

We share authentic knowledge on:

Festivals & Rituals

Jyotishya (Vedic Astrology)

Vedas & Agamas

Vastu Shastra

Rasa Shastra (Alchemy)

Temple & Sacred Construction

Spiritual Discourses & Guru Parampara

Modern Civil Engineering & Construction Insights

As a civil engineer rooted in dharma, this platform bridges traditional wisdom with modern science — from temple architecture to practical building methods.

📌 Subscribe to explore the science behind spirituality, the tradition behind rituals, and the truth in timeless knowledge.



Meghraj Shastri

ಅಷ್ಟ ಮಹಾಸಿದ್ಧಿಗಳ ವಿವರ :- ಸಿದ್ಧಿಗಳಲ್ಲಿ ಉತ್ತಮ, ಮಧ್ಯಮ, ಅಧಮ ಮತ್ತು ಅಧಮಾಧಮ ಎಂದು ನಾಲ್ಕು ಪ್ರಕಾರಗಳುಂಟು, ಅದರಲ್ಲಿ ಮೊದಲು ಉತ್ತಮ ಪ್ರಕಾರದ ಸಿದ್ಧಿಗಳ ವಿವರ ಕೇಳು~ ಅಣಿಮೆ, ಮಹಿಮೆ, ಗರಿಮೆ, ಲಘಿಮೆ, ಪ್ರಾಪ್ಯ, ಪ್ರಾಕಾಮ್ಯ, ಈಶತ್ವ ಮತ್ತು ವಶಿತ್ವ ಇವು ಎಂಟು ಸಾತ್ವಿಕ ಸಿದ್ಧಿಗಳು, ಸಾಧಕನು ಸಕಾಮಿಯಾದರೆ ಇವು ಪೂರ್ಣ ವಿಘ್ನಗಳನ್ನು ತಂದೊಡ್ಡುವವು. ಇವುಗಳಿಗೆ ಮನಸೋಲದೇ ಸಾಕ್ಷಿಯಾದರೆ ಮಾತ್ರ ಸಾಧಕನು ಪರಬ್ರಹ್ಮನನ್ನು ಹೊಂದಬಲ್ಲನು. (1) ಅಣುವಿನಂತೆ ಸೂಕ್ಷ್ಮನಾಗಿ ಗುಹೆ; ಕೊಡ, ಗವಾಕ್ಷ, ಕಿವಿ, ಬಾಯಿ, ಮೂಗು ಮುಂತಾದ ನವದ್ವಾರ, ಗಿಡದ ಪೊದರು ಈ ರಂಧ್ರಗಳಲ್ಲಿ ತಾನು ಹೋಗಿಬರುವುದೇ ಅಣಿಮಾ ಸಿದ್ಧಿ ಎನಿಸುವದು. (2) ನಾನಾ ಮಹಿಮೆಯನ್ನು ತೋರಿಸುವದೇ ಮಹಿಮೆ ಸಿದ್ಧಿಯು. ಅದೆಂತೆನೆ- ಎಮ್ಮಿ ಹೋಗಿ ಆಕಳಾಗುವದು, ಸ್ತ್ರೀ ಇರಲು ಪುರುಷನಾಗುವದು, ಬೊಗಸೆಯಲ್ಲಿ ಜಲನಿಧಿಯನ್ನೇ ಹಿಡಿದು ಕುಡಿಯುವದು, ಆಕಾಶದಂತೆ ಬೃಹದಾಕಾರ ತಾಳುವದು, ಬ್ರಹ್ಮಾಂಡವನ್ನು ಸುಡುವದು. (3) ಗರಿಮೆ ಸಿದ್ಧಿಯನ್ನು ಕೇಳು- ಗಿರಿಗಿಂತಲೂ ತಾನು ಅಧಿಕ ಭಾರವುಳ್ಳವನಾಗುವದು. ಶತಕೋಟಿ ಕಬ್ಬಿಣ ಸರಪಳಿಯನ್ನು ಎಳೆಯುವದು. ಭೂಮಿಗಿಂತ ಹೆಚ್ಚು ಭಾರವುಳ್ಳವನಾಗುವದು. (4) ಲಘಿಮೆ ಅಂದರೆ ಅಣುವಿಗಿಂತಲೂ ಅಣುವಾಗಿ ಲಂಘಿಸುವದು. ಶರಧಿಯನ್ನೇ ಹಾರುವದು (ಮಾರುತಿಯಂತೆ). ನೆಗೆಯಲಿಕ್ಕೆ ಬಾರದ ವಸ್ತುವನ್ನು ಆಕಾಶಕ್ಕೆ ತಕ್ಕೊಂಡು ಹೋಗುವದು. ವೈಕುಂಠ, ಧೃವ ಲೋಕಗಳಿಗೆ ತಿರುಗುವದು. (5) ಪ್ರಾಪ್ಯ-ಇಂದ್ರನ ಮತ್ತು ಶಿವನ ಸಭೆಗಳಿಗೆ ತಾನು ಇಲ್ಲಿಂದ ಹೋಗಿ ಇಳಿಯುವದು. ಮೃಷ್ಟಾನ್ನ ಪ್ರಾಪ್ತಿಮಾಡಿಕೊಂಡು ಇಹಲೋಕದವರಿಗೆ ಬಡಿಸುವದು. (6) ಪ್ರಾಕಾಮ್ಯ : ಪರರು ಬೇಡಿದುದನ್ನು ಕೊಡುವದು. ಉದಾ :- ರಾಜ್ಯ, ಸ್ವರ್ಗ, ಮಂತ್ರಿಪದ, ದ್ರವ್ಯ, (ಕೋರ್ಟಿನ) ನ್ಯಾಯಗಳಲ್ಲಿ ಜಯ, ಸೌಂದರ್ಯ, ಬಹುಬಗೆಯ ಕಲೆ, ವಿಜ್ಞಾನ ಎಂಬಿವನ್ನು ಒಲಿದು ಕಾಮಿಸಿದವರಿಗೆ ಕೊಡುವದು. (7) ಈಶತ್ವ : ದೋಷಹರ ಷಣ್ಮುಖನೇ, ಕೇಳು- ಬ್ರಹ್ಮ ವಿಷ್ಣು ಮಹೇಶ್ವರ, ಇಂದ್ರ, ಅಗ್ನಿ ಧರ್ಮ ನೈರುತ್ಯ ಮುಂತಾದ ಸಮಸ್ತ ದೇವರು ತಾನಾಗಿ ಜಗತ್ತನ್ನು ಪ್ರೇರಿಸುವದು ಮತ್ತು (8) ಅಜ, ಹರಿ, ರುದ್ರ, ಇಂದ್ರಾದಿಗಳು ಮತ್ತು ಭಾರತಿ, ಲಕ್ಷ್ಮಿ, ಪಾರ್ವತಿ ಮುಂತಾದ ದೇವತೆಗಳು ನಾನಾ ಮೃಗಗಳು, ಭುವನಗಳು, ನೀರು, ಬೆಂಕಿ ಮುಂತಾದ ದೇವತೆಗಳು ತನ್ನ ವಶವರ್ತಿಯಾಗಿರುವದೇ ವಶಿತ್ವ. ಈ ಅಷ್ಟ ಮಹಾಸಿದ್ಧಿಗಳು ಶುದ್ಧ ಬ್ರಹ್ಮನ ಸನ್ನಿಧಿಯಲ್ಲಿರುವವು.
Please do subscribe to my channel

3 years ago (edited) | [YT] | 4