ಚಿಕ್ಕಬಳ್ಳಾಪುರದಲ್ಲಿ ಮೊಟ್ಟ ಮೊದಲ ಅಂತರಾಷ್ಟ್ರೀಯ ದಾಳಿಂಬೆ ಮಾರುಕಟ್ಟೆಯಾಗಿದ್ದು ಇದು ಬಯಲುಸೀಮೆ ರೈತರ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ. ಇಲ್ಲಿ ದಿನ ನಿತ್ಯ ರೈತರು ತಾವು ಬೆಳೆದ ದಾಳಿಂಬೆಯನ್ನು ಆಗಿಂದಾಗ್ಗೆ ತಂದು ಹರಾಜಿನಲ್ಲಿಟ್ಟು ಮಾರಾಟ ಮಾಡಬಹುದು. ಇದರಿಂದ ರೈತರಿಗೆ ನಷ್ಟವಾಗುವುದನ್ನು ತಪ್ಪಿಸಬಹುದು. ಅಲ್ಲದೆ ರೈತರ ಅನಧಿಕೃತ ವೆಚ್ಚಗಳನ್ನು ಕಡಿಮೆ ಮಾಡಲು ಸಹಾಯ ಮಾಡುವುದೇ ದಾಳಿಂಬೆ ರೈತ ಮಿತ್ರದ ಮುಖ್ಯ ಉದ್ದೇಶವಾಗಿದೆ.