𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ

𝙴𝙽𝚃𝚁𝚃𝙰𝙽𝙼𝙴𝙽𝚃 & 𝙽𝙴𝚆𝚂
✨🌍📡🎬🎥🎤⚽🥅😊✨


𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ

*666 ಆಪರೇಷನ್ ಡ್ರೀಮ್ ಥಿಯೇಟರ್ ಮೂಲಕ ಮತ್ತೆ ಕನ್ನಡಕ್ಕೆ ಬಂದ ಪ್ರಿಯಾಂಕಾ‌ ಮೋಹನ್*


*ಶಿವಣ್ಣ-ಧನಂಜಯ್ 666 ಆಪರೇಷನ್ ಡ್ರೀಮ್ ಥಿಯೇಟರ್ ನಲ್ಲಿ ಬಹುಭಾಷಾ ನಟಿ ಪ್ರಿಯಾಂಕಾ ಮೋಹನ್*


ಪೋಸ್ಟರ್‌ ಹಾಗೂ ಫಸ್ಟ್‌ ಲುಕ್‌ ಮೂಲಕ ಗಮನ ಸೆಳೆದಿದ್ದ ‘666 ಆಪರೇಷನ್‌ ಡ್ರೀಮ್‌ ಥಿಯೇಟರ್‌’ ಸಿನಿಮಾ ಸೆಟ್‌, ಶೂಟಿಂಗ್‌ ವಿಚಾರವಾಗಿಯೂ ಸಿನಿಮಾಪ್ರೇಮಿಗಳಿಗೆ ಕುತೂಹಲ ಹೆಚ್ಚಿಸಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೀಗ ಬಹುಭಾಷಾ ನಟಿ ಪ್ರಿಯಾಂಕಾ ಮೋಹನ್ ಎಂಟ್ರಿ ಕೊಟ್ಟಿದ್ದಾರೆ.

ತಮ್ಮ ಅಭಿನಯದ ಮೂಲಕ ದಕ್ಷಿಣ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿರುವ ಪ್ರಿಯಾಂಕಾ ಮೋಹನ್ ಈಗ 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾದ ‌ಭಾಗವಾಗಿದ್ದಾರೆ. ಪವರ್ ಸ್ಟಾರ್ ಪವನ್ ಕಲ್ಯಾಣ್, ನಾನಿ, ಧನುಷ್ ಹಾಗೂ ಶಿವಕಾರ್ತಿಕೇಯನ್ ಜೊತೆ ಅಭಿನಯಿಸಿರುವ ಪ್ರಿಯಾಂಕಾ, ಹೇಮಂತ್ ಎಂ ರಾವ್ ನಿರ್ದೇಶನದ 80ರ ದಶಕದ ಬಾಂಡ್- ಸ್ಪೈ ಕಥೆ ಹೊಂದಿರುವ ಚಿತ್ರತಂಡ ಸೇರ್ಪಡೆಗೊಂಡಿದ್ದಾರೆ.

ತೆಲುಗಿನ 'ಗ್ಯಾಂಗ್‌ಲೀಡರ್', 'ಸರಿಪೋದ ಶನಿವಾರಂ', ತಮಿಳಿನ 'ಡಾಕ್ಟರ್', 'ಟಿಕ್‌ಟಾಕ್', 'ಕ್ಯಾಪ್ಟನ್ ಮಿಲ್ಲರ್', 'ಬ್ರದರ್' ಸಿನಿಮಾಗಳಲ್ಲಿ ಪ್ರಿಯಾಂಕ ಮೋಹನ್ ನಟಿಸಿದ್ದಾರೆ.


666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರತಂಡ ಸೇರ್ಪಡೆ ಬಗ್ಗೆ ಮಾತನಾಡಿರುವ ಪ್ರಿಯಾಂಕಾ ಮೋಹನ್, "ನಾನು ಡಾ. ಶಿವರಾಜ್ ಕುಮಾರ್ ಸರ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದಿದ್ದೇನೆ. ‘666 ಆಪರೇಷನ್ ಡ್ರೀಮ್ ಥಿಯೇಟರ್’ ನ ಭಾಗವಾಗುವುದು ನನ್ನ ಕನಸು ನನಸಾಗಿದೆ. ಅದ್ಭುತ ಪ್ರತಿಭಾನ್ವಿತ ಧನಂಜಯ ಅವರೊಂದಿಗೆ ಕೆಲಸ ಮಾಡುವುದು ಮತ್ತು ಇಂತಹ ಪಾತ್ರವರ್ಗದ ಭಾಗವಾಗುವುದು ನಾನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ. ಹೇಮಂತ್ ಎಂ ರಾವ್ ಅವರೊಂದಿಗೆ ಕೆಲಸ ಮಾಡುವುದನ್ನು ನಾನು ವ್ಯಕ್ತಪಡಿಸಿದ್ದೆ, ಆದರೆ ಅದು ಇಷ್ಟು ಬೇಗ ಆಗುತ್ತದೆ ಎಂದು ಭಾವಿಸಿರಲಿಲ್ಲ" ಎಂದುಹೇಳಿದರು.

ಡಾ. ವೈಶಾಕ್ ಜೆ ಗೌಡ ಅವರ ವೈಶಾಕ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಚಿತ್ರಕ್ಕೆ ಹೇಮಂತ್ ಎಂ ರಾವ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಎರಡು ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಡಿಸೆಂಬರ್ ಮೊದಲ ವಾರದಲ್ಲಿ ಮೂರನೇ ಹಂತದ ಶೂಟಿಂಗ್ ನಡೆಸಲು ಯೋಜನೆ ಹಾಕಿಕೊಂಡಿದೆ.


ಶಿವಣ್ಣ ಹಾಗೂ ಧನಂಜಯ್‌ರ ರೆಟ್ರೋ ಲುಕ್‌, ಡಾ. ರಾಜ್‌ಕುಮಾರ್‌ ಅವರ ಸ್ಪೈ ಸಿನಿಮಾಗಳನ್ನು ನೆನಪಿಸುತ್ತವೆ. ಈ ರೆಟ್ರೋ ಸ್ಪೈ ಜಗತ್ತಿಗೆ ಚರಣ್‌ ರಾಜ್‌ ಸಂಗೀತ ನಿರ್ದೇಶನ, ಅದ್ವೈತ ಗುರುಮೂರ್ತಿ ಕ್ಯಾಮೆರಾ ವರ್ಕ್ ಇವೆ. ಹಿರಿಯ ಮೇಕಪ್‌ಮನ್‌ ಎನ್‌ ಕೆ ಉಮಾ ಮಹೇಶ್ವರ ಹಾಗೂ ಕಾಸ್ಟ್ಯೂಮ್‌ ಡಿಸೈನರ್‌ ಇಂಚರಾ ಸುರೇಶ್‌ ಈ ರೆಟ್ರೋ ಜಗತ್ತನ್ನು ಕಟ್ಟಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

4 weeks ago | [YT] | 4

𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ

*ತೀರ್ಥರೂಪ ತಂದೆಯವರಿಗೆ ಸಿನಿಮಾದ ಎರಡನೇ ಹಾಡು ರಿಲೀಸ್..ನೀ ನನ್ನವಳೇ ಹಾಡಿನಲ್ಲಿ ಮಿಂಚಿದ ನಿಹಾರ್ ಮುಖೇಶ್-ರಚನಾ ಇಂದರ್*



*ಹಾಡಿನಲ್ಲಿ 'ತೀರ್ಥರೂಪ ತಂದೆಯವರಿಗೆ'...ನೀ ನನ್ನವಳೇ‌ ಮೆಲೋಡಿ ಗೀತೆ ಅನಾವರಣ*


*'ತೀರ್ಥರೂಪ ತಂದೆಯವರಿಗೆ' ಸಿನಿಮಾದ ಪೆಪ್ಪಿ ಸಾಂಗ್ ರಿಲೀಸ್..ನೀ ನನ್ನವಳೇ ಎಂದ ನಿಹಾರ್ ಮುಖೇಶ್*


ಅಪ್ಪಟ ಕನ್ನಡ ಟೈಟಲ್ ಹಾಗೂ ತಾರಾಬಳಗದ ಮೂಲಕ‌ ಕುತೂಹಲ ಹೆಚ್ಚಿಸಿರುವ ಸಿನಿಮಾ ತೀರ್ಥರೂಪ ತಂದೆಯವರಿಗೆ. ಈ ಹಿಂದೆ ಹೊಂದಿಸಿ ಬರೆಯರಿ ಕಥೆ ಹೇಳಿದ್ದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಅವರ ಎರಡನೇ ಪ್ರಯತ್ನ ಇದು. ಈಗಾಗಲೇ ತೀರ್ಥರೂಪ ತಂದೆಯವರಿಗೆ ಚಿತ್ರದ ನನದೇ ಜಗದಲಿ ಎಂಬ ಹಾಡು ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಇದೀಗ ಚಿತ್ರತಂಡ ಎರಡನೇ ಹಾಡನ್ನು ಅನಾವರಣ ಮಾಡಿದೆ. ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ನೀ ನನ್ನವಳೇ ಎಂಬ ಮೆಲೋಡಿ ಗೀತೆ ರಿಲೀಸ್ ಆಗಿದೆ.


ನೀ ನನ್ನವಳೇ ಹಾಡಿಗೆ ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದು, ರಜತ್ ಹೆಗ್ಡೆ, ಈಶಾ ಸುಚಿ ಧ್ವನಿಯಾಗಿದ್ದಾರೆ. ಜೋ‌ ಕೋಸ್ಟ್ ಸಂಗೀತ ನಿರ್ದೇಶನ ಮಾಡಿದ್ದಾರೆ. ‌ನಾಯಕ ನಿಹಾರ್ ಮುಖೇಶ್ ಹಾಗೂ ನಾಯಕಿ ರಚನಾ ಇಂದರ್ ಹಾಡಿನಲ್ಲಿ ಮಿಂಚಿದ್ದಾರೆ.

ಚಿತ್ರದಲ್ಲಿ ರಾಜೇಶ್ ನಟರಂಗ, ಸಿತಾರಾ, ರವೀಂದ್ರ ವಿಜಯ್, ಅಜಿತ್ ಹಂಡೆ, ಅಶ್ವಿತಾ ಹೆಗಡೆ ಸೇರಿದಂತೆ ಅನುಭವಿ ತಾರಾಬಳಗದವಿದೆ. 'ತೀರ್ಥರೂಪ ತಂದೆಯವರಿಗೆ’ ಚಿತ್ರವು ‘ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್’ ಮೂಲಕ ನಿರ್ಮಾಣ ಆಗುತ್ತಿದೆ.

ರಾಮೇನಹಳ್ಳಿ ಜಗನ್ನಾಥ ಅವರೇ ಕಥೆ ಬರೆದಿದ್ದಾರೆ. ನಿರ್ದೇಶನದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ. ‘ಹೊಂದಿಸಿ ಬರೆಯಿರಿ’ ಚಿತ್ರ ನಿರ್ಮಾಣ ಮಾಡಿದ್ದ ‘ಸಂಡೇ ಸಿನಿಮಾಸ್’ ಈ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದೆ. ‘ಬ್ಲಿಂಕ್’ ಸಿನಿಮಾ ಖ್ಯಾತಿಯ ರವಿಚಂದ್ರ ಎ.ಜೆ. ಅವರು ‘ತೀರ್ಥರೂಪ ತಂದೆಯವರಿಗೆ’ ಸಿನಿಮಾಗೆ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ದೀಪಕ್ ಯರಗೇರಾ ಅವರು ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಮಾಡುತ್ತಿದ್ದಾರೆ. ಪ್ರಶಾಂತ್ ರಾಜಪ್ಪ ಅವರು ಸಂಭಾಷಣೆ ಬರೆದಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿರುವ ಚಿತ್ರತಂಡ ಶೀಘ್ರದಲ್ಲೇ ಬಿಡುಗಡೆ ದಿನಾಂಕ ಘೋಷಣೆ ಮಾಡಲಿದೆ.

4 weeks ago | [YT] | 2

𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ

ಬಾದ್‌ಶಾ ಕಿಚ್ಚ ಸುದೀಪ್ ಅವರ 'ಮಾರ್ಕ್' (MARK) ಚಿತ್ರದ ಜೊತೆ ಏರ್‌ಟೆಲ್ ಸಹಭಾಗಿತ್ವ

ಭಾರತದ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಏರ್‌ಟೆಲ್, ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದರ ಜೊತೆ ಅಧಿಕೃತವಾಗಿ ಕೈಜೋಡಿಸಿದೆ. ಈ ವರ್ಷದ ಬಹುನಿರೀಕ್ಷಿತ, ಕಿಚ್ಚ ಸುದೀಪ್ ಅಭಿನಯದ 'ಮಾರ್ಕ್' ಚಿತ್ರದ ಜೊತೆ ಏರ್‌ಟೆಲ್ ಒಪ್ಪಂದ ಮಾಡಿಕೊಂಡಿದೆ.
ಬಿಡುಗಡೆ ದಿನಾಂಕ:
ಈ ಅದ್ದೂರಿ ಚಿತ್ರವು ಡಿಸೆಂಬರ್ 25 ರಂದು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

ಏರ್‌ಟೆಲ್ ಗ್ರಾಹಕರಿಗೆ ವಿಶೇಷ ಆಫರ್:
ಈ ಸಂಭ್ರಮವನ್ನು ಆಚರಿಸಲು ಏರ್‌ಟೆಲ್ "ಮಾರ್ಕ್ ಎಕ್ಸ್‌ಕ್ಲೂಸಿವ್ ಪ್ಯಾಕ್" ಅನ್ನು ಪರಿಚಯಿಸಿದೆ.
• ಇದರ ಅಡಿಯಲ್ಲಿ, ಗ್ರಾಹಕರು ಹೊಸದಾಗಿ ಬಿಡುಗಡೆಯಾದ '9 ಸೀರೀಸ್' (9 series) ನಂಬರ್‌ಗಳಿರುವ ಸಿಮ್ ಕಾರ್ಡ್‌ಗಳನ್ನು ಪಡೆಯಬಹುದು.
• ಅಷ್ಟೇ ಅಲ್ಲದೆ, ಅಭಿಮಾನಿಗಳಿಗಾಗಿ ಒಂದು ವಿಶೇಷ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದ್ದು, ಇದರಲ್ಲಿ ಗೆಲ್ಲುವ 100 ಅದೃಷ್ಟಶಾಲಿಗಳಿಗೆ 'ಮಾರ್ಕ್' ಚಿತ್ರದ ಉಚಿತ ಟಿಕೆಟ್‌ಗಳನ್ನು ಬಹುಮಾನವಾಗಿ ನೀಡಲಾಗುವುದು.

ಈ ಒಪ್ಪಂದದ ಅಂಗವಾಗಿ ಕಿಚ್ಚ ಸುದೀಪ್ ಅವರು ಏರ್‌ಟೆಲ್ ಕರ್ನಾಟಕದ ಸಿಇಒ ರಜನೀಶ್ ವರ್ಮಾ ಅವರನ್ನು ಭೇಟಿ ಮಾಡಿದರು.
ವಿಜಯ್ ಕಾರ್ತಿಕೇಯನ್ ನಿರ್ದೇಶನದ ಈ ಚಿತ್ರವನ್ನು ಸತ್ಯಜ್ಯೋತಿ ಫಿಲ್ಮ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ.

4 weeks ago | [YT] | 1

𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ

*'ಆಂಧ್ರ ಕಿಂಗ್ ತಾಲೂಕ' ಟ್ರೇಲರ್ ರಿಲೀಸ್..ಸೂಪರ್ ಸ್ಟಾರ್ ಸೂರ್ಯ ಕುಮಾರ್ ಆಗಿ ಉಪೇಂದ್ರ ಮಿಂಚು*


*ಬೆಂಗಳೂರಿನಲ್ಲಿ ಆಂಧ್ರ ಕಿಂಗ್ ತಾಲೂಕ ಪ್ರಚಾರ..ಟ್ರೇಲರ್ ಬಿಡುಗಡೆ ಮಾಡಿದ ಚಿತ್ರತಂಡ*



ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ನಟಿಸಿರುವ ತೆಲುಗು ಸಿನಿಮಾ ‘ಆಂಧ್ರ ಕಿಂಗ್ ತಾಲೂಕ’ ಟ್ರೈಲರ್ ಬಿಡುಗಡೆ ಆಗಿದೆ. ನಿನ್ನೆ ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ಟ್ರೇಲರ್ ರಿಲೀಸ್ ಕಾರ್ಯಕ್ರಮ ನಡೆಯಿತು. ಸಿನಿಮಾನಲ್ಲಿ ತೆಲುಗು ನಟ ರಾಮ್ ಪೋತಿನೇನಿ ಮತ್ತು ಉಪೇಂದ್ರ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಭಾಗ್ಯಶ್ರೀ ಬೋರ್ಸೆ ಸಾಥ್ ಕೊಟ್ಟಿದ್ದಾರೆ.

ಉಪೇಂದ್ರ ಮಾತನಾಡಿ, ಎಲ್ಲಾ ಸಿನಿಮಾ ಮಾಡೋದಿಕ್ಕೆ ಒಂದೊಂದು ಕಾರಣ ಇರುತ್ತದೆ. ಸಬ್ಜೆಕ್ಟ್, ಮೆಸೇಜ್, ಸ್ಕ್ರೀನ್ ಪ್ಲೇ, ನಮಗೆ ಸಿಗುವ ಸ್ಕೋಪ್ ಇದೆಲ್ಲಾ ಕಾರಣ. ಆದರೆ ಈ ಸಿನಿಮಾ ಮಾಡಿರುವುದು ಅಭಿಮಾನಿಗಳಿಗೋಸ್ಕರ. ಈ ಚಿತ್ರ ನೋಡಿ ಫ್ಯಾನ್ಸ್ ಎಂಜಾಯ್ ಮಾಡುತ್ತಾರೆ. ನಾನು ಚಿತ್ರ ನೋಡಿ ಮಾತನಾಡುತ್ತೇನೆ ಎಂದರು.

ನಾಯಕ‌ ರಾಮ್ ಪೋತಿನೇನಿ ಮಾತನಾಡಿ,‌ ಆಂಧ್ರ ಕಿಂಗ್ ತಾಲೂಕು ಸಿನಿಮಾದಲ್ಲಿ ನಾನು ಹೃದಯದಿಂದ ಅಭಿನಯಿಸಿದ್ದೇನೆ. ಅಭಿಮಾನಿ ಹಾಗೂ ನಟ ನಡುವಿನ ಪ್ರೀತಿ‌ ಮಾತ್ರವಲ್ಲದೆ ಈ ಚಿತ್ರದಲ್ಲಿ ಎಮೋಷನ್ ಇದೆ. ಅದು ನಿಮ್ಮನ್ನು ಟಚ್ ಮಾಡುತ್ತದೆ ಎಂದುಕೊಂಡಿದ್ದೇನೆ. ಉಪ್ಪಿ ಸರ್ ಜೊತೆ ನಟಿಸಿರುವುದು ಖುಷಿ ಇದೆ.‌ ಇದೇ ತಿಂಗಳ‌ 27ರಂದು ಚಿತ್ರ ಬಿಡುಗಡೆಯಾಗುತ್ತಿದೆ. ತಪ್ಪದೇ ನಮ್ಮ ಸಿನಿಮಾ ನೋಡಿ ಎಂದರು.

ನಿರ್ದೇಶಕ ಮಹೇಶ್ ಬಾಬು‌ ಮಾತನಾಡಿ, ಆಂಧ್ರ ಕಿಂಗ್ ತಾಲೂಕು ಸಿನಿಮಾ ನಟರಿಗಿಂತ ಇದು ಅಭಿಮಾನಿಗಳಿಗೆ ಕನೆಕ್ಟ್ ಆಗುವ ಸಿನಿಮಾ.‌ ಇದು ಅಭಿಮಾನಿ ಹಾಗೂ ಸ್ಟಾರ್ ನಡುವಿನ ಚಿತ್ರ ಎನ್ನುವುದಕ್ಕಿಂತ ಎಲ್ಲರಿಗೂ ಕನೆಕ್ಟ್ ಆಗುವ ಸಿನಿಮಾ. ನನಗೆ ಅವಕಾಶ ಕೊಟ್ಟ ಇಡೀ ಚಿತ್ರತಂಡಕ್ಕೆ ಧನ್ಯವಾದ. ನಿರ್ದೇಶಕನಾಗಿ ನನಗೆ ಇದು ಎರಡನೇ ಚಿತ್ರ ಎಂದರು.

ಸಿನಿಮಾನಲ್ಲಿ ಉಪೇಂದ್ರ ಸ್ಟಾರ್ ಹೀರೋ ಆಗಿ ನಟಿಸಿದ್ದಾರೆ. ಅವರ ಅಪ್ಪಟ ಅಭಿಮಾನಿಯ ಪಾತ್ರದಲ್ಲಿ ರಾಮ್ ಪೋತಿನೇನಿ ನಟಿಸಿದ್ದಾರೆ. ಇದು ಅಭಿಮಾನಿ ಮತ್ತು ಸ್ಟಾರ್ ಹೀರೋ ನಡೆಯುವ ಕಥೆ.

ಈ ಚಿತ್ರವನ್ನ ಮಹೇಶ್ ಬಾಬು .ಪಿ ಡೈರೆಕ್ಷನ್ ಮಾಡಿದ್ದಾರೆ. ಇವರೇ ಕಥೆ ಬರೆದಿದ್ದಾರೆ. ಚಿತ್ರಕಥೆ ಕೂಡ ಇವರದ್ದೆ ಆಗಿದೆ. ರಾಹುಲ್ ರಾಮಕೃಷ್ಣ, ಮುರಳಿ ಶರ್ಮಾ, ರಾಜೀವ್ ಕನಕಾಲ, ರಾವ್ ರಮೇಶ್ ತಾರಾಬಳಗದಲ್ಲಿದ್ದಾರೆ. ಸಿನಿಮಾಕ್ಕೆ ವಿವೇಕ್ ಮತ್ತು ಮೆರ್ವೀನ್ ಸಂಗೀತ ನೀಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಅಡಿಯಲ್ಲಿ ನವೀನ್ ಯೆರ್ನೇನಿ, ವೈ. ರವಿಶಂಕರ್ ನಿರ್ಮಿಸಿದ್ದಾರೆ. ಇದೇ ತಿಂಗಳ‌ 27ಕ್ಕೆ ಚಿತ್ರ ಬಿಡುಗಡೆಯಾಗಲಿದೆ.

4 weeks ago | [YT] | 1

𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ

*ಸೆಟ್ಟೇರಿತು ಧ್ರುವ ಸರ್ಜಾ 7ನೇ ಸಿನಿಮಾ.. ಕ್ರಿಮಿನಲ್ ನಲ್ಲಿ ಧ್ರುವಗೆ ರಚಿತಾ ರಾಮ್ ಜೋಡಿ*


*ಧ್ರುವ ಸರ್ಜಾ ಹೊಸ ಸಿನಿಮಾ 'ಕ್ರಿಮಿನಲ್'ಗೆ ಮುಹೂರ್ತದ ಸಂಭ್ರಮ..ಆಕ್ಷನ್ ಪ್ರಿನ್ಸ್ ಗೆ ರಚಿತಾ ರಾಮ್ ಜೋಡಿ*


*ಸೆಟ್ಟೇರಿತು ಉತ್ತರ ಕರ್ನಾಟಕದ ಕಥೆಯ 'ಕ್ರಿಮಿನಲ್'ಸಿನಿಮಾ..ಧ್ರುವ ಸರ್ಜಾ ಹಾಗೂ ರಚಿತಾ ರಾಮ್ ಹೊಸ ಚಿತ್ರ*


ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸ ಸಿನಿಮಾ ನಿನ್ನೆ ಅದ್ಧೂರಿಯಾಗಿ ಸೆಟ್ಟೇರಿದೆ. ಬೆಂಗಳೂರಿನ ಬಸವನಗುಡಿಯ ಅನ್ನಪೂರ್ಣ ನವ ಮಂತ್ರಾಲಯ ಮಂದಿರದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. ಇದು ಧ್ರುವ ಅವರ ಏಳನೇ ಚಿತ್ರವಾಗಿದ್ದು, ನಾಯಕಿಯಾಗಿ ರಚಿತಾ ರಾಮ್ ಸಾಥ್ ಕೊಡುತ್ತಿದ್ದಾರೆ. ಉತ್ತರ ಕರ್ನಾಟಕದ ಸೊಗಡಿನಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ನೈಜ ಘಟನೆ ಆಧರಿಸಿದ್ದು, ಚಿತ್ರಕ್ಕೆ ಕ್ರಿಮಿನಲ್ ಎಂಬ ಟೈಟಲ್ ಇಡಲಾಗಿದೆ.


ಮುಹೂರ್ತದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ದೇಶಕ ರಾಜ್ ಗುರು, ಕಥೆ ಹೇಳಿ ಧ್ರುವ ಸರ್ಜಾ ಒಕೆ ಮಾಡಿದರು. ಬಳಿಕ ಸೆಲ್ಫಿ ತೆಗೆದುಕೊಂಡೆ. ಸೆಲ್ಫಿ ನೋಡಿ ಖುಷಿ ಜೊತೆ ಭಯ ಶುರುವಾಯ್ತು. ಇದು ಜವಾಬ್ದಾರಿ ಎಂಬ ಭಯ. ಉತ್ತರ ಕರ್ನಾಟಕದ ಬಗ್ಗೆ ಸಿನಿಮಾ ಮಾಡುತ್ತಿದ್ದೇವೆ. ದೊಡ್ಡ ಪ್ರೊಡಕ್ಷನ್ ಕಂಪನಿ ನನಗೆ ಅವಕಾಶ ಕೊಟ್ಟಿದೆ. ಇದು ನನ್ನ ಎರಡನೇ ಸಿನಿಮಾ.‌ಈ ಚಿತ್ರಕ್ಕೆ ನಿಮ್ಮ ಸಪೋರ್ಟ್ ಇರಲಿ ಎಂದರು.


ನಿರ್ಮಾಪಕ ಮನೀಶ್ ಮಾತನಾಡಿ, ಧ್ರುವ ಸಿನಿಮಾ ಪ್ರೊಡ್ಯೂಸ್ ಮಾಡಿ ಎಂದಾಗ ನನಗೆ ಸರ್ ಪ್ರೈಸ್ ಆಯ್ತು. ನನ್ನ ಕನಸು ನನಸಾಗಿದೆ. ನಾನು ಕನ್ನಡ ಸಿನಿಮಾ‌ ಮಾಡುತ್ತಿರುವುದು ಖುಷಿ ಆಗಿದೆ. ಇದು ಗ್ರೇಟ್ ಮೂಮೆಂಟ್ ಎಂದರು.

ನಟಿ ರಚಿತಾ ರಾಮ್ ಮಾತನಾಡಿ, ಎಂಟು ವರ್ಷಗಳ ನಂತರ ನನ್ನ ಒಳ್ಳೆ ಫ್ರೆಂಡ್ ಧ್ರುವ ಅವರ ಜೊತೆ ಸಿನಿನಾ ಮಾಡುತ್ತಿರುವುದು ಖುಷಿ ಆಗ್ತಿದೆ. ಭರ್ಜರಿ ಸಿನಿಮಾ‌ದ ಮುಹೂರ್ತ ಇಲ್ಲೇ ಆಗಿದೆ. ಕ್ರಿಮಿನಲ್ ಕೂಡ ಇಲ್ಲೇ ಆಗಿದೆ. ಹೊಸ ತಂಡದ ಕೆಲಸ‌ ಮಾಡುತ್ತಿರುವುದು ಖುಷಿ ಇದೆ. ಗೋಲ್ಡ್ ಮೈನ್ ಪ್ರೊಡಕ್ಷನ್ ಜೊತೆ ಕೆಲಸ ಮಾಡುತ್ತಿದ್ದೇನೆ. ಫಸ್ಟ್ ನನಗೆ ಧ್ರುವ ಕಾಲ್ ಮಾಡಿದರು. ಕಥೆ, ಪ್ರೊಡಕ್ಷನ್ ಹೌಸ್ ಏನೂ ಕೇಳಲಿಲ್ಲ. ಒಕೆ ಮಾಡ್ತೀನಿ‌ ಎಂದೆ. ಆಮೇಲೆ ನಿರ್ದೇಶಕರು ಮನೆಗೆ ಬಂದು ಕಥೆ ಹೇಳಿದರು. ತುಂಬಾ ಎಕ್ಸ್ ಪಿರಿಮೇಂಟ್ ರೋಲ್ ನ ಧ್ರುವ ಮಾಡುತ್ತಿದ್ದಾರೆ. ಇದು ಅವರ ಏಳನೇ ಸಿನಿಮಾ. ಇದು ಅವರ ಸಿನಿಕರಿಯರ್ ನ ಬೆಸ್ಟ್ ಚಿತ್ರವಾಗಲಿದೆ ಎಂದರು.

ಧ್ರುವ ಸರ್ಜಾ ಮಾತನಾಡಿ, ಉತ್ತರ ಕರ್ನಾಟಕ ಹಾವೇರಿಯ ಹಾನಗಲ್ ನಲ್ಲಿ ನಡೆದ ಪ್ರೇಮ ಕಥೆಯಾಧಾರಿತ ಸಿನಿಮಾ ಮಾಡ್ತಿದ್ದೀನಿ. 99% ಸ್ಟೋರಿ ಏನಿದೆ ಅದೇ ತರ ಶೂಟ್ ಮಾಡ್ತೀವಿ. ಭರ್ಜರಿಯಲ್ಲಿ ತಾಯಿ ಆದ ನಂತ್ರ ತಾರಮ್ಮ ಮತ್ತೆ ಅಮ್ಮನಾಗಿ ಕಾಣಿಸಿಕೊಳ್ತಿದ್ದಾರೆ. ರಚಿತಾ ಭರ್ಜರಿ ನಂತ್ರ ಟಚ್ ಅಲ್ಲಿ ಇದ್ವಿ. ಕಥೆ ಕೇಳಿದ ಮೇಲೆ ರಚಿತಾಗೆ ಹೇಳ್ದೆ ಅವರು ಕೂಡಾ ಒಪ್ಪಿಕೊಂಡ್ರು. ತುಂಬಾನೇ ಯುನಿಕ್ ಸಬ್ಜೆಕ್ಟ್.. ಇಡಿ ಸಿನಿಮಾ ಉತ್ತರ ಕರ್ನಾಟಕದ ಭಾಷೆಯಲ್ಲೇ ಇರುತ್ತೆ ಅದಕ್ಕಾಗಿ ತಯಾರಿ ಮಾಡಿಕೊಳ್ತಿದ್ದೀನಿ ಎಂದು ಹೇಳಿದರು.



ಈ ಹಿಂದೆ 'ಕೆರೆಬೇಟೆ' ಚಿತ್ರ ಕಟ್ಟಿಕೊಟ್ಟಿದ್ದ ರಾಜ್‌ ಗುರು ಈಗ 'ಕ್ರಿಮಿನಲ್' ಚಿತ್ರಕ್ಕೂ ಆಕ್ಷನ್ ಕಟ್ ಹೇಳ್ತಿದ್ದಾರೆ. ಗೋಲ್ಡ್ ಮೈನ್ಸ್ ಟೆಲಿಫಿಲ್ಮ್ಸ್ ಸಂಸ್ಥೆ ಚಿತ್ರ ನಿರ್ಮಾಣ ಮಾಡ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಏಕಕಾಲಕ್ಕೆ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಚಂದನ್ ಶೆಟ್ಟಿ ಸಂಗೀತ , ವೈದಿ ಛಾಯಾಗ್ರಹಣ, ರವಿವರ್ಮಾ, ವಿಕ್ರಂ ಮೋರ್ ಸಾಹಸ ಸಂಯೋಜನೆ ಚಿತ್ರಕ್ಕಿರಲಿದೆ.


ಚಿತ್ರದಲ್ಲಿ ಹಳ್ಳಿಹೈದನಾಗಿ ಶಿವನಾಗಿ ಧ್ರುವ ಸರ್ಜಾ ನಟಿಸುತ್ತಿದ್ದಾರೆ. ಪಾರ್ವತಿಯಾಗಿ ರಚಿತಾ ರಾಮ್ ಬಣ್ಣ ಹಚ್ಚಿದ್ದಾರೆ. ಮೊದಲ ದೃಶ್ಯದಲ್ಲಿ ನಾಯಕಿಯ ಜುಟ್ಟು ಹಿಡಿದು ನಾಯಕ ಮಾತನಾಡುವ ಸನ್ನಿವೇಶ ಸೆರೆಹಿಡಿಯಲಾಗಿದೆ. #movie

1 month ago | [YT] | 2

𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ

ಸಾಲುಮರದ ತಿಮ್ಮಕ್ಕ ಇನ್ನಿಲ್ಲ 💫

ಜಗತ್ತೇ ಉಸಿರಾಡುವಂತೆ ಕಾಡನ್ನು ನೆಟ್ಟ ಮಹಿಳೆ ಸಾಲುಮರದ ತಿಮ್ಮಕ್ಕ 113 ನೇ ವಯಸ್ಸಿನಲ್ಲಿ ನಿಧನರಾದರು. ಗ್ರಾಮೀಣ ಕರ್ನಾಟಕದಲ್ಲಿ ಜನಿಸಿದ ಅವರು ಕಾಲ ಬಂಜರು 4 ಕಿಮೀ ಮೀ ಪ್ರದೇಶವನ್ನು 300+ ಆಲದ ಮರಗಳಾಗಿ ಪರಿವರ್ತಿಸಿದರು, ಪ್ರತಿ ಸಸಿಗೆ ನೀರುಣಿಸಲು ಮತ್ತು ರಕ್ಷಿಸಲು ಪ್ರತಿದಿನ ಮೈಲುಗಳಷ್ಟು ದೂರ ನಡೆದರು 🌳....,

1 month ago (edited) | [YT] | 7

𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ

Thanks For My Viewers 5k Subscribers in Youtube 🥳 🎊 ✨ 𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ [ ಕನ್ನಡ ] ✨

1 month ago | [YT] | 2

𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ

*ಅಪ್ಪು‌ ಫ್ಯಾನ್ ಡಮ್ ಆ್ಯಪ್ ಅನಾವರಣ ಮಾಡಿದ ಉಪಮುಖ್ಯಮಂತ್ರಿ‌‌ ಡಿಕೆ ಶಿವಕುಮಾರ್*

*ಅಪ್ಪು ಫ್ಯಾನ್ ಡಮ್ ಆ್ಯಪ್ ಲಾಂಚ್..ಡಿಕೆ ಶಿವಕುಮಾರ್ ಸಾಥ್*



ಖ್ಯಾತನಟ ದಿ.ಡಾ.ಪುನೀತ್ ರಾಜ್‍ಕುಮಾರ್ ಅವರು ನಮ್ಮನೆಲ್ಲ ಅಗಲಿ ಇದೇ ಅಕ್ಟೋಬರ್ 29ಕ್ಕೆ ನಾಲ್ಕು ವರ್ಷ ಕಳೆಯುತ್ತಿದೆ. ಈ ಸಂದರ್ಭದಲ್ಲಿ ಪುನೀತ್ ಅವರನ್ನು ಎಐ(ಕೃತಕ ಬುದ್ಧಿಮತ್ತೆ) ಮೂಲಕ ಅಭಿಮಾನಿಗಳಿಗೆ ತೋರಿಸುವ ಸ್ಟಾರ್ ಫ್ಯಾನ್​ಡಮ್ ಆ್ಯಪ್ (ಕನ್ನಡದ ಅಪ್ಪು ಪಿಆರ್​ಕೆ ಮೊಬೈಲ್ ಆ್ಯಪ್) ಅನ್ನು ಶನಿವಾರ ಖಾಸಗಿ ಹೋಟೆಲ್​ನಲ್ಲಿ ಡಿಸಿಎಂ ಡಿ.ಕೆ‌.ಶಿವಕುಮಾರ್ ಅನಾವರಣಗೊಳಿಸಿದ್ದಾರೆ.


ಈ ಸಂದರ್ಭದಲ್ಲಿ‌ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಗೂ ಸ್ಟಾರ್ ಫ್ಯಾನ್​ಡಮ್ ಆ್ಯಪ್ ಸಂಸ್ಥೆಯ ಅಧ್ಯಕ್ಷ ಡಾ.ಸಮರ್ಥ ರಾಘವ ನಾಗಭೂಷಣಂ ಸೇರಿದಂತೆ ಇಡೀ ತಂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, "ಪುನೀತ್ ರಾಜಕುಮಾರ್ ಅವರನ್ನು ರಾಜಕಾರಣಕ್ಕೆ ಸೆಳೆಯಲು ನಾನು ಅನೇಕ ಬಾರಿ ಪ್ರಯುತ್ನಪಟ್ಟೆ, ಚಾಕಲೇಟ್ ಕೊಟ್ಟೆ. ಆದರೆ ಅವರು ಬರಲಿಲ್ಲ. ಸಹೋದರಿ ಅಶ್ವಿನಿ ಅವರನ್ನೂ ಸಹ ಆಹ್ವಾನಿಸಿದೆ. ಅವರೂ ಸಹ ತಮ್ಮ ಪತಿ ಹಾದಿಯಲ್ಲೇ ನಡೆಯುವುದಾಗಿ ತಿಳಿಸಿದರು. ರಾಜಕಾರಣಕ್ಕೆ ಬರಲಿಲ್ಲ" ಎಂದು ಹೇಳಿದರು.

"ಅಶ್ವಿನಿ ಅವರು ರಾಜಕೀಯಕ್ಕೆ ಬರಲು ತಿರಸ್ಕರಿಸಿದಾಗ, ಸಕ್ರಿಯ ರಾಜಕಾರಣಕ್ಕೆ ಬರುವುದು ಬೇಡ, ಆದರೆ ಮುಖ್ಯವಾಹಿನಿಯಲ್ಲಿರಿ ಎಂದಿದ್ದೆ. ಇಷ್ಟು ದಿನ ಇದನ್ನು ಬಹಿರಂಗಗೊಳಿಸಿರಲಿಲ್ಲ. ಇಂದು ಬಹಿರಂಗಗೊಳಿಸಿದ್ದೇನೆ" ಎಂದರು.

"ರಾಮಾಯಣ ಮತ್ತು ಮಹಾಭಾರತಗಳು ಅನೇಕ ವರ್ಷಗಳಿಂದ ನಮ್ಮ ನಡುವೆ ಉಳಿದುಕೊಂಡಿವೆ. ಪುನೀತ್ ರಾಜಕುಮಾರ್ ಅವರು ಮಾಡಿರುವ ಕೆಲಸಗಳು ಹೊಸ ತಂತ್ರಜ್ಞಾನದ ಮೂಲಕ ನಮ್ಮ ನಡುವೆ ಜೀವಂತವಾಗಿರುತ್ತವೆ" ಎಂದು ತಿಳಿಸಿದರು.

"ಎಐ‌ ತಂತ್ರಜ್ಞಾನದ ಮೂಲಕ ಭೀಮ, ಅರ್ಜುನ, ರಾಮ ಹೀಗೆ ಅನೇಕ ಪಾತ್ರಗಳನ್ನು ನೈಜತೆಗೆ ಹತ್ತಿರವಾದಂತೆ ಚಿತ್ರಿಸಲಾಗುತ್ತಿದೆ. ಅದೇ ರೀತಿ ಈ ಆ್ಯಪ್​ನಲ್ಲಿ ಬಾಲ್ಯಕಾಲದ ಪುನೀತ್‌‌ ಸೇರಿದಂತೆ ಇತ್ತೀಚಿನ ದಿನದವರೆಗಿನ ಪುನೀತ್​ವರೆಗೆ ಸೃಷ್ಟಿಸಲಾಗಿದೆ. ಪುನೀತ್ ಅವರು ಕೊನೆಯುಸಿರೆಳೆದ ಸಂದರ್ಭದಲ್ಲಿ ಎಷ್ಟೊಂದು ಅಭಿಮಾನಿಗಳು ಅವರಿಗಾಗಿ ಮಿಡಿದರು. ನೂರಾರು ಪ್ರತಿಮೆಗಳನ್ನು ಸ್ಥಾಪಿಸಿದ್ದಾರೆ. ಅವರ ಹೆಸರನ್ನು ತಮ್ಮ ಮಕ್ಕಳಿಗೆ ಇಟ್ಟಿದ್ದಾರೆ. ಕತ್ತಲೆಗೆ ಹೋಗಿರುವ ಅಪ್ಪು, ತಂತ್ರಜ್ಞಾನದ ಮೂಲಕ ಬೆಳಕಿಗೆ ಬಂದಿದ್ದಾರೆ" ಎಂದು ಹೇಳಿದರು.

ಅಶ್ವಿನಿ ಪುನೀತ್ ರಾಜ್‌ಕುಮಾರ್ ಮಾತನಾಡಿ, ನಿಮಗೆ ಗೊತ್ತಿರುವಂತೆ ಅಪ್ಪು ಯಾವಾಗಲೂ ಹೊಸತನದ ಕಡೆಗೆ ಹುಡುಕಾಟ ನಡೆಸುತ್ತಿದ್ದರು. ಹೊಸತನದ ಹುಡುಕಾಟದಿಂದಲೇ ಹೊಸಬರಿಗೆ ಅವಕಾಶ ಕೊಡಲೆಂದೇ ಪಿಆರ್‌ಕೆ ಕೂಡ ಶುರುವಾಗಿದ್ದು, ಇಂಡಸ್ಟ್ರಿಗೆ ಏನಾದ್ರೂ ಕೊಡುಗೆ ಕೊಡ್ಬೇಕು ಎಂದು ಹೇಳುತ್ತಿದ್ದರು. ಸಮರ್ಥ್ ಅವರ ಟೀಂ ಒಂದು ಐಡಿಯಾ ತೆಗೆದುಕೊಂಡು ಬಂದಿದ್ದರು. ಅದನ್ನು ಸಾಕಷ್ಟು ಡೆವೆಲೆಪ್ ಮಾಡಿ, ಸಿನಿಮಾ, ಫಿಟ್ನೆಸ್, ಮಕ್ಕಳಿಗಾಗಿ ವಿಶೇಷ ಕಂಟೆಟ್‌ಗಳು ಬರಲಿವೆ. ಇದು ಕೇವಲ ನಮ್ಮ ಆ್ಯಪ್ ಅಲ್ಲ, ನಿಮ್ಮ ಆ್ಯಪ್ ಎಂದು ಹೇಳಿದರು.


ಡಾ.ಸಮರ್ಥ ರಾಘವ ನಾಗಭೂಷಣಂ ಮಾತನಾಡಿ, ಇದು ನನ್ನ ಜೀವನದಲ್ಲಿ ವಿಶೇಷ ದಿನ. ಫ್ಯಾನ್ ಡಮ್ ಆ್ಯಪ್ ಮಾಡಬೇಕು ಎಂದು ಯೋಚನೆ ಬಂದಾಗ ಮೊದಲು ಹಾಗೂ ಕೊನೆಯ ಹೆಸರು ಅಂದರೆ ಅದು ಕರ್ನಾಟಕ ರತ್ನ ಡಾ.‌ಪುನೀತ್ ರಾಜ್ ಕುಮಾರ್ . ಕನ್ನಡದ ಪ್ರತಿ ಹೃದಯವನ್ನು ಇಟ್ಟಿದ್ದಾರೆ. ಮುಟ್ಟಿದ್ದಾರೆ. ಇವರ ವ್ಯಕ್ತಿತ್ವವನ್ನು ಹೇಗೆ ಮುಂದೆ ತೆಗೆದುಕೊಂಡು ಹೋಗುತ್ತೇವೆ ಅನ್ನೋದನ್ನು ನೀವು ಆ್ಯಪ್ ನಲ್ಲಿ ನೋಡಬಹುದು ಎಂದರು.

1 month ago | [YT] | 5

𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ

*ನಾದಬ್ರಹ್ಮ‌ ಹಂಸಲೇಖ ಅವರ ಐದನಿ ಎಂಟರ್ಟೈನ್ಮೆಂಟ್ ಸಂಸ್ಥೆಯ ಐದನಿ ಚಿನ್ನದ ಪದಕ್ಕೆ ಪ್ರಾಗೈತಿಹಾಸಿಕ ತಜ್ಞ ಪ್ರೊ.ರವಿ ಕೋರಿಶೆಟ್ಟರ್ ಆಯ್ಕೆ*


*ಈ ಬಾರಿಗೆ ಐದನಿ ಚಿನ್ನದ ಪದಕ್ಕೆ ಪ್ರಾಗೈತಿಹಾಸಿಕ ತಜ್ಞ ಪ್ರೊ.ರವಿ ಕೋರಿಶೆಟ್ಟರ್ ಆಯ್ಕೆ..ಇದು
ಹಂಸಲೇಖ ಸಂಸ್ಥೆಯ ಕಾಣಿಕೆ*


ನಾದಬ್ರಹ್ಮ ಹಂಸಲೇಖ ಅವರ ಐದನಿ ಎಂಟರ್ಟೈನ್ಮೆಂಟ್ ಸಂಸ್ಥೆಯೂ ಪ್ರತಿ ವರ್ಷ ಒಬ್ಬಬ್ಬೊ ಸಾಧಕರಿಗೆ ಜೀವಮಾನದ ಸಾಧನೆಗಾಗಿ ನೀಡುವ 'ಐದನಿ ಚಿನ್ನದ ಪದಕ'‌ ನೀಡಿ ಗೌರವುಸುತ್ತಾ ಬಂದಿದೆ. ಈ ಮೊದಲ ಗೌರವವನ್ನು ಡಾ ಶಿವರಾಜ್ ಕುಮಾರ್ ಅವರಿಗೆ, ಎರಡನೆಯದಾಗಿ ಹಿರಿಯ ನಿರ್ದೇಶಕರಾದ ಶ್ರೀ ರಾಜೇಂದ್ರ ಸಿಂಗ್ ಬಾಬು ಅವರಿಗೆ ನೀಡಿತ್ತು. ಇದೀಗ ಮೂರನೆಯವರಾಗಿ ಪ್ರಾಗೈತಿಹಾಸಿಕ ತಜ್ಞ ಡಾ ರವಿ ಕೋರಿ ಶೆಟ್ಟರ್ ಅವರನ್ನು ಆಯ್ಕೆ ಮಾಡಿದ್ದಾರೆ. ಈ ಕುರಿತ ಬೆಂಗಳೂರಿನಲ್ಲಿ ನಿನ್ನೆ ನಡೆದ ಸುದ್ದಿ ಗೋಷ್ಠಿಯಲ್ಲಿ ಘೋಷಿಸಲಾಯಿತು.


ಈ ವೇಳೆ‌ ಮಾತನಾಡಿದ ಹಂಸಲೇಖ, ನವೆಂಬರ್ 14 ರಂದು ಬಳ್ಳಾರಿಯ ಸಂಗನಕಲ್ಲು ಪುರಾತತ್ವ ಮ್ಯೂಸಿಯಂ ಎದುರು ರವಿ ಕೋರಿಶೆಟ್ಟರ್ ಅವರಿಗೆ ಐದನಿ ಚಿನ್ನದ ಪದಕ ನೀಡಿ ಗೌರವಿಸಲಿದ್ದೇವೆ. ಪದ್ಮಶ್ರೀ ಪ್ರಶಸ್ತಿಗೆ ಅರ್ಹರಾಗಿರುವ ಕೋರಿಶೇಟ್ಟರ್ ಅವರಿಗೆ ಇನ್ನೂ ಸಹ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಿಗದಿರುವುದು ವಿಷಾದನೀಯ.
ಮತ್ತು ಈಗಿನ ಸರ್ಕಾರ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ನೀಡಿಲೆಂದು ಹಂಸಲೇಖ ಅವರು ಆಗ್ರಹಿಸಿದರು.

ರವಿ ಕೋರಿ ಶೆಟ್ಟರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ಸಚಿವ ಶಿವರಾಜ್ ತಂಗಡಗಿ ಅವರೊಂದಿಗೆ ಹಂಸಲೇಖ ಅವರು ಮಾತಾನಾಡಿರುವುದಾಗಿ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಡಾ.ಹಂಸಲೇಖ, ಹರ್ಷಕುಮಾರ್ ಕುಗ್ವೆ ಮತ್ತು ಇತಿಹಾಸ ದರ್ಪಣ ಪತ್ರಿಕೆ ಸಂಪಾದಕರಾದ ಹಂ.ಗು.ರಾಕೇಶ್ ಉಪಸ್ಥಿತರಿದ್ದರು.

1 month ago | [YT] | 5

𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ

*ಗುಮ್ಮಡಿ ನರಸಯ್ಯನಾದ ಶಿವಣ್ಣ..ಫಸ್ಟ್ ಲುಕ್ ರಿಲೀಸ್*


*ರಾಜಕಾರಣಿಯಾದ ಕರುನಾಡ ಚಕ್ರವರ್ತಿ... ಗುಮ್ಮಡಿ ನರಸಯ್ಯ ಫಸ್ಟ್ ಲುಕ್ ಅನಾವರಣ*


ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೊಸ ಸಿನಿಮಾ ದೀಪಾವಳಿ ಹಬ್ಬದ ವಿಶೇಷವಾಗಿ ಘೋಷಣೆಯಾಗಿದೆ. ರಾಜಕಾರಣಿಯಾಗಿ ಶಿವಣ್ಣ ಪ್ರತ್ಯಕ್ಷರಾಗಿದ್ದಾರೆ. ಆಂಧ್ರ ಮೂಲದ ಯೆಲ್ಲಾಂಡು ರಾಜಕಾರಣಿ ಗುಮ್ಮಡಿ ನರಸಯ್ಯ ಜೀವನಗಾಥೆಯಲ್ಲಿ ಕರುನಾಡ ಕಿಂಗ್ ಮಿಂಚಲಿದ್ದಾರೆ.


*ಯಾರು‌ ನಿರ್ದೇಶಕರು?*


ತೆಲುಗು ಸಿನಿಮಾಗಳಾದ ಚಿರು ಗೋಡವಾಲು, ಲಾವಣ್ಯ ವಿತ್ ಲವ್ ಬಾಯ್ಸ್ ಮುಂತಾದ‌ ಸಿನಿಮಾಗಳಲ್ಲಿ ನಟಿಸಿರುವ ಪರಮೇಶ್ವರ್ ಹಿವ್ರಲೆ‌ ಗುಮ್ಮಡಿ‌ ನರಸಯ್ಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ.


*ಹೇಗಿದೆ ಫಸ್ಟ್ ಲುಕ್?*

ಸೈಕಲ್ ತಳ್ಳುತ್ತಾ , ಹೆಗಲಿಗೆ ಕೆಂಪು ಶಾಲು ಹಾಕಿಕೊಂಡು, ಕನ್ನಡಕ ಹಾಕಿಕೊಂಡ ಸರ್ಕಾರಿ ಕಚೇರಿ ಮುಂದೆ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಎನ್.ಸುರೇಶ್ ರೆಡ್ಡಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

*'ಗುಮ್ಮಡಿ ನರಸಯ್ಯ' ಹಿನ್ನೆಲೆ?*

'ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ನ್ಯೂ ಡಿಮಾಕ್ರಸಿ' ಅಥವಾ ಸಿ'ಪಿಐ'ನ ಸದಸ್ಯರಾಗಿರುವ ಗುಮ್ಮಡಿ ನರಸಯ್ಯ 1983-1994 2 1999-20098 ನಡುವೆ ಯೆಲ್ಲಾಂಡುವಿನ ತೆಲಂಗಾಣ ವಿಧಾನಸಭೆಯ ಸದಸ್ಯರಾಗಿದ್ದರು. ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ತೆಲುಗು ಸೇರಿದಂತೆ ಎಲ್ಲಾ ಭಾಷೆಯಲ್ಲಿ ಸಿನಿಮಾ ತೆರೆ ಕಾಣಲಿದೆ. ಐದು ಬಾರಿ ಶಾಸಕರಾಗಿದ್ದರೂ ಇವರು ಸೈಕಲ್ ನಲ್ಲಿಯೇ ಓಡಾಟ, ರಸ್ತೆ ಬದಿಯಲ್ಲಿ ಊಟ, ಹಳೆ ಮನೆಯಲ್ಲಿಯೇ ವಾಸ ಮಾಡುತ್ತಿದ್ದರು. #movie

1 month ago | [YT] | 5