ಕ್ರಿಸ್ತದನಿ
ಇದು ನಮ್ಮ ನಿಮ್ಮೆಲ್ಲರ ದೈನಂದಿನ ಆಧ್ಯಾತ್ಮಕ್ಕೆ ಪೂರಕವಾಗಲೆಂಬ ಆಶಯದೊಂದಿಗೆ ರೂಪುಗೊಂಡಿದೆ. 'ಕ್ರಿಸ್ತದನಿ' ಯೂಟ್ಯೂಬ್ ಚಾನಲ್ನಲ್ಲಿ ಕಥೋಲಿಕ ಕ್ರೈಸ್ತರು ಪ್ರತಿನಿತ್ಯ ಮಾಡುವಂತಹ ಪ್ರಾರ್ಥನೆಗಳು, ಪ್ರತಿದಿನದ ಬಲಿಪೂಜೆಯ ವಾಚನಗಳ ಆಧಾರಿತ ಪ್ರಬುದ್ಧ ಚಿಂತನೆಗಳು, ಜಪಸರ, ಶಿಲುಬೆಹಾದಿ, ಆರಾಧನೆ, ಕ್ರೈಸ್ತ ಧಾರ್ಮಿಕ ಭಕ್ತಿಗೀತೆಗಳು ಮುಂತಾದವು ಇವೆ. ಇವೆಲ್ಲವೂ ನಮ್ಮ ಆಧ್ಯಾತ್ಮಿಕ ಪ್ರಯಾಣದಲ್ಲಿ ನೆರವಾಗಲೆಂಬುದೇ ನಮ್ಮ ಆಶಯ. ಇವನ್ನು ಕ್ರೋಢೀಕರಿಸಿ ಯೂಟ್ಯೂಬ್ ಚಾನಲ್ನಲ್ಲಿ ಪ್ರಸ್ತುತಪಡಿಸುವ ಪ್ರಯತ್ನ ಕನ್ನಡ ಕಥೋಲಿಕ ಧರ್ಮಸಭೆಗೆ ಹೊಸದು. ಕ್ರಿಸ್ತನ ನುಡಿಗೆ ಉತ್ಕೃಷ್ಟ ದನಿಯಾಗುವ ಪ್ರಯತ್ನದ ಫಲವಿದು. ಇದನ್ನು ಬಳಸುತ್ತಾ ಉತ್ತಮವಾಗಿಸುವ ಯತ್ನದಲ್ಲಿ ನಿಮ್ಮ ಅನಿಸಿಕೆಗಳು ನಮಗೆ ಉತ್ತೇಜನಕಾರಿ. ನಿಮ್ಮ ಅಭಿಪ್ರಾಯಗಳನ್ನು ನಮಗೆ ಮುಕ್ತವಾಗಿ ತಿಳಿಸಿ ಕ್ರಿಸ್ತದನಿಯ ಉತ್ತಮಿಕೆಯಲ್ಲಿ ನೆರವಾಗಿರಿ.
Disclaimer: The content mentioned in this You Tube is only for religious purpose and we do not have any trade or business intention. We are not the real owners of all the contents, and it is only compilation of religious contents from different sources for the benefit of people. For any copyright issues, contact - kristadani2311@gmail.com
Krista Dani
2️⃣8️⃣-0️⃣1️⃣-2️⃣6️⃣
*ಜನವರಿ*
2️⃣8️⃣
*ಬುಧವಾರ*
*ಪವಿತ್ರ ಬೈಬಲ್ ದಿನಚರಿ*
*ಸಾಧಾರಣ ಕಾಲದ*
*ಮೂರನೆಯ ವಾರ*
*(ವಾ,ಗ್ರ. ಭಾಗ 2. ಪುಟ 71)*
*ಪೂಜಾವಿಧಿ ವರ್ಷ- 2*
*ಕೀರ್ತನಾ ಮಂಜರಿ: 3*
*ಪೂಜಾವಸ್ತ್ರ ಬಿಳಿ*
*ಸಂತ*
*ತೋಮಸ್ ಅಕ್ವಿನಾಸ್*
*(ಡೊಮಿನಿಕನ್ ಧರ್ಮಗುರು)*
*(ವಯಸ್ಸು 49)*
*(1225-1274)*
🟫🌺🙏✝️🙏🌺🟫
*📖ದೈವವಾಕ್ಯದ ವಿಧಿ*
*ಮೊದಲನೆಯ ವಾಚನ*
*🛐ಸಮುವೇಲನ ಎರಡನೆ ಗ್ರಂಥದಿಂದ ಇಂದಿನ ವಾಚನ 7:4-17*
*"ನಿನ್ನ ಮನೆತನವೂ ಅರಸುತನವೂ ಸದಾಕಾಲ ಸ್ಥಿರವಾಗಿರುವುವು."*
ಅದೇ ರಾತ್ರಿ ಸರ್ವೇಶ್ವರ ನಾತಾನನಿಗೆ ಹೀಗೆಂದು ಆಜ್ಞಾಪಿಸಿದರು: "ನೀನು ಹೋಗಿ ನನ್ನ ದಾಸ ದಾವೀದನಿಗೆ ತಿಳಿಸಬೇಕಾದುದು ಇದು: 'ನೀನು ನನಗೊಂದು ದೇವಾಲಯವನ್ನು ಕಟ್ಟಬೇಕೆಂದಿರುವೆಯೋ? ನಾನು ಇಸ್ರಯೇಲರನ್ನು ಈಜಿಪ್ಟ್ ದೇಶದಿಂದ ಬರಮಾಡಿದಂದಿನಿಂದ ಇಂದಿನವರೆಗೆ ದೇವಾಲಯದಲ್ಲಿ ವಾಸಮಾಡಲಿಲ್ಲ; ಗುಡಾರದಲ್ಲೇ ವಾಸಿಸುತ್ತಾ ಅವರೊಡನೆ ಸಂಚರಿಸಿದೆ. ಹೀಗೆ ಇಸ್ರಯೇಲರ ಮಧ್ಯೆ ಸಂಚರಿಸುತ್ತಿದ್ದಾಗ ನನ್ನ ಜನರಾದ ಅವರನ್ನು ಪಾಲಿಸುವುದಕ್ಕೆ ಕುಲನಾಯಕರನ್ನು ನೇಮಿಸಿದೆ. ಅವರಾರಿಂದಲೂ 'ನೀವೇಕೆ ನನಗೆ ದೇವದಾರು ಮರದಿಂದ ದೇವಾಲಯವನ್ನು ಕಟ್ಟಿಸಲಿಲ್ಲ?' ಎಂದು ಕೇಳಿದ್ದಿಲ್ಲ. ಇದಲ್ಲದೆ, ನೀನು ನನ್ನ ದಾಸ ದಾವೀದನಿಗೆ ಹೇಳು, ಸರ್ವಶಕ್ತ ಸರ್ವೇಶ್ವರನಾದ ನಾನೇ ಹೀಗೆ ಹೇಳಿದೆನೆಂದು ತಿಳಿಸು: 'ಕುರಿಗಳ ಹಿಂದೆ ತಿರುಗಾಡುತ್ತಿದ್ದ ನಿನ್ನನ್ನು ಅಡವಿಯಿಂದ ಆಯ್ದುಕೊಂಡು ನನ್ನ ಪ್ರಜೆ ಇಸ್ರಯೇಲರ ಮೇಲೆ ನಾಯಕನನ್ನಾಗಿ ನೇಮಿಸಿದೆ. ನೀನು ಹೋದ ಕಡೆಯೆಲ್ಲಾ ನಿನ್ನ ಸಂಗಡ ಇದ್ದೆ. ನಿನ್ನ ಶತ್ರುಗಳನೆಲ್ಲ ನಿನ್ನ ಕಣ್ಮುಂದೆಯೆ ಸದೆಬಡಿದೆ. ಜಗದ ಮಹಾತ್ಮರ ಹೆಸರಿನಂತೆ ನಿನ್ನ ಹೆಸರನ್ನು ಪ್ರಸಿದ್ಧಗೊಳಿಸುವೆನು. ನನ್ನ ಪ್ರಜೆ ಇಸ್ರಯೇಲರಿಗೆ ಒಂದು ಸ್ಥಳವನ್ನು ಕೊಟ್ಟು ಅದರಲ್ಲಿ ಅವರನ್ನು ನೆಲೆಗೊಳಿಸುವೆನು. ಇನ್ನು ಮೇಲೆ ಅವರು ಯಾವ ಭಯವೂ ಇಲ್ಲದೆ ವಾಸಿಸುವರು. ಪೂರ್ವ ಕಾಲದಲ್ಲಿ ನಾನು ನನ್ನ ಜನರಿಗೆ ನ್ಯಾಯಸ್ಥಾಪಕರನ್ನು ನೇಮಿಸಿದೆ. ಅಲ್ಲಿಂದೀಚೆಗೆ ಇಸ್ರಯೇಲರು ಶೋಷಣೆಗೆ ಗುರಿಯಾದರು. ಆದರೆ ಇನ್ನು ಮೇಲೆ ಅದು ಆಗದು. ನೀನು ಶತ್ರುಭಯವಿಲ್ಲದೆ ಸುಖದಿರುವಂತೆ ಮಾಡುವೆನು. ಅದು ಮಾತ್ರ ಅಲ್ಲ, ಸರ್ವೇಶ್ವರನಾದ ನಾನು ನಿನಗಾಗಿ ಒಂದು ಮನೆತನವನ್ನು ಕಟ್ಟುವೆನೆಂದು ಮಾತು ಕೊಡುತ್ತೇನೆ. ನಿನ್ನ ಆಯುಷ್ಯಕಾಲ ಮುಗಿದು ನೀನು ನಿನ್ನ ಪೂರ್ವಜರನ್ನು ಸೇರಿ ವಿಶ್ರಮಿಸುವಾಗ ನಿನ್ನ ಮಕ್ಕಳಲ್ಲಿ ಒಬ್ಬನನ್ನು ನಿನಗೆ ಉತ್ತರಾಧಿಕಾರಿಯನ್ನಾಗಿ ನೇಮಿಸಿ ಅವನ ರಾಜ್ಯವನ್ನು ಸ್ಥಿರಪಡಿಸುವೆನು. ಅವನು ನನ್ನ ಹೆಸರಿನಲ್ಲಿ ಒಂದು ದೇವಾಲಯವನ್ನು ಕಟ್ಟುವನು. ನಾನು ಅವನ ಸಿಂಹಾಸನವನ್ನು ಸ್ಥಿರಪಡಿಸುವೆನು. ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು. ಅವನು ತಪ್ಪುಮಾಡಿದಾಗ, ಮಗನಿಗೆ ತಂದೆ ಬೆತ್ತದ ರುಚಿ ತೋರಿಸುವಂತೆ ನಾನು ಅವನನ್ನು ಶಿಕ್ಷಿಸುವೆನು. ಆದರೆ ನನ್ನ ಕೃಪೆ, ನಿನ್ನ ಕಣ್ಣುಂದೆಯೇ ಸೌಲನನ್ನು ಬಿಟ್ಟುಹೋದ ಹಾಗೆ, ಅವನನ್ನು ಬಿಟ್ಟು ಹೋಗುವುದಿಲ್ಲ. ನಿನ್ನ ಮನೆತನವೂ ಅರಸುತನವೂ ಸದಾಕಾಲ ಸ್ಥಿರವಾಗಿರುವುವು; ನಿನ್ನ ಸಿಂಹಾಸನ ಶಾಶ್ವತವಾಗಿರುವುದು". ನಾತಾನನು ತನಗಾದ ದರ್ಶನದ ಈ ಮಾತುಗಳನೆಲ್ಲಾ ದಾವೀದನಿಗೆ ಹೇಳಿದನು.
*ಪ್ರಭುವಿನ ವಾಕ್ಯ*
*ದೇವರಿಗೆ ಕೃತಜ್ಞತೆ ಸಲ್ಲಲಿ*
🌺✝️🌺
*ಕೀರ್ತನೆ*
*89:3-4,26-27,28-29, v. 2*
*ಶ್ಲೋಕ: ನಿನ್ನಚಲ ಪ್ರೀತಿ ಪ್ರಭೂ, ನನಗೆ ಶಾಶ್ವತ ಸಿದ್ದ.*
1. ನಾನಾರಿಸಿದವನೊಡನೆ ಮಾಡಿರುವೆ ಒಪ್ಪಂದ|
ನನ್ನ ದಾಸ ದಾವೀದನಿಗಿತ್ತಿರುವೆ ಈ ತೆರನಾದ ಶಪಥ||
ಸ್ಥಾಪಿಸುವೆ ಶಾಶ್ವತವಾಗಿ ನಿನ್ನ ಸಂತತಿಯನು|
ಸ್ಥಿರಪಡಿಸುವೆ ಯುಗಯುಗಕ್ಕೂ ನಿನ್ನ ಸಿಂಹಾಸನವನು||
*ಶ್ಲೋಕ*
2. ನನಗೆ ಪಿತ, ದೈವ ದುರ್ಗ, ಉದ್ದಾರಕ ನೀನು|
ಇಂತೆಂದೇ ನನ್ನನು ಸಂಬೋಧಿಸುವನವನು||
ಮಾಡುವೆನವನನು ಜೇಷ್ಠ ಪುತ್ರನನ್ನಾಗಿ|
ಭೂರಾಜರುಗಳೊಳು ಅತ್ಯುನ್ನತನನ್ನಾಗಿ||
*ಶ್ಲೋಕ*
3. ಇರುವುದು ಎನ್ನಚಲ ಪ್ರೀತಿ ಅವನ ಮೇಲೆ ಶಾಶ್ವತವಾಗಿ|
ಅವನೊಡನೆ ನಾ ಮಾಡಿದೊಪ್ಪಂದ ಸ್ಥಿರಸ್ಥಾಯಿಯಾಗಿ||
ಉಳಿಸುವೆನು ಅವನ ಸಂತಾನವನು ನಿರಂತರವಾಗಿ|
ಅವನ ಸಿಂಹಾಸನವಿರುವುದು ಗಗನದಂತೆ ಸ್ಥಿರವಾಗಿ||
*ಶ್ಲೋಕ*
🌺✝️🌺
*ಘೋಷಣೆ*
*(ಫಿಲಿಪ್ಪ 2:15)*
*ಅಲ್ಲೆಲೂಯ, ಅಲ್ಲೆಲೂಯ!*
ಜೀವದಾಯಕ ಸಂದೇಶವನ್ನು ಎತ್ತಿಹಿಡಿಯಿರಿ | ಆಗ ನಕ್ಷತ್ರಗಳು ಆಕಾಶವನ್ನು ಬೆಳಗಿಸುವಂತೆ, ಪ್ರಪಂಚದಲ್ಲಿ ನೀವು ಕಂಗೊಳಿಸುವಿರಿ ||
*ಅಲ್ಲೆಲೂಯ!*
🌺✝️🌺
*ಶುಭಸಂದೇಶ*
*✝️ಮಾರ್ಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 4:1-20*
*ಪ್ರಭೂ ನಿಮಗೆ ಮಹಿಮೆ ಸಲ್ಲಲಿ*
*"ಒಬ್ಬ ರೈತ ಬಿತ್ತುವುದಕ್ಕೆ ಹೊರಟ"*
ಆ ಕಾಲದಲ್ಲಿ ಯೇಸು ಗಲಿಲೇಯ ಸರೋವರದ ತೀರದಲ್ಲಿ ಮತ್ತೆ ಬೋಧಿಸಲಾರಂಭಿಸಿದರು. ಜನರು ಕಿಕ್ಕಿರಿದು ಸುತ್ತಲೂ ನೆರೆದುಬಂದಿದ್ದರು. ಆದುದರಿಂದ ಅವರು ಸರೋವರದಲ್ಲಿದ್ದ ದೋಣಿಯೊಂದನ್ನು ಹತ್ತಿ ಕುಳಿತರು. ಜನರು ದಡದಲ್ಲೇ ಉಳಿದರು. ಆಗ ಯೇಸು ಅವರಿಗೆ ಅನೇಕ ವಿಷಯಗಳನ್ನು ಸಾಮತಿಗಳ ಮೂಲಕ ಬೋಧಿಸುತ್ತಾ ಹೀಗೆಂದರು: "ಕೇಳಿ, ಒಬ್ಬ ರೈತ ಬಿತ್ತುವುದಕ್ಕೆ ಹೊರಟ. ಬಿತ್ತನೆ ಮಾಡುತ್ತಾ ಇದ್ದಾಗ ಕೆಲವು ಬೀಜಗಳು ಕಾಲ್ದಾರಿಯಲ್ಲಿ ಬಿದ್ದವು. ಬಿದ್ದುದೇ ಹಕ್ಕಿಗಳು ಬಂದು ಅವುಗಳನ್ನು ತಿಂದುಬಿಟ್ಟವು. ಬೇರೆ ಕೆಲವು ಬೀಜಗಳು ಹೆಚ್ಚು ಮಣ್ಣಿಲ್ಲದ ಕಲ್ಲು ನೆಲದ ಮೇಲೆ ಬಿದ್ದವು. ಅಲ್ಲಿ ಮಣ್ಣು ಬಹಳ ತೆಳ್ಳಗಿದ್ದುದರಿಂದ ಅವು ಬೇಗನೆ ಮೊಳೆತವು; ಬಿಸಿಲೇರಿದಾಗ ಬಾಡಿದವು; ಆಳವಾಗಿ ಬೇರೂರಲು ಆಗದ ಕಾರಣ ಅವು ಒಣಗಿಹೋದವು. ಇನ್ನು ಕೆಲವು ಬೀಜಗಳು ಮುಳ್ಳು ಪೊದೆಗಳ ನಡುವೆ ಬಿದ್ದವು. ಮುಳ್ಳು ಪೊದೆಗಳು ಸಸ್ಯಗಳ ಸಮೇತ ಅವುಗಳನ್ನು ಅದುಮಿಬಿಟ್ಟವು. ಆದುದರಿಂದ ಅವು ಫಲ ಕೊಡಲಿಲ್ಲ. ಇನ್ನೂ ಕೆಲವು ಬೀಜಗಳು ಹದವಾದ ಭೂಮಿಯಲ್ಲಿ ಬಿದ್ದವು. ಅವು ಮೊಳೆತು, ಬೆಳೆದು ತೆನೆಬಿಟ್ಟವು. ಅವುಗಳಲ್ಲಿ ಕೆಲವು ಮೂವತ್ತುರಷ್ಟು, ಕೆಲವು ಅರವತ್ತರಷ್ಟು, ಮತ್ತೆ ಕೆಲವು ನೂರರಷ್ಟು ಫಸಲನ್ನು ಕೊಟ್ಟವು. " ಈ ಸಾಮತಿಯನ್ನು ಹೇಳಿದ ಬಳಿಕ ಯೇಸು, "ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ," ಎಂದರು. ಈ ಉಪದೇಶವನ್ನು ಕೇಳಿದವರಲ್ಲಿ ಕೆಲವರು, ಯೇಸು ಒಬ್ಬರೇ ಇದ್ದಾಗ, ಹನ್ನೆರಡು ಮಂದಿ ಶಿಷ್ಯರೊಡನೆ ಬಂದು, ಅವರು ಹೇಳಿದ ಸಾಮತಿಗಳನ್ನು ವಿವರಿಸಬೇಕೆಂದು ಕೇಳಿಕೊಂಡರು. ಅದಕ್ಕೆ ಯೇಸು, "ದೇವರ ಸಾಮ್ರಾಜ್ಯದ ರಹಸ್ಯವನ್ನು ನಿಮಗೆ ತಿಳಿಸಲಾಗಿದೆ. ಮಿಕ್ಕವರಿಗಾದರೋ ಅದೆಲ್ಲವೂ ಸಾಮತಿಗಳ ರೂಪದಲ್ಲಿ ಮರೆಯಾಗಿದೆ. ಏಕೆಂದರೆ, 'ಕಣ್ಣಾರೆ ನೋಡಿಯೂ ಅವರು ಕಾಣರು; ಕಿವಿಯಾರೆ ಕೇಳಿಯೂ ಅವರು ಗ್ರಹಿಸರು. ಕಂಡು ಗ್ರಹಿಸಿದರೆ ಅವರು ದೇವರತ್ತ ತಿರುಗಿಯಾರು; ಪಾಪಕ್ಷಮೆ ಹೊಂದಿಯಾರು," ಎಂದರು. ಅನಂತರ ಯೇಸು ಅವರಿಗೆ, "ಈ ಸಾಮತಿಯನ್ನು ನೀವು ಅರ್ಥಮಾಡಿಕೊಳ್ಳಲಿಲ್ಲವೇ? ಹಾಗಾದರೆ ಬೇರೆಲ್ಲಾ ಸಾಮತಿಗಳನ್ನು ಹೇಗೆ ಅರ್ಥಮಾಡಿಕೊಳ್ಳುವಿರಿ? ಈ ಸಾಮತಿಯಲ್ಲಿ, ಬಿತ್ತುವವನು 'ದೇವರ ಸಂದೇಶ' ಎಂಬ ಬೀಜವನ್ನು ಬಿತ್ತುತ್ತಾನೆ. ಕೆಲವರು ದೇವರ ಸಂದೇಶವನ್ನು ಕೇಳುತ್ತಾರೆ; ಸೈತಾನನು ತಕ್ಷಣವೇ ಬಂದು ಆ ಸಂದೇಶವನ್ನು ತೆಗೆದುಬಿಡುತ್ತಾನೆ. ಕಾಲ್ದಾರಿಯಲ್ಲಿ ಬಿದ್ದ ಬೀಜಕ್ಕೆ ಹೋಲಿಕೆಯಾಗಿರುವವರು ಇವರೇ. ಇನ್ನೂ ಕೆಲವರು ದೇವರ ಸಂದೇಶವನ್ನು ಕೇಳಿದ ಕೂಡಲೆ ಅದನ್ನು ಸಂತಸದಿಂದ ಸ್ವೀಕರಿಸುತ್ತಾರೆ. ಆದರೆ ಅವರಲ್ಲಿ ಅದು ಆಳವಾಗಿ ಬೇರೂರದ ಕಾರಣ ಸ್ವಲ್ಪ ಕಾಲ ಮಾತ್ರ ಉಳಿಯುತ್ತದೆ. ದೇವರ ಸಂದೇಶದ ನಿಮಿತ್ತ ಕಷ್ಟಕೋಟಲೆಗಳು ಬಂದೊದಗಿದಾಗ ಕೂಡಲೇ ಎಡವಿಬೀಳುತ್ತಾರೆ. ಇವರೇ ಕಲ್ಲುನೆಲದ ಮೇಲೆ ಬಿದ್ದ ಬೀಜಕ್ಕೆ ಸಮಾನರಾದವರು. ಇನ್ನೂ ಕೆಲವರು ದೇವರ ಸಂದೇಶವನ್ನು ಕೇಳುತ್ತಾರೆ. ಆದರೆ ಅವರೊಳಗೆ ಇರುವ ಪ್ರಾಪಂಚಿಕ ಚಿಂತನೆಗಳೂ ಐಶ್ವರ್ಯದ ವ್ಯಾಮೋಹಗಳೂ ಇನ್ನಿತರ ಅಭಿಲಾಷೆಗಳೂ ದೇವರ ಸಂದೇಶವನ್ನು ಅದುಮಿ, ಅದು ಫಲಬಿಡದಂತೆ ಮಾಡುತ್ತವೆ. ಇವರೇ ಮುಳ್ಳುಪೊದೆಗಳ ನಡುವೆ ಬಿದ್ದ ಬೀಜಕ್ಕೆ ಅನುರೂಪ ಆದವರು. ಮತ್ತೆ ಕೆಲವರಾದರೋ ದೇವರ ಸಂದೇಶವನ್ನು ಕೇಳಿ ಅದನ್ನು ಸ್ವಾಗತಿಸುತ್ತಾರೆ. ಅಂಥವರಲ್ಲಿ ಕೆಲವರು ಮೂವತ್ತರಷ್ಟು, ಕೆಲವರು ಅರವತ್ತರಷ್ಟು, ಇನ್ನೂ ಕೆಲವರು ನೂರರಷ್ಟು ಫಲ ಕೊಡುತ್ತಾರೆ. ಇವರೇ ಹದವಾದ ಭೂಮಿಯಲ್ಲಿ ಬಿದ್ದ ಬೀಜಕ್ಕೆ ಸಮಾನರು, " ಎಂದರು.
*ಪ್ರಭುವಿನ ಶುಭಸಂದೇಶ*
*ಕ್ರಿಸ್ತರೇ ನಿಮಗೆ ಸ್ತುತಿ ಸಲ್ಲಲಿ*
ಆಮೆನ್
23 hours ago | [YT] | 15
View 4 replies
Krista Dani
2️⃣7️⃣-0️⃣1️⃣-2️⃣6️⃣
*ಜನವರಿ*
2️⃣7️⃣
*ಮಂಗಳವಾರ*
*ಪವಿತ್ರ ಬೈಬಲ್ ದಿನಚರಿ*
*ಸಾಧಾರಣ ಕಾಲದ*
*ಮೂರನೆಯ ವಾರ*
*(ವಾ,ಗ್ರ. ಭಾಗ 3. ಪುಟ 23)*
*ಪೂಜಾವಿಧಿ ವರ್ಷ- 1*
*ಕೀರ್ತನಾ ಮಂಜರಿ:3*
*ಪೂಜಾವಸ್ತ್ರ ಬಿಳಿ*
*ಸಂತ*
*ಅಂಜೆಲಾ ಮೆರಿಚಿ*
*(ಸ್ಥಾಪಕಿ)*
*(ವಯಸ್ಸು 65)*
*(1474-1540)*
🟧🌻🙏✝️🙏🌻🟧
*📖ದೈವವಾಕ್ಯದ ವಿಧಿ*
*ಮೊದಲನೆಯ ವಾಚನ*
*🛐ಸಮುವೆಲನ ಎರಡನೆಯ ಗ್ರಂಥದಿಂದ ಇಂದಿನ ವಾಚನ 6:12-15,17-19*
*"ದಾವೀದನು ಹಾಗೂ ಎಲ್ಲಾ ಇಸ್ರಯೇಲರೂ ಜಯಕಾರ ಮಾಡುತ್ತಾ ತುತ್ತೂರಿ ಊದುತ್ತಾ ಸರ್ವೇಶ್ವರನ ಮಂಜೂಷವನ್ನು ತಂದರು."*
ಸರ್ವೇಶ್ವರ ತಮ್ಮ ಮಂಜೂಷದ ಕಾರಣ ಓಬೇದೆದೋಮನನ್ನೂ ಅವನಿಗಿರುವುದೆಲ್ಲವನ್ನೂ ಆಶೀರ್ವದಿಸಿದ್ದಾರೆಂಬ ವರ್ತಮಾನ ದಾವೀದನಿಗೆ ಮುಟ್ಟಿತು. ಅವನು ಹೋಗಿ ಓಬೇದೆದೋಮನ ಮನೆಯಲ್ಲಿದ್ದ ದೇವರ ಮಂಜೂಷವನ್ನು ಉತ್ಸವದಿಂದ ದಾವೀದ ನಗರಕ್ಕೆ ತಂದನು. ಸರ್ವೇಶ್ವರನ ಮಂಜೂಷವನ್ನು ಹೊತ್ತವರು ಆರು ಹೆಜ್ಜೆ ನಡೆದ ನಂತರ ದಾವೀದನು ಒಂದು ಎತ್ತನ್ನೂ ಒಂದು ಕೊಬ್ಬಿದ ಕರುವನ್ನೂ ಬಲಿದಾನ ಮಾಡಿದನು. ದಾವೀದನು ಏಫೋದೆಂಬ ನಾರುಮಡಿಯನ್ನು ಮಾತ್ರ ಉಟ್ಟುಕೊಂಡು ಸರ್ವೇಶ್ವರನ ಸನ್ನಿಧಿಯಲ್ಲಿ ಪೂರ್ಣಾವೇಶದಿಂದ ಕುಣಿದಾಡಿದನು. ಹೀಗೆ ದಾವೀದನು ಹಾಗು ಎಲ್ಲಾ ಇಸ್ರಯೇಲರೂ ಜಯಕಾರ ಮಾಡುತ್ತಾ ತುತ್ತೂರಿ ಊದುತ್ತಾ ಸರ್ವೇಶ್ವರನ ಮಂಜೂಷವನ್ನು ತಂದರು. ಜನರು ಸರ್ವೇಶ್ವರನ ಮಂಜೂಷವನ್ನು ತಂದು ದಾವೀದನು ಕಟ್ಟಿಸಿದ್ದ ಗುಡಾರದೊಳಗೆ ನಿಯಮಿತ ಸ್ಥಳದಲ್ಲಿ ಇಟ್ಟರು; ಆಗ ದಾವೀದನು ಸರ್ವೇಶ್ವರನಿಗೆ ದಹನ ಬಲಿದಾನಗಳನ್ನೂ ಶಾಂತಿ ಸಮಾದಾನ ಬಲಿಗಳನ್ನೂ ಸಮರ್ಪಿಸಿದನು. ಇದಾದ ಮೇಲೆ ಅವನು ಸೇನಾಧೀಶ್ವರ ಸರ್ವೇಶ್ವರನ ಹೆಸರಿನಲ್ಲಿ ಎಲ್ಲರನ್ನೂ ಆಶೀರ್ವದಿಸಿದನು. ನೆರೆದುಬಂದು ಸಭೆ ಸೇರಿದ್ದ ಇಸ್ರಯೇಲರಲ್ಲಿ ಪ್ರತಿಯೊಬ್ಬ ಗಂಡಸಿಗೂ ಹೆಂಗಸಿಗೂ ಒಂದು ರೊಟ್ಟಿಯನ್ನು, ಒಂದು ತುಂಡು ಮಾಂಸವನ್ನು ಹಾಗು ದ್ರಾಕ್ಷಿ ಹಣ್ಣಿನಿಂದ ಮಾಡಿದ ಉಂಡೆಯನ್ನು ಕೊಡಿಸಿದನು. ತರುವಾಯ ಜನರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದರು.
*ಪ್ರಭುವಿನ ವಾಕ್ಯ*
*ದೇವರಿಗೆ ಕೃತಜ್ಞತೆ ಸಲ್ಲಲಿ*
🌻✝️🌻
*ಕೀರ್ತನೆ*
*24:7,8,9,10, v. 7*
*ಶ್ಲೋಕ: ಆಗಮಿಸುತಿಹನಿದೋ ಮಹಿಮಾವಂತ ರಾಜಾಧಿರಾಜನು.*
1. ಆಗಮಿಸುತಿಹನಿದೋ ಮಹಿಮಾವಂತ ರಾಜಾಧಿರಾಜನು|
ತೆರೆದು ಸ್ವಾಗತಿಸಲಿ ಕದಗಳು ಸನಾತನ ದ್ವಾರಗಳು||
ಯಾರಿವನು ಮಹಿಮಾವಂತ ರಾಜಾಧಿರಾಜನು?|
ಇವನೇ ಪ್ರಭು, ಯುದ್ಧವೀರನು, ಶಕ್ತಿಸಮರ್ಥನು!||
*ಶ್ಲೋಕ*
2. ಆಗಮಿಸುತಿಹನಿದೋ ಮಹಿಮಾವಂತ ರಾಜಾಧಿರಾಜನು|
ತೆರೆದು ಸ್ವಾಗತಿಸಲಿ ಕದಗಳು ಸನಾತನ ದ್ವಾರಗಳು||
ಯಾರಿವನು ಮಹಿಮಾವಂತ ರಾಜಾಧಿರಾಜನು?|
ಇವನೇ ಸೇನಾಧೀಶ್ವರನು, ಮಹಿಮಾರಾಜನು||
*ಶ್ಲೋಕ*
🌻✝️🌻
*ಘೋಷಣೆ*
*(2 ಕೊರಿಂಥ 5:19)*
*ಅಲ್ಲೆಲೂಯ, ಅಲ್ಲೆಲೂಯ!*
ದೇವರು ಕ್ರಿಸ್ತ ಯೇಸುವಿನಲ್ಲಿ ಇಡೀ ಜಗತ್ತನ್ನೇ ತಮ್ಮೊಡನೆ ಸಂದಾನಗೊಳಿಸಿ | ಆ ಸಂದಾನದ ಸಂದೇಶವನ್ನು, ಸಾರುವ ಸೌಭಾಗ್ಯವನ್ನು ನಮಗೆ ಕೊಟ್ಟಿದ್ದಾರೆ ||
*ಅಲ್ಲೆಲೂಯ!*
🌻✝️🌻
*ಶುಭಸಂದೇಶ*
*✝️ಮಾರ್ಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 3:31-35*
*ಪ್ರಭೂ ನಿಮಗೆ ಮಹಿಮೆ ಸಲ್ಲಲಿ*
*" ದೈವೇಚ್ಛೆಯನ್ನು ಯಾರು ನೆರವೇರಿಸುತ್ತಾರೋ ಅವರೇ ನನಗೆ ಸಹೋದರ, ಸಹೋದರಿ, ತಾಯಿ."*
ಆ ಕಾಲದಲ್ಲಿ ಯೇಸುವಿನ ತಾಯಿ ಮತ್ತು ಸಹೋದರರು ಅಲ್ಲಿಗೆ ಬಂದರು. ಒಳಗೆ ಜನರು ಯೇಸುವಿನ ಸುತ್ತಲೂ ಗುಂಪಾಗಿ ಕುಳಿತಿದ್ದರು. ಆದುದರಿಂದ ಅವರು ಹೊರಗೇ ನಿಂತು, ಯೇಸುವಿಗೆ ಬರಬೇಕೆಂದು ಹೇಳಿಕಳುಹಿಸಿದರು. "ನಿಮ್ಮ ತಾಯಿಯೂ ಸಹೋದರರೂ ಹೊರಗೆ ನಿಮಗಾಗಿ ಕಾದಿದ್ದಾರೆ," ಎಂದು ಯೇಸುವಿಗೆ ತಿಳಿಸಿದರು. ಅದಕ್ಕೆ ಯೇಸು, "ನನಗೆ ತಾಯಿ ಯಾರು?, ಸಹೋದರರು ಯಾರು?" ಎನ್ನುತ್ತಾ ತಮ್ಮ ಸುತ್ತಲೂ ಕುಳಿತಿದ್ದವರ ಮೇಲೆ ದೃಷ್ಟಿ ಹರಿಸಿ, "ಇಗೋ, ನನ್ನ ತಾಯಿ! ಇಗೋ ನನ್ನ ಸಹೋದರರು! ದೈವೇಚ್ಛೆಯನ್ನು ಯಾರು ನೆರವೇರಿಸುತ್ತಾರೋ ಅವರೇ ನನಗೆ ಸಹೋದರ, ಸಹೋದರಿ, ತಾಯಿ, "ಎಂದರು.
*ಪ್ರಭುವಿನ ಶುಭಸಂದೇಶ*
*ಕ್ರಿಸ್ತರೇ ನಿಮಗೆ ಸ್ತುತಿ ಸಲ್ಲಲಿ*
ಆಮೆನ್
2 days ago | [YT] | 22
View 6 replies
Krista Dani
2️⃣6️⃣-0️⃣1️⃣-2️⃣6️⃣
*ಜನವರಿ*
2️⃣6️⃣
*ಸೋಮವಾರ*
*ಪವಿತ್ರ ಬೈಬಲ್ ದಿನಚರಿ*
*ಸಾಧಾರಣ ಕಾಲದ*
*ಮೂರನೆಯ ವಾರ*
*(ವಾ,ಗ್ರ ಭಾಗ 3. ಪುಟ 888)*
*ಪೂಜಾವಿಧಿ ವರ್ಷ- 2*
*ಕೀರ್ತನಾ ಮಂಜರಿ:3*
*ಪೂಜಾವಸ್ತ್ರ ಬಿಳಿ*
*ಸಂತ ತಿಮೊಥಿ*
*(ವಯಸ್ಸು-96)*
*ಹಾಗೂ*
*ಸಂತ ಟೈಟಸ್*
*(ವಯಸ್ಸು -80)*
*(ಧರ್ಮಾಧ್ಯಕ್ಷರು)*
*(ಒಂದನೇ ಶತಮಾನ)*
*ಮತ್ತು*
*(ಭಾರತದ ಗಣರಾಜ್ಯೋತ್ಸವ)*
🟪🌹🙏✝️🙏🌹🟪
*📖ದೈವವಾಕ್ಯದ ವಿಧಿ*
*ಮೊದಲನೆಯ ವಾಚನ*
*🛐ತಿಮೊಥೇಯನ ಎರಡನೆಯ ಪತ್ರದಿಂದ ಇಂದಿನ ವಾಚನ 1:1-8*
*"ನಿನ್ನಲ್ಲಿರುವ ನಿಷ್ಕಪಟವಾದ ನಂಬಿಕೆಯು ನನ್ನ ನೆನಪಿಗೆ ಬಂತು."*
ನನ್ನ ಪ್ರೀತಿಯ ಪುತ್ರ ತಿಮೊಥೇಯನಿಗೆ ಪೌಲನು ಬರೆಯುವ ಪತ್ರ. ಕ್ರಿಸ್ತಯೇಸುವಿನಲ್ಲಿರುವವರಿಗೆ ಲಭಿಸುವ ಅಮರ ಜೀವದ ವಾಗ್ದಾನವನ್ನು ಸಾರಲು ದೈವಚಿತ್ತಾನುಸಾರ ಪ್ರೇಷಿತನಾದ ನಾನು ತಿಳಿಸುವುದೇನೆಂದರೆ: ಪಿತನಾಗಿರುವ ದೇವರೂ ಒಡೆಯರಾದ ಕ್ರಿಸ್ತಯೇಸುವೂ ನಿನಗೆ ಕೃಪೆಯನ್ನೂ ಕರುಣೆಯನ್ನೂ ಶಾಂತಿಯನ್ನೂ ಅನುಗ್ರಹಿಸಲಿ! ನಾನು ಹಗಲಿರುಳೂ ನನ್ನ ಪ್ರಾರ್ಥನೆಯಲ್ಲಿ ತಪ್ಪದೆ ನಿನ್ನನ್ನು ಸ್ಮರಿಸಿಕೊಳ್ಳುತ್ತೇನೆ. ನನ್ನ ಪೂರ್ವಿಕರ ಹಾಗೆ ಶುದ್ಧಮನಸ್ಸಾಕ್ಷಿಯಿಂದ ನನ್ನ ಆರಾಧ್ಯ ದೇವರಿಗೆ ನಿನ್ನ ವಿಷಯವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಅಂದು ನೀನು ಸುರಿಸಿದ ಕಣ್ಣೀರನ್ನು ನಾನು ಇನ್ನೂ ಮರೆತಿಲ್ಲ. ನಿನ್ನನ್ನು ಪುನಃ ನೋಡಿ ಆನಂದ ಪಡಬೇಕೆಂದು ಹಂಬಲಿಸುತ್ತಿದ್ದೇನೆ. ನಿನ್ನ ದೃಢವಿಶ್ವಾಸವು ನನ್ನ ನೆನಪಿನಲ್ಲಿದೆ. ನಿನ್ನ ಅಜ್ಜಿ ಲೋವಿಯಳಲ್ಲೂ ತಾಯಿ ಯೂನಿಸಳಲ್ಲೂ ನೆಲೆಗೊಂಡಿದ್ದ ವಿಶ್ವಾಸ ಈಗ ನಿನ್ನಲ್ಲೂ ಪೂರ್ಣವಾಗಿ ನೆಲೆಗೊಂಡಿದೆಯೆಂದು ನಾನು ನಂಬಿದ್ದೇನೆ. ನಾನು ನಿನ್ನ ಮೇಲೆ ಹಸ್ತ ನಿಕ್ಷೇಪಮಾಡಿ ಪ್ರಾರ್ಥಿಸಿದಾಗ ನೀನು ಪಡೆದಂಥ ವರದಾನವನ್ನು ಪುನಃ ಪ್ರಜ್ವಲಿಸುವಂತೆ ಮಾಡಬೇಕೆಂದು ನಿನಗೆ ಜ್ಞಾಫಿಸುತ್ತೇನೆ. ದೇವರು ನಮಗೆ ಪ್ರದಾನಮಾಡಿರುವ ಪವಿತ್ರಾತ್ಮ ನಮ್ಮನ್ನು ಹೇಡಿಗಳನ್ನಾಗಿ ಮಾಡುವುದಿಲ್ಲ; ನಮ್ಮಲ್ಲಿ ದೈವೀಶಕ್ತಿ, ಪ್ರೀತಿ ಹಾಗೂ ಸಂಯಮಗಳು ಪ್ರವರ್ಧಿಸುವಂತೆ ಮಾಡುತ್ತಾರೆ. ಆದ್ದರಿಂದ ಕ್ರಿಸ್ತಯೇಸುವಿಗೆ ಸಾಕ್ಷಿ ಆಗಿರಲು ನಾಚಬೇಡ. ಅವರಿಗಾಗಿ ಬಂಧಿಯಾಗಿರುವ ನನ್ನ ವಿಷಯದಲ್ಲೂ ನಾಚಬೇಡ. ದೇವರ ಶಕ್ತಿಯನ್ನು ಆಶ್ರಯಿಸಿ ನನ್ನೊಡನೆ ಶುಭಸಂದೇಶಕ್ಕೋಸ್ಕರ ನಿನ್ನ ಪಾಲಿನ ಶ್ರಮವನ್ನು ಅನುಭವಿಸು.
*ಪ್ರಭುವಿನ ವಾಕ್ಯ*
*ದೇವರಿಗೆ ಕೃತಜ್ಞತೆ ಸಲ್ಲಲಿ*
🌹✝️🌹
*ಪರ್ಯಾಯ ವಾಚನ:*
*🛐ತೀತನಿಗೆ ಬರೆದ ಪತ್ರದಿಂದ ಇಂದಿನ ಪರ್ಯಾಯ ವಾಚನ: 1:1-5*
*"ಕ್ರಿಸ್ತವಿಶ್ವಾಸದಲ್ಲಿ ಪುತ್ರನಾಗಿರುವ ತೀತನಿಗೆ*"
ಕ್ರಿಸ್ತ ವಿಶ್ವಾಸದಲ್ಲಿ ಪುತ್ರನಾಗಿರುವ ತೀತನಿಗೆ - ದೇವರ ದಾಸನೂ ಯೇಸು ಕ್ರಿಸ್ತರ ಪ್ರೇಷಿತನೂ ಆದ ಪೌಲನು ಬರೆಯುವ ಪತ್ರ. ತಂದೆಯಾದ ದೇವರೂ ನಮ್ಮ ಉದ್ಧಾರಕರಾದ ಯೇಸುಕ್ರಿಸ್ತರೂ ನಿನಗೆ ಕೃಪಾಶೀರ್ವಾದವನ್ನೂ ಶಾಂತಿ ಸಮಾಧಾನವನ್ನೂ ಅನುಗ್ರಹಿಸಲಿ! ದೇವರು, ತಾವು ಆರಿಸಿಕೊಂಡಿರುವ ಜನರ ವಿಶ್ವಾಸವನ್ನು ದೃಢಪಡಿಸಲು ಮತ್ತು ಭಕ್ತಿಯನ್ನು ವೃದ್ಧಿಗೊಳಿಸಿ ಅಮರ ಜೀವದತ್ತ ಕರೆದೊಯ್ಯುವ ಸತ್ಯಗಳನ್ನು ಅವರಿಗೆ ಬೋಧಿಸಲು ನನ್ನನ್ನು ನೇಮಿಸಿದ್ದಾರೆ. ಈ ಅಮರ ಜೀವವನ್ನು ಕೊಡುವುದಾಗಿ ಸತ್ಯಪರರಾದ ದೇವರು ಆದಿಯಿಂದಲೂ ನಮಗೆ ವಾಗ್ದಾನಮಾಡಿದ್ದರು. ಸೂಕ್ತ ಕಾಲವು ಬಂದಾಗ ಈ ವಾಗ್ದಾನವನ್ನು ಈಡೇರಿಸಿ ತಮ್ಮ ಸಂದೇಶವನ್ನು ಪ್ರಕಟಿಸಿದರು. ನನಗೊಪ್ಪಿಸಿರುವ ಈ ಸಂದೇಶವನ್ನು ಜಗದ್ರಕ್ಷಕರಾದ ದೇವರ ಆಜ್ಞಾನುಸಾರ ನಾನು ಸಾರುತ್ತಿದ್ದೇನೆ. ನೀನು ಕ್ರೇಟ್ ದ್ವೀಪದಲ್ಲಿ ಇನ್ನೂ ಸರಿಪಡಿಸಬೇಕಾದ ಕೆಲಸಗಳನ್ನು ಕ್ರಮಪಡಿಸಿ, ಅಲ್ಲಿಯ ಪ್ರತಿಯೊಂದು ಪಟ್ಟಣಕ್ಕೂ ಸಭೆಯ ಹಿರಿಯರನ್ನು ನೇಮಿಸಬೇಕೆಂದು ನಿನ್ನನ್ನು ಅಲ್ಲೇ ಬಿಟ್ಟು ಬಂದೆ.
*ಪ್ರಭುವಿನ ವಾಕ್ಯ*
*ದೇವರಿಗೆ ಕೃತಜ್ಞತೆ ಸಲ್ಲಲಿ*
🌹✝️🌹
*ಕೀರ್ತನೆ*
*96:1-2,2-3,7-8,10*
*ಶ್ಲೋಕ: ಪ್ರಸಿದ್ಧಪಡಿಸಿರಿ ಆತನ ಘನತೆಯನು ರಾಷ್ಟ್ರಗಳಿಗೆ, ಆತನದ್ಬುತಕಾರ್ಯಗಳನು ಸಕಲ ಜನಾಂಗಗಳಿಗೆ.*
1. ಹೊಸ ಗೀತೆಯನು ಹಾಡಿರಿ ಪ್ರಭುವಿಗೆ,
ವಿಶ್ವವೆಲ್ಲವು ಹಾಡಲಿ ಆತನಿಗೆ||
ಪ್ರಭುವಿಗೆ ಹಾಡಿರಿ|
ಆತನ ನಾಮವನು ಕೊಂಡಾಡಿರಿ||
*ಶ್ಲೋಕ*
2. ಆತನ ಮುಕ್ತಿ ಮಾರ್ಗವನ್ನು ಪ್ರತಿನಿತ್ಯವೂ ಸಾರಿರಿ|
ಪ್ರಸಿದ್ಧಪಡಿಸಿರಿ ಆತನ ಘನತೆಯನು ರಾಷ್ಟ್ರಗಳಿಗೆ||
ಆತನದ್ಬುತಕಾರ್ಯಗಳನು ಸಕಲ ಜನಾಂಗಗಳಿಗೆ||
*ಶ್ಲೋಕ*
3. ಶಕ್ತಿಸಾಮರ್ಥ್ಯ ಪ್ರಭುವಿನದೇ ಎಂದು|
ಜಗದ ರಾಷ್ಕ್ರಗಳು ಘನಪಡಿಸಲಿ ಆತನನು|
ಎಂದೆಂದು ಆತನ ನಾಮಕೆ ತನ್ನ ಘನತೆ ಗೌರವವನು||
*ಶ್ಲೋಕ*
4. ಪ್ರಭೂ ರಾಜನೆಂದು ಸಾರಿರಿ ರಾಷ್ಟ್ರಗಳಿಗೆ|
ಕದಲದ ಸ್ಥಿರತೆಯನು ಇತ್ತಿಹನು ಧರೆಗೆ|
ನ್ಯಾಯವಾದ ತೀರ್ಪುಕೊಡುವನು ಜನಾಂಗಕೆ||
*ಶ್ಲೋಕ*
🌹✝️🌹
*ಘೋಷಣೆ*
*(ಲೂಕ 4:18)*
*ಅಲ್ಲೆಲೂಯ, ಅಲ್ಲೆಲೂಯ!*
ದೇವರಾತ್ಮ ನನ್ನ ಮೇಲಿದೆ, ದೀನದಲಿತರಿಗೆ ಶುಭಸಂದೇಶವನ್ನು ಬೋಧಿಸಲೆಂದು ಅವರೆನ್ನನು ಅಭಿಷೇಕಿಸಿದ್ದಾರೆ | ಬಂಧಿತರಿಗೆ ಬಿಡುಗಡೆಯನ್ನೂ ಅಂಧರಿಗೆ ದೃಷ್ಟಿದಾನವನ್ನೂ ಪ್ರಕಟಿಸಲೂ ಶೋಷಿತರಿಗೆ ಸ್ವಾತಂತ್ರ್ಯ ನೀಡಲೂ ನನ್ನನ್ನು ಕಳುಹಿಸಿದ್ದಾರೆ||
*ಅಲ್ಲೆಲೂಯ!*
🌹✝️🌹
*ಶುಭಸಂದೇಶ*
*✝️ಲೂಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 10:1-9*
*ಪ್ರಭೂ ನಿಮಗೆ ಮಹಿಮೆ ಸಲ್ಲಲಿ*
*"ಬೆಳೆಯೇನೋ ಹೇರಳವಾಗಿದೆ ಕೊಯ್ಲುಗಾರರೋ ವಿರಳ"*
ಆ ಕಾಲದಲ್ಲಿ ಯೇಸು ಇನ್ನೂ ಎಪ್ಪತ್ತೆರಡು ಮಂದಿಯನ್ನು ನೆಮಿಸಿ ಅವರನ್ನು ಇಬ್ಬಿಬ್ಬರನ್ನಾಗಿ ತಾವೇ ಹೋಗಲಿದ್ದ ಊರುಗಳಿಗೂ ಸ್ಥಳಗಳಿಗೂ ಮುಂದಾಗಿ ಕಳಿಸಿದರು. ಕಳುಹಿಸುವಾಗ ಅವರಿಗೆ ಹೇಳಿದ್ದೇನೆಂದರೆ, " ಬೆಳೆಯೇನೋ ಹೇರಳವಾಗಿದೆ; ಕೊಯ್ಲುಗಾರರೋ ವಿರಳ. ಆದುದರಿಂದ ಕೊಯ್ಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಬೇಡಿಕೊಳ್ಳಿ. ಹೋಗಿರಿ ತೋಳಗಳ ನಡುವೆ ಕುರಿಗಳನ್ನು ಬಿಟ್ಟಂತೆ ನಾನು ನಿಮ್ಮನು ಕಳುಹಿಸುತ್ತೇನೆ. ಹಣದ ಚೀಲವನ್ನಾಗಲಿ, ಜೋಳಿಗೆಯನ್ನಾಗಲಿ, ಪಾದರಕ್ಷೆಗಳನ್ನಾಗಲಿ ತೆಗೆದುಕೊಂಡು ಹೋಗದಿರಿ. ದಾರಿಯಲ್ಲಿ ಯಾರಿಗೂ ವಂದನೋಪಚಾರಗಳನ್ನು ಮಾಡಿಕೊಂಡಿರಬೇಡಿ. ನೀವು ಯಾವ ಮನೆಗೆ ಹೋದರೂ, ಈ ಮನೆಗೆ ಶಾಂತಿ, ಎಂದು ಆಶೀರ್ವಾದ ಮಾಡಿ; ಶಾಂತಿಪ್ರಿಯನು ಅಲ್ಲಿದ್ದರೆ ನಿಮ್ಮ ಆಶೀರ್ವಾದವು ಅವನ ಮೇಲೆ ನೆಲಸುವುದು. ಇಲ್ಲವಾದರೆ, ಅದು ನಿಮಗೆ ಹಿಂದಿರುಗುವುದು. ಮನೆಯಿಂದ ಮನೆಗೆ ಹೋಗದೆ ಆ ಮನೆಯಲ್ಲೇ ತಂಗಿದ್ದು, ಅಲ್ಲಿಯವರು ಕೊಡುವ ಅನ್ನಪಾನೀಯಗಳನ್ನು ಸೇವಿಸಿರಿ. ದುಡಿಮೆಗಾರನು ಕೂಲಿಗೆ ಬಾಧ್ಯನು. ನೀವು ಯಾವ ಊರಿಗೆ ಹೋದರೂ ಜನರು ನಿಮ್ಮನ್ನು ಸ್ವಾಗತಿಸಿದಾಗ, ಅವರು ಬಡಿಸಿದ್ದನ್ನು ಭುಜಿಸಿರಿ. ಅಲ್ಲಿರುವ ರೋಗಿಗಳನ್ನು ಗುಣಪಡಿಸಿರಿ. ದೇವರ ಸಾಮ್ರಾಜ್ಯ ನಿಮ್ಮನ್ನು ಸಮೀಪಿಸಿದೆ, ಎಂದು ತಿಳಿಸಿರಿ."
*ಪ್ರಭುವಿನ ಶುಭಸಂದೇಶ*
*ಕ್ರಿಸ್ತರೇ ನಿಮಗೆ ಸ್ತುತಿ ಸಲ್ಲಲಿ*
ಆಮೆನ್
3 days ago | [YT] | 13
View 4 replies
Krista Dani
2️⃣5️⃣-0️⃣1️⃣-2️⃣6️⃣
*ಜನವರಿ*
2️⃣5️⃣
*ಭಾನುವಾರ*
*ಪವಿತ್ರ ಬೈಬಲ್ ದಿನಚರಿ*
*ಸಾಧಾರಣ ಕಾಲದ*
*ಮೂರನೆಯ ವಾರ*
*(ವಾ,ಗ್ರ. ಭಾಗ 2. ಪುಟ 56)*
*ಪೂಜಾವಿಧಿ ವರ್ಷ- 1*
*ಕೀರ್ತನಾ ಮಂಜರಿ;3*
*ಪೂಜಾವಸ್ತ್ರ ಹಸಿರು*
*ಪ್ರೇಷಿತ*
*ಸಂತ ಪೌಲರ*
*ಮನಪರಿವರ್ತನೆ*
*(ಹಬ್ಬ)*
🟩🌻🙏✝️🙏🌻🟩
*📖ದೈವವಾಕ್ಯದ ವಿಧಿ*
*"ನಮ್ಮ ದುಃಖದ ಸ್ಥಳವೇ ದೇವರ ಕೃಪೆಯ ವೇದಿಕೆ"*
*ಮೊದಲನೆಯ ವಾಚನ*
*🛐ಪ್ರವಾದಿ ಯೆಶಾಯನ ಗ್ರಂಥದಿಂದ ಇಂದಿನ ಮೊದಲನೆಯ ವಾಚನ 8:22-9:3*
*" ಕಾಣಿಸಿತೊಂದು ಮಹಾಜ್ಯೋತಿ ಕತ್ತಲಲಿ ಸಂಚರಿಸುತ್ತಿದ್ದ ಜನರಿಗೆ ಪ್ರಜ್ವಲಿಸಿತಾ ಜ್ಯೋತಿ ಕಗ್ಗತ್ತಲಲಿ ಬಾಳುತ್ತಿದ್ದ ನಾಡಿಗರಿಗೆ"*
ಆಕಾಶವನ್ನು ದಿಟ್ಟಿಸಿ ನೋಡಿದರೂ ಭೂಮಿಯನ್ನು ದುರುಗುಟ್ಟಿ ನೋಡಿದರೂ ಅವರಿಗೆ ಕಾಣುವುದು ಕಷ್ಟ ಸಂಕಟಗಳ ಕತ್ತಲೆ, ಭಯಂಕರವಾದ ಕಾಳಗತ್ತಲೆಯಲ್ಲದೆ
ಮತ್ತೇನೂ ಅಲ್ಲ. ಅಂಥ ಕರಾಳ ಕತ್ತಲೆಯೊಳಗೆ ಅವರನ್ನು ದೂಡಲಾಗುವುದು. ಆದರೂ ಕಷ್ಟ ಸಂಕಟಗಳನ್ನು ಅನುಭವಿಸಿದ ಆ ನಾಡಿಗೆ ಇನ್ನು ಮುಂದೆ ಕತ್ತಲಿರುವುದಿಲ್ಲ. ಒಮ್ಮೆ ಜೆಬುಲೋನ್ ಮತ್ತು ನಪ್ತಾಲಿಯ ಗೋತ್ರಗಳಿಗೆ ಬೀಡಾಗಿದ್ದ ಆ ಪ್ರಾಂತ್ಯವು ಅವಮಾನಕ್ಕೆ ಗುರಿಯಾಗಿತ್ತು. ಆದರೆ ಇನ್ನು ಮುಂದೆ ಅದಕ್ಕೆ ಘನತೆ ಗೌರವ ಬರುವುದು; ಸಮುದ್ರದ ಹಾದಿಯಿಂದ ಹಿಡಿದು ಜೋರ್ಡನಿನ ಆಚೆಯಲ್ಲಿ ಇರುವ ಪ್ರಾಂತ್ಯದವರೆಗೆ ಮಾತ್ರವಲ್ಲ, ಅನ್ಯಜನರು ಇರುವ ಗಲಿಲೇಯ ಪ್ರಾಂತ್ಯದವರೆಗೂ ಘನತೆ ಗೌರವ ಬಂದೊದಗುವುದು. ಕಾಣಿಸಿತೊಂದು ಮಹಾಜ್ಯೋತಿ, ಕತ್ತಲಲಿ ಸಂಚರಿಸುತ್ತಿದ್ದ ಜನರಿಗೆ, ಪ್ರಜ್ವಲಿಸಿತಾ ಜ್ಯೋತಿ ಕಗ್ಗತ್ತಲಲಿ ಬಾಳುತ್ತಿದ್ದ ನಾಡಿಗರಿಗೆ. ವೃದ್ಧಿಗೊಳಿಸಿರುವೆ ನೀನು ಆ ದೇಶವನು, ಅಧಿಕರಿಸಿರುವೆ ಅದರ ತೋಷವನು ಸುಗ್ಗಿಕಾಲದಲ್ಲಿ ಹಿಗ್ಗುವವರಂತೆ, ಕೊಳ್ಳೆ ಹಂಚಿಕೊಳ್ಳುವವರಂತೆ ಹರ್ಷಿಸುವರವರು ನಿನ್ನ ಮುಂದೆ.
*ಪ್ರಭುವಿನ ವಾಕ್ಯ*
*ದೇವರಿಗೆ ಕೃತಜ್ಞತೆ ಸಲ್ಲಲಿ*
🌻✝️🌻
*ಕೀರ್ತನೆ*
*27 : 1, 4-5, 13-14. v. 1*
*ಶ್ಲೋಕ: ನಿನ್ನ ಮಾರ್ಗವನು ಪ್ರಭೂ ನನಗೆ ತೋರಿಸು.*
1. ನನಗೆ ಬೆಳಕು, ನನಗೆ ರಕ್ಷೆ ಪ್ರಭುವೇ|
ನಾನಾರಿಗೂ ಅಳುಕೆನು||
ನನ್ನ ಬಾಳಿಗಾಧಾರ ಪ್ರಭುವೇ|
ನಾನಾರಿಗೂ ಅಂಜೆನು||
*ಶ್ಲೋಕ*
2. ನಾನೊಂದನು ಕೋರಿದೆ ಪ್ರಭುವಿನಿಂದ|
ನಾನದನ್ನೇ ನಿರೀಕ್ಷಿಸಿದೆ ಆತನಿಂದ||
ವಾಸಿಸಬೇಕು ಜೀವಮಾನವೆಲ್ಲ ನಾನಾತನ ಮಂದಿರದಲಿ|
ನಾ ತಲ್ಲೀನನಾಗಬೇಕು ಅಲ್ಲಾತನ ಪ್ರಸನ್ನತೆಯಲಿ||
*ಶ್ಲೋಕ*
3. ಕೇಡುಗಾಲದಲ್ಲಿ ಅವಿತಿಸಿಡುವನು ನನ್ನನ್ನು ಗುಡಾರದಲಿ|
ಇರಿಸುವನು ಮರೆಯಾಗಿ ಗರ್ಭಗುಡಿಯಲಿ, ಸುರಕ್ಷಿತ ಶಿಖರದಲಿ||
*ಶ್ಲೋಕ*
4. ಪ್ರಭುವಿನೊಳಿತನು ನಾ ಕಾಣುವೆ ಜೀವಲೋಕದೊಳು|
ನಾನಿಟ್ಟಿರುವೆ ನಂಬಿಕೆ ನಿರೀಕ್ಷೆ ಅದರೊಳು||
*ಶ್ಲೋಕ*
5. ಪ್ರಭುವನು ಎದುರುನೋಡುತ್ತಿರು ಮನವೇ|
ಧೈರ್ಯದಿಂದ ನಿರೀಕ್ಷಿಸುತ್ತಿರು ಎದೆಗುಂದದೆ||
*ಶ್ಲೋಕ*
🌻✝️🌻
*ಎರಡನೆಯ ವಾಚನ*
*🛐ಪೌಲನು ಕೊರಿಂಥಿಯರಿಗೆ ಬರೆದ ಮೊದಲನೆಯ ಪತ್ರದಿಂದ ಇಂದಿನ ಎರಡನೆಯ ವಾಚನ 1:10-13, 17*
*" ಒಂದೇ ಮನಸ್ಸಿನಿಂದಲೂ ಒಂದೇ ಉದ್ದೇಶದಿಂದಲೂ ನೀವು ಐಕ್ಯಮತ್ಯದಿಂದ ಬಾಳಿರಿ."*
ಸಹೋದರರೇ, ನಮ್ಮ ಪ್ರಭು ಯೇಸುಕ್ರಿಸ್ತರ ಹೆಸರಿನಲ್ಲಿ ನಾನು ಕೇಳಿಕೊಳ್ಳುವುದೇನೆಂದರೆ: ವಾದವಿವಾದವಿಲ್ಲದೆ, ಭಿನ್ನಭೇದಗಳಿಲ್ಲದೆ ಒಂದೇ ಮನಸ್ಸಿನಿಂದಲೂ ಒಂದೇ ಉದ್ದೇಶದಿಂದಲೂ ನೀವು ಐಕ್ಯಮತ್ಯದಿಂದ ಬಾಳಿರಿ. ಸಹೋದರರೇ, ನೀವು ಜಗಳವಾಡುತ್ತಿದ್ದೀರಿ ಎಂಬುದು ಖ್ಲೊಯೇಯನ ಮನೆಯವರಿಂದ ತಿಳಿದುಬಂದಿದೆ. ನಿಮ್ಮ ಪೈಕಿ, ತಾನು ಪೌಲನ ಕಡೆಯವನು ಎಂದು ಒಬ್ಬ, ತಾನು ಅಪೊಲೋಸನ ಕಡೆಯವನು ಎಂದು ಇನ್ನೊಬ್ಬ, ತಾನು ಕೇಫನ ಕಡೆಯವನು ಎಂದು ಮತ್ತೊಬ್ಬ, ತಾನು ಕ್ರಿಸ್ತನ ಕಡೆಯವನು ಎಂದು ಮಗದೊಬ್ಬ. ಹೀಗೆ ಒಬ್ಬೊಬ್ಬರು ಒಂದೊಂದು ತೆರನಾಗಿ ಹೇಳಿಕೊಳ್ಳುತ್ತಾರಂತೆ. ಕ್ರಿಸ್ತಯೇಸು ಭಾಗಭಾಗವಾಗಿ ವಿಂಗಡಿಸಿ ಹೋಗಿದ್ದಾರೆಯೇ? ನಿಮಗೋಸ್ಕರ ಶಿಲುಬೆಯ ಮೇಲೆ ಮಡಿದವನು ಪೌಲನೇ? ನೀವು ದೀಕ್ಷಾಸ್ನಾನ ಪಡೆದದ್ದು ಪೌಲನ ಹೆಸರಿನಲ್ಲೇ? ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುಧು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ, ಶುಭಸಂದೇಶವನ್ನು ಸಾರುವುದಕ್ಕೆ. ಅದೂ ವಾಕ್ ಚಾತುರ್ಯದಿಂದಲ್ಲ. ಹಾಗೆ ಸಾರಿದ್ದೇ ಆದರೆ, ಕ್ರಿಸ್ತ ಯೇಸುವಿನ ಶಿಲುಬೆಯೇ ನಿರರ್ಥಕವಾದೀತು.
*ಪ್ರಭುವಿನ ವಾಕ್ಯ*
*ದೇವರಿಗೆ ಕೃತಜ್ಞತೆ ಸಲ್ಲಲಿ*
🌻🛐🌻
*ಘೋಷಣೆ*
*ಮತ್ತಾಯ 4:23*
*ಅಲ್ಲೆಲೂಯ, ಅಲ್ಲೆಲೂಯ!*
ಯೇಸು ದೈವರಾಜ್ಯದ ಸಂದೇಶವನ್ನು ಸಾರುತ್ತಿದ್ದರು | ಜನರ ಎಲ್ಲಾ ತರದ ರೋಗರುಜಿನಗಳನ್ನು, ಬೇನೆ ಬವಣೆಗಳನ್ನೂ ಗುಣಪಡಿಸುತ್ತಿದ್ದರು||
*ಅಲ್ಲೆಲೂಯ!*
🌻✝️🌻
*ಶುಭಸಂದೇಶ*
*✝️ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 4:12-23*
*ಪ್ರಭೂ ನಿಮಗೆ ಮಹಿಮೆ ಸಲ್ಲಲಿ*
*"ಪ್ರವಾದಿ ಯೆಶಾಯನ ವಚನಗಳು ಈಡೇರುವಂತೆ ಯೇಸು ಕಫೆರ್ನವುಮ್ ಎಂಬ ಊರಿನಲ್ಲಿ ವಾಸಮಾಡಿದರು.*"
ಆ ಕಾಲದಲ್ಲಿ ಯೊವಾನ್ನನು ಬಂಧಿತನಾದನೆಂದು ಯೇಸುಸ್ವಾಮಿ ಕೇಳಿ, ಆ ಪ್ರಾಂತ್ಯವನ್ನು ಬಿಟ್ಟು ಗಲಿಲೇಯಕ್ಕೆ ಹೊರಟುಹೋದರು. ನಜರೇತ್ ಊರಿನಲ್ಲಿ ತಂಗದೆ ಗಲಿಲೇಯ ಸರೋವರದ ಸವಿೂಪದಲ್ಲಿರುವ ಕಫೆರ್ನವುಮ್ ಎಂಬ ಊರಿನಲ್ಲಿ ವಾಸಮಾಡಿದರು. ಇದು ಜೆಬುಲೋನ್ ಹಾಗೂ ನೆಫ್ತಲೀಮ್ ನಾಡುಗಳ ಸರಹದ್ದಿನಲ್ಲಿದೆ. ಹೀಗೆ: "ಜೆಬುಲೋನ್ ನಾಡೇ, ನೆಫ್ತಲೀಮ್ ನಾಡೇ, ಸರೋವರದ ಹತ್ತಿರವಿರುವ ಹಾದಿಬೀದಿಯೇ, ಜೋರ್ಡನಿನ ಹೊರವಲಯವೇ, ಕಾರ್ಗತ್ತಲಲ್ಲಿ ವಾಸಿಸುವವರಿಗೆ ದಿವ್ಯ ಜ್ಯೋತಿಯೊಂದು ಕಾಣಿಸಿತು. ಮರಣಛಾಯೆ ಕವಿದ ನಾಡಿಗರಿಗೆ ಅರುಣೋದಯವಾಯಿತು, "ಎಂದು ನುಡಿದ ಪ್ರವಾದಿ ಯೆಶಾಯನ ವಚನಗಳು ಈಡೇರಿದವು. ಅಂದಿನಿಂದ ಯೇಸು, "ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿರಿ, ದೇವರಿಗೆ ಅಭಿಮುಖರಾಗಿರಿ, ಸ್ವರ್ಗಸಾಮ್ರಾಜ್ಯ ಸಮೀಪಿಸಿತು," ಎಂಬ ಸಂದೇಶವನ್ನು ಬೋಧಿಸತೊಡಗಿದರು. ಯೇಸುಸ್ವಾಮಿ ಗಲಿಲೇಯ ಸರೋವರದ ತೀರದಲ್ಲಿ ನಡೆದು ಹೋಗುತ್ತಿದ್ದರು. ಆಗ ಇಬ್ಬರು ಸಹೋದರರನ್ನು ಕಂಡರು. ಇವರೇ ‘ಪೇತ್ರ’ ಎನಿಸಿಕೊಂಡ ಸಿಮೋನ ಮತ್ತು ಅವನ ಸಹೋದರ ಅಂದ್ರೆಯ. ಬೆಸ್ತರಾದ ಇವರು ಸರೋವರದಲ್ಲಿ ಬಲೆ ಬೀಸುತ್ತಾ ಇದ್ದರು, "ನನ್ನನ್ನು ಹಿಂಬಾಲಿಸಿ ಬನ್ನಿ. ನಿಮ್ಮನ್ನು ಮನುಷ್ಯರನ್ನೇ ಹಿಡಿಯುವವರನ್ನಾಗಿ ಮಾಡುವೆನು," ಎಂದು ಹೇಳಿ ಯೇಸು ಅವರನ್ನು ಕರೆದರು. ತಕ್ಷಣವೇ, ಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು. ಅಲ್ಲಿಂದ ಮುಂದಕ್ಕೆ ಹೋಗುತ್ತಿದ್ದಾಗ ಯೇಸು ಜೆಬೆದಾಯನ ಮಕ್ಕಳಾದ ಯಕೋಬ ಮತ್ತು ಯೊವಾನ್ನ ಎಂಬ ಇನ್ನಿಬ್ಬರು ಸಹೋದರರನ್ನು ಕಂಡರು. ಇವರು ತಮ್ಮ ತಂದೆ ಜೆಬೆದಾಯನೊಡನೆ ದೋಣಿಯಲ್ಲಿ ಬಲೆಗಳನ್ನು ಸರಿಪಡಿಸುತ್ತಿದ್ದರು. ಯೇಸು ಇವರನ್ನೂ ಕರೆದರು. ಕೂಡಲೇ ಅವರು ದೋಣಿಯನ್ನೂ ತಮ್ಮ ತಂದೆಯನ್ನೂ ಬಿಟ್ಟು ಯೇಸುವನ್ನು ಹಿಂಬಾಲಿಸಿದರು. ಯೇಸುಸ್ವಾಮಿ ಗಲಿಲೇಯ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿ ಅಲ್ಲಿನ ಪ್ರಾರ್ಥನಾ ಮಂದಿರಗಳಲ್ಲಿ ಉಪದೇಶ ಮಾಡುತ್ತಿದ್ದರು. ದೈವರಾಜ್ಯದ ಸಂದೇಶವನ್ನು ಪ್ರಬೋಧಿಸುತ್ತಿದ್ದರು. ಜನರ ಎಲ್ಲಾ ತರಹದ ರೋಗರುಜಿನಗಳನ್ನೂ ಬೇನೆ ಬವಣೆಗಳನ್ನೂ ಗುಣಪಡಿಸುತ್ತಿದ್ದರು.
*ಪ್ರಭುವಿನ ಶುಭಸಂದೇಶ*
*ಕ್ರಿಸ್ತರೇ ನಿಮಗೆ ಸ್ತುತಿ ಸಲ್ಲಲಿ*
ಆಮೆನ್
3 days ago | [YT] | 11
View 3 replies
Krista Dani
ಸಂತ ಪೌಲರು: ಅನ್ವೇಷಿಸದ ಐದು ಅಚ್ಚರಿಯ ಐತಿಹಾಸಿಕ ಸತ್ಯಗಳು
ಪೀಠಿಕೆ: ಜಗತ್ತನ್ನೇ ಬದಲಿಸಿದ ಮಹೋನ್ನತ ಪರಿವರ್ತನೆ ಕ್ರೈಸ್ತ ಧರ್ಮದ ಇತಿಹಾಸ ಮತ್ತು ಪ್ರಸರಣದಲ್ಲಿ ಸಂತ ಪೌಲರ ಪಾತ್ರ ಅತ್ಯಂತ ನಿರ್ಣಾಯಕವಾದದ್ದು. ಅನೇಕರು ಅವರನ್ನು ಕೇವಲ ಒಬ್ಬ ಅಪೊಸ್ತಲರಾಗಿ ಗುರುತಿಸುತ್ತಾರೆ. ಆದರೆ, ಅವರ ಜೀವನವು ಕೇವಲ ಡಮಾಸ್ಕಸ್ ರಸ್ತೆಯ ಪರಿವರ್ತನೆಗೆ ಸೀಮಿತವಾಗಿರದೆ, ಆಳವಾದ ಧಾರ್ಮಿಕ ಮತ್ತು ವೈಯಕ್ತಿಕ ಸಂಘರ್ಷಗಳಿಂದ ಕೂಡಿದೆ. ಈ ಲೇಖನವು ಪೌಲರ ಬದುಕಿನ ಹೆಚ್ಚು ಚರ್ಚಿತವಾಗದ ಐದು ಪ್ರಮುಖ ಆಯಾಮಗಳನ್ನು ಪರಿಚಯಿಸುತ್ತದೆ.
1. ಧರ್ಮದ ವಿರೋಧಿಯಿಂದ ಧರ್ಮದ ಮಹಾನ್ ಪ್ರಚಾರಕರಾಗಿ
ಪೌಲರು ಸೌಲನೆಂದು ಪರಿಚಿತರಾಗಿದ್ದಾಗ, ಆರಂಭಿಕ ಕ್ರೈಸ್ತ ಸಮುದಾಯದ ಅತ್ಯಂತ ಕಠಿಣ ವಿರೋಧಿಯಾಗಿದ್ದರು. ಒಬ್ಬ ಕಟ್ಟಾ ಫರಿಸಾಯರಾಗಿದ್ದ ಅವರು, ಯೇಸುವಿನ ಬೋಧನೆಗಳು ಯಹೂದಿ ಧರ್ಮಕ್ಕೆ ವಿರುದ್ಧವೆಂದು ನಂಬಿದ್ದರು. ಅವರು ಕೇವಲ ಸೈದ್ಧಾಂತಿಕವಾಗಿ ವಿರೋಧಿಸದೆ, ಕ್ರೈಸ್ತರನ್ನು ಬಂಧಿಸುವಲ್ಲಿ ಮತ್ತು ಹಿಂಸಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸಂತ ಸ್ಟೀಫನರ ಹುತಾತ್ಮತೆಗೆ ಕಾರಣವಾದ ಘಟನೆಯಲ್ಲಿ ಸೌಲರ ಸಮ್ಮತಿಯೂ ಇತ್ತು ಎಂಬುದು ಅವರ ಆರಂಭಿಕ ಮನಸ್ಥಿತಿಗೆ ಸಾಕ್ಷಿಯಾಗಿದೆ.
2. ಗುರುವಿನ ಶಾಂತಿಯುತ ಸಲಹೆಯ ಉಲ್ಲಂಘನೆ
ಸೌಲರು ಅಂದಿನ ಕಾಲದ ಪ್ರಖ್ಯಾತ ನ್ಯಾಯಶಾಸ್ತ್ರ ಪಂಡಿತರಾದ ಗಮಲಿಯೇಲರ ಶಿಷ್ಯರಾಗಿದ್ದರು. ಗಮಲಿಯೇಲರು ಕ್ರೈಸ್ತ ಅನುಯಾಯಿಗಳ ಬಗ್ಗೆ ಸಮಾಧಾನದ ಧೋರಣೆಯನ್ನು ಹೊಂದಿದ್ದರು ಮತ್ತು ಅವರನ್ನು ದೈಹಿಕವಾಗಿ ಹಿಂಸಿಸಬಾರದೆಂದು ಸೂಚಿಸಿದ್ದರು. ಆದರೆ ಸೌಲರ ಧಾರ್ಮಿಕ ಉಗ್ರತೆ ಮತ್ತು ಉತ್ಸಾಹವು ಎಷ್ಟಿತ್ತೆಂದರೆ, ಅವರು ತಮ್ಮ ಗುರುವಿನ ಸಲಹೆಯನ್ನೂ ಬದಿಗೊತ್ತಿ ಕ್ರೈಸ್ತ ಸಂಘಟನೆಯನ್ನು ಬೇರುಸಹಿತ ಕಿತ್ತೊಗೆಯಲು ಮುಂದಾದರು.
3. ಮೂರು ವರ್ಷಗಳ ಕಾಲ ನಡೆದ ಏಕಾಂತ ಸಿದ್ಧತೆ
ಡಮಾಸ್ಕಸ್‌ನಲ್ಲಿ ಸಂಭವಿಸಿದ ದೈವಿಕ ಅನುಭವದ ನಂತರ, ಪೌಲರು ತಕ್ಷಣವೇ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಲಿಲ್ಲ. ಬದಲಾಗಿ, ಅವರು ಸುಮಾರು ಮೂರು ವರ್ಷಗಳ ಕಾಲ ಅರೇಬಿಯಾದಲ್ಲಿ ಏಕಾಂತವಾಸವನ್ನು ಅನುಸರಿಸಿದರು. ಈ ಅವಧಿಯು ಅವರ ಜೀವನದ 'ಸಿದ್ಧತಾ ಕಾಲ'ವಾಗಿತ್ತು. ಪ್ರಾರ್ಥನೆ ಮತ್ತು ವೇದಪಾಠದ ಮೂಲಕ ಅವರು ತಮ್ಮ ನೂತನ ನಂಬಿಕೆಯನ್ನು ದೃಢಪಡಿಸಿಕೊಂಡರು. ಆಳವಾದ ಬದಲಾವಣೆಗೆ ಶಾಂತವಾದ ಮತ್ತು ಗಂಭೀರವಾದ ಸಿದ್ಧತೆ ಅತ್ಯಗತ್ಯ ಎಂಬುದನ್ನು ಈ ಘಟನೆಯು ನಿರೂಪಿಸುತ್ತದೆ.
4. ದ್ವಿ-ಪೌರತ್ವ ಮತ್ತು ಜಾಗತಿಕ ನಿಯೋಗ
ಪೌಲರು ಎರಡು ಭಿನ್ನ ಸಂಸ್ಕೃತಿಗಳ ಪ್ರತಿನಿಧಿಯಾಗಿದ್ದರು. ಹೀಬ್ರೂ ಭಾಷೆಯಲ್ಲಿ 'ಸೌಲ' ಎಂಬ ಹೆಸರು ಮತ್ತು ರೋಮನ್ ಸಂಪ್ರದಾಯದಂತೆ 'ಪೌಲ' ಎಂಬ ಹೆಸರನ್ನು ಅವರು ಹೊಂದಿದ್ದರು. ಟಾರ್ಸಸ್ ನಗರದ ನಿವಾಸಿಯಾಗಿದ್ದ ಅವರಿಗೆ ಜನ್ಮಜಾತವಾಗಿ ರೋಮನ್ ಪೌರತ್ವವಿತ್ತು. ಈ ಕಾನೂನಾತ್ಮಕ ಸ್ಥಾನಮಾನವು ಅವರಿಗೆ ಅಂದಿನ ರೋಮನ್ ಸಾಮ್ರಾಜ್ಯದಾದ್ಯಂತ ಯಾವುದೇ ಅಡೆತಡೆಯಿಲ್ಲದೆ ಸಂಚರಿಸಲು ಮತ್ತು ಉನ್ನತ ಮಟ್ಟದ ಅಧಿಕಾರಿಗಳ ಮುಂದೆ ಪ್ರಸಂಗಿಸಲು ಸಹಕಾರಿಯಾಯಿತು.
5. ಅಚಲವಾದ ಬದ್ಧತೆ ಮತ್ತು ದೈಹಿಕ ಸಹಿಷ್ಣುತೆ
ಪೌಲರ ನಂಬಿಕೆಯು ಕೇವಲ ಶಬ್ದಗಳಿಗೆ ಸೀಮಿತವಾಗಿರದೆ, ಅವರ ದೈಹಿಕ ಯಾತನೆಗಳ ಮೂಲಕ ಸಾಬೀತಾಗಿತ್ತು. ಅವರು ಅನುಭವಿಸಿದ ಕಷ್ಟಗಳ ಪಟ್ಟಿಯು ಅತ್ಯಂತ ದೀರ್ಘವಾಗಿದೆ:
ಮೂರು ಬಾರಿ ಹಡಗು ಅಪಘಾತಕ್ಕೀಡಾದ ಘಟನೆಗಳು.
ಧರ್ಮದ ಹೆಸರಿನಲ್ಲಿ ಐದು ಬಾರಿ ಚಾಟಿಯೇಟು ಮತ್ತು ಮೂರು ಬಾರಿ ದಂಡನೆಯ ಹೊಡೆತಗಳು.
ಅರಣ್ಯ, ಸಮುದ್ರ ಮತ್ತು ಕಳ್ಳಕಾಕರಿಂದ ಎದುರಾದ ಪ್ರಾಣಾಪಾಯಗಳು. ಈ ಎಲ್ಲಾ ಸಂಕಷ್ಟಗಳ ನಡುವೆಯೂ ಅವರು ತಮ್ಮ ಗುರಿಯಿಂದ ವಿಚಲಿತರಾಗಲಿಲ್ಲ, ಇದು ಅವರ ಮಾನಸಿಕ ಸ್ಥೈರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಉಪಸಂಹಾರ: ಪರಿವರ್ತಿತ ಹೃದಯದ ಶಕ್ತಿ ಸಂತ ಪೌಲರ ಜೀವನದ ಇತಿಹಾಸವು ವೈರುಧ್ಯಗಳ ಅದ್ಭುತ ಸಂಗಮವಾಗಿದೆ. ಒಬ್ಬ ಹಿಂಸಕನು ಹೇಗೆ ಅಹಿಂಸೆಯ ಮತ್ತು ಪ್ರೀತಿಯ ಸಂದೇಶವಾಹಕನಾಗಬಲ್ಲ ಎಂಬುದಕ್ಕೆ ಇವರೇ ಶ್ರೇಷ್ಠ ಉದಾಹರಣೆ. ಇವರ ಕಥೆಯು ಕೇವಲ ಧಾರ್ಮಿಕ ಚೌಕಟ್ಟಿಗೆ ಸೀಮಿತವಾಗದೆ, ಮನುಷ್ಯನ ಇಚ್ಛಾಶಕ್ತಿ ಮತ್ತು ಬದಲಾವಣೆಯ ಸಾಮರ್ಥ್ಯವನ್ನು ಜಗತ್ತಿಗೆ ಸಾರುತ್ತದೆ.
3 days ago | [YT] | 59
View 1 reply
Krista Dani
2️⃣4️⃣-0️⃣1️⃣-2️⃣6️⃣
*ಜನವರಿ*
2️⃣4️⃣
*ಶನಿವಾರ*
*ಪವಿತ್ರ ಬೈಬಲ್ ದಿನಚರಿ*
*ಸಾಧಾರಣ ಕಾಲದ*
*ಎರಡನೆಯ ವಾರ*
*(ವಾ. ಗ್ರ. ಭಾಗ 2,ಪುಟ 53)*
*ಪೂಜಾವಿಧಿ ವರ್ಷ- 2*
*ಕೀರ್ತನಾ ಮಂಜರಿ; 2*
*ಪೂಜಾವಸ್ತ್ರ ಹಸಿರು*
*ಸೇಲ್ಸ್ ನ ಸಂತ ಫ್ರಾನ್ಸಿಸ್*
*(ಸ್ಮರಣೆ)*
*(ವಯಸ್ಸು -55)*
*(1567-1622)*
🟨🌻🙏✝️🙏🌻🟨
*📖ದೈವವಾಕ್ಯದ ವಿಧಿ*
*ಮೊದಲನೆಯ ವಾಚನ*
*🛐ಸಮುವೇಲನ ಮೊದಲನೆಯ ಗ್ರಂಥದಿಂದ ಇಂದಿನ ವಾಚನ 1:1-4,11-12,17,19,23-27*
*"ಯುದ್ಧವೀರರೇ ಹೇಗೆ ಮಡಿದು ಹೋದಿರಿ ರಣರಂಗದಲ್ಲಿ?"*
ಸೌಲನು ಸತ್ತ ನಂತರ ಸಂಭವಿಸಿದ ಘಟನೆಗಳು: ದಾವೀದನು ಅಮಾಲೇಕ್ಯರನ್ನು ಸದೆಬಡಿದು ಬಂದು ಚಿಕ್ಲಗಿನಲ್ಲಿ ಎರಡು ದಿವಸ ತಂಗಿದ್ದನು. ಮೂರನೆಯ ದಿನ ಸೌಲನ ಪಾಳೆಯದಿಂದ ಒಬ್ಬ ವ್ಯಕ್ತಿ ದಾವೀದನ ಬಳಿಗೆ ಬಂದು ನೆಲದ ಮಟ್ಟಿಗೂ ಬಾಗಿ ನಮಸ್ಕರಿಸಿದನು. ಅವನು ಸಂತಾಪದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು ತಲೆಯ ಮೇಲೆ ಮಣ್ಣು ಹಾಕಿಕೊಂಡಿದ್ದನು. ದಾವೀದನು ಅವನನ್ನು ನೋಡಿ, ನೀನು ಎಲ್ಲಿಂದ ಬಂದೆ? ಎಂದು ಕೇಳಿದನು. ಅವನು ನಾನು ಇಸ್ರಯೇಲರ ಪಾಳೆಯದಿಂದ ತಪ್ಪಿಸಿಕೊಂಡು ಬಂದೆ, ಎಂದು ಉತ್ತರ ಕೊಟ್ಟನು. ಆಗ ದಾವೀದನು, ಏನಾಯಿತೆಂದು ತಿಳಿಸು, ಎನ್ನಲು ಆ ವ್ಯಕ್ತಿ, 'ಇಸ್ರಯೇಲರು ರಣರಂಗದಿಂದ ಓಡಿಹೋದರು; ಅನೇಕರು ಮಡಿದರು. ಸೌಲನೂ ಅವನ ಮಗ ಯೋನಾತಾನನೂ ಮರಣಹೊಂದಿದರು, ಎಂದು ತಿಳಿಸಿದನು. ಸೌಲನೂ, ಅವನ ಮಗ ಯೋನಾತಾನನು ಹಾಗು ಸರ್ವೇಶ್ವರನ ಪ್ರಜೆಗಳಾದ ಇಸ್ರಯೇಲರು ಕತ್ತಿಯಿಂದ ಮೃತರಾದದ್ದಕ್ಕಾಗಿ ದಾವೀದನೂ ಅವನ ಜನರೂ ದುಃಖದಿಂದ ತಮ್ಮ ಬಟ್ಟೆಗಳನ್ನು ಹರಿದುಕೊಂಡು ಗೋಳಾಡಿದರು. ಸಾಯಂಕಾಲದವರೆಗೆ ಉಪವಾಸ ಮಾಡಿದರು. ದಾವೀದನು ಸೌಲ-ಯೋನಾತಾನರ ಮೇಲೆ ಒಂದು ಶೋಕ ಗೀತೆಯನ್ನು ರಚಿಸಿದನು. ಮಣ್ಣುಪಾಲಾಗಿದೆ, ಓ ಇಸ್ರಯೇಲರೇ, ನಿಮ್ಮ ವೈಭವ ಆ ಗುಡ್ಡಗಳ ಮೇಲೆ ನೀವು ಮಡಿದದ್ದು ಹೇಗೆ, ಓ ಯುದ್ಧವೀರರೇ? ಸೌಮ್ಯರು, ಅತಿಪ್ರಿಯರು, ಆ ಸೌಲ-ಯೋನಾತಾನರು ಬಾಳಿನಲು, ಸಾವಿನಲು ಬಿಟ್ಟಗಲದವರು. ಹದ್ದಿಗಿಂತ ಅಧಿಕ ವೇಗ ಅವರದು, ಸಿಂಹಕ್ಕಿಂತ ಹೆಚ್ಚಿನ ಶಕ್ತಿ ಅವರದು! ಸೌಲನಿಗಾಗಿ ಅತ್ತು ಪ್ರಲಾಪಿಸಿರಿ ಇಸ್ರಯೇಲಿನ ಮಹಿಳೆಯರೇ, ಉಲ್ಲಾಸಕರ ರಕ್ತಾಂಬರಗಳ ಉಡಿಸಿದವನು ಅವನೇ ಅಲ್ಲವೆ ನಿಮಗೆ? ಅವುಗಳ ಮೇಲೆ ಸುವರ್ಣಾಂಬರಗಳ ತೊಡಿಸಿದವನು ಆತನೇ ಅಲ್ಲವೆ ನಿಮಗೆ? ಯುದ್ಧವೀರರೇ, ಹೇಗೆ ಮಡಿದು ಹೋದಿರಿ ರಣರಂಗದಲಿ? ಯೋನಾತಾನನು ಹತನಾಗಿ ಬಿದ್ದಿಹನಲ್ಲಾ ಬೆಟ್ಟಗುಡ್ಡದಲಿ! ಯೋನಾತಾನನೇ, ಸಹೋದರನೇ, ಮನೋಹರನೇ, ನಿನ್ನ ಮರಣ ತಂದಿದೆ ಅತೀವ ಸಂಕಟ ನನಗೆ. ನನ್ನ ಮೇಲೆ ನಿನಗಿದ್ದ ಪ್ರೀತಿ ಅದೆಷ್ಟು ಆಶ್ಚರ್‍ಯಕರ! ಸತಿಪ್ರೇಮಕ್ಕಿಂತಲೂ ಅದು ಅಮೋಘಕರ! ಅಯ್ಯೋ, ಆ ಪರಾಕ್ರಮಶಾಲಿಗಳು ಹೇಗೆ ಹತರಾದರು! ಯುದ್ಧಾಯುದ್ಧಗಳು ಹೇಗೆ ಹಾಳಾದವು!
*ಪ್ರಭುವಿನ ವಾಕ್ಯ*
*ದೇವರಿಗೆ ಕೃತಜ್ಞತೆ ಸಲ್ಲಲಿ*
🌻✝️🌻
*ಕೀರ್ತನೆ*
*80:1-2,4-6,V.3*
*ಶ್ಲೋಕ: ಬೆಳಗಲಿ ನಿನ್ನ ಮುಖಕಾಂತಿ, ಪಡೆವೆವು ರಕ್ಷಣೆಯನು.*
1. ಕಿವಿಗೊಟ್ಟು ಆಲಿಸೋ, ಇಸ್ರಯೇಲಿನ ಮೇಷಪಾಲನೇ|
ಜೋಸೆಪನ ವಂಶಜರನು ಕುರಿಹಿಂಡಂತೆ ಕರೆತಂದವನೇ||
ವಿರಾಜಿಸು ಕೆರೂಬಿಯರ ಮಧ್ಯೆ ಆಸೀನನಾದವನೇ|
ಶೋಭಿಸು ಎಫ್ರೆಯಿಮ್, ಬೆನ್ಯಮಿನ್, ಮನಸ್ಸೆ ಕುಲಗಳ ಮುಂದೆ||
ತೋರ್ಪಡಿಸು ನಿನ್ನ ಶೌರ್ಯವನು|
ಬಂದು ಜಯಪ್ರದನಾಗು ನಮಗೆ||
*ಶ್ಲೋಕ*
2. ಸ್ವಾಮಿದೇವನೇ, ಸರ್ವಶಕ್ತನೇ|
ಆದೆನಿತು ಕಾಲ ನೀ ಮುನಿದಿರುವೆ?|
ನಿನ್ನವರ ಮೊರೆಯನಾಲಿಸದಿರುವೆ?||
ರೋದನವನೆ ಅವರಿಗೆ ಅನ್ನವಾಗಿಸಿದೆ|
ಹರಿಯುವ ಕಂಬನಿಯನೆ ಪಾನವಾಗಿಸಿದೆ||
ನೆರೆಯವರಿಗೆ ನಮ್ಮನು ಕಲಹಕಾರಣವಾಗಿಸಿದೆ
ಶತ್ರುಗಳ ಅಪಹಾಸ್ಯಕ್ಕೆ ನಮ್ಮನ್ನು ಗುರಿಪಡಿಸಿದೆ||
*ಶ್ಲೋಕ*
🌻✝️🌻
*ಘೋಷಣೆ*
*ಯೊವಾನ್ನ 14:23*
*ಅಲ್ಲೆಲೂಯ, ಅಲ್ಲೆಲೂಯ!*
ನನ್ನನ್ನು ಪ್ರೀತಿಸುವವನು ನನ್ನ ಮಾತನ್ನು ಕೈಗೊಂಡು ನಡೆಯುವನು | ಅವನನ್ನು ನನ್ನ ಪಿತನೂ ಪ್ರೀತಿಸುವರು||
*ಅಲ್ಲೆಲೂಯ!*
🌻✝️🌻
*ಶುಭಸಂದೇಶ*
*✝️ಮಾರ್ಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 3:20-21*
*ಪ್ರಭೂ ನಿಮಗೆ ಮಹಿಮೆ ಸಲ್ಲಲಿ*
*"ಈತನಿಗೆ ಹುಚ್ಚು ಹಿಡಿದಿದೆ, ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು."*
ಆ ಕಾಲದಲ್ಲಿ ಯೇಸು ಮನೆಗೆ ಹೋದಾಗ ಜನರು ಮರಳಿ ಗುಂಪುಗುಂಪಾಗಿ ಬಂದರು. ಯೇಸುವಿಗೂ ಶಿಷ್ಯರಿಗೂ ಊಟಮಾಡಲು ಕೂಡ ಬಿಡುವಿಲ್ಲದೆ ಹೋಯಿತು. " ಈತನಿಗೆ ಹುಚ್ಚು ಹಿಡಿದಿದೆ, " ಎಂದು ಜನರು ಮಾತಾಡಿಕೊಳ್ಳುತ್ತಿದ್ದರು. ಆದ್ದರಿಂದ ಯೇಸುವಿನ ಬಂಧುಗಳು ಯೇಸುವನ್ನು ಹಿಡಿದುತರಲು ಹೊರಟರು.
*ಪ್ರಭುವಿನ ಶುಭಸಂದೇಶ*
*ಕ್ರಿಸ್ತರೇ ನಿಮಗೆ ಸ್ತುತಿ ಸಲ್ಲಲಿ*
ಆಮೆನ್
4 days ago | [YT] | 12
View 4 replies
Krista Dani
ಸಂತ ಫ್ರಾನ್ಸಿಸ್ ದೆ ಸೇಲ್ಸ್: ಬರಹಗಾರರ ಪಾಲಕ ಸಂತರ ಜೀವನದಿಂದ ನಮಗೆ ಸಿಗುವ ೫ ವಿಸ್ಮಯಕಾರಿ ಪಾಠಗಳು
೧. ಪೀಠಿಕೆ
ಬರವಣಿಗೆ ಎಂಬುದು ಕೇವಲ ಅಕ್ಷರಗಳ ಜೋಡಣೆಯಲ್ಲ, ಅದು ಆತ್ಮದ ಅಭಿವ್ಯಕ್ತಿ. ಅಕ್ಷರಗಳ ಮೂಲಕ ಸತ್ಯವನ್ನು ಬೆಳಗುವ ಪ್ರತಿಯೊಬ್ಬ ಲೇಖಕ ಮತ್ತು ಪತ್ರಕರ್ತನಿಗೆ ಒಬ್ಬ ಮಾರ್ಗದರ್ಶಕ ಚೇತನವಿದ್ದರೆ, ಅದು ಸಂತ ಫ್ರಾನ್ಸಿಸ್ ದೆ ಸೇಲ್ಸ್. ಇತಿಹಾಸವು ಇವರನ್ನು "ಬರಹಗಾರರ ಮತ್ತು ಪತ್ರಕರ್ತರ ಪಾಲಕ ಸಂತ" ಎಂದು ಗೌರವಿಸುತ್ತದೆ. ಆದರೆ ಫ್ರಾನ್ಸಿಸ್ ಅವರು ಕೇವಲ ಧರ್ಮಗುರುವಷ್ಟೇ ಆಗಿರಲಿಲ್ಲ; ಅವರು ತಮ್ಮ ಲೇಖನಿಯನ್ನು ಬೆಳಕಿನ ಸೇತುವೆಯನ್ನಾಗಿ ಮಾರ್ಪಡಿಸಿದ ಶ್ರೇಷ್ಠ ಸಂವಹನಕಾರರಾಗಿದ್ದರು. ಜನರ ವಿರೋಧ, ಟೀಕೆ ಮತ್ತು ಕಲ್ಲುಗಳ ನಡುವೆಯೂ ಸೌಮ್ಯತೆಯಿಂದ ಜನರ ಮನಸ್ಸನ್ನು ಗೆದ್ದ ಇವರ ಬದುಕು ಇಂದಿನ ಗದ್ದಲದ ಜಗತ್ತಿಗೆ ದಾರಿದೀಪವಾಗಿದೆ.
೨. ಪಾಠ ೧: ಆಂತರಿಕ ಬಿಕ್ಕಟ್ಟನ್ನು ಗೆಲ್ಲುವ ಆತ್ಮವಿಶ್ವಾಸ
ಫ್ರಾನ್ಸಿಸ್ ಅವರು ತಮ್ಮ ೧೯ನೇ ವಯಸ್ಸಿನಲ್ಲಿ ತೀವ್ರವಾದ ಮಾನಸಿಕ ಹಿಂಸೆಯನ್ನು (Mental Torture) ಅನುಭವಿಸಿದರು. ಅಂದು ಪ್ರಚಲಿತದಲ್ಲಿದ್ದ ಕ್ಯಾಲ್ವಿನಿಸ್ಟ್ ಸಿದ್ಧಾಂತದ 'ಪೂರ್ವನಿರ್ಧರಿತ ಹಣೆಬರಹದ ಸಿದ್ಧಾಂತ' (Predestination) ಅವರ ಮೇಲೆ ಎಂತಹ ಪ್ರಭಾವ ಬೀರಿತ್ತೆಂದರೆ, ತಾವು ನರಕಕ್ಕೆ ಹೋಗುವುದು ಖಚಿತ ಎಂಬ ಭಯ ಅವರನ್ನು ತಿಂಗಳುಗಟ್ಟಲೆ ಕಾಡಿತು. ಅತಿಯಾದ ಆತಂಕದಿಂದ ಅವರ ಆರೋಗ್ಯವೂ ಕ್ಷೀಣಿಸಿತು.
ಆದರೆ, ಮಾತೆ ಮರಿಯಳ 'ಮೆಮೊರಾರೆ' (Memorare) ಪ್ರಾರ್ಥನೆಯ ಮೂಲಕ ಅವರು ದೈವಿಕ ಪ್ರೀತಿಯನ್ನು ಅರಿತರು. ತಪ್ಪು ಸಿದ್ಧಾಂತಗಳು ಮನಸ್ಸನ್ನು ಹೇಗೆ ಬಂಧಿಸಬಲ್ಲವು ಮತ್ತು ನಂಬಿಕೆಯು ಅದನ್ನು ಹೇಗೆ ಬಿಡುಗಡೆ ಮಾಡಬಲ್ಲದು ಎಂಬುದಕ್ಕೆ ಅವರ ಜೀವನವೇ ಸಾಕ್ಷಿ. ತಮ್ಮ 'Introduction to the Devout Life' ಕೃತಿಯಲ್ಲಿ ಅವರು ಹೀಗೆ ಬರೆದಿದ್ದಾರೆ:
"ನನ್ನ ಪ್ರೀತಿಯ ಮಗುವೇ, ಸ್ವರ್ಗ ಮತ್ತು ಭೂಮಿಯ ಮೇಲಿರುವ ಸಕಲ ಪವಿತ್ರ ವಸ್ತುಗಳ ಸಾಕ್ಷಿಯಾಗಿ, ಯೇಸುವಿನ ವಾತ್ಸಲ್ಯದ ಮೇಲೆ ಆಣೆ ಮಾಡಿ ನಾನು ನಿನಗೆ ವಿನಂತಿಸುವುದೇನೆಂದರೆ—ಪವಿತ್ರ ಜೀವನ ನಡೆಸುವ ಈ ಅತ್ಯುನ್ನತ ಪ್ರಯತ್ನದಲ್ಲಿ ನೀನು ಸ್ಥಿರವಾಗಿರು ಮತ್ತು ಎಂದಿಗೂ ಹಠ ಬಿಡಬೇಡ."
೩. ಪಾಠ ೨: ನವೀನ ಮಾರ್ಗಗಳ ಮೂಲಕ ಸಂವಹನ (ಮೊದಲ 'ಬ್ಲಾಗರ್')
ಜಿನೀವಾದಲ್ಲಿ ಫ್ರಾನ್ಸಿಸ್ ಅವರಿಗೆ ಸಂದರ್ಭಗಳು ಪೂರಕವಾಗಿರಲಿಲ್ಲ. ಅವರು ಸತ್ಯವನ್ನು ಬೋಧಿಸಲು ಹೋದಾಗ ಜನರು ಮುಖಕ್ಕೆ ಬಾಗಿಲು ಹಾಕುತ್ತಿದ್ದರು, ಕಲ್ಲೆಸೆಯುತ್ತಿದ್ದರು. ಇಂದಿನ ಕಾಲದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಮಗೆ ಸಿಗುವ 'ಡಿಜಿಟಲ್ ಟೀಕೆ'ಗಳಿಗಿಂತಲೂ ಅಂದಿನ ಪರಿಸ್ಥಿತಿ ಭೀಕರವಾಗಿತ್ತು. ಆದರೆ ಫ್ರಾನ್ಸಿಸ್ ಅವರು ಸೋಲೊಪ್ಪುವ ಬದಲು ಸೃಜನಾತ್ಮಕ ದಾರಿಯನ್ನು ಆರಿಸಿಕೊಂಡರು.
ಅವರು ಚಿಕ್ಕ ಚಿಕ್ಕ ಕೈಬರಹದ ಕರಪತ್ರಗಳನ್ನು (Tracts) ಸಿದ್ಧಪಡಿಸಿ, ಅವುಗಳನ್ನು ಜನರ ಮನೆಗಳ ಬಾಗಿಲ ಕೆಳಗಿನಿಂದ ತೂರಿಸುತ್ತಿದ್ದರು. ಇಂದಿನ ಬ್ಲಾಗ್ ಅಥವಾ ಪೋಸ್ಟ್‌ಗಳಿಗೆ ಇದು ೧೭ನೇ ಶತಮಾನದ ಮುನ್ನುಡಿಯಾಗಿತ್ತು. ಅವರ ಈ ನಿಸ್ವಾರ್ಥ ಹಠ ಎಂತಹದ್ದೆಂದರೆ, ಸುಮಾರು ೪೦,೦೦೦ ದಿಂದ ೭೦,೦೦೦ ಜನರು ಮರಳಿ ಸತ್ಯದ ಹಾದಿಗೆ ಬಂದರು. ಸಂವಹನದಲ್ಲಿ ಪ್ರಾಮಾಣಿಕತೆ ಇದ್ದರೆ ಯಾವುದೇ ಅಡೆತಡೆಗಳು ನಮ್ಮನ್ನು ತಡೆಯಲಾರವು ಎಂಬುದಕ್ಕೆ ಇದು ಜ್ವಲಂತ ಉದಾಹರಣೆ.
೪. ಪಾಠ ೩: ಸೌಮ್ಯತೆಯೇ ಅತ್ಯಂತ ಪ್ರಬಲ ಆಯುಧ
ಇಂದಿನ 'ಆಕ್ರೋಶದ ಸಂಸ್ಕೃತಿ'ಯಲ್ಲಿ (Outrage Culture) ಟೀಕೆಗೆ ಟೀಕೆಯೇ ಉತ್ತರ ಎಂದು ನಾವೆಲ್ಲರೂ ಭಾವಿಸುತ್ತೇವೆ. ಆದರೆ ಫ್ರಾನ್ಸಿಸ್ ಅವರ ಮಂತ್ರವೇ ಬೇರೆಯಾಗಿತ್ತು. ಅವರು ವಿವಾದ ಮತ್ತು ಪರಸ್ಪರ ದೂಷಣೆಗಳಿಂದ ದೂರವಿದ್ದರು. ಎಷ್ಟೇ ದೊಡ್ಡ ವಿರೋಧವಿದ್ದರೂ ಅವರು ಕೇವಲ ಸದ್ಗುಣ ಮತ್ತು ಪ್ರೀತಿಯ ಮೇಲೆ ಗಮನ ಹರಿಸಿದರು. ಅವರ ಬದುಕಿನ ಮೂಲಮಂತ್ರ ಹೀಗಿತ್ತು:
"ಪ್ರೀತಿಯಿಂದ ಬೋಧಿಸುವವನು ಪರಿಣಾಮಕಾರಿಯಾಗಿ ಬೋಧಿಸುತ್ತಾನೆ" (He who preaches with love, preaches effectively).
ಯಾರು ಪ್ರೀತಿಯಿಂದ ಸಂವಹನ ನಡೆಸುತ್ತಾರೋ ಅವರು ಮಾತ್ರ ಜನರ ಹೃದಯವನ್ನು ಶಾಶ್ವತವಾಗಿ ಗೆಲ್ಲಬಲ್ಲರು ಎಂಬುದು ಅವರ ಅಚಲ ನಂಬಿಕೆಯಾಗಿತ್ತು. ಶತ್ರುಗಳನ್ನೂ ಮಿತ್ರರನ್ನಾಗಿ ಮಾಡುವ ಶಕ್ತಿ ಸೌಮ್ಯತೆಗಿದೆ ಎಂದು ಅವರು ಸಾಬೀತುಪಡಿಸಿದರು.
೫. ಪಾಠ ೪: ದೈವಿಕ ಸಂಕೇತ ಮತ್ತು ತ್ಯಾಗದ ಪರಾಕಾಷ್ಠೆ
ಫ್ರಾನ್ಸಿಸ್ ಅವರ ಜೀವನದಲ್ಲಿ ನಡೆದ ಒಂದು ಘಟನೆ ಅತ್ಯಂತ ವಿಸ್ಮಯಕಾರಿಯಾದದ್ದು. ಒಮ್ಮೆ ಅವರು ಕುದುರೆಯ ಮೇಲೆ ಪ್ರಯಾಣಿಸುತ್ತಿದ್ದಾಗ ದಾರಿಯಲ್ಲಿ ಮೂರು ಬಾರಿ ಕೆಳಗೆ ಬಿದ್ದರು. ಪ್ರತಿ ಬಾರಿ ಬಿದ್ದಾಗಲೂ ಅವರ ಖಡ್ಗ ಮತ್ತು ಅದರ ಒರೆ (Scabbard) ನೆಲದ ಮೇಲೆ ಬಿದ್ದಿದ್ದವು. ಆಶ್ಚರ್ಯವೆಂದರೆ, ಅವು ಮೂರೂ ಬಾರಿ ಶಿಲುಬೆಯಾಕಾರದಲ್ಲಿಯೇ ಬಿದ್ದಿದ್ದವು! ಇದೊಂದು ದೈವಿಕ ಸಂಕೇತವಾಗಿ ಅವರಿಗೆ ಗೋಚರಿಸಿತು.
ಅವರ ಬದ್ಧತೆ ಎಂತಹದ್ದೆಂದರೆ, ಒಮ್ಮೆ ಚಳಿಗಾಲದಲ್ಲಿ ತೋಳಗಳಿಂದ ರಕ್ಷಿಸಿಕೊಳ್ಳಲು ಅವರು ಮರದ ಮೇಲೆ ಹತ್ತಿ ಮಲಗಿದರು. ನಿದ್ದೆಯಲ್ಲಿ ಕೆಳಗೆ ಬೀಳಬಾರದೆಂದು ತಮ್ಮನ್ನು ತಾವೇ ಹಗ್ಗದಿಂದ ಮರದ ಕೊಂಬೆಗೆ ಬಿಗಿಯಾಗಿ ಕಟ್ಟಿಕೊಂಡರು. ಮಾರನೇ ದಿನ ಬೆಳಿಗ್ಗೆ ಹಿಮದ ಚಳಿಯಿಂದಾಗಿ ಅವರ ದೇಹವು ಸಂಪೂರ್ಣವಾಗಿ ಗಡ್ಡೆಗಟ್ಟಿತ್ತು. ಅವರು ಎಷ್ಟು ಜಡವಾಗಿದ್ದರೆಂದರೆ, ಅವರನ್ನು ಕೆಳಗಿಳಿಸಲು ಜನರು ಆ ಮರದ ಕೊಂಬೆಯನ್ನೇ ಕತ್ತರಿಸಬೇಕಾಯಿತು! ತಮ್ಮ ಗುರಿಗಾಗಿ ಇಂತಹ ಕಠಿಣ ದೈಹಿಕ ಹಿಂಸೆಯನ್ನು ಸಹಿಸಿಕೊಳ್ಳುವ ಅವರ ಛಲ ನಮಗೆ ದಾರಿದೀಪ.
೬. ಪಾಠ ೫: ಪವಿತ್ರತೆ ಸನ್ಯಾಸಿಗಳಿಗೆ ಮಾತ್ರವಲ್ಲ, ನಮಗೂ ಸಹ
ಸಂತ ಫ್ರಾನ್ಸಿಸ್ ದೆ ಸೇಲ್ಸ್ ಅವರು ನೀಡಿದ ಕ್ರಾಂತಿಕಾರಿ ಸಂದೇಶವೆಂದರೆ—ಭಕ್ತಿ ಅಥವಾ ಪವಿತ್ರತೆ ಎಂಬುದು ಕೇವಲ ಮಠಗಳಲ್ಲಿರುವ ಸನ್ಯಾಸಿಗಳಿಗೆ ಮಾತ್ರ ಸೀಮಿತವಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ವೃತ್ತಿ, ಸಂಸಾರ ಮತ್ತು ದೈನಂದಿನ ಕೆಲಸಗಳ ನಡುವೆಯೇ ಪವಿತ್ರತೆಯನ್ನು ಸಾಧಿಸಬಹುದು. ನಾವು ಮಾಡುವ ಕೆಲಸ ಸಣ್ಣದಾಗಿರಲಿ ಅಥವಾ ದೊಡ್ಡದಾಗಿರಲಿ, ಅದನ್ನು ದೇವರ ಪ್ರೀತಿಗಾಗಿ ಮಾಡಿದರೆ ಅದೇ ನಿಜವಾದ ಭಕ್ತಿ. ಈ ಚಿಂತನೆಯು ಆಧ್ಯಾತ್ಮಿಕತೆಯನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತಂದಿತು.
೭. ಮುಕ್ತಾಯ: ದೀನತೆಯೇ ಅಂತಿಮ ಮಂತ್ರ
೧೬೨೨ರಲ್ಲಿ ಫ್ರಾನ್ಸಿಸ್ ದೆ ಸೇಲ್ಸ್ ಅವರು ಇಹಲೋಕ ತ್ಯಜಿಸುವ ಸಮಯದಲ್ಲಿ ನೀಡಿದ ಅಂತಿಮ ಸಂದೇಶ ಅತ್ಯಂತ ಮಾರ್ಮಿಕವಾಗಿತ್ತು. ಅವರು ಮೂರು ಬಾರಿ ಉಚ್ಚರಿಸಿದ ಮಾತು: "ದೀನತೆ, ದೀನತೆ, ದೀನತೆ" (Humility). ಅಪಾರ ಪಾಂಡಿತ್ಯ, ಅಸಾಧಾರಣ ಯಶಸ್ಸು ಮತ್ತು ಜನಪ್ರಿಯತೆ ಇದ್ದರೂ ಅವರು ನಮ್ರತೆಯನ್ನು ಜಗತ್ತಿನ ಅತಿ ದೊಡ್ಡ ಸದ್ಗುಣವೆಂದು ನಂಬಿದ್ದರು.
ತಮ್ಮ ಕೊನೆಯ ದಿನಗಳಲ್ಲಿ ಅವರು ಹೇಳುತ್ತಿದ್ದರು, "ಈಗ ಭೂಮಿಗೆ ಒಂಟಿಕಾಲಿನಲ್ಲಿ ಸಿಕ್ಕಿಕೊಂಡಿದ್ದೇನೆ ಅನಿಸುತ್ತದೆ." ಅಂದರೆ, ಅವರ ಆತ್ಮವು ಈ ಭೌತಿಕ ಪ್ರಪಂಚದ ಬಂಧನದಿಂದ ಬಿಡುಗಡೆ ಹೊಂದಿ ದೈವತ್ವದ ಕಡೆಗೆ ಹಾರಲು ಸಿದ್ಧವಾಗಿತ್ತು. ಇಂದಿನ ಜಗತ್ತಿನಲ್ಲಿ ನಾವು ಲೇಖಕರಾಗಿ ಅಥವಾ ಸಾಮಾನ್ಯ ಮನುಷ್ಯರಾಗಿ ಬೆಳೆಯಬೇಕಾದರೆ ಫ್ರಾನ್ಸಿಸ್ ಅವರ ಈ ಸೌಮ್ಯತೆ ಮತ್ತು ದೀನತೆ ಅತ್ಯಗತ್ಯ.
ಕೊನೆಯದಾಗಿ, ಒಂದು ಪ್ರಶ್ನೆ ನಮಗೆ ನಾವೇ ಕೇಳಿಕೊಳ್ಳೋಣ: "ನಿಮ್ಮ ದೈನಂದಿನ ಕಾರ್ಯಗಳ ನಡುವೆಯೇ ದೀನತೆ ಮತ್ತು ಪ್ರೀತಿಯಿಂದ ಇತರರ ಮನ ಗೆಲ್ಲಲು ನೀವು ಸಿದ್ಧರಿದ್ದೀರಾ?"
4 days ago (edited) | [YT] | 32
View 2 replies
Krista Dani
🟥🌹🙏✝️🙏🌹🟥
2️⃣3️⃣-0️⃣1️⃣-2️⃣6️⃣
*ಜನವರಿ*
2️⃣3️⃣
*ಶುಕ್ರವಾರ*
*ಪವಿತ್ರ ಬೈಬಲ್ ದಿನಚರಿ*
*ಸಾಧಾರಣ ಕಾಲದ*
*ಎರಡನೆಯ ವಾರ*
*(ವಾ,ಗ್ರ ಭಾಗ 2. ಪುಟ 49)*
*ಪೂಜಾವಿಧಿ ವರ್ಷ- 2*
*ಕೀರ್ತನಾ ಮಂಜರಿ;2*
*ಪೂಜಾವಸ್ತ್ರ ಹಸಿರು*
*ಸಂತ*
*ಮಾರಿಆನ್ ಕೋಪ್*
*(ರೆಲಿಜಿಯಸ್)*
*(ವಯಸ್ಸು -80)*
*(1838-1918)*
🟥🌹🙏✝️🙏🌹🟥
*📖ದೈವವಾಕ್ಯದ ವಿಧಿ*
*ಮೊದಲನೆಯ ವಾಚನ*
*"ಸರ್ವೇಶ್ವರನಿಂದ ಅಭಿಷಿಕ್ತರಾದ ನನ್ನ ಒಡೆಯರ ಮೇಲೆ ಕೈಯೆತ್ತುವುದಿಲ್ಲ."*
ಸೌಲನು ಇಸ್ರಯೇಲರಲ್ಲಿ ಶ್ರೇಷ್ಠರಾದ ಮೂರು ಸಾವಿರ ಮಂದಿ ಸೈನಿಕರನ್ನು ಆರಿಸಿಕೊಂಡು, ಕಾಡುಗುರಿಬಂಡೆಗಳಲ್ಲಿದ್ದ ದಾವೀದನನ್ನೂ ಅವನ ಜನರನ್ನೂ ಹುಡುಕುವುದಕ್ಕಾಗಿ ಹೊರಟನು. ಮಾರ್ಗದಲ್ಲಿ ಕುರಿಹಟ್ಟಿಗಳ ಬಳಿಯಲ್ಲಿ ಒಂದು ಗವಿಯನ್ನು ಕಂಡು ಶೌಚಕ್ಕಾಗಿ ಅದರೊಳಗೆ ಪ್ರವೇಶಿಸಿದನು. ದಾವೀದನೂ ಅವನ ಜನರೂ ಅದೇ ಗವಿಯ ಹಿಂಗಡೆಯಲ್ಲಿ ಅಡಗಿಕೊಂಡಿದ್ದರು. ಜನರು ದಾವೀದನಿಗೆ, 'ನಿನ್ನ ಶತ್ರುವನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು; ಆಗ ನೀನು ಅವನನ್ನು ನಿನ್ನ ಇಷ್ಟಾನುಸಾರ ನಡೆಸಬಹುದು,' ಎಂದು ಸರ್ವೇಶ್ವರ ನಿನಗೆ ಹೇಳಿದ ಮಾತು ನೆರವೇರುವ ಸುದಿನವಿದು, ಎಂದರು. ಅವನೆದ್ದು ಮೆಲ್ಲಗೆ ಹೋಗಿ ಸೌಲನ ನಿಲುವಂಗಿಯ ಮೂಲೆಯನ್ನು ಕತ್ತರಿಸಿಕೊಂಡನು. ಅನಂತರದಲ್ಲೇ ಸೌಲನ ನಿಲುವಂಗಿಯ ಮೂಲೆಯನ್ನು ಕತ್ತರಿಸಿದ್ದಕ್ಕಾಗಿ ಅವನ ಮನಸ್ಸಾಕ್ಷಿ ಅವನನ್ನು ಹಂಗಿಸತೊಡಗಿತು. ಅವನು ತನ್ನ ಜನರಿಗೆ, ಆತ ಸರ್ವೇಶ್ವರನಿಂದ ಅಭಿಷಿಕ್ತನು ಹಾಗು ಆತನು ನನ್ನ ಒಡೆಯನು ಆಗಿದ್ದಾನೆ; ನಾನು ನಿಮ್ಮ ಮಾತು ಕೇಳಿ ಸರ್ವೇಶ್ವರನ ಅಭಿಷಿಕ್ತನ ವಿರೋಧವಾಗಿ ಕೈಯೆತ್ತದಂತೆ ಆ ಸರ್ವೇಶ್ವರನೇ ನನಗೆ ಅಡ್ಡಿಮಾಡಲಿ, ಎಂದನು. ಹೀಗೆ ಸೌಲನಿಗೆ ವಿರುದ್ಧ ತನ್ನ ಜನರು ದಂಗೆಯೇಳದಂತೆ ತಡೆದನು. ಸೌಲನು ಗವಿಯಿಂದ ಹೊರಗೆ ಬಂದು ಸ್ವಲ್ಪ ಮುಂದೆ ಹೋದಮೇಲೆ ದಾವೀದನೂ ಹೊರಗೆ ಬಂದು, ಅರಸರೇ, ನನ್ನ ಒಡೆಯರೇ, ಎಂದು ಅವನನ್ನು ಕೂಗಿದನು. ಸೌಲನು ಹಿಂದಿರುಗಿ ನೋಡಿದನು. ಆಗ ಅವನಿಗೆ ಸಾಷ್ಟಾಂಗ ನಮಸ್ಕಾರಮಾಡಿ, ನಿಮಗೆ ನಾನು ಕೇಡುಮಾಡಬೇಕೆಂದಿದ್ದೇನೆಂದು ಹೇಳುವವರ ಮಾತಿಗೆ ನೀವು ಕಿವಿಗೊಡಬೇಡಿ. ಇಂದು ಈ ಗವಿಯಲ್ಲಿ ಸರ್ವೇಶ್ವರ ನಿಮ್ಮನ್ನು ನನ್ನ ಕೈಗೆ ಒಪ್ಪಿಸಿಕೊಟ್ಟಿದ್ದರೆಂಬುದು ಈಗ ನಿಮಗೆ ಗೊತ್ತಾಗಿರಬೇಕು. ನಿಮ್ಮನ್ನು ಕೊಂದುಬಿಡಬೇಕೆಂದು ಕೆಲವರು ನನಗೆ ಹೇಳಿದರು. ಆದರೆ ನಾನು ಅವರಿಗೆ, 'ಸರ್ವೇಶ್ವರನಿಂದ ಅಭಿಷಿಕ್ತರಾದ ನನ್ನ ಒಡೆಯರ ಮೇಲೆ ಕೈಯೆತ್ತುವುದಿಲ್ಲ,' ಎಂದು ಹೇಳಿ ನಿಮ್ಮನ್ನು ಉಳಿಸಿದೆ. ನೀವು ನನ್ನ ತಂದೆ; ಇಗೋ ನೋಡಿ! ನನ್ನ ಕೈಯಲ್ಲಿ ನಿಮ್ಮ ನಿಲುವಂಗಿಯ ತುಂಡು ಇದೆ; ನಾನು ನಿಮ್ಮನ್ನು ಕೊಲ್ಲದೆ ನಿಮ್ಮ ನಿಲುವಂಗಿಯ ಮೂಲೆಯನ್ನು ಕತ್ತರಿಸಿಕೊಂಡೆನಷ್ಟೆ. ಇದರಿಂದ ನನ್ನಲ್ಲಿ ಯಾವ ದೋಷವೂ ಅಪರಾಧವೂ ಇರುವುದಿಲ್ಲ; ನಾನು ನಿಮಗೆ ವಿರೋಧವಾಗಿ ದ್ರೋಹ ಮಾಡಲಿಲ್ಲ ಎಂದು ತಿಳಿದುಕೊಳ್ಳಿ; ಆದರೂ ನೀವು ನನ್ನ ಪ್ರಾಣಕ್ಕೆ ಹೊಂಚು ಹಾಕುತ್ತಿರುವಿರಲ್ಲವೇ? ಸರ್ವೇಶ್ವರನೇ ನಮ್ಮ ಉಭಯರ ವ್ಯಾಜ್ಯವನ್ನು ತೀರಿಸಲಿ; ಅವರೇ ನನಗಾಗಿ ನಿಮಗೆ ಮುಯ್ಯಿಸಲ್ಲಿಸಲಿ; ನಾನಂತೂ ನಿಮಗೆ ವಿರೋಧವಾಗಿ ಕೈಯೆತ್ತುವುದಿಲ್ಲ. ಇಸ್ರಯೇಲರಲ್ಲಿ 'ಕೆಟ್ಟವರಿಂದಲೇ ಕೇಡು' ಎಂಬುದಾಗಿ ಹಿರಿಯರಿಂದ ಬಂದ ಗಾದೆಯುಂಟು. ನಾನು ನಿಮಗೆ ವಿರೋಧವಾಗಿ ಕೈಯೆತ್ತುವುದಿಲ್ಲ. ಇಸ್ರಯೇಲರ ಅರಸರೇ, ಯಾರನ್ನು ಹಿಂದಟ್ಟಿ ಹೊರಟ್ಟಿದ್ದೀರಿ? ಯಾರನ್ನು ಹಿಡಿಯಬೇಕೆಂದಿರುತ್ತೀರಿ? ಸತ್ತ ನಾಯಿಯನ್ನೇ? ಒಂದು ಬಡ ಸೊಳ್ಳೆಯನ್ನೇ? ಸರ್ವೇಶ್ವರ ನ್ಯಾಯಾಧಿಪತಿಯಾಗಿ ನಮ್ಮಿಬ್ಬರ ವ್ಯಾಜ್ಯವನ್ನು ತೀರಿಸಲಿ; ಅವರೇ ನೋಡಿ ನನ್ನ ಪರವಾಗಿ ವಾದಿಸಿ ನನ್ನನ್ನು ನಿಮ್ಮ ಕೈಯಿಂದ ತಪ್ಪಿಸಲಿ, ಎಂದು ಹೇಳಿದನು. ದಾವೀದನ ಮಾತುಗಳು ಮುಗಿದ ನಂತರ ಸೌಲನು, ದಾವೀದನೇ ನನ್ನ ಮಗನೇ, ಇದು ನಿಜವಾಗಿಯೂ ನಿನ್ನ ಸ್ವರವೇ? ಎಂದು ಗಟ್ಟಿಯಾಗಿ ಅತ್ತನು. ಇದಲ್ಲದೆ ಅವನು ದಾವೀದನಿಗೆ, ನೀನು ನನಗಿಂತ ನೀತಿವಂತ; ನಾನು ನಿನಗೆ ಕೇಡುಮಾಡಿದರೂ ನೀನು ನನಗೆ ಒಳ್ಳೆಯದನ್ನೇ ಮಾಡಿದೆ. ಸರ್ವೇಶ್ವರ ನನ್ನನ್ನು ನಿನ್ನ ಕೈಗೆ ಒಪ್ಪಿಸಿಕೊಟ್ಟರೂ ನೀನು ನನ್ನನ್ನು ಕೊಲ್ಲಲಿಲ್ಲ. ಇದರಿಂದ ನೀನು ನನಗೆ ಹಿತವನ್ನೇ ಮಾಡುವಂಥವನೆಂಬುದು ಈ ದಿನ ಖಚಿತವಾಯಿತು. ಯಾವನಾದರೂ ತನ್ನ ಕೈಗೆ ಸಿಕ್ಕಿದ ವೈರಿಯನ್ನು ಸುಕ್ಷೇಮದಿಂದ ಕಳುಹಿಸಿಬಿಡುತ್ತಾನೆಯೇ? ನೀನು ಈ ದಿನ ನನಗೆ ಮಾಡಿದ ಉಪಕಾರಕ್ಕಾಗಿ ಸರ್ವೇಶ್ವರ ನಿನಗೆ ಪ್ರತ್ಯುಪಕಾರಮಾಡಲಿ. ಕೇಳು; ನೀನು ಹೇಗೂ ಅರಸನಾಗುವೆಯೆಂದೂ ಇಸ್ರಯೇಲ್ ರಾಜ್ಯ ನಿನ್ನ ಆಳ್ವಿಕೆಯಲ್ಲಿ ಸ್ಥಿರವಾಗುವುದೆಂದೂ ಬಲ್ಲೆ. ಹೀಗಿರುವುದರಿಂದ ನೀನು ನನ್ನ ಸಂತಾನವನ್ನು ನಿರ್ಮೂಲಮಾಡುವುದಿಲ್ಲವೆಂದೂ ನಮ್ಮ ಕುಲದಿಂದ ನನ್ನ ಹೆಸರನ್ನು ತೆಗೆದುಹಾಕುವುದಿಲ್ಲವೆಂದೂ ಸರ್ವೇಶ್ವರನ ಹೆಸರಿನಲ್ಲಿ ಪ್ರಮಾಣ ಮಾಡು, ಎಂದು ಬೇಡಿಕೊಂಡನು. ಹಾಗೆಯೇ ದಾವೀದನು ಪ್ರಮಾಣ ಮಾಡಿದನು.
*ಪ್ರಭುವಿನ ವಾಕ್ಯ*
*ದೇವರಿಗೆ ಕೃತಜ್ಞತೆ ಸಲ್ಲಲಿ*
🌹✝️🌹
*ಕೀರ್ತನೆ*
*57:1-3,5,10. v. 1*
*ಶ್ಲೋಕ: ಕರುಣಿಸೆನ್ನನು, ಕರುಣಿಸು, ದೇವನೇ.*
1. ಕರುಣಿಸೆನ್ನನು, ಕರುಣಿಸು, ದೇವನೇ|
ನನ್ನಾತ್ಮದ ಆಸರೆಯು ನೀನೇ||
ನನ್ನ ಗಂಡಾಂತರವು ನೀಗುವ ಪರಿಯಂತ|
ನಿನ್ನ ರೆಕ್ಕೆಗಳಡಿ ನಾನಿರುವೆ ಸುರಕ್ಷಿತ||
*ಶ್ಲೋಕ*
2. ನನ್ನ ಕಾರ್ಯವನು ಕೈಗೂಡಿಸುವ ದೇವನಿಗೆ|
ನಾ ಮೊರೆಯಿಡುವೆ ಪರಾತ್ಪರನಾದ ಕರ್ತನಿಗೆ||
ಆತ ನೆರವಾಗುವನೆನಗೆ ಪರಲೋಕದಿಂದ|
ತಪ್ಪಿಸುವನು ನನ್ನನು ಬೆನ್ನಟ್ಟಿ ಬರುವವರಿಂದ||
ತೋರ್ಪಡಿಸುವನು ಸತ್ಯತೆಯನು|
ತನ್ನ ಅಚಲ ಪ್ರೀತಿಯನು ದೇವನು||
*ಶ್ಲೋಕ*
3. ಮೇಲಣ ಲೋಕದಲಿ ಮೆರೆಯಲಿ ದೇವ ನಿನ್ನ ಹಿರಿಮೆ|
ಭೂಮಂಡಲದಲಿ ಹಬ್ಬಿ ಹರಡಲಿ ನಿನ್ನಾ ಮಹಿಮೆ||
ನಿನ್ನಚಲ ಪ್ರೀತಿ ಮುಟ್ಟುತ್ತಿದೆ ಗಗನಮಂಡಲ|
ನಿನ್ನ ಸತ್ಯಸಂಧತೆ ತಾಕುತ್ತಿದೆ ಮೇಘಮಂಡಲ||
*ಶ್ಲೋಕ*
🌹✝️🌹
*ಘೋಷಣೆ*
*ಯೊವಾನ್ನ 10:27*
*ಅಲ್ಲೆಲೂಯ, ಅಲ್ಲೆಲೂಯ!*
" ನನ್ನ ಕುರಿಗಳಾದರೋ ನನ್ನ ಸ್ವರವನ್ನು ಗುರುತಿಸುತ್ತವೆ | ನಾನು ಅವನ್ನು ಬಲ್ಲೆನು, ಅವು ನನ್ನನ್ನು ಹಿಂಬಾಲಿಸುತ್ತವೆ ||
*ಅಲ್ಲೆಲೂಯ!*
🌹✝️🌹
*ಶುಭಸಂದೇಶ*
*✝️ಮಾರ್ಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 3:13-19*
*ಪ್ರಭೂ ನಿಮಗೆ ಮಹಿಮೆ ಸಲ್ಲಲಿ*
*"ಯೇಸುಸ್ವಾಮಿ ಬೆಟ್ಟವನ್ನೇರಿ, ತಮಗೆ ಒಪ್ಪಿಗೆಯಾದವರನ್ನು ಕರೆದರು. ಅವರು ಹತ್ತಿರಕ್ಕೆ ಬಂದರು."*
ಆ ಕಾಲದಲ್ಲಿ ಯೇಸು ಬೆಟ್ಟವನ್ನೇರಿ, ತಮಗೆ ಒಪ್ಪಿಗೆಯಾದವರನ್ನು ಕರೆದರು, ಅವರು ಹತ್ತಿರಕ್ಕೆ ಬಂದರು. ಯೇಸು ಹನ್ನೆರಡು ಮಂದಿಯನ್ನು ಆಯ್ದುಕೊಂಡು, "ಪ್ರೇಷಿತರು" ಎಂದು ಅವರಿಗೆ ಹೆಸರಿಟ್ಟರು. "ನನ್ನ ಜೊತೆಯಲ್ಲಿ ಇರಲು ನಿಮ್ಮನ್ನು ಆರಿಸಿಕೊಂಡಿದ್ದೇನೆ. ಶುಭಸಂದೇಶವನ್ನು ಸಾರಲು ನಿಮ್ಮನ್ನು ಕಳುಹಿಸುತ್ತೇನೆ. ದೆವ್ವಗಳನ್ನು ಬಿಡಿಸುವ ಅಧಿಕಾರವನ್ನು ನಿಮಗೆ ಕೊಡುತ್ತೇನೆ " ಎಂದು ಅವರಿಗೆ ಹೇಳಿದರು. ಹೀಗೆ ನೇಮಕಗೊಂಡ ಹನ್ನೆರಡು ಮಂದಿ ಯಾರೆಂದರೆ:
*1ಸಿಮೋನ* (ಯೇಸು ಈತನಿಗೆ 'ಪೇತ್ರ' ಎಂದು ಹೆಸರಿಟ್ಟರು). ಜೆಬೆದಾಯನ ಮಗ *2ಯಕೋಬ* ಮತ್ತು ಅವನ ಸಹೋದರ *3ಯೊವಾನ್ನ* (ಯೇಸು ಇವರಿಬ್ಬರಿಗೆ 'ಬೊವನೆರ್ಗೆಸ್' ಎಂದರೆ 'ಸಿಡಿಲಮರಿಗಳು' ಎಂಬ ಹೆಸರನ್ನಿಟ್ಟರು). *4ಅಂದ್ರೇಯ* *5ಫಿಲಿಪ್ಪ* *6ಬಾರ್ತಲೊಮಾಯ* *7ಮತ್ತಾಯ* *8ತೋಮ* ಆಲ್ಫಾಯನ ಮಗ *9ಯಕೋಬ* *10ತದ್ದಾಯ* ದೇಶಾಭಿಮಾನಿ ಆದ *11ಸಿಮೋನ* ಮತ್ತು ಮುಂದೆ ಗುರುದ್ರೋಹಿಯಾಗಲಿದ್ದ ಯೂದ *12ಇಸ್ಕರಿಯೋತ*
*ಪ್ರಭುವಿನ ಶುಭಸಂದೇಶ*
*ಕ್ರಿಸ್ತರೇ, ನಿಮಗೆ ಸ್ತುತಿ ಸಲ್ಲಲಿ*
*🟥🙏 ಆಮೆನ್ 🙏🟥*
5 days ago | [YT] | 16
View 5 replies
Krista Dani
2️⃣2️⃣-0️⃣1️⃣-2️⃣6️⃣
*ಜನವರಿ*
2️⃣2️⃣
*ಗುರುವಾರ*
*ಪವಿತ್ರ ಬೈಬಲ್ ದಿನಚರಿ*
*ಸಾಧಾರಣ ಕಾಲದ*
*ಎರಡನೆಯ ವಾರ*
*(ವಾ,ಗ್ರ ಭಾಗ 2. ಪುಟ 46)*
*ಪೂಜಾವಿಧಿ ವರ್ಷ- 2*
*ಕೀರ್ತನಾ ಮಂಜರಿ:2*
*ಪೂಜಾವಸ್ತ್ರ ಹಸಿರು*
*ಹಂಗೇರಿಯ*
*ಸಂತ ಮಾರ್ಗರೀಟ್*
*(ಕನ್ಯೆ)*
*(1242-1271)*
*ಸಂತ*
*ವಿನ್ಸೆಂಟ್ ಪಾಲೊಟ್ಟಿ*
*(ಸ್ಥಾಪಕ)*
*(ವಯಸ್ಸು 55)*
*(1795-1850)*
🟧🌻🙏✝️🙏🌺🟧
*📖ದೈವವಾಕ್ಯದ ವಿಧಿ*
*ಮೊದಲನೆಯ ವಾಚನ*
*🛐ಸಮುವೇಲನ ಮೊದಲನೆಯ ಗ್ರಂಥದಿಂದ ಇಂದಿನ ವಾಚನ 18:6-9,19:1-7*
*"ನನ್ನ ತಂದೆ ಸೌಲನು ನಿನ್ನನ್ನು ಕೊಲ್ಲಬೇಕೆಂದಿರುತ್ತಾನೆ"*
ದಾವೀದನು ಫಿಲಿಷ್ಟಿಯರನ್ನು ಸಂಹರಿಸಿ ಸರ್ವ ಸೈನಿಕರೊಡನೆ ಹಿಂದಿರುಗಿ ಬರುವಾಗ ಇಸ್ರಯೇಲರ ಎಲ್ಲಾ ಪಟ್ಟಣಗಳಿಂದ ಮಹಿಳೆಯರು ಹೊರಗೆ ಬಂದು, ತಾಳ ತಮ್ಮಟೆಗಳನ್ನು ಹಿಡಿದು, ಸಂತೋಷದಿಂದ ಹಾಡುತ್ತಾ ಕುಣಿಯುತ್ತಾ, ಅರಸ ಸೌಲನನ್ನು ಎದುರುಗೊಂಡರು. ಅವರು: "ಸೌಲ ಕೊಂದನು ಸಾವಿರಗಟ್ಟಳೆ; ದಾವೀದನೋ ಕೊಂದನು ಹತ್ತು ಸಾವಿರಗಟ್ಟಳೆ," ಎಂದು ಪರಸ್ಪರ ಹಾಡಿದರು. ಈ ಮಾತುಗಳು ಸೌಲನಿಗೆ ಹಿಡಿಸಲಿಲ್ಲ. ಅವನು ಕೋಪದಿಂದ "ದಾವೀದನು ಹತ್ತು ಸಾವಿರಗಟ್ಟಳೆ ಕೊಂದನೆಂದೂ ನಾನು ಸಾವಿರಗಟ್ಟಳೆ ಕೊಂದೆನೆಂದೂ ಹಾಡುತ್ತಾರಲ್ಲ! ಹಾಗಾದರೆ ಅವನನ್ನು ರಾಜನನ್ನಾಗಿ ಮಾಡುವುದೊಂದೇ ಕಡಿಮೆ!" ಎಂದುಕೊಂಡನು. ಅಂದಿನಿಂದ ಸೌಲನು ದಾವೀದನ ಮೇಲೆ ಕಣ್ಣಿಟ್ಟನು. ದಾವೀದನನ್ನು ಕೊಲ್ಲಬೇಕೆಂದು ಸೌಲನು ತನ್ನ ಮಗ ಯೋನಾತಾನನಿಗೂ ಎಲ್ಲಾ ಪರಿವಾರದವರಿಗೂ ಆಜ್ಞಾಪಿಸಿದನು. ಆದರೆ ಯೋನಾತಾನನು ದಾವೀದನನ್ನು ಬಹಳವಾಗಿ ಪ್ರೀತಿಸುತ್ತಿದ್ದನು. ಆದುದರಿಂದ ಅವನು ದಾವೀದನಿಗೆ, "ನನ್ನ ತಂದೆ ಸೌಲನು ನಿನ್ನನ್ನು ಕೊಲ್ಲಬೇಕೆಂದಿರುತ್ತಾರೆ. ನೀನು ಜಾಗರೂಕತೆಯಿಂದಿರು; ನಾಳೆ ಬೆಳಗ್ಗೆ ಒಂದು ಗುಟ್ಟಾದ ಸ್ಥಳದಲ್ಲಿ ಅಡಗಿಕೊಂಡಿರು. ನನ್ನ ತಂದೆಯ ಬಳಿಯಲ್ಲಿದ್ದು ನಿನ್ನ ಬಗ್ಗೆ ಅವರೊಡನೆ ಮಾತಾಡಿ ಗೊತ್ತಾದ ವಿಷಯವನ್ನು ನೀನು ಅವಿತುಕೊಂಡಿರುವ ಸ್ಥಳಕ್ಕೆ ಬಂದು ತಿಳಿಸುವೆನು," ಎಂದು ಹೇಳಿದನು. ತರುವಾಯ ಅವನು ತನ್ನ ತಂದೆಯ ಮುಂದೆ ದಾವೀದನನ್ನು ಹೊಗಳಿದನು. "ಒಡೆಯರಾದ ತಾವು ತಮ್ಮ ಸೇವಕ ದಾವೀದನಿಗೆ ಅನ್ಯಾಯ ಮಾಡಬಾರದು; ಅವನು ನಿಮಗೆ ದ್ರೋಹಮಾಡಲಿಲ್ಲ; ಅವನು ಮಾಡಿದ್ದೆಲ್ಲವೂ ನಿಮ್ಮ ಹಿತಕ್ಕಾಗಿಯೇ. ತನ್ನ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗಿ ಆ ಫಿಲಿಷ್ಟಿಯರನ್ನು ಕೊಂದನು; ಸರ್ವೇಶ್ವರ ಇಸ್ರಯೇಲರಿಗೆ ಮಹಾ ಜಯವನ್ನುಂಟುಮಾಡಿದರು. ನೀವೂ ಅದನ್ನು ನೋಡಿ ಸಂತೋಷಪಟ್ಟಿರಿ; ದಾವೀದನನ್ನು ನಿಷ್ಕಾರಣವಾಗಿ ಕೊಂದು ನಿರ್ದೋಷಿಯ ರಕ್ತವನ್ನು ಸುರಿಸಿದ ಅಪರಾಧಕ್ಕೆ ನೀವೇಕೆ ಗುರಿ ಆಗುತ್ತೀರಿ?" ಎಂದನು. ಸೌಲನು ಯೋನಾತಾನನ ಮಾತುಗಳನ್ನು ಆಲಿಸಿದನು. "ಸರ್ವೇಶ್ವರನಾಣೆ, ಅವನನ್ನು ಕೊಲ್ಲುವುದಿಲ್ಲ," ಎಂದು ಪ್ರಮಾಣ ಮಾಡಿದನು. ಆಗ ಯೋನಾತಾನನು ದಾವೀದನನ್ನು ಕರೆದು ಅವನಿಗೆ ಈ ಮಾತುಗಳನ್ನು ತಿಳಿಸಿ ಸೌಲನ ಬಳಿಗೆ ಕರೆತಂದನು. ದಾವೀದನು ಮುಂಚಿನಂತೆ ಸೌಲನ ಸನ್ನಿಧಿಯಲ್ಲೇ ಇರುವಂತೆ ಏರ್ಪಾಡಾಯಿತು.
*ಪ್ರಭುವಿನ ವಾಕ್ಯ*
*ದೇವರಿಗೆ ಕೃತಜ್ಞತೆ ಸಲ್ಲಲಿ*
🌻✝️🌻
*ಕೀರ್ತನೆ*
*56:1-2, 8-11. v.11*
*ಶ್ಲೋಕ: ದೇವರಲ್ಲೇ ನಿರ್ಭೀತ ನಂಬಿಕೆ ನನಗೆ.*
1. ಕರುಣೆ ತೋರು ದೇವಾ! ಜನರೇನ್ನ ಬೆನ್ನಟ್ಟಿ ಬರುತಿಹರು|
ದಿನವೆಲ್ಲ ಕದನಮಾಡಿ ಶತ್ರುಗಳೆನ್ನ ಬಾಧಿಸುತ್ತಿಹರು||
ವಿರೋಧಿಗಳು ದಿನವಿಡೀ ಬೆನ್ನಟ್ಟಿ ಬರುತಿಹರು|
ಸೊಕ್ಕಿನಿಂದ ನನಗೆದುರಾಗಿ ನಿಂತಿರುವರು ಹಲವರು||
*ಶ್ಲೋಕ*
2. ನನ್ನ ಅಲೆಮಾರಿತನದ ಲೆಕ್ಕವಿಟ್ಟಿರುವೆ ನಿನ್ನಲಿ|
ನನ್ನ ಕಣ್ಣೀರನು ತುಂಬಿಡು ನಿನ್ನ ಬುದ್ದಲಿಯಲಿ||
ಅದರ ಕತೆ ಬರೆದಿದೆಯಲ್ಲವೆ ನಿನ್ನ ಪುಸ್ತಕದಲಿ|
ನಾ ಮೊರೆಯಿಟ್ಟಾಗ ಶತ್ರುಗಳು ಪರಾರಿ ಹಿಂದಕೆ||
*ಶ್ಲೋಕ*
3. ದೇವನಿರುವುದು ನನ್ನ ಕಡೆ, ಇದು ಗೊತ್ತಿದೆ ನನಗೆ|
ನಾ ಹೆಮ್ಮೆ ಪಡುವುದು ದೇವನಲಿ, ಆತನ ವಾಗ್ದಾನದಲಿ||
ದೇವರಲ್ಲೇ ನಿರ್ಭೀತ ನಂಬಿಕೆ ನನಗೆ|
ನರಮಾನವರು ಏನು ಮಾಡಿಯಾರೆನಗೆ?||
*ಶ್ಲೋಕ*
🌻✝️🌻
*ಘೋಷಣೆ*
*ಯೊವಾನ್ನ 6:63,68*
*ಅಲ್ಲೆಲೂಯ, ಅಲ್ಲೆಲೂಯ!*
ನಾನು ನಿಮ್ಮೊಡನೆ ಆಡಿದ ಮಾತುಗಳು ಜೀವದಾಯಕ ದೇವರಾತ್ಮವನ್ನು ತರುತ್ತವೆ | ನಿತ್ಯಜೀವವನ್ನು ಈಯುವ ನುಡಿ ಇರುವುದು ತಮ್ಮಲ್ಲೇ ||
*ಅಲ್ಲೆಲೂಯ!*
🌻✝️🌻
*ಶುಭಸಂದೇಶ*
*✝️ಮಾರ್ಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 3:7-12*
*ಪ್ರಭೂ ನಿಮಗೆ ಮಹಿಮೆ ಸಲ್ಲಲಿ*
*"ದೆವ್ವಗಳು ಸಹ ಅವರನ್ನು ಕಂಡಾಗಲೆಲ್ಲಾ ಅವರ ಪಾದಕ್ಕೆರಗಿ, 'ನೀವು ದೇವರ ಪುತ್ರ' ಎಂದು ಕಿರುಚುತ್ತಿದ್ದವು."*
ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರ ಜೊತೆಯಲ್ಲಿ ಗಲಿಲೇಯ ಸರೋವರದ ತೀರಕ್ಕೆ ಹೊರಟುಹೋದರು. ಸಾವಿರಾರು ಜನರು ಅವರನ್ನು ಹಿಂಬಾಲಿಸಿದರು. ಈ ಜನರು ಯೇಸು ಮಾಡುತ್ತಿದ್ದ ಮಹತ್ಕಾರ್ಯಗಳ ಸಮಾಚಾರವನ್ನು ಕೇಳಿ, ಗಲಿಲೇಯ ಪ್ರಾಂತ್ಯದಿಂದ, ಜುದೇಯ ಪ್ರಾಂತ್ಯದಿಂದ, ಜೆರುಸಲೇಮ್ ನಗರದಿಂದ, ಇದುಮೇಯ ಪ್ರಾಂತ್ಯದಿಂದ, ಜೋರ್ಡಾನ್ ನದಿಯ ಪೂರ್ವ ಪ್ರದೇಶ ಹಾಗೂ ಟೈರ್ - ಸಿದೋನ್ ಪಟ್ಟಣಗಳ ಸುತ್ತಮುತ್ತಲಿಂದ ಬಂದಿದ್ದರು. ಜನಸಂದಣಿ ಅಧಿಕವಾಗುತ್ತಿದ್ದುದರಿಂದ ಅವರು ತಮ್ಮ ಮೈಮೇಲೆ ಬಿದ್ದಾರೆಂದು ಯೇಸು, ತಮಗೆ ಒಂದು ದೋಣಿಯನ್ನು ಸಿದ್ದವಾಗಿಡಲು ಶಿಷ್ಯರಿಗೆ ಹೇಳಿದರು. ಯೇಸು ಆನೇಕರನ್ನು ಗುಣಪಡಿಸಿದ್ದರಿಂದ ರೋಗಿಗಳೆಲ್ಲರೂ ಅವರನ್ನು ಮುಟ್ಟಬೇಕೆಂದು ಮುನ್ನುಗ್ಗಿ ಮೇಲೆ ಮೇಲೆ ಬೀಳುತ್ತಿದ್ದರು. ದೆವ್ವಗಳು ಸಹ ಅವರನ್ನು ಕಂಡಾಗಲೆಲ್ಲಾ ಅವರ ಪಾದಕ್ಕೆರಗಿ, "ನೀವು ದೇವರ ಪುತ್ರ,” ಎಂದು ಕಿರುಚುತ್ತಿದ್ದವು. ಆದರೆ ಯೇಸು, ತಾವು ಯಾರೆಂಬುದನ್ನು ಪ್ರಕಟಿಸಬಾರದೆಂದು ಅವುಗಳಿಗೆ ಕಟ್ಟಪ್ಪಣೆ ಮಾಡುತ್ತಿದ್ದರು.
*ಪ್ರಭುವಿನ ಶುಭಸಂದೇಶ*
*ಕ್ರಿಸ್ತರೇ ನಿಮಗೆ ಸ್ತುತಿ ಸಲ್ಲಲಿ*
ಆಮೆನ್
6 days ago | [YT] | 14
View 2 replies
Krista Dani
2️⃣1️⃣-0️⃣1️⃣-2️⃣6️⃣
*ಜನವರಿ*
2️⃣1️⃣
*ಬುಧವಾರ*
*ಪವಿತ್ರ ಬೈಬಲ್ ದಿನಚರಿ*
*ಸಾಧಾರಣ ಕಾಲದ*
*ಎರಡನೆಯ ವಾರ*
*(ವಾ,ಗ್ರ ಭಾಗ 2. ಪುಟ 42)*
*ಪೂಜಾವಿಧಿ ವರ್ಷ- 2*
*ಕೀರ್ತನಾ ಮಂಜರಿ; 2*
*ಪೂಜಾವಸ್ತ್ರ ಕೆಂಪು*
*ಸಂತ ಆಗ್ನೆಸ್*
*(ಕನ್ಯೆ ಹಾಗೂ ರಕ್ತಸಾಕ್ಷಿ)*
*(ವಯಸ್ಸು 13)*
*(0291-0304)*
🟫🌺🙏✝️🙏🌺🟫
*📖ದೈವವಾಕ್ಯದ ವಿಧಿ*
*ಮೊದಲನೆಯ ವಾಚನ*
*🛐ಸಮುವೇಲನ ಮೊದಲನೆಯ ಗ್ರಂಥದಿಂದ ಇಂದಿನ ವಾಚನ 17: 32-33, 37, 40-51*
*"ದಾವೀದನು ಬರೀ ಒಂದು ಕವಣೆ ಕಲ್ಲಿನಿಂದ ಆ ಫಿಲಿಷ್ಟಿಯನ್ನು ಸೋಲಿಸಿ ಕೊಂದುಕಾಕಿದನು."*
ದಾವೀದನು ಸೌಲನಿಗೆ, "ಆ ಫಿಲಿಷ್ಟಿಯನ ನಿಮಿತ್ತ ಯಾರೂ ಎದೆಗೆಡಬೇಕಾಗಿಲ್ಲ. ತಮ್ಮ ಸೇವಕನಾದ ನಾನೇ ಹೋಗಿ ಅವನೊಡನೆ ಯುದ್ಧಮಾಡುತ್ತೇನೆ," ಎಂದು ಹೇಳಿದನು. ಅದಕ್ಕೆ ಸೌಲನು, "ಅವನೊಡನೆ ಕಾದಾಡಲು ನಿನ್ನಿಂದ ಆಗದು; ನೀನು ಇನ್ನೂ ಹುಡುಗ. ಅವನಾದರೋ ಚಿಕ್ಕಂದಿನಿಂದಲೇ ಯುದ್ಧವೀರ," ಎಂದು ಹೇಳಿದನು. ಅದಕ್ಕೆ ದಾವೀದನು "ನನ್ನನ್ನು ಅಂಥ ಕರಡಿ-ಸಿಂಹಗಳ ಉಗುರುಗಳಿಂದ ತಪ್ಪಿಸಿದ ಸರ್ವೇಶ್ವರ ಈ ಫಿಲಿಷ್ಟಿಯನ ಕೈಯಿಂದಲೂ ತಪ್ಪಿಸುವರು," ಎಂದು ಹೇಳಿದನು. ಅದಕ್ಕೆ ಸೌಲನು, "ಹೋಗು, ಸರ್ವೇಶ್ವರ ನಿನ್ನೊಂದಿಗೆ ಇರಲಿ!" ಎಂದನು. ದಾವೀದನು ಕುರಿಕಾಯುವ ತನ್ನ ಕೋಲನ್ನೇ ತೆಗೆದುಕೊಂಡು ಹೊರಟನು. ಒಂದು ಹಳ್ಳಕ್ಕೆ ಹೋಗಿ ಐದು ನುಣುಪು ಕಲ್ಲುಗಳನ್ನು ಆರಿಸಿಕೊಂಡನು. ಕುರುಬರ ಪದ್ದತಿಯಂತೆ ಅವುಗಳನ್ನು ತನ್ನ ಸೊಂಟ ಚೀಲದಲ್ಲಿ ಹಾಕಿಕೊಂಡನು. ಕೈಯಲ್ಲಿ ಕವಣೆಯನ್ನು ಹಿಡಿದು, ಆ ಫಿಲಿಷ್ಟಿಯನನ್ನು ಎದುರಿಸಲು ಹೋದನು. ಇತ್ತ ಫಿಲಿಷ್ಟಿಯನು ದಾವೀದನ ಕಡೆ ಧಾವಿಸಿ ಬಂದನು. ಗುರಾಣಿ ಹೊರುವವನು ಅವನ ಮುಂದೆ ಇದ್ದನು. ಫಿಲಿಷ್ಟಿಯನು ದಾವೀದನನ್ನು ಸಮೀಪಿಸಿ ನೋಡಿದನು. ಕೆಂಬಣ್ಣದವನೂ, ಸುಂದರನೂ ಆದ ಆ ಯುವಕನನ್ನು ದಿಟ್ಟಿಸಿ ತಾತ್ಸಾರದಿಂದ, "ನೀನು ಕೋಲು ಹಿಡಿದು ನನ್ನ ಬಳಿಗೆ ಬರಲು ನಾನು ನಾಯಿಯೆಂದು ತಿಳಿದುಕೊಂಡೆಯಾ?" ಎಂದು ಹೇಳಿ ಅವನನ್ನು ತನ್ನ ದೇವರ ಹೆಸರಿನಲ್ಲಿ ಶಪಿಸಿದನು. "ಇಲ್ಲಿ ಬಾ; ನಿನ್ನ ಮಾಂಸವನ್ನು ಆಕಾಶದ ಪಕ್ಷಿಗಳಿಗೆ, ಕಾಡಿನ ಮೃಗಗಳಿಗೆ ಹಂಚಿಕೊಡುತ್ತೇನೆ," ಎಂದನು. ಅದಕ್ಕೆ ದಾವೀದನು, "ನೀನು ಈಟಿ, ಕತ್ತಿ, ಭರ್ಜಿಗಳೊಡನೆ ನನ್ನ ಬಳಿಗೆ ಬರುತ್ತಿರುವೆ; ನೀನು ಹೀಯಾಳಿಸಿದ ಸೇನಾಧೀಶ್ವರರು ಹಾಗು ಇಸ್ರಯೇಲ್ ಯೋಧರ ದೇವರು ಆದಂಥ ಸರ್ವೇಶ್ವರನ ನಾಮದೊಡನೆ ನಾನು ನಿನ್ನ ಬಳಿಗೆ ಬರುತ್ತೇನೆ. ಅವರು ಈ ದಿನ ನಿನ್ನನ್ನು ನನ್ನ ಕೈಗೆ ಒಪ್ಪಿಸಿಕೊಡುವರು. ನಾನು ನಿನ್ನನ್ನು ಕೊಂದು, ನಿನ್ನ ತಲೆಯನ್ನು ಕಡಿದು, ಫಿಲಿಷ್ಟಿಯ ಸೈನ್ಯದ ಶವಗಳನ್ನು ಆಕಾಶದ ಪಕ್ಷಿಗಳಿಗೂ ವನ್ಯ ಮೃಗಗಳಿಗೂ ಹಂಚಿಕೊಡುವೆನು. ಇದರಿಂದ ಇಸ್ರಯೇಲರ ಸಂಗಡ ದೇವರಿದ್ದಾರೆಂಬುದು ಜಗತ್ತಿಗೆಲ್ಲಾ ತಿಳಿದುಬರುವುದು. ಈಟಿ, ಕತ್ತಿಗಳಿಲ್ಲದೆ ಸರ್ವೇಶ್ವರ ರಕ್ಷಿಸಬಲ್ಲನೆಂಬುದು ಇಲ್ಲಿ ಕೂಡಿರುವವರೆಲ್ಲರಿಗೆ ಗೊತ್ತಾಗುವುದು. ಏಕೆಂದರೆ ಸಮರದ ಪರಿಣಾಮ ಇರುವುದು ಸರ್ವೇಶ್ವರನ ಕೈಯಲ್ಲಿ; ಅವರು ತಪ್ಪದೆ ನಿಮ್ಮನ್ನು ನಮ್ಮ ಕೈಗೆ ಒಪ್ಪಿಸಿಕೊಡುವರು," ಎಂದನು. ಕೂಡಲೆ ಆ ಫಿಲಿಷ್ಟಿಯನು ದಾವೀದನ ಮೇಲೆ ಎರಗಲು ಮತ್ತೆ ಧಾವಿಸಿದನು. ದಾವೀದನೂ ಫಿಲಿಷ್ಟಿಯರ ಸೈನ್ಯದ ಕಡೆಗೆ ನುಗ್ಗಿ ಆ ಫಿಲಿಷ್ಟಿಯನನ್ನು ಎದುರುಗೊಳ್ಳಲು ಓಡಿದನು. ಕೈಯನ್ನು ಚೀಲದಲ್ಲಿ ಹಾಕಿ, ಒಂದು ಕಲ್ಲನ್ನು ತೆಗೆದು, ಅವನ ಕಣ್ಣಿಗೆ ಗುರಿಯಿಟ್ಟು, ಕವಣೆಯನ್ನು ಬೀಸಿ ಹೊಡೆದನು. ಆ ಕಲ್ಲು ಅವನ ಹಣೆಯನ್ನು ಹೊಕ್ಕಿತು. ಅವನು ಮುಖ ಕೆಳಗಾಗಿ ನೆಲಕ್ಕೆ ಉರುಳಿದನು. ಕೂಡಲೆ ದಾವೀದನು ಹೋಗಿ ಆ ಫಿಲಿಷ್ಟಿಯನ ಮೇಲೆ ನಿಂತು, ಅವನ ಕತ್ತಿಯನ್ನೇ ಹಿರಿದು, ಅವನ ತಲೆಯನ್ನು ಕಡಿದು ಸಾಯಿಸಿದನು. ಹೀಗೆ ದಾವೀದನು ಕತ್ತಿಯಿಂದಲ್ಲ, ಬರೀ ಒಂದು ಕವಣೆಕಲ್ಲಿನಿಂದ ಆ ಫಿಲಿಷ್ಟಿಯನನ್ನು ಸೋಲಿಸಿ ಕೊಂದುಹಾಕಿದನು. ತಮ್ಮ ರಣವೀರನು ಸತ್ತುಹೊದದ್ದನ್ನು ಕಂಡು ಫಿಲಿಷ್ಟಿಯರು ಓಡಿಹೋದರು.
*ಪ್ರಭುವಿನ ವಾಕ್ಯ*
*ದೇವರಿಗೆ ಕೃತಜ್ಞತೆ ಸಲ್ಲಲಿ*
🌺✝️🌺
*ಕೀರ್ತನೆ*
*144:1,2,9-10, v. 1*
*ಶ್ಲೋಕ: ಸ್ತುತಿಸ್ತೋತ್ರ ಪ್ರಭುವಿಗೆ, ನನ್ನ ಆಶ್ರಯ ದುರ್ಗಕೆ.*
1. ಸ್ತುತಿಸ್ತೋತ್ರ ಪ್ರಭುವಿಗೆ, ನನ್ನ ಆಶ್ರಯ ದುರ್ಗಕೆ|
ಕಲಿಸಿಹನು ಕದನ ಕೈಗೆ, ಕಾಳಗ ನನ್ನ ಬೆರಳಿಗೆ||
ಆತನೇ ನನಗೆ ಬಂಡೆ, ಕೋಟೆ, ದುರ್ಗ, ಉದ್ದಾರಕ|
ನನಗೆ ರಕ್ಷಾಕವಚ, ಆಶ್ರಯ, ಶತ್ರುವಿಧ್ವಂಸಕ||
*ಶ್ಲೋಕ*
2. ಹಾಡುವೆ ದೇವಾ, ನಿನಗೆ ನೂತನ ಕೀರ್ತನೆಯನು|
ಪಾಡುವೆ ನುಡಿಸುತ್ತಾ ದಶತಂತಿಯ ವೀಣೆಯನು||
ನೀನೇ ಅರಸುಗಳಿಗೆ ಜಯಪ್ರದನು|
ದಾಸ ದಾವೀದನನು ಬಿಡಿಸಿದವನು||
*ಶ್ಲೋಕ*
🌺✝️🌺
*ಘೋಷಣೆ*
*ಮತ್ತಾಯ 11:25*
*ಅಲ್ಲೆಲೂಯ, ಅಲ್ಲೆಲೂಯ!*
ಪಿತನೇ, ಭೂಸ್ವರ್ಗಗಳ ಒಡೆಯನೇ, ಜ್ಞಾನಿಗಳಿಗೂ ಮೇಧಾವಿಗಳಿಗೂ ಈ ವಿಷಯಗಳನ್ನು ಮರೆಮಾಡಿ | ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ, ಇದಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ ||
*ಅಲ್ಲೆಲೂಯ!*
🌺✝️🌺
*ಶುಭಸಂದೇಶ*
*✝️ಮಾರ್ಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ: 3:1-6*
*ಪ್ರಭೂ ನಿಮಗೆ ಮಹಿಮೆ ಸಲ್ಲಲಿ*
*"ಸಬ್ಬತ್ ದಿನದಲ್ಲಿ ಏನು ಮಾಡುವುದು ಧರ್ಮ?"*
ಆ ಕಾಲದಲ್ಲಿ ಯೇಸು ಪ್ರಾರ್ಥನಾಮಂದಿರಕ್ಕೆ ಪುನಃ ಹೋದರು. ಅಲ್ಲಿ ಒಬ್ಬ ಬತ್ತಿದ ಕೈಯುಳ್ಳವನು ಇದ್ದನು. ಅವನನ್ನು ಸಬ್ಬತ್ ದಿನದಲ್ಲಿ ಗುಣಪಡಿಸಿದ್ದೇ ಆದರೆ ಯೇಸುವಿನ ವಿರುದ್ಧ ತಪ್ಪುಹೊರಿಸಬಹುದೆಂಬ ಉದ್ದೇಶದಿಂದ ಕೆಲವರು ಹೊಂಚುಹಾಕುತ್ತಿದ್ದರು. ಯೇಸು ಬತ್ತಿದ ಕೈಯುಳ್ಳವನಿಗೆ, "ಎದ್ದು ಮುಂದಕ್ಕೆ ಬಾ," ಎಂದರು. ಬಳಿಕ ಅಲ್ಲಿದ್ದವರನ್ನು ಉದ್ದೇಶಿಸಿ, "ಸಬ್ಬತ್ ದಿನದಲ್ಲಿ ಏನು ಮಾಡುವುದು ಧರ್ಮ? ಒಳಿತನ್ನೋ ಅಥವಾ ಕೆಡುಕನ್ನೋ? ಒಬ್ಬನ ಪ್ರಾಣವನ್ನು ಉಳಿಸುವುದೋ ಅಥವಾ ಅಳಿಸುವುದೋ ಹೇಳಿ," ಎಂದು ಕೇಳಲು ಅವರು ಮಾತೇ ಎತ್ತಲಿಲ್ಲ. ಯೇಸು ಸುತ್ತಲೂ ಇದ್ದವರನ್ನು ಕೋಪದಿಂದ ದಿಟ್ಟಿಸಿ, ಅವರ ಹೃದಯ ಕಲ್ಲಾಗಿರುವುದನ್ನು ಕಂಡು, ಮನನೊಂದು, ಬತ್ತಿದ ಕೈಯುಳ್ಳವನಿಗೆ, "ನಿನ್ನ ಕೈಯನ್ನು ಚಾಚು," ಎಂದರು. ಅವನು ಚಾಚಿದನು, ಅದು ಸಂಪೂರ್ಣವಾಗಿ ಸ್ವಸ್ಥವಾಯಿತು. ಫರಿಸಾಯರು ಅಲ್ಲಿಂದ ಹೊರಗೆ ಹೋದರು. ಕೂಡಲೇ ಹೆರೋದಿಯರೊಡನೆ ಸೇರಿಕೊಂಡು ಯೇಸುವನ್ನು ಕೊಲೆಮಾಡಲು ಒಳಸಂಚು ಹೂಡಿದರು.
*ಪ್ರಭುವಿನ ಶುಭಸಂದೇಶ*
*ಕ್ರಿಸ್ತರೇ ನಿಮಗೆ ಸ್ತುತಿ ಸಲ್ಲಲಿ*
ಆಮೆನ್
1 week ago | [YT] | 16
View 4 replies
Load more