ದೇವರ ಉತ್ಸವ

ದೇವರ ಉತ್ಸವ


ದೇವರ ಉತ್ಸವ

ಚೆಲುವನಾರಾಯಣಸ್ವಾಮಿ ರಥಸಪ್ತಮಿ ಉತ್ಸವ #ಜನಪದಕಲಾತಂಡಗಳಿಗೆಆಹ್ವಾನ
---------------+

ಮೇಲುಕೋಟೆ ; ಜನವರಿ 25ರ ಭಾನುವಾರ ರಥಸಪ್ತಮಿಯಂದು ಮೇಲುಕೋಟೆಯಲ್ಲಿ ನಡೆಯುವ ರಾಜ್ಯಮಟ್ಟದ ಜನಪದ ಕಲಾಮೇಳಕ್ಕೆ ಮೆರವಣಿಗೆಯಲ್ಲಿ ಭಾಗವಹಿಸುವ ಜಾನಪದ ಕಲಾತಂಡಗಳನ್ನು ಆಹ್ವಾನಿಸಲಾಗಿದೆ.

ಜನವರಿ 25ರಂದು ಮುಂಜಾನೆ 6ಗಂಟೆಗೆ ಚೆಲುವನಾರಾಯಣಸ್ವಾಮಿಗೆ ಜನಪದ ಕಲಾರಾಧನೆಯ ಸೇವೆಯಾಗಿ ರಥಸಪ್ತಮಿ ಸೂರ್ಯಮಂಡಲವಾಹನೋತ್ಸವದ ವೇಳೆ ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿರುವ 27ನೇ ವರ್ಷದ ರಾಜ್ಯಮಟ್ಟದ ಜನಪದಕಲಾಮೇಳ ನಡೆಯಲಿದೆ. ರಾಜ್ಯಮಟ್ಟದ ಜಾನಪದ ಕಲಾಮೇಳದಲ್ಲಿ ಭಾಗವಹಿಸಲು ಇಚ್ಚಿಸುವ ಕಲಾತಂಡಗಳು ಜನವರಿ 24 ರಂದೇ ಮೇಲುಕೋಟೆಯಲ್ಲಿ ವಾಸ್ತವ್ಯಮಾಡಬೇಕಿರುತ್ತದೆ.

ಭಾಗವಹಿಸುವ ಕಲಾತಂಡಗಳಿಗೆ ಪ್ರಯಾಣವೆಚ್ಚ, ಪ್ರಮಾಣಪತ್ರ, ಗೌರವಸಂಭಾವನೆ ಊಟ ವಸತಿಸೌಕರ್ಯ ಕಲ್ಪಿಸಲಾಗುತ್ತದೆ. ಈಗಾಗಲೇ ಆಹ್ವಾನಿತರಾಗಿರುವ ತಂಡಗಳನ್ನು ಹೊರತುಪಡಿಸಿ ಭಾಗವಹಿಸಲು ಇಚ್ಚಿಸುವ ಮಂಡ್ಯ, ಮೈಸೂರು, ಹಾಸನ, ರಾಮನಗರ ಬೆಂಗಳೂರು ಗ್ರಾಮಾಂತರ ಜಿಲ್ಲೆವ್ಯಾಪ್ತಿಯ ಕಲಾತಂಡಗಳು ಜನಪದ ಕಲಾವಿದ ಆರ್.ಶಿವಣ್ಣಗೌಡ 9902235338 ಅಥವ ಸೌಮ್ಯಸಂತಾನಂ ಅವರನ್ನು 8123831965, 9482113598 ಸಂಪರ್ಕಿಸಲು ಕೋರಲಾಗಿದೆ.

ಕಲಾ ಪ್ರಕಾರ ನೋಡಿ ಭಾಗವಹಿಸಲು ಆಧ್ಯತೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ

ವಿದ್ಯಾರ್ಥಿ ತಂಡಗಳ ಜನಪದ ಪ್ರತಿಭೆಗೂ ಅವಕಾಶ
-------------------------
ರಥಸಪ್ತಮಿ ಉತ್ಸವದ ರಾಜ್ಯಮಟ್ಟದ ಜನಪದಕಲಾಮೇಳದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಜನಪದಕಲಾ ಪ್ರದರ್ಶನಕ್ಕೂ ಅವಕಾಶವಿದೆ. ಪ್ರತಿಭಾಕಾರಂಜಿಯಲ್ಲಿ ಭಾಗವಹಿಸಿದ್ದ ಪ್ರೌಢಶಾಲಾ ವಿಭಾಗದ ಜನಪದ ಕಲಾಪ್ರಕಾರಗಳ ತಂಡಗಳು ಪ್ರಾಣಿಗಳು, ಪೌರಾಣಿಕ ವೇಷ ಧರಿಸಿ ಭಾಗವಹಿಸಬಹುದು ಮತ್ತು ಪಿಯು ಮತ್ತು ಪದವಿ ಕಾಲೇಜು ಹಂತದ ವಿದ್ಯಾರ್ಥಿ ತಂಡಗಳೂ ಭಾಗವಹಿಸಬಹುದಾಗಿದೆ. ಭಾಗವಹಿಸುವ ತಂಡಗಳಿಗೆ ಪ್ರಯಾಣವೆಚ್ಚ ಹಾಗೂ ತಾತ್ಪೂರ್ವಿಕ ವೆಚ್ಚ ನೀಡಲಾಗುತ್ತದೆ. ಈ ಕಲಾರಾಧನೆಯ ವೇದಿಕೆಯಲ್ಲಿ ಭಾಗವಹಿಸಲು ಇಚ್ಚಿಸುವ ಶಾಲಾ-ಕಾಲೇಜು ಮುಖ್ಯಸ್ಥರು /ಶಿಕ್ಷಕರು ಹಾಗೂ ಪೋಷಕರು ಹೆಚ್ಚಿನ ಮಾಹಿತಿಗೆ ಸಂಘಟಕನ್ನು ಸಂಪರ್ಕಿಸಲು ಕೋರಲಾಗಿದೆ

8 hours ago | [YT] | 38

ದೇವರ ಉತ್ಸವ

ಕೊಠರೋತ್ಸವದ ಎರಡನೇ ದಿನದ ಅಲಂಕಾರ.

2 days ago | [YT] | 117

ದೇವರ ಉತ್ಸವ

ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಮೇಲುಕೋಟೆ ಅಂಗಮಣಿ ಉತ್ಸವ ದಿನಾಂಕ: 16/01/2026. ಶುಕ್ರವಾರ ಸಂಜೆ ಅಂಗಮಣಿ.ಉತ್ಸವ ವಿಶೇಷ ಪೂಜೆ ಶ್ರೀದೇವಿ ಭೂದೇವಿ ಚೆಲುವನಾರಾಯಣ ಸ್ವಾಮಿ ದೇವಸ್ಥಾನ ಮೇಲುಕೋಟೆ ಮಂಡ್ಯ ಜಿಲ್ಲೆ ಪಾಂಡುಪುರ ತಾಲೂಕು ಕರ್ನಾಟಕ ಎಲ್ಲರಿಗೂ ಶೇರ್ ಮಾಡಿ

5 days ago | [YT] | 25

ದೇವರ ಉತ್ಸವ

🙏🏻🌹ನಮ‌್ಮ‌ ಪಾಂಡವಪುರ ತಾಲ್ಲೂಕಿನ ಐತಿಹಾಸಿಕ ಸ್ಥಳ ಮೇಲುಕೋಟೆ ಬೆಟ್ಟದ ಯೋಗ ನರಸಿಂಹ. ಸ್ವಾಮಿ ವಿಶೇಷ ದರ್ಶನ ನಿಮಗಾಗಿ . #exclusive #ದೈವದರ್ಶನ.

5 days ago | [YT] | 99

ದೇವರ ಉತ್ಸವ

ಶ್ರೀ ಚೆಲುವನಾರಾಯಣಸ್ವಾಮಿ ಮೂಲದೇವರು,ಮೇಲುಕೋಟೆ

1 week ago | [YT] | 149

ದೇವರ ಉತ್ಸವ

#ಮೇಲುಕೋಟೆ #ಯೋಗನರಸಿಂಹ ಸ್ವಾಮಿ 🙏
ದೇವಾಲಯವು ಯದುಗಿರಿ ಬೆಟ್ಟದ ಮೇಲಿದೆ, ಇದನ್ನು ಭಗವಾನ್ ಪ್ರಹ್ಲಾದನು ಸ್ಥಾಪಿಸಿದನೆಂದು ನಂಬಲಾಗಿದೆ. ಹೊಯ್ಸಳರ ಕಾಲದಲ್ಲಿ ನಿರ್ಮಿತವಾದ ಈ 1000 ವರ್ಷಗಳಷ್ಟು ಹಳೆಯ ದೇವಾಲಯವು, ಹಿರಣ್ಯಕಶಿಪುವನ್ನು ಸಂಹರಿಸಿದ ನಂತರ ನರಸಿಂಹನು ಧ್ಯಾನಿಸಿದ ಸ್ಥಳವಾಗಿದೆ.#ಪ್ರಹ್ಲಾದ ತನ್ನ ತಂದೆಯ ಪಾಪ ಪರಿಹಾರಕ್ಕಾಗಿ 'ಪಿತ್ರ ದೋಷ' ಇಲ್ಲಿ ತಪಸ್ಸು ಮಾಡಿ #ಯೋಗನರಸಿಂಹ ವಿಗ್ರಹವನ್ನು ಪ್ರತಿಷ್ಠಾಪಿಸಿದನೆಂದು ಹೇಳಲಾಗುತ್ತದೆ.

1 week ago | [YT] | 76

ದೇವರ ಉತ್ಸವ

ಓಂ ಶ್ರೀ ಚೆಲುವರಾಯಸ್ವಾಮಿಯೇ ನಮಃ

1 week ago | [YT] | 103

ದೇವರ ಉತ್ಸವ

ಓಂ ಶ್ರೀ ಚೆಲುವರಾಯಸ್ವಾಮಿಯೇ ನಮಃ ವೈಕುಂಠ ಏಕಾದಶಿ ಪ್ರಯುಕ್ತ ಇಂದಿನ ಅಲಂಕಾರ. (31-12-2025)

1 week ago (edited) | [YT] | 106

ದೇವರ ಉತ್ಸವ

#ಮೇಲುಕೋಟೆ# ಮೇಲುಕೋಟೆ#ಮಂಡ್ಯ#ಕರ್ನಾಟಕ# ಚೆಲುವನಾರಾಯಣ ಸ್ವಾಮಿ

1 week ago | [YT] | 108

ದೇವರ ಉತ್ಸವ

ಹೊರನಾಡು #ಅನ್ನಪೂರ್ಣೇಶ್ವರಿ ದೇವಿಯ ನಿಜದರ್ಶನ 🙏
ಇತಿಹಾಸವು ಅಗಸ್ತ್ಯ ಮಹರ್ಷಿಗಳಿಂದ ಪ್ರಾರಂಭವಾಗಿದ್ದು, ಸುಮಾರು 400 ವರ್ಷಗಳ ಹಿಂದೆ ದೊಡ್ಡಮನೆ ಪಾಳೆಗಾರ ಕುಟುಂಬವು ದೇವಾಲಯವನ್ನು ನವೀಕರಿಸಿ, 1973 ರಲ್ಲಿ ಚಿನ್ನದ ವಿಗ್ರಹವನ್ನು ಪ್ರತಿಷ್ಠಾಪಿಸುವುದರೊಂದಿಗೆ ಪುನರ್ಜನ್ಮ ನೀಡಿತು. ಈ ಕ್ಷೇತ್ರವು ಭದ್ರಾ ನದಿ ತೀರದಲ್ಲಿದ್ದು, #ಅನ್ನಪೂರ್ಣೇಶ್ವರಿ ತಾಯಿಯ ಕೃಪೆಯಿಂದ ಅನ್ನದ ಕೊರತೆಯಾಗುವುದಿಲ್ಲ ಎಂಬ ನಂಬಿಕೆಯಿದೆ.ದೇವಾಲಯದಲ್ಲಿರುವ #ಅನ್ನಪೂರ್ಣೇಶ್ವರಿ ದೇವಿ ಚಿನ್ನದ ವಿಗ್ರಹವಾಗಿದ್ದು, ಶಂಖ, ಚಕ್ರ, ಶ್ರೀ ಚಕ್ರ ಮತ್ತು ಗಾಯತ್ರಿ ದೇವಿಯನ್ನು ತನ್ನ ನಾಲ್ಕು ಕೈಗಳಲ್ಲಿ ಹೊಂದಿದ್ದಾಳೆ.

1 week ago | [YT] | 32