Hassan News ಹಾಸನ್ ನ್ಯೂಸ್

ಕಳೆದ 8 ವರ್ಷಗಳ ಸತತ ಹಾಸನದ ಎಲೆ ಮರೆಯ ಕಾಯಿಗಳು, ಪ್ರತಿಭೆಗಳು, ಜನತೆಯ ಹಲವು ಸಮಸ್ಯೆ , ನಮ್ಮೂರಿನ ವೈಭವದ ಸರಮಾಲೆಗಳು , ರಾಜಕೀಯ ಸ್ಥಳೀಯ ರಾಜಕೀಯ ವಿಶ್ಲೇಷಣೆ , ಪ್ರವಾಸೋದ್ಯಮದ ತಾಣಗಳ ಪರಿಚಯ ಹೀಗೆ ಹತ್ತು ಹಲವಾರು ವಿಚಾರ ವೈಶಿಷ್ಟ್ಯ ಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ., ನಿಮ್ಮ ಪ್ರೋತ್ಸಾಹಕ್ಕೆ ನಮ್ಮ ಹಾಸನ್ ನ್ಯೂಸ್ 145,000 ಕ್ಕೂ ಹೆಚ್ಚು ಪೇಜ್ ಲೈಕ್ಸ್ ಗಳ ಗಡಿ ದಾಟಿದೆ. ಈ ಶುಭ ಸಂದರ್ಭದಲ್ಲಿ ನಿಮಗೆಲ್ಲರಿಗೂ ಧನ್ಯವಾದಗಳು.


Follow us on Facebook Page:
www.facebook.com/hassannews/

Follow us on Instagram:
www.instagram.com/hassan_news/

Reach us on Twitter:
twitter.com/HASSANNEWSPAGE


Hassan News ಹಾಸನ್ ನ್ಯೂಸ್

ಶಬರಿಮಲೆ ಪ್ರಯಾಣಿಕರ ವಿಶೇಷ ಗಮನಕ್ಕೆ:
ಶಬರಿಮಲೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಮತ್ತು ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಹಾಸನ ಜಿಲ್ಲೆಯ ಅರಸೀಕೆರೆ , ಚಿಕ್ಕ ಬಾಣಾವರ ಸೇರಿ ರಾಜ್ಯದ ಹಲವೆಡೆಯಿಂದ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ-ಕೇರಳದ ಕೊಟ್ಟಾಯಂ ನಿಲ್ದಾಣಗಳ ನಡುವೆ ಒಂಬತ್ತು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲು ಸೇವೆ ನೀಡುತ್ತಿದೆ

#indianrailways #sabarimalai

1 year ago | [YT] | 18

Hassan News ಹಾಸನ್ ನ್ಯೂಸ್

ಶ್ರೀ ಹಾಸನಾಂಬೆ ದೇವಿ ಜಾತ್ರಾ ಹಿತ ರಕ್ಷಣಾ ಸಮಿತಿ ಹಾಸನಾಂಬೆ ಮಕ್ಕಳು, ವತಿಯಿಂದ ಶ್ರೀ ಹಾಸನಾಂಬೆ ದೇವಿಯ ದರ್ಶನಾರಂಭ ಹಿನ್ನೆಲೆಯಲ್ಲಿ *"ಸಂಕ್ಷಿಪ್ತ ಸ್ಥಳ ಪುರಾಣ"* ಮಾಹಿತಿಯನ್ನು 10000 ಪಾಂಪ್ಲೆಟ್ (ಕರಪತ್ರ) ಮೂಲಕ ಭಕ್ತಾದಿಗಳಿಗೆ . ಡಿಜಿಟಲ್ ಕಾಪಿ.

#hasanambahistory #hasanambatemple

1 year ago | [YT] | 13

Hassan News ಹಾಸನ್ ನ್ಯೂಸ್

How To Book Online Ticket's For Hasanambha temple entry...

ಶ್ರೀ ಹಾಸನಾಂಬ ಜಾತ್ರಾ ಮಹೋತ್ಸವದ ಅಧಿಕೃತ ಟಿಕೆಟ್ ಗಳಿಗಾಗಿ ಈ ಕೂಡಲೇ Q.R ಕೋಡ್ ಸ್ಕಾನ್ ಮಾಡಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಟಿಕೆಟ್ ಗಳನ್ನು ಕಾಯ್ದಿರಿಸಿಕೊಳ್ಳಿ. ಇತರರಿಗೂ ಹೆಚ್ಚು ಶೇರ್ ಮಾಡಿ

#hasanamba2024
#hasanambhatemple

1 year ago | [YT] | 10

Hassan News ಹಾಸನ್ ನ್ಯೂಸ್

ಇತಿಹಾಸ | ಪುರಾಣ | ಮಹಿಮೆ

ಪಾಳೆಯಗಾರ ಕೃಷ್ಣಪ್ಪನಾಯಕ ಒಮ್ಮೆ ಕಾರ್ಯನಿಮಿತ್ತ ಪ್ರಯಾಣ ಹೊರಟಾಗ ಮಾರ್ಗ ಮಧ್ಯೆ ಅಡ್ಡ ಬಂದ ಮೊಲವೊಂದನ್ನು ಅಪಶಕುನ ಎಂದು ಭಾವಿಸಿ ಆತಂಕದಲ್ಲಿ ನಿಂತಿರುತ್ತಾನೆ.

ಪ್ರತ್ಯಕ್ಷಳಾದ ಆದಿಶಕ್ತಿ ಸ್ವರೂಪಿಣಿ-ಈ ಸ್ಥಳದಲ್ಲಿ ದೇಗುಲ ಕಟ್ಟು, ನಾನು ಹಾಸನಾಂಬೆ ಎಂದೇ ಹೆಸರಾಗಿ ಇಲ್ಲಿ ನೆಲೆಸುವೆ ಎಂದು ಹೇಳುತ್ತಾಳೆ.

ಪಾಳೆಯಗಾರ ಕೃಷ್ಣಪ್ಪನಾಯಕ ಕಟ್ಟಿಸಿದ ಈ ದೇವಾಲಯವು 12ನೇ ಶತಮಾನಕ್ಕೂ ಹಳೆಯ ದೇವಾಲಯವೆಂದು ಹೇಳಲಾಗುತ್ತದೆ.

ಹಾಸನಾಂಬ , ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ ಅಕ್ಟೋಬರ್ 24ರಿಂದ ನವೆಂಬರ್ 3ರ ತನಕ ಶ್ರದ್ಧಾ ಭಕ್ತಿಗಳಿಂದ ನೆರವೇರಲಿದೆ

@mumblingmonkeysmedia @srihassanaambatemple.hassan @wannaknowwhereweeat

1 year ago | [YT] | 30

Hassan News ಹಾಸನ್ ನ್ಯೂಸ್

ಶ್ರೀ ಹಾಸನಾಂಬ ದೇವಿ ದರ್ಶನ - 2024 ದರ್ಶನದ ವಿವರ :

#timtableofhasanambatemple #hasanambha2024 #hassannewstoday #hasanambatemple #srisiddheshwaratemplehassan

1 year ago | [YT] | 7

Hassan News ಹಾಸನ್ ನ್ಯೂಸ್

ಶ್ರೀ ಹಾಸನಾಂಬ ದೇವಿ ದರ್ಶನ - 2024 ದರ್ಶನದ ವಿವರ :

#timtableofhasanambatemple #hasanambha2024 #hassannewstoday #hasanambatemple #srisiddheshwaratemplehassan

1 year ago | [YT] | 18

Hassan News ಹಾಸನ್ ನ್ಯೂಸ್

ಹಾಸನ- ಹಾಸನದಲ್ಲಿ ರೌಡಿ ಶೀಟರ್ ರವಿ ಆಲಿಯಾಸ್ ಚೈಲ್ಡ್ ರವಿ ಬರ್ಬರ ಹತ್ಯೆ ಪ್ರಕರಣ

ಡಾನ್ ಪಟ್ಟಕ್ಕಾಗಿ ನಟೋರಿಯಸ್ ರೌಡಿ ಹತ್ಯೆಗೈದಿದ್ದ ರೌಡಿ ಶೀಟರ್ ಪ್ರೀತಮ್ ಆಲಿಯಾಸ್ ಗುಂಡಿ ಪ್ರೀತು ಸೇರಿ ನಾಲ್ವರ ಬಂಧನ

ನೆನ್ನೆ ರಾತ್ರಿ ಹಾಸನ ಹೊರ ವಲಯದ ಗ್ಯಾರಳ್ಳಿ ಬಳಿ ಆರೋಪಿಗಳು ಅರೆಸ್ಟ್

ಜೂನ್ 5 ರ ಮುಂಜಾನೆ 7ಗಂಟೆ 50 ನಿಮಿಷದಲ್ಲಿ ರವಿಯನ್ನ ಕೊಚ್ಚಿ ಕೊಂದಿದ್ದ ಹಂತಕರು

ಮನೆಗೆ ನೀರು ಕೊಂಡೊಯ್ಯುತ್ತಿದ್ದ ರವಿಗೆ ಕಾರು ಗುದ್ದಿಸಿ ಹತ್ಯೆ

ಕಾರು ಡಿಕ್ಕಿಯಾಗಿ ಕೆಳಗೆ ಬಿದ್ದ ರವಿಯನ್ನ ಅಟ್ಯಾಕ್ ಮಾಡಿ ಹತ್ಯೆ ಗೈದಿದ್ದ ನಾಲ್ವರು

ರೌಡಿಶೀಟರ್ ಆಗಿ ಎರಡು ಕೊಲೆ ಸೇರಿ ಏಳು ಪ್ರಕರಣ ದಲ್ಲಿ ಭಾಗಿಯಾಗಿದ್ದ ರವಿ

ಈಗಾಗಲೆ ಮೂರು ಕೊಲೆ ಮಾಡಿ ಜೈಲಿಗೆ ಹೋಗಿ ಬಂದೊದ್ದ ಪ್ರೀತು

ಹಾಸನದಲ್ಲಿ ಡಾನ್ ಪಟ್ಟಕ್ಕಾಗಿ ರವಿ ಹಾಗು ಪ್ರೀತು ನಡುವೆ ಪೈಟ್

ಇದೇ ವಿಚಾರಕ್ಕೆ ರವಿ ಕೊಂದರೆ ತಾನೇ ಡಾನ್ ಆಗ್ತೇನೆ ಎಂದು ಹೇಳಿಕೊಂದಿದ್ದ ಪ್ರೀತಮ್

ಪ್ರೀತಮ್(27) ಕೀರ್ತಿ(26) ರಂಗನಾಥ್ ಆಲಿಯಾಸ್ ರಂಗ(26) ಅಮಿತ್ ಆಲಿಯಾಸ್ ಅಮ್ಮಿ(31) ಬಂದಿತ ಆರೋಪಿಗಳು

ಚೈಲ್ಡ್ ರವಿ ಪತ್ನಿ ದೂರು ಆದರಿಸಿ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು.

ಹಾಸನದ ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು

ಕೊಲೆ ನಡೆದ ಮಾರನೇ ದಿನವೇ ಆರೋಪಿಗಳನ್ನು ಬಂದಿಸಿದ ಪೊಲೀಸರು

1 year ago | [YT] | 19

Hassan News ಹಾಸನ್ ನ್ಯೂಸ್

ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು ಹಾಸನ ಜಿಲ್ಲೆ ಬೇಲೂರು ತಾಲೂಕು ಹೆಬ್ಬಾಳು ಸರ್ಕಾರಿ ಪ್ರೌಢಶಾಲೆಯಲ್ಲಿ ವೃಕ್ಷಮಾತೆ ಪದ್ಮಶ್ರೀ ನಾಡೋಜ ಡಾಕ್ಟರ್ ಸಾಲ್ಮರ ತಿಮ್ಮಕ್ಕನವರು ಪರಿಸರ ರಾಯಭಾರಿಗಳು ಕರ್ನಾಟಕ ಸರ್ಕಾರ ಮತ್ತು ನಾನು ಕಾರ್ಯಕ್ರಮದಲ್ಲಿ ಭಾಗಿಯಾಗಿ ಗಿಡಗಳನ್ನು ನೆಡುವ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿಯನ್ನು ಮೂಡಿಸಲಾಯಿತು 


      ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಹೊಣೆ ಬನ್ನಿ ಶುದ್ಧವಾದ ಪರಿಸರವನ್ನು ನಿರ್ಮಿಸೋಣ 
                ಉಮೇಶ್ ಸಾಲುಮರದ ತಿಮ್ಮಕ್ಕ #worldenvironmentday

1 year ago | [YT] | 10

Hassan News ಹಾಸನ್ ನ್ಯೂಸ್

543 ಲೋಕಸಭಾ ಕ್ಷೇತ್ರದಲ್ಲಿ ರಾಷ್ಟ್ರದ ಬಹು ನಿರೀಕ್ಷೆಯ ಲೋಕಸಭಾ ಕ್ಷೇತ್ರ ' ಹಾಸನ ಲೋಕಸಭಾ ' ಕ್ಷೇತ್ರದ ವಿಜಯಿ ' ಶ್ರೇಯಸ್ ಎಂ ಪಟೇಲ್ ' ( ಕಾಂಗ್ರೆಸ್ )

#mpelection2024 #hassannewstoday #mpresultshassan #KarnatakaPolitics #indianpolitics #ಹಾಸನರಾಜಕೀಯ #HassanMP #hassannewmp #shreyasmpatel

1 year ago | [YT] | 73