ದೇವರ ಬಗ್ಗೆ ನಮಗಿರುವ ಕಲ್ಪನೆ ನಮ್ಮ ಸುತ್ತಲಿರುವುದರ ಮೇಲೆ ಆಧಾರಿತವಾಗಿರುತ್ತದೆ ಹಾಗೂ ಬಹಳಷ್ಟು ಜನರಿಗೆ ದೇವರೆಂದರೆ ತಮ್ಮದೇ ಒಂದು ಉತ್ಪ್ರೇಕ್ಷೆಯಾಗಿರುತ್ತದೆ. ಸೃಷ್ಟಿಯ ಮೂಲವನ್ನು ಅನುಭವಿಸಬಹುದೇ ಹೊರತು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ.


DEVAREGATHI-ದೇವರೇಗತಿ

Register now
devaregathi.com/
Call : 96638 55580

ವೀಕ್ಷಕರಿಗೊಂದು ಸುವರ್ಣವಕಾಶ... ಡಾ ಶಿವರಾಮ್ ಭಟ್ ರವರ ನೇತೃತ್ವದಲ್ಲಿ ಇದೆ ಏಪ್ರಿಲ್ 30 ಅಕ್ಷಯ ತೃತೀಯ ದಿನದಂದು ಅಷ್ಟ ಲಕ್ಷ್ಮಿ ಮಹಾಯಗವನ್ನು ಹಮ್ಮಿಕೊಂಡಿದೆ. ಈ ಯಾಗದಲ್ಲಿ ಭಾಗವಹಿಸುವರಿಗೆ 48 ದಿನಗಳಿಂದ ಪೂಜಿಸಲ್ಪಟ್ಟ ಅಷ್ಟ ಲಕ್ಷ್ಮಿ ಯಂತ್ರ ಹಾಗೂ ಶ್ರೀ ರಕ್ಷೆಯನ್ನು ಕೊಡಲಾಗುವುದು. ಎಲ್ಲರೂ ಈ ಯಾಗದಲ್ಲಿ ಭಾಗವಹಿಸಿ ಶ್ರೀ ತಾಯಿಯ ಕೃಪೆಗೆ ಪಾತ್ರರಾಗಿ. ಹೆಚ್ಚಿನ ಮಾಹಿತಿಗಾಗಿ devaregathi.com ವೆಬ್ಸೈಟ್ ಅನ್ನು ಪರೀಕ್ಷಿಸಿ ಅಥವಾ ಈ ಕೆಳಗಿನ ನಂಬರ್ ಗೆ ಸಂಪರ್ಕಿಸಿ....

1 year ago | [YT] | 6

DEVAREGATHI-ದೇವರೇಗತಿ

ನಿತ್ಯ ಪಂಚಾಂಗ
ದಿನಾಂಕ : *15/01/2025*
ವಾರ : *ಬುಧ ವಾರ* ಸಂವತ್ಸರ : *ಶ್ರೀ ಕ್ರೋಧಿ ನಾಮ* : ಆಯನ‌ : *ಉತ್ತರಾಯನೇ* *ಹೇಮಂತ* ಋತೌ ‌ ‌
*ಪುಷ್ಯ* ಮಾಸೇ *ಕೃಷ್ಣ* : ಪಕ್ಷೇ
*ದ್ವಿತೀಯಾಯಂ* (ಪ್ರಾರಂಭ ಸಮಯ : *ಮಂಗಳ ರಾತ್ರಿ 03-20 am* ರಿಂದ ಅಂತ್ಯ ಸಮಯ : *ಬುಧ ರಾತ್ರಿ 03-22 am*
*ಸೌಮ್ಯ* : ವಾಸರೇ ವಾಸರಸ್ತು
*ಪುಷ್ಯ* ನಕ್ಷತ್ರೇ (ಪ್ರಾರಂಭ ಸಮಯ : *ಮಂಗಳ ಹಗಲು 10-16 am* ರಿಂದ ಅಂತ್ಯ ಸಮಯ : *ಬುಧ ಹಗಲು 10-27 am*
*ಪ್ರೀತಿ* ಯೋಗೇ (ಬುಧ ರಾತ್ರಿ *01-45 am*
*ತೈತುಲ* ಕರಣೇ (ಬುಧ ಹಗಲು *03-16 pm*
ಸೂರ್ಯ ರಾಶಿ : *ಮಕರ* ಚಂದ್ರ ರಾಶಿ : *ಕಟಕ* ‌ ಸೂರ್ಯೋದಯ - *06-46 am* ಸೂರ್ಯಾಸ್ತ - *06-11 pm*
*ರಾಹುಕಾಲ*‌ ‌ ‌ *12-29 pm* ರಿಂದ *01-55 pm* ರವರೆಗೆ *ಯಮಗಂಡಕಾಲ*
*08-12 am* ಇಂದ *09-38 am* ರವರೆಗೆ *ಗುಳಿಕಕಾಲ*
*11-04 am* ಇಂದ *12-29 pm*
*ದುರ್ಮುಹೂರ್ತ* : ಬುಧ ಹಗಲು *12-06 pm* ರಿಂದ *12-52 pm*
*ವರ್ಜ್ಯ*
ಬುಧ ರಾತ್ರಿ *11-36 pm* ರಿಂದ *01-15 am*

1 year ago | [YT] | 9

DEVAREGATHI-ದೇವರೇಗತಿ

ದರ್ಶನ್ ಅವರ ಫಾರ್ಮ್ ಹೌಸಲ್ಲಿ ಸಂಕ್ರಾಂತಿ ಸಂಭ್ರಮ❤️💥...

1 year ago | [YT] | 32

DEVAREGATHI-ದೇವರೇಗತಿ

ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ವೈಕುಂಠ ಏಕಾದಶಿ ಅಲಂಕಾರ ಮಂತ್ರಾಲಯ...

1 year ago | [YT] | 276

DEVAREGATHI-ದೇವರೇಗತಿ

ಶ್ರೀ ಬದರಿ ನಾರಾಯಣ ದೇವಸ್ಥಾನ ರಾಯಚೂರು
ವೈಕುಂಠ ಏಕಾದಶಿ ಅಲಂಕಾರ...

1 year ago | [YT] | 160

DEVAREGATHI-ದೇವರೇಗತಿ

*ನಿತ್ಯ ಪಂಚಾಂಗ*
ದಿನದ ವಿಶೇಷ : *ಸರ್ವೇಶಾಮೇಕಾದಶೀ, ವೈಕುಂಠ ಏಕಾದಶಿ, ಪುತ್ರದಾ ಏಕಾದಶಿ*
ದಿನಾಂಕ : *10/01/2025*
ವಾರ : *ಶುಕ್ರ ವಾರ* ಸಂವತ್ಸರ : *ಶ್ರೀ ಕ್ರೋಧಿ ನಾಮ* : ಆಯನ‌ : *ದಕ್ಷಿಣಾಯನೇ* *ಹೇಮಂತ* ಋತೌ ‌ ‌
*ಪುಷ್ಯ* ಮಾಸೇ *ಶುಕ್ಲ* : ಪಕ್ಷೇ
*ಏಕಾದಶ್ಯಾಂ* (ಪ್ರಾರಂಭ ಸಮಯ : *ಗುರು ಹಗಲು 12-21 pm* ರಿಂದ ಅಂತ್ಯ ಸಮಯ : *ಶುಕ್ರ ಹಗಲು 10-19 am*
*ಭಾರ್ಗವ* : ವಾಸರೇ ವಾಸರಸ್ತು
*ಕೃತ್ತಿಕಾ* ನಕ್ಷತ್ರೇ (ಪ್ರಾರಂಭ ಸಮಯ : *ಗುರು ಹಗಲು 03-06 pm* ರಿಂದ ಅಂತ್ಯ ಸಮಯ : *ಶುಕ್ರ ಹಗಲು 01-44 pm*
*ಶುಭ* ಯೋಗೇ (ಶುಕ್ರ ಹಗಲು *02-35 pm*
*ಭದ್ರ* ಕರಣೇ (ಶುಕ್ರ ಹಗಲು *10-19 am*
ಸೂರ್ಯ ರಾಶಿ : *ಧನಸ್ಸು* ಚಂದ್ರ ರಾಶಿ : *ವೃಷಭ* ‌ ಸೂರ್ಯೋದಯ - *06-45 am* ಸೂರ್ಯಾಸ್ತ - *06-08 pm*
*ರಾಹುಕಾಲ*‌ ‌ ‌ *11-02 am* ರಿಂದ *12-27 pm* ರವರೆಗೆ *ಯಮಗಂಡಕಾಲ*
*03-18 pm* ಇಂದ *04-43 pm* ರವರೆಗೆ *ಗುಳಿಕಕಾಲ*
*08-11 am* ಇಂದ *09-37 am*
*ಅಭಿಜಿತ್ ಮುಹೂರ್ತ* : ಶುಕ್ರ ಹಗಲು *12-05 pm* ರಿಂದ *12-50 pm*
*ದುರ್ಮುಹೂರ್ತ* : ಶುಕ್ರ ಹಗಲು *09-02 am* ರಿಂದ *09-48 am* ರವರೆಗೆ ಶುಕ್ರ ಹಗಲು *12-50 pm* ರಿಂದ *01-36 pm*

1 year ago | [YT] | 2

DEVAREGATHI-ದೇವರೇಗತಿ

*ಉಗ್ರ ಶ್ರೀನಿವಾಸ:-*🙏🏻🚩

ವಿಷ್ಣುವಿನ ದಶಾವತಾರಗಳಲ್ಲಿ ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ಭೌದ್ದ, ರಾಮ, ದ್ವಾಪರದಲ್ಲಿ ಕೃಷ್ಣಾವತಾರಗಳ ನಡುವೆ ಕಲಿಯುಗದ ಆರಂಭಕ್ಕೂ ಮೊದಲು ಭೃಗು ಮಹರ್ಷಿಗಳ ನೆಪ ದಿಂದಾಗಿ ಮಹಾವಿಷ್ಣು ತನ್ನ ಪತ್ನಿ ಲಕ್ಷ್ಮಿಯನ್ನು ಹುಡುಕುತ್ತಾ ಬಂದು ಬ್ರಹ್ಮನ ಆದೇಶದಂತೆ ಭಕ್ತರಿಗೆ ದರ್ಶನ ಕೊಡಲೆಂದೇ ತಿರುಪತಿ ಯಲ್ಲಿ ನೆಲೆಸಿದ.

ಮೊದಲು ಭೂಲೋಕಕ್ಕೆ ಕಾಲಿಟ್ಟ ವೆಂಕಟೇಶನಿಗೆ ವಾಸಿಸಲು ಭೂಮಿ ಕೊಟ್ಟವನು ವರಾಹಸ್ವಾಮಿ. ಆದ್ದರಿಂದ ತಿರುಪತಿಗೆ ಹೋದಾಗ ಮೊದಲು ದರ್ಶನ ಮಾಡಬೇಕಾದದು “ವರಾಹ ಸ್ವಾಮಿ”ಯನ್ನು. ಆನಂತರವೇ ವೆಂಕಟೇಶನ ದರ್ಶನ ಮಾಡಬೇಕು. ಅಕಸ್ಮಾತ್ ಆಗದಿದ್ದಲ್ಲಿ ವೆಂಕಟೇಶನ ದರ್ಶನ ಮಾಡಿದ ನಂತರ ವರಾಹ ಸ್ವಾಮಿಯನ್ನು ದರ್ಶನ ಮಾಡಬೇಕು. ವೆಂಕಟೇಶನಾಗಿ, ಶ್ರೀನಿವಾಸನಾಗಿ, ಆಕಾಶ ರಾಜನ ಮಗಳು ಪದ್ಮಾವತಿಯನ್ನು ವಿವಾಹವಾಗಲು ಕುಬೇರನಲ್ಲಿ ಸಾಲ ಮಾಡಿದ. ಈ ಸಾಲ ತೀರಿಸುವ ತನಕ ಶ್ರೀನಿವಾಸ ತಿರುಪತಿಯಲ್ಲಿ ಇರುವುದಾಗಿ ನೆಲೆಸಿದ.ಇನ್ನೂ ಸಾಲ ತೀರಿಸುತ್ತಲೆ ಇದ್ದಾನೆ.

ಹಿಂದೆ ವ್ಯಾಸರಾಯರು ತಿರುಪತಿಗೆ ಬರುವ ಮೊದಲು ಸ್ವಲ್ಪ ಕಾಲ ತಿರುಪತಿಯ ಗರ್ಭಗುಡಿಯ ಬಾಗಿಲು ಮುಚ್ಚ ಲಾಗಿತ್ತು. ದೇವ ಲೋಕದಿಂದ ದೇವತೆಗಳು ಬಂದು ವೆಂಕಟೇಶನನ್ನು ಪೂಜಿ ಸುತ್ತಿದ್ದರು. ವ್ಯಾಸರಾಯರು ತಮ್ಮ ಶಿಷ್ಯ ಸಾಳ್ವ ನರಸಿಂಹನ ಜೊತೆ ಬಂದವರು ಗರ್ಭ ಗುಡಿಯ ಬಾಗಿಲನ್ನು ತೆಗೆದರು. ಆ ಕೂಡಲೇ, ಸಾಳ್ವ ನರಸಿಂಹನಿಗೆ ವೆಂಕಟೇಶ್ವರ ಉಗ್ರರೂಪನಾಗಿ ಕಾಣಿಸಿದ. ಭಗವಂತನ ಉಗ್ರ ರೂಪ ನೋಡಿ ಗಾಬರಿ ಗೊಂಡು, ವ್ಯಾಸರಾಯರ ಹಿಂದೆ ಅಡಗಿಕೊಂಡನು, ವ್ಯಾಸ ರಾಯರು ಶಿಷ್ಯನಿಗೆ ಧೈರ್ಯ ತುಂಬಿದರು. ಸಾಳ್ವ ನರಸಿಂಹನಿಗೆ ವೆಂಕಟೇಶ್ವರ ಈ ರೀತಿ ಉಗ್ರ ರೂಪದಲ್ಲಿ ಕಂಡು ಬಂದ ಕಾರಣ ಇದೆ. ಸಾಳ್ವ ನರಸಿಂಹ ಶ್ರೀನಿವಾಸನಿಗೆ ಪೂಜೆ ಮಾಡುವ ಮುಖ್ಯ ಅರ್ಚಕ ನಾಗಿದ್ದಾಗ. ಒಮ್ಮೆ ಅವರ ಸಹಾಯಕ ಅರ್ಚಕರು ಏನೋ ತಪ್ಪು ಮಾಡಿದರೆಂದು, ಅವರಿಗೆಲ್ಲ ಕಠಿಣವಾದ ಶಿಕ್ಷೆಯನ್ನು ಕೊಟ್ಟಿದ್ದನು. ನಂತರ ಪಶ್ಚಾತಾಪ ಪಟ್ಟು, ಅದರ ಪ್ರಾಯಶ್ಚಿತ್ತ ಮಾಡಿಕೊಳ್ಳಲು ವ್ಯಾಸ ರಾಯರ ಜೊತೆ ನಿಂತ ಸಾಳ್ವ ನರಸಿಂಹನಿಗೆ ವೆಂಕಟೇಶ ಉಗ್ರರೂಪಿಯಾಗಿ ಕಾಣಿಸಿ ಕೊಂಡನು.

ಧೈರ್ಯ ತುಂಬಿದ ವ್ಯಾಸರಾಯರು, ವೆಂಕಟೇಶನ ಉಗ್ರ ರೂಪ ಸಮಾಧಾನಪಡಿಸಲೆಂದು ಕೂಡಲೇ ಚೀಲಗಟ್ಟಲೆ ತೊಲಗಳಷ್ಟು ಕರ್ಪೂರ ವನ್ನು ತರಿಸಿ ತಿಮ್ಮಪ್ಪನ ಅರ್ಧ ಕಣ್ಣು, ಅರ್ಧ ಮೂಗು, ಮುಚ್ಚು ವಂತೆ ಆ ಕಡೆ ಈ ಕಡೆ ಒಂದು ತರಹ 'ಯು' ಆಕಾರದಲ್ಲಿ ಬಳಿದು ಮುಚ್ಚಿ ಬಿಟ್ಟರು. ನಡುವೆ ಕಸ್ತೂರಿ ನಾಮ (ಕಸ್ತೂರೀ ತಿಲಕಂ ಲಲಾಟ ಫಲಕೇ ವಕ್ಷಸ್ಥಲೇ ಕೌಸ್ತುಭಂ, ನಾಸಾದ್ರೆ ನವ ಮೌಕ್ತಿಕಂ ಕರತಲೇ ವೇಣುಂ ಕರೆ ಕಂಕಣಂ ಸರ್ವಾಂಗೆ ಹರಿಚಂದ್ರನಂ ಚ ಕಲಯನ್ ಕಂಠೇ ಚ ಮುಕ್ತಾವಲೀಂ). ಮೊದಲು ಇದ್ದದ್ದು ಒಂದೇ ನಾಮ - 'ಕಸ್ತೂರಿ ತಿಲಕೇ'. ಇದನ್ನು ನೋಡಿದ ಭಕ್ತರು ಭಗವಂತನಿಗೆ ‘ದೃಷ್ಟಿ’ ಎಲ್ಲಿದೆ ಎಂದು ಕೇಳಿದರು. ಅದಕ್ಕೆ ವ್ಯಾಸರಾಯರು ಬರುವ ಗುರುವಾರ ಪರಮಾತ್ಮನ ಪೂರ್ಣ ದರ್ಶನ ಆಗುತ್ತದೆ ಎಂದರು. ಉಗ್ರರೂಪ ಪರಿಹಾರಾರ್ಥವಾಗಿ ಗುರುವಾರದ ದಿನ ಅನ್ನಕೂಟೋತ್ಸವ ಮಾಡಿಸಿದರು. ಅಂದರೆ ರಾಶಿ( ಹೆಡಿಗೆ ಗಟ್ಟಲೆ) ಚಿತ್ರಾನ್ನವನ್ನು ಮಾಡಿ ಆಲಯದ ಮುಂದೆ ಗರುಡ ನಿಂತಲ್ಲಿಂದ ಭಗವಂತನ ದ್ವಾರದ ತನಕ ಅಂದರೆ ಭಕ್ತರು ದೇವರ ದರ್ಶನ ಮಾಡಿ ಬಾಗಿಲ ಕಡೆ ತಿರುಗುವಲ್ಲಿ ತನಕ ಚಿತ್ರಾನ್ನವನ್ನು ಹರಡುತ್ತಾರೆ. ಜೊತೆಗೆ ನಾನಾ ವಿಧ ವಿಧವಾದ ಭೋರಿ ಭೋಜನ ಭಕ್ಷಗಳ ರಾಶಿ ಯನ್ನೇ ಮಾಡಿ ಇಟ್ಟಿರುತ್ತಾರೆ.‌

ಉಗ್ರ ನರಸಿಂಹನಾಗಿದ್ದರೂ, ಪ್ರತಿ ಗುರುವಾರ ಮಾಡುವ ಅನ್ನಕೂಟೋತ್ಸವದ ದಿನ ವೆಂಕಟೇಶ್ವರನ ಅಲಂಕಾರ ನೋಡಲು ಎರಡು ಕಣ್ಣು ಸಾಲದು. ಎಂಟೂವರೆ ಅಡಿ ಎತ್ತರದ ಶ್ರೀನಿವಾಸ, ಮಿಂಚುವ ಕೆನ್ನೆ, ಮುಗುಳುನಗೆಯ ತುಟಿ, ಕಾಮನ ಬಿಲ್ಲಿನಂತೆ ವಾಲಿದ ಹುಬ್ಬು, ಸುಂದರ ಸೌಮ್ಯವಾದ ದೃಷ್ಟಿ, ಉದ್ದನೆ ಜಡೆ, ಸಂಪಿಗೆ ಮೂಗು, ಕೈಯಲ್ಲಿ ಕಡಗ ಕುತ್ತಿಗೆಯಲ್ಲಿ ಪದಕದ ಕಂಠೀಹಾರ, ಸೂರ್ಯ ಕತ್ತಿ, 108 ಬಂಗಾರದ ತುಳಸಿ ಎಸಳಿನ ಹಾರ, ಸಾಲಿಗ್ರಾಮದ ಹಾರ, ಆಕಾಶ ರಾಜ ಕೊಟ್ಟ ವಜ್ರಕಿರೀಟ, ಸಾವಿರದ ಎಂಟು ಬಂಗಾರದ ಒಂದೊಂದು ನಾಣ್ಯದಲ್ಲೂ ಲಕ್ಷ್ಮಿ ಚಿತ್ರ, ಹಾಗೂ ವಿಶ್ವಾಯ ನಮಃ ಬರೆದಿರುವ ಹಾರ. ಕಸ್ತೂರಿ ತಿಲಕ, ಕಚ್ಚೆ ಹಾಕಿ ಉಡಿಸಿದ ಬಂಗಾರದ 18 ಮೊಳದ ಪೀತಾಂಬರ ಸೀರೆಯ ಜಗ ಮಗ ಹೊಳಪು, ನಾನಾ ಸುಗಂಧ ಭರಿತ ಪುಷ್ಪಗಳ ಶೃಂಗಾರ. ಇಂತಹ ಸುಂದರವಾದ ತಿರುಪತಿ ಶ್ರೀನಿವಾಸನ ವಿಗ್ರಹ ಮಾನವ ನಿರ್ಮಿತ ವಾದದಲ್ಲ. ಸಾಕ್ಷಾತ್ ಮಹಾ ವಿಷ್ಣುವೇ ಶ್ರೀನಿವಾಸನಾಗಿ ಭೂಲೋಕದಲ್ಲಿ ಅವತರಿಸಿ ತನ್ನ ಲೀಲಾ ನಾಟಕಗಳ ತೋರಿಸಿ. ಕಲಿಯುಗದಲ್ಲಿ ಭಕ್ತರಿಗೆ ದರ್ಶನ ಕೊಡುವ ಸಲುವಾಗಿಯೇ ಶಿಲೆಯಾಗಿ ನಿಂತನು.‌ ಸರ್ವಾಂಗ ಸುಂದರ ಶ್ರೀನಿವಾಸನ ದರ್ಶನ ಪಡೆಯಲು ಅನೇಕರು ಮುಂಚಿತ ವಾಗಿಯೇ ಹೆಸರು ನೊಂದಾಯಿಸಿರುತ್ತಾರೆ. ಮತ್ತೆ ಕೆಲವರು ತಮ್ಮ ಹರಕೆ ಹೇಳಿಕೊಂಡು ಪ್ರತ್ಯೇಕವಾಗಿ ಮಾಡಿಸುತ್ತಾರೆ. ಪೂಜೆ ಮಂಗಳಾರತಿ ಮುಗಿದ ಮೇಲೆ ಚಿತ್ರಾನ್ನ ಭಕ್ಷಗಳನ್ನು ಪ್ರಸಾದವಾಗಿ ಭಕ್ತರಿಗೆ ಹಂಚುತ್ತಾರೆ.

ಈ ರೀತಿ ಹುಬ್ಬು ಗಂಟಿಕ್ಕಿ ನಿಂತಿರುವ ಉಗ್ರ ಶ್ರೀನಿವಾಸನ ಜೊತೆಯಲ್ಲಿ ಶ್ರೀದೇವಿ ಭೂದೇವಿಯರು ಗರ್ಭಗುಡಿಯಲ್ಲಿ ನೆಲೆಸಿದ್ದಾರೆ. ತಿರುಪತಿಯಲ್ಲಿ ಪ್ರಮುಖ ಶ್ರೀ ವೆಂಕಟೇಶ್ವರ ಸ್ವಾಮಿ ನೆಲೆಸಿ ರುವ ಗರ್ಭಗುಡಿಯನ್ನು ಬಿಟ್ಟರೆ, ಅತ್ಯಂತ ಪುರಾತನ ವಿಗ್ರಹ ಇರುವುದು ಉಗ್ರ ನರಸಿಂಹ ವೆಂಕಟೇಶ ಮೂರ್ತಿ. ಶತಮಾನಗಳ ಹಿಂದೆ ಈ ಉಗ್ರ ಮೂರ್ತಿಯನ್ನು ಉತ್ಸವಮೂರ್ತಿ ಯಾಗಿ ಮೆರವಣಿಗೆ ಮಾಡುತ್ತಿದ್ದರು. ಹೀಗೆ ಆ ಒಂದು ವರ್ಷ ಬ್ರಹ್ಮೋತ್ಸವದಲ್ಲಿ ಉತ್ಸವ ಮೂರ್ತಿ ಯನ್ನು ಪಲ್ಲಕ್ಕಿಯಲ್ಲಿ ಒಯ್ಯುವಾಗ ಇದ್ದಕ್ಕಿದ್ದಂತೆ ಬೆಂಕಿ ಅವಘಡ ಕಾಣಿಸಿ ಅದು ಹರಡಿ ಸುತ್ತಮುತ್ತಲ ಮನೆಗಳಿಗೆ ವ್ಯಾಪಿಸಿತು.

ಆಗ ಒಂದು ಆಶರೀರವಾಣಿ ಕೇಳುತ್ತದೆ. ಉಗ್ರ ಶ್ರೀನಿವಾಸ ನನ್ನು ಗರ್ಭಗುಡಿಯಿಂದ ಹೊರಗೆ ತರುವುದು ಬೇಡ. ಒಂದು ವೇಳೆ ಉಗ್ರ ಶ್ರೀನಿವಾಸನನ್ನು ಸೂರ್ಯನ ಬೆಳಕಿಗೆ ತಂದು ಶ್ರೀನಿವಾಸನ ಉಗ್ರತ್ವ ಮೂರ್ತಿಗೆ ಸೂರ್ಯಕಿರಣ ಸ್ಪರ್ಶಿಸಿ ದರೆ ಬೆಂಕಿ ಹತ್ತಿಕೊಳ್ಳಬಹುದು ಎಂಬ ವಾಣಿ ಆಗಿತ್ತು. ನಂತರದಲ್ಲಿ ವರ್ಷಕ್ಕೊಮ್ಮೆ ಅಂದರೆ ‘ಕೈಸಿಕ’ ದ್ವಾದಶಿ ದಿನ ಮಾತ್ರ ಗರ್ಭಗುಡಿಯಿಂದ ಹೊರಗೆ ತರುತ್ತಾರೆ. ಸೂರ್ಯ ಮೂಡುವ ಮುನ್ನವೇ ಶ್ರೀನಿವಾಸನನ್ನು ಹೊರಗೆ ತಂದು ಶುದ್ಧೋದಕ ಸ್ನಾನ ಮಾಡಿಸಿ ನಂತರ ಹಾಲು, ಮೊಸರು -ತುಪ್ಪ -ಜೇನುತುಪ್ಪ- ಬಾಳೆಹಣ್ಣುಗಳಿಂದ ಪಂಚಾಮೃತಾ ಭಿಷೇಕ, ಅರಿಶಿನ ಶ್ರೀಗಂಧದ ಲೇಪನ ಮಾಡಿ, ಶುದ್ಧೋದಕ ಸ್ನಾನ ಮಾಡಿಸಿ, ವಸ್ತ್ರಾಲಂಕಾರ, ಆಭರಣ ತೋಮಾಲ ಅಲಂಕಾರ ಮಾಡಿ, ಪೂಜೆ ಅಷ್ಟೋತ್ತರ ಅರ್ಚನೆ ಸೇವೆ ನೈವೇದ್ಯ ಮಂಗಳಾರತಿ, ಕೈಸಕಾ ಪುರಾಣ ಕಥೆ ಮುಗಿದಮೇಲೆ ಮತ್ತೆ ಗರ್ಭಗುಡಿ ಯೊಳಗೆ ಇಡುತ್ತಾರೆ. ಪುನಃ ಒಂದು ವರ್ಷದ ನಂತರವೇ ಹೊರಗೆ ತರುತ್ತಾರೆ.

ಅನ್ನಕೂಟೊತ್ಸವ ಅಂದರೆ ಗರುಡೋತ್ಸವ. ಇದನ್ನು ಐದು ಬಾರಿ ನೋಡಿದರೆ ಮಕ್ಕಳಾಗುತ್ತದೆ, ಹಾಗೂ ನಿಗದಿತ ಸಮಯ ಪಾಲ್ಗೊಂಡರೆ , ವಿವಾಹ, ಮನೆ, ಸಂತಾನ, ವಿದ್ಯಾಭ್ಯಾಸ, ಉದ್ಯೋಗ ಹಾಗೂ ಆರೋಗ್ಯ ಭಾಗ್ಯ ದೊರೆಯುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಇದೆ. ಜೀವನದಲ್ಲಿ ಒಮ್ಮೆಯಾದರೂ ತಿರುಪತಿ “ಶ್ರೀ ವೆಂಕಟೇಶ್ವರ ಸ್ವಾಮಿ” ದರ್ಶನ ಬಂದು ಮಾಡಲೇಬೇಕು. "ಸಂಕಟ ಬಂದಾಗ ವೆಂಕಟರಮಣ" ಎಂಬ ಗಾದೆ ಮಾತು ಆದರೂ, ಭಗವಂತ ಭಕ್ತರಿಗೆ ತನ್ನ ದರ್ಶನ ಕೊಡಲೆಂದೇ ಭೂವೈಕುಂಠವಾದ ತಿರುಪತಿಯಲ್ಲಿ ನೆಲೆಸಿದ್ದಾನೆ. ತ್ರೇತಾಯುಗದ ಶ್ರೀರಾಮ ನೆಂದೇ ಕರೆಸಿಕೊಳ್ಳುವ ಶ್ರೀನಿವಾಸನ ದರ್ಶನ ಭಾಗ್ಯ ಪಡೆಯಲು ಪುಣ್ಯ ಸಂಪಾದನೆ ಮಾಡಿರಬೇಕು.

ಕೌಸಲ್ಯಾ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ!
ಉತ್ತಿಷ್ಠ ನರ ಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ!
ಉತ್ತಿಷ್ಟೋತ್ತಿಷ್ಟ ಗೋವಿಂದ ಉತ್ತಿಷ್ಠ ಗರುಡ ಧ್ವಜ!
ಉತ್ತಿಷ್ಠ ಕಮಲ ಕಾಂತ ತ್ರೈಲೋಕ್ಯಂ ಮಂಗಲಂ ಕುರು!!

ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.

1 year ago | [YT] | 156

DEVAREGATHI-ದೇವರೇಗತಿ

ಕೊಟ್ಟಿದ್ದೇ ಸಿಗುವುದು !

ದುರ್ಯೋಧನನ ಸಭೆ. ದ್ರೌಪದಿಯ ಕೂದಲನ್ನು ಎಳೆದುಕೊಂಡು ಬಂದ ದುಶ್ಯಾಸನ ಅವಳ ಸೀರೆಯನ್ನು ಎಳೆಯುವ ಪ್ರಯತ್ನದಲ್ಲಿದ್ದ. ಅವಳು ಮೊಟ್ಟಮೊದಲು ಸಹಾಯಕ್ಕಾಗಿ ನೋಡಿದ್ದು ತನ್ನ ಪತಿಗಳಾದ ಪಂಚಪಾಂಡವರ ಕಡೆ. ಆದರೆ, ಆಗಲೇ ಗುಲಾಮರಾಗಿಬಿಟ್ಟಿದ್ದ ಅವರಿಂದ ತಲೆ ತಗ್ಗಿಸಿ ನಿಲ್ಲುವುದರ ಹೊರತು ಬೇರೇನು ಮಾಡಲಾಗಲಿಲ್ಲ.

ಅಂತೆಯೇ ಸಭೆಯಲ್ಲಿದ್ದ ಗುರುಹಿರಿಯರು ಯಾರೂ ಮಿಸುಕಾಡಲಿಲ್ಲ. ಕೊನೆಯದಾಗಿ ಶ್ರೀಕೃಷ್ಣನನ್ನು ಸ್ತುತಿಸಿ, ''ನೀನಲ್ಲದೆ ನನ್ನನ್ನು ಈ ವಿಪತ್ತಿನಿಂದ ಪಾರು ಮಾಡುವವರು ಯಾರು?'' ಎಂದು ಮನಪೂರ್ವಕವಾಗಿ ಬೇಡಿಕೊಳ್ಳುತ್ತಾಳೆ.

ಶ್ರೀಕೃಷ್ಣನ ದಯೆ ಇಲ್ಲವಾಗಿ, ದ್ರೌಪದಿ ತನ್ನ ಎರಡೂ ಕೈಗಳನ್ನು ಮೇಲೆತ್ತಿ ಬೇಡಿಕೊಳ್ಳುತ್ತಾಳೆ. ಆಗ ಶ್ರೀಕೃಷ್ಣನೇ ಅವಳಿಗೆ ಅನುಗ್ರಹಮಾಡುತ್ತಾನೆ.
ದ್ರೌಪದಿ ಸೀರೆ ಅಕ್ಷಯವಾಗುತ್ತದೆ. ''ಶ್ರೀಕೃಷ್ಣ ಸ್ವಾಮಿಯೇ, ನೀನೇ ನನ್ನ ಮಾನವನ್ನು ರಕ್ಷಿಸಿದೆ. ನಿನಗೆ ನಾನು ಹೇಗೆ ಕೃತಜ್ಞತೆ ಸಲ್ಲಿಸಲಿ?'' ಎಂದು ಬೇಡಿಕೊಳ್ಳುತ್ತಾಳೆ.

ಆಗ, ಅದೃಶ್ಯದಲ್ಲಿ ಶ್ರೀಕೃಷ್ಣ ಅವಳ ಕಿವಿಯ ಬಳಿ ಬಂದು ಹೇಳುತ್ತಾನೆ, ''ದೇವರೆಂದು ನೀನು ನಂಬಿದ ನನ್ನ ದಯೆಯೇನೋ ನಿಜವೇ. ಆದರೆ, ಅದಷ್ಟೇ ಅಲ್ಲ. ನೀನು ಮಾಡಿದ ಪುಣ್ಯ ಕಾರ್ಯದ ಫಲವೂ ಇದಕ್ಕೆ ಕಾರಣ. ನೀನು ಈ ಹಿಂದೆ ಯಾರಿಗಾದರೂ ಬಟ್ಟೆಯನ್ನು ದಾನ ಮಾಡಿದ್ದೀಯಾ, ಹೇಳು?''

ಮಹಾರಾಣಿಯಾದ ದ್ರೌಪದಿ ಎಷ್ಟೇಷ್ಟೋ ಜನರಿಗೆ ವಸ್ತ್ರದಾನ ಮಾಡಿರಬಹುದು. ಅದನ್ನು ಅವಳು ಲೆಕ್ಕವಿಟ್ಟಿದ್ದಾಳೆಯೆ?

ಶ್ರೀಕೃಷ್ಣ ಹೇಳುತ್ತಾನೆ, ''ಕೇವಲ ದಾನವಾದರೆ ಸಾಲದು. ಸತ್ಪಾತ್ರ ದಾನವಾಗಬೇಕು. ತೀರಾ ಅಗತ್ಯವಿರುವವರಿಗೆ ನೀನು ಅಂಬರವನ್ನು ದಾನ ಮಾಡಿರಬೇಕು. ನೆನಪು ಮಾಡು"

ದ್ರೌಪದಿ ತನ್ನ ಬಾಲ್ಯದ ದಿನಗಳೆಡೆಗೆ ಹೋಗುತ್ತಾಳೆ. ಪಾಂಚಾಲ ದೇಶದ ನದಿಯ ಬದಿಯಲ್ಲಿ ಆಟವಾಡುತ್ತಿರುವಾಗ ಆ ನದಿಯಲ್ಲಿ ಓರ್ವ ಸಂನ್ಯಾಸಿ ಸ್ನಾನ ಮಾಡಿಕೊಂಡಿರುತ್ತಾನೆ. ಅವನ ಕೌಪೀನ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿರುತ್ತದೆ. ಎಲ್ಲರೂ ನಗುತ್ತಾರೆ. ಆದರೆ, ದ್ರೌಪದಿ ಹಾಸ್ಯ ಮಾಡುವುದಿಲ್ಲ. ನನ್ನ ಪೀತಾಂಬರವನ್ನು ಹರಿದು ಒಂದು ಅಂಶವನ್ನು ಸಂನ್ಯಾಸಿಯೆಡೆಗೆ ಎಸೆಯುತ್ತಾಳೆ ! ಸಂನ್ಯಾಸಿ, 'ನಿನಗೆ ಒಳ್ಳೆಯದಾಗಲಿ ಮಗಳೇ' ಎಂದು ಆಶೀರ್ವಾದ ಮಾಡುತ್ತಾನೆ.

ದ್ರೌಪದಿ ತನ್ನ ಮನಸ್ಸಿನಲ್ಲಿ ಅದನ್ನು ನೆನಪಿಸಿಕೊಂಡಾಗ ಶ್ರೀಕೃಷ್ಣನಗುತ್ತ ಹೇಳುತ್ತಾನೆ, "ಕೊಟ್ಟಿದ್ದೇ ಸಿಗುವುದು, ಕೊಡದಿರುವುದು ಅಲ್ಲ''.. 🌸🙏🌸

1 year ago | [YT] | 21