VasanthaaHarish 🙏

Namaste 🙏 my hobbies 🙏 Jai Kashi 🙏 Bharatêya Sanathani Hindu. 🙏Spiritual seeker.🙏 Music 🎵 ,🙏 love football updates,🙏 Traveling,tips 🙏Exploring, healthy cooking ideas 🙏A bit of photography 🙏 positive #nature love 🙏

namaste friends 🙏 Don't forget to like, share, and subscribe for more spiritual and nature-filled videos!🙏🚩


VasanthaaHarish 🙏

ಶ್ರೀ *#ಆದಿತ್ಯ #ಹೃದಯಸ್ತೋತ್ರಮ್*

#ತತೋ ಯುದ್ಧಪರಿಶ್ರಾನ್ತಂ ಸಮರೇ ಚಿನ್ತಯಾ ಸ್ಥಿತಮ್ |
ರಾವಣಂ ಚಾಗ್ರಗೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಮ್ ||

ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್ |
ಉಪಗಮ್ಯಾಬ್ರವೀದ್ ರಾಮಮಗಸ್ತ್ಯೋ ಭಗವಾಂಸ್ತದಾ ||

ರಾಮ ರಾಮ ಮಹಾಬಾಹೋ ಶ್ರುಣು ಗುಹ್ಯಂ ಸನಾತನಮ್ |
ಯೇನ ಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸೇ ||

ಆದಿತ್ಯಹೃದಯಂ ಪುಣ್ಯಂ ಸರ್ವಶತ್ರುವಿನಾಶನಮ್ |
ಜಯಾವಹಂ ಜಪೇನ್ನಿತ್ಯಮಕ್ಷಯಂ ಪರಮಂ ಶಿವಮ್ ||

ಸರ್ವಮಂಗಲಮಾಂಗಲ್ಯಂ ಸರ್ವಪಾಪಪ್ರಣಾಶನಮ್ |
ಚಿನ್ತಾಶೋಕಪ್ರಶಮನಮಾಯುರ್ವಧನಮುತ್ತಮಮ್ ||

ರಶ್ಮಿಮನ್ತಂ ಸಮುದ್ಯನ್ತಂ ದೇವಾಸುರನಮಸ್ಕೃತಮ್ |
ಪೂಜಯಸ್ವ ವಿವಸ್ವನ್ತಂ ಭಾಸ್ಕರಂ ಭುವನೇಶ್ವರಮ್ ||

ಸರ್ವದೇವಾತ್ಮಕೋ ಹ್ಯೇಷ ತೇಜಸ್ವೀ ರಶ್ಮಿಭಾವನಃ |
ಏಷ ದೇವಾಸುರಗಣಾನ್‍ಲ್ಲೋಕಾನ್ ಪಾತಿ ಗಭಸ್ತಿಭಿಃ ||

ಏಷ ಬ್ರಹ್ಮಾ ಚ ವಿಷ್ಣುಶ್ಚ ಶಿವಃ ಸ್ಕನ್ದಃ ಪ್ರಜಾಪತಿಃ |
ಮಹೇನ್ದ್ರೋ ಧನದಃ ಕಾಲೋ ಯಮಃ ಸೋಮೋ ಹ್ಯಪಾಂ ಪತಿಃ ||

ಪಿತರೋ ವಸವಃ ಸಾಧ್ಯಾ ಅಶ್ವಿನೌ ಮರುತೋ ಮನುಃ |
ವಾಯುರ್ವಹ್ನಿಃ ಪ್ರಜಾಃ ಪ್ರಾಣಾ ಋತುಕರ್ತಾ ಪ್ರಭಕರಃ ||

ಆದಿತ್ಯಃ ಸವಿತಾ ಸೂರ್ಯ ಖಗಃ ಪೂಷಾ ಗಭಸ್ತಿಮಾನ್ |
ಸುವರ್ಣಸದೃಶೋ ಭಾನುರ್ಹಿರಣ್ಯರೇತಾ ದಿವಾಕರಃ ||

ಹರಿದ್ವಶಃ ಸಹಸ್ರಾರ್ಚಿಃ ಸಪ್ತಸಪ್ತಿರ್ಮರೀಚಿಮಾನ್ |
ತಿಮಿರೋನ್ಮಥನಃ ಶಂಭುಸ್ತ್ವಷ್ಟಾ ಮಾರ್ತಣ್ಡಕೋಽಂಶುಮಾನ್ ||

ಹಿರಣ್ಯಗರ್ಭಃ ಶಿಶಿರಸ್ತಪನೋಽಹಸ್ಕರೋ ರವಿಃ |
ಅಗ್ನಿಗರ್ಭೋಽದಿತೇಃ ಪುತ್ರಃ ಶಂಖಃ ಶಿಶಿರನಾಶನಃ ||

ವ್ಯೋಮನಾಥಸ್ತಮೋಭೇದೀ ಋಗ್ಯಜುಃಸಾಮಪಾರಗಃ |
ಘನವೃಷ್ಟಿರಪಾಂ ಮಿತ್ರೋ ವಿನ್ಧ್ಯವೀಥೀಪ್ಲವಂಗಮಃ ||

ಆತಪೀ ಮಣ್ಡಲೀ ಮೃತ್ಯೂಃ ಪಿಙ್ಗಲಃ ಸ್ಸರ್ವತಾಪನಃ |
ಕವಿರ್ವಿಶ್ಜೋ ಮಹಾತೇಜಾ ರಕ್ತಃ ಸರ್ವಭವೋದ್ಧವಃ ||

ನಕ್ಷತ್ರಗ್ರಹತಾರಾಣಾಮಧಿಪೋ ವಿಶ್ವಭಾವನಃ |
ತೇಜಸಾಮಪಿ ತೇಜಸ್ವೀ ದ್ವಾದಶಾತ್ಮನ್ ನಮೋಽಸ್ತು ತೇ ||

ನಮಃ ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮಃ |
ಜ್ಯೋತಿರ್ಗಣಾನಾಂ ಪತಯೇ ದಿನಾಧಿಪತಯೇ ನಮಃ ||

ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋ ನಮಃ |
ನಮೋ ನಮಃ ಸ್ಸಹಸ್ರಾಂಶೋ ಆದಿತ್ಯಾಯ ನಮೋ ನಮಃ ||

ನಮ ಉಗ್ರಾಯ ವೀರಾಯ ಸಾರಙ್ಗಾಯ ನಮೋ ನಮಃ |
ನಮಃ ಪದ್ಮಪ್ರಬೋಧಾಯ ಪ್ರಚಂಡಾಯ ನಮೋಽಸ್ತು ತೇ ||

ಬ್ರಹ್ಮೀಶಾನಾಚ್ಯುತೇಶಾಯ ಸೂರಾಯದಿತ್ಯವರ್ಚಸೇ |
ಭಾಸ್ವತೇ ಸರ್ವಭಕ್ಷಾಯ ರೌದ್ರಾಯ ವಪುಷೇ ನಮಃ ||

ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯಮಿತಾತ್ಮನೇ |
ಕೃತಘ್ನಘ್ನಾಯ ದೇವಾಯ ಜ್ಯೋತಿಷಾಂ ಪತಯೇ ನಮಃ ||

ತಪ್ತಚಾಮೀಕರಾಭಾಯ ಹರಯೇ ವಿಶ್ವಕರ್ಮಣೇ |
ನಮಸ್ತಮೋಽಭಿನಿಘ್ನಾಯ ರುಚಯೇ ಲೋಕಸಾಕ್ಷಿಣೇ ||

ನಾಶಯತ್ಯೇಷ ವೈ ಭೂತಂ ತಮೇವ ಸೃಜತಿ ಪ್ರಭುಃ |
ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ ಗಭಸ್ತಿಭಿಃ ||

ಏಷ ಸುಪ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತಃ |
ಏಷ ಚೈವಾಗ್ನಿಹೋತ್ರಂ ಚ ಫಲಂ ಚೈವಾಗ್ನಿಹೋತ್ರಿಣಾಮ್ ||

ದೇವಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವ ಚ |
ಯಾನಿ ಕೃತ್ಯಾನಿ ಲೋಕೇಷು ಸರ್ವೇಷು ಪರಮಪ್ರಭುಃ ||

ಏನಮಾಪತ್ಸು ಕೃಚ್ಛ್ರೇಷು ಕಾನ್ತಾರೇಷು ಭಯೇಷು ಚ |
ಕೀರ್ತಯನ್ ಪುರುಷಃ ಕಶ್ಚಿನ್ನಾವಸೀದತಿ ರಾಘವ ||

ಪೂಜಯಸ್ವೈನಮೇಕಾಗ್ರೋ ದೇವದೇವಂ ಜಗತ್ಪತಿಮ್ |
ಏತತ್ತ್ರಿಗುಣಿತಂ ಜಪ್ತ್ವಾ ಯುದ್ಧೇಷು ವಿಜಯಿಷ್ಠತಿ ||

ಅಸ್ಮಿನ್ ಕ್ಷಣೇ ಮಹಾಬಾಹೋ ರಾವಣಂ ತ್ವಂ ಹನಿಷ್ಯಸಿ |
ಏವಮುಕ್ತ್ವಾ ತತೋಽಗಸ್ತ್ಯೋ ಜಗಾಮ ಸ ಯಥಾಗತಮ್ ||

ಏತಚ್ಛ್ರುತ್ವಾ ಮಹಾತೇಜಾ ನಷ್ಟಶೋಕೋಽಭವತ್ ತದಾ |
ಧಾರಯಾಮಾಸ ಸುಪ್ರೀತೋ ರಾಘವಃ ಪ್ರಯತಾತ್ಮವಾನ್ ||

ಆದಿತ್ಯಂ ಪ್ರೇಕ್ಷ್ಯ ಜಪ್ತ್ವೇದಂ ಪರಂ ಹರ್ಷಮವಾಪ್ತವಾನ್ |
ತ್ರಿರಾಚಮ್ಯ ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್ ||

ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ ಜಯಾರ್ಥಂ ಸಮುಪಾಗಮತ್ |
ಸರ್ವಯತ್ನೇನ ಮಹತಾ ವೃತಸ್ತಸ್ಯ ಮಧೇಽಭವತ್ ||

ಅಥ ರವಿರವದನ್ನಿರೀಕ್ಷ್ಯ ರಾಮಮ್ ಮುದಿತಮನಾಃ ಪರಮಂ ಪ್ರಹೃಷ್ಯಮಾಣಃ |
ನಿಶಿಚರಪತಿಸಂಕ್ಷಯಂ ವಿದಿತ್ವಾ ಸುರಗಣಮಧ್ಯಗತೋ ವಚಸ್ತ್ವರೇತಿ ||

10 hours ago | [YT] | 0

VasanthaaHarish 🙏

#ಭೋಗಿ ಹಬ್ಬ

ಭೋಗಿ ಹಬ್ಬದಂದು #ಇಂದ್ರನನ್ನು ಪೂಜಿಸಲಾಗುವುದು. ಬೆಳೆ ಪಡೆದ ಬಳಿಕ ಒಳ್ಳೆಯ ಮಳೆ ನೀಡಿ ಬೆಳೆ ಬೆಳೆಯಲು ಸಹಕರಿಸಿದ #ಇಂದ್ರನನ್ನು ಈ ದಿನ ಪೂಜಿಸುತ್ತಾರೆ, ಮನೆಯಲ್ಲಿರುವ ಬೇಡದ ಹಳೆಯ ವಸ್ತುಗಳನ್ನು ಬೆಂಕಿಗೆ ಬಿಸಾಡಿ , #ಹೊಸ ಬಟ್ಟೆ ಧರಿಸಿ #ಸಂಭ್ರಮದಿಂದ ಆಚರಿಸಲಾಗುವುದು.

ಹಳೆಯ #ಋಣಾತ್ಮಕ ಚಿಂತೆ ದೂರವಾಗಿ ಧನಾತ್ಮಕ ಶಕ್ತಿ ತುಂಬಲಿ ಎಂಬುವುದೇ ಈ ಹಬ್ಬದ ಆಶಯವಾಗಿದೆ.

ಇಂದು ಭೋಗಿ ಹಬ್ಬ. #ಧನುರ್ಮಾಸದ ಕೊನೆಯ ದಿ‌ನ, ಈ ವರ್ಷದ #ಮೊದಲ #ಹಬ್ಬ. #ಮಳೆ #ಬೆಳೆ ಚೆನ್ನಾಗಿ ಆಗಲಿ ಎಂದು ಇಂದ್ರನನ್ನು ಪೂಜಿಸುವ ದಿನ, ಸ್ವಲ್ಪ ಹಾಲು ತುಪ್ಪ ಸೇರಿಸಿ ಸ್ನಾನ ಮಾಡಿ, ಸಿಹಿಗುಂಬಳ ಕಾಯಿ ಪಲ್ಯ ಸೇವಿಸಬೇಕು ಹಾಗೂ ‌ತರಕಾರಿ ದವಸ ಧಾನ್ಯ ದಾನ ಮಾಡಬೇಕು. ಮಳೆ ಬೆಳೆ ಚೆನ್ನಾಗಿ ಆಗಲಿ, ವ್ಯವಹಾರ, ವ್ಯಾಪಾರ ವೃದ್ಧಿಯಾಗಲಿ ಎಂದು ಪ್ರಾರ್ಥಿಸಬೇಕು.

ಇಷ್ಟಾರ್ಥ ಸಿದ್ಧಿಯಾಗುವಂತೆ ಭಗವಂತ ಎಲ್ಲರಿಗೂ
ಅನುಗ್ರಹ ಆಶೀರ್ವಾದ ಮಾಡಲಿ
ಸಹಕಾರ ನೀಡುವ ಮೂಲಕ ಪ್ರೋತ್ಸಾಹ ನೀಡಿದ
ನಿಮಗೆ ನನ್ನ ಮನಃಪೂರ್ವಕವಾಗಿ ಧನ್ಯವಾದಗಳು
🙏🔱🚩

13 hours ago | [YT] | 1

VasanthaaHarish 🙏

#ಮಕರ #ಸಂಕ್ರಾಂತಿ ಹಬ್ಬವನ್ನು ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನ ಆಚರಿಸಲಾಗುತ್ತದೆ. ಇದು ಸಂಪೂರ್ಣವಾಗಿ ಸೌರ ಗಣನೆಯ ಮೇಲೆ ಆಧಾರಿತ ಹಬ್ಬ — ಚಂದ್ರಮಾನ (ತಿಥಿ) ಇಲ್ಲಿ ಪ್ರಧಾನವಲ್ಲ.
14 ಅಥವಾ 15 ಯಾವುದು ಸರಿಯಾದು?
ಸಾಮಾನ್ಯವಾಗಿ ಬಹುತೇಕ ವರ್ಷಗಳಲ್ಲಿ ಜನವರಿ 14ರಂದು ಮಕರ ಸಂಕ್ರಾಂತಿ ಬರುತ್ತದೆ.
ಆದರೆ ಸೂರ್ಯನ ಮಕರ ಪ್ರವೇಶ ಮದ್ಯಾಹ್ನದ ನಂತರ, ಸಂಜೆ ಅಥವಾ ರಾತ್ರಿ ಆಗಿದ್ದರೆ, ಶಾಸ್ತ್ರಾನುಸಾರವಾಗಿ ಮುಂದಿನ ದಿನ (ಜನವರಿ 15) ಹಬ್ಬವನ್ನು ಆಚರಿಸಬೇಕು.

ಶಾಸ್ತ್ರೋಕ್ತ ನಿಯಮ (ಸರಳವಾಗಿ):
ಸೂರ್ಯೋದಯಕ್ಕೂ ಮೊದಲು ಮಕರ ಸಂಕ್ರಾಂತಿ ಆಗಿದ್ದರೆ → ಅದೇ ದಿನ ಹಬ್ಬ
ಸೂರ್ಯೋದಯದ ನಂತರ ಮಕರ ಸಂಕ್ರಾಂತಿ ಆಗಿದ್ದರೆ → ಮುಂದಿನ ದಿನ ಹಬ್ಬ

ವೈಜ್ಞಾನಿಕ & ಧಾರ್ಮಿಕ ಮಹತ್ವ:
ಈ ದಿನದಿಂದ ಉತ್ತರಾಯಣ ಆರಂಭವಾಗುತ್ತದೆ.

ಸೂರ್ಯನ ಕಿರಣಗಳು ಭೂಮಿಯ ಮೇಲೆ ಹೆಚ್ಚು ಅನುಕೂಲಕರವಾಗುತ್ತವೆ.
ಕೃಷಿ, ಆರೋಗ್ಯ, ಶಕ್ತಿ ಮತ್ತು ಸಮೃದ್ಧಿಗೆ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

#ಸಂಕ್ರಾಂತಿ #ಮಕರಸಂಕ್ರಾಂತಿ #Uttarayana

2 days ago | [YT] | 0

VasanthaaHarish 🙏

#ನಮ್ಮ ತಟ್ಟೆ, ನಮ್ಮ ಬಾಳೆಲೆ, ನಮ್ಮ ಊಟ....ಒಂದು ಚಿಂತನೆ !

ಹೇಗೆ ಊಟದ ತಟ್ಟೆಯಲ್ಲಿ ಪ್ರತಿಯೊಂದು ಪದಾರ್ಥದ ಒಂದು fix ಸ್ಥಳ ಇರುತ್ತದೆಯೋ, ಅದರ ಹಾಗೆ, ನಮ್ಮ ಹೃದಯದಲ್ಲೂ, ನಮ್ಮ ನಮ್ಮವರ ಒಂದು ಸ್ಥಳ ...?

ಊಟದ ತಟ್ಟೆಯಲ್ಲಿ, ಮೊದಲು ಬಡಿಸುವುದು ಉಪ್ಪು.. ಅದೂ ತಟ್ಟೆಯ left ಬದಿಯಿಂದ, ಆದರೂ ಅದು ಯಾವಾಗಲೂ right..

ಏಕೆ..? ಹೇಳಿ..

ಉಪ್ಪು ಇಲ್ಲದ ಅಡುಗೆ, ರುಚಿಯೇ ಇಲ್ಲ.. ಇದೇ ನಮ್ಮ ಜೀವನದ ಸಾರ..
ಜನ್ಮ ಕೊಟ್ಟ ತಂದೆ ತಾಯಿ ಯರು, ಇವರು ನಮ್ಮ ತಟ್ಟೆಯ ಉಪ್ಪು ಇದ್ದ ಹಾಗೆ, ಇವರು ಇಲ್ಲದೆ ಇದ್ದರೆ, ಜೀವನ ಉಪ್ಪು ಇಲ್ಲದ ಊಟದ ತರಹ..

ತಟ್ಟೆಯ ಮಧ್ಯ ಭಾಗದಲ್ಲಿ,
ಅನ್ನ, ಸಾಂಬಾರ್..
ಚೆನ್ನಾಗಿ ಕಲಿಸಿಯೇ ತಿನ್ನುವುದು,
ಒಮ್ಮೆ ಚೆನ್ನಾಗಿ, ಅನ್ನ ಸಾಂಬಾರ್ ಕಲಿಸಿದರೆ ಆಯಿತು, ಮತ್ತೆ ಅದನ್ನು ಬೇರೆ ಬೇರೆ ಮಾಡಲು ಬಾರದು.
ಹೀಗೆಯೇ ಇರುವುದು ...
ಪತಿ ಪತ್ನಿಯ ಸಂಬಂಧಗಳು..
ಸ್ವಲ್ಪವೇ ಕಾಲದಲ್ಲಿ ಹೇಗೆ ಒಂದು ಜೀವಿಯಾಗಿ ಬೆಸೆದು ಹೋಗುತ್ತಾರೆ..

ಈ ಅನ್ನ ಸಾಂಬಾರ್ ಮೇಲೆ ಸ್ವಲ್ಪ ಘಮ ಘಮಿಸುವ ತುಪ್ಪ ಹಾಕಿದರೆ..? ಇನ್ನಷ್ಟು ರುಚಿ ಬರುವುದಲ್ಲವೆ..?
ಈ ರುಚಿ, ನಮ್ಮ ಜೀವನದಲ್ಲಿ ತರುವುದು ನಮ್ಮ ಮಕ್ಕಳು..
ಮಕ್ಕಳು ಇಲ್ಲದೇ ಜೀವನ ನೀರಸ..
ಅಜ್ಜ ಅಜ್ಜಿಯರಂತೂ, ಹಾಲಿನ ಮೇಲಿನ ಕೆನೆಯ ತರಹ..

ಅನ್ನ ಸಾಂಬಾರು ಆದ ಮೇಲೆ ..
ಬರುವುದು ಬಿಸಿ ಬಿಸಿ ರೊಟ್ಟಿ , ಇಲ್ಲವೇ ಮೆತ್ತನೆ ಪದರು, ಪದರು, ಬಿಸಿ ಚಪಾತಿ..ನೀವು ಹೇಗೆ ಲಟ್ಟಿಸುವಿರಿ, ಹಾಗೆ ಆಕಾರ ತೆಗೆದು ಕೊಳ್ಳುವುದು ಚಪಾತಿ.. ಚೆನ್ನಾಗಿ ಸುಟ್ಟು , ಉಪಯೋಗ ಮಾಡಿದರೆ, ಎಲ್ಲಾ ಪಲ್ಲೆ, ಚಟ್ನಿಯ ಜೊತೆ ತಿನ್ನಬಹುದು.
ಇದು, ನಮ್ಮ ಮನೆಗೆ ಬರುವ ಸೊಸೆಯ ಹಾಗೆ..
ಎಲ್ಲರ ಜೊತೆ, ಸಮರಸ ಆಗಿ ಬಾಳುವಳು..
ತಟ್ಟೆಯ ಬಲಗಡೆ ಇರುವುದು, ಪಲ್ಲೆ...
ರಸಪಲ್ಲೆ, ಸುಕ್ಕಾ ಭಾಜಿ,..
ಕೆಲವೊಮ್ಮೆ ಬಹಳ ಖಾರ..
ಕೆಲವೊಮ್ಮೆ ಹುಳಿ ಜಾಸ್ತಿ.
ಆದರೆ ಹೇಗೂ ಇರಲಿ, ತಟ್ಟೆಯಲ್ಲಿ ಇರಬೇಕು ಪಲ್ಲೆ.. ಸ್ವಲ್ಪ ಇದ್ದರೂ ಪರವಾಗಿಲ್ಲ, ಒಂದೇ ಪಲ್ಲೆ ಇದ್ದರೂ ಪರವಾಗಿಲ್ಲ..
ಆದರೆ ಬೇಕು ತಟ್ಟೆಯಲ್ಲಿ...
ಇವು... ನಮ್ಮ ಒಡ ಹುಟ್ಟಿದವರು..
ಅಕ್ಕ, ತಂಗಿ, ಅಣ್ಣ ತಮ್ಮ, ಯಾರೇ ಇರಲಿ..
ಇರಲಿ ಒಬ್ಬಿಬ್ಬರು.. ಮಸ್ತಿ ಮಾಡಲು, ತುಂಟ ನಗೆ, ಒಮ್ಮೊಮ್ಮೆ ಜಗಳ.. ಮಾಡಲೂ..ಬೇಕು..

ತಟ್ಟೆಯಲ್ಲಿ, ಒಂದು ಬಟ್ಟಲಲ್ಲಿ ಹುಣ್ಣಿಮೆ, ಅಮಾವಾಸ್ಯೆ ...ದಿನಗಳಲ್ಲಿ ಯಾವುದೋ ಒಂದು ಸಿಹಿ ತಿಂಡಿ..
ನಾವು ದಿನಾಲೂ ತಿನ್ನುವುದಿಲ್ಲ , ಆ sweets.. ಆದರೆ ಆ ಸಿಹಿ ತಿಂಡಿ ಇದ್ದರೆ ಊಟಕ್ಕೆ ಒಂದು ವಿಶೇಷ ಕಳೆ... ಇವರೇ ನಮ್ಮ ನೆಂಟರು..
ದಿನಾಲೂ ಭೇಟಿ ಆಗದ....ನೆಂಟರು..ಆಪ್ತರು..
ಇವರು ಭೇಟಿ ಆದರೆ, ಮನಸ್ಸಿಗೆ ಏನೋ ಒಂದು ತರಹ ದ ಸಿಹಿ ತಿಂಡಿ ತಿಂದ ಹಾಗೆ ಸಂತೃಪ್ತಿ...
ಅವರೊಡನೆ ಹರಟೆ... ಸುಖ ದುಃಖ ಹಂಚಿ ಕೊಳ್ಳುವುದು.. ಮನಸ್ಸು ಹಗುರಗೊಳಿಸುವ ಸುಲಭ ವಿಧಾನ..

ತಟ್ಟೆಯ ಉಪ್ಪಿನ ಕೆಳಗೆ ಇರುವದು ಲಿಂಬೆ ಹಣ್ಣಿನ ತುಣುಕು, ಚಟ್ನಿ, ಉಪ್ಪಿನ ಕಾಯಿ,
ಇವು ಊಟದ ಸ್ವಾದ ಹೆಚ್ಚಿಸುವ ವ್ಯಂಜನಗಳು.. ಬಾಯಿಗೆ ಚಟ್ ಪಟ ಸ್ವಾದ ಹೆಚ್ಚಿಸುವ item ಗಳು..
ಈ ಕೆಲಸ ಮಾಡುವರು... ನಮ್ಮ ಗೆಳೆಯರು... ನಮ್ಮ ಜೀವನದ ಸುಖ ದುಃಖ ಗಳಲ್ಲಿ ಜೊತೆಗೆ ಇರುವವರು..
ಚಟ್ನಿಯ ನಂತರ ಬರುವದು ಕೋಸಂಬರಿ,
ಯಾವುದೇ ಪ್ರಕಾರದ್ದೇ ಇರಲಿ ಅದು ಪೌಷ್ಠಿಕ ಆಹಾರ.. ಒಮ್ಮೊಮ್ಮೆ ಪಲ್ಲೆ ಇರದೇ ಇದ್ದರೂ, ಕೋಸಂಬರಿ ಜೊತೆ ಊಟ ಮುಗಿಸಬಹುದು. ಕೋಸಂಬರಿ ಪಲ್ಲೆಯ ಕೆಲಸ ಮಾಡಿತು.
ಪಲ್ಲೆ ಯ ಬದಲಿಗೆ, ಸಹಾಯ ಮಾಡುವ ಕೆಲಸ ಕೋಸಂಬರಿ ಮಾಡುತ್ತದೆ..
ಕೋಸಂಬರಿ ಅಂದರೆ, ನಮ್ಮ ನೆರೆ ಹೊರೆಯವರು, ಇವರೇ ಆಪದ್ಬಾಂಧವರು,

ಈ ವ್ಯಂಜನಗಳ ಮತ್ತು ನಮ್ಮ ಸಂಬಂಧಗಳ ತುಲನೆ ಮಾಡುತ್ತಿಲ್ಲ. ಆದರೆ ಹೋಲಿಕೆ ಮಾಡುವ ಪ್ರಯತ್ನ ಮಾಡಿದೆ..ಅಷ್ಟೇ..

ಪ್ರತ್ಯೇಕ ಪದಾರ್ಥಕ್ಕೂ ಒಂದು ವಿಶಿಷ್ಟ ಗುಣಧರ್ಮ ಇರುತ್ತದೆ.
ಉಪ್ಪಿನ ರುಚಿ, ಸಕ್ಕರೆಯ ಸಿಹಿ, ಹುಣಸೆಯ ಹುಳಿ, ಮೆಣಸಿನ ಕಾಯಿಯ ಖಾರ, ಮೆಂತೆ ಪಲ್ಲೆಯ ರುಚಿ, ಹಾಗಲ ಕಾಯಿಯ ಕಹಿ...
ಹೀಗೆಂದು ಹಾಗಲ ಕಾಯಿ ಪಲ್ಲೆ ತಿನ್ನುವುದನ್ನು ಬಿಡುತ್ತೇವೆ ಏನು...?
ಅದಕ್ಕೆ ಬೆಲ್ಲ, ಹುಣಸೆ ಹುಳಿ ಸೇರಿಸಿ ರುಚಿಯಾದ ಪಲ್ಲೆ ಮಾಡುತ್ತೇವೆ... ಅಲ್ಲವೇ..?
ಹೀಗೆಯೇ ಸಂಬಂಧ ಗಳಲ್ಲಿ ಕೂಡ ಒಮ್ಮೊಮ್ಮೆ ಕಹಿ ರುಚಿ ಬರುತ್ತದೆ..
ಹಾಗೆಂದ ಮಾತ್ರಕ್ಕೇ ಸಂಬಂಧ ಗಳನ್ನ ಬಿಡಲಿಕ್ಕೆ ಆಗ್ತದೇನು..?
ಅದಕ್ಕೆ ಕೆಲವು ಸಿಹಿ, ಹುಳಿ ಸೇರಿಸಿ ಮತ್ತೆ ಜೋಡಿಸಲಿಕ್ಕೆ ಆಗುವುದಿಲ್ಲವೇನು..?
ಇಲ್ಲದಿದ್ದರೆ ನಮ್ಮ taste ಸ್ವಲ್ಪ change ಮಾಡಬೇಕಾಗುತ್ತದೆ. ಏಕೆ..?
ಸಂಬಂಧಗಳು ಮುರಿದು ಬೀಳಬಾರದು.
ಪಂಚ ಪಕ್ವಾನ್ನಗಳನ್ನ ಗಬ ಗಬ ತಿಂದರೆ ಬಿಕ್ಕು ಹತ್ತಲಿಕ್ಕೆ , ನೀರು ಕುಡಿಯ ಬೇಕು.

ಯಾವುದೂ ಅತೀ ಆಯಿತು ಎಂದರೆ ಅದು ಕೆಡುವುದೇ...
ಸಂಬಂಧಗಳಲ್ಲಿ ಕೂಡ, ಅತೀ ಸಲುಗೆ ಆದರೂ ಅದು ಒಳ್ಳೆಯದಲ್ಲ.
ಸಂಬಂಧಗಳು ಕೆಲವೊಮ್ಮೆ ನಮಗೋಸ್ಕರ.. ಅವನ್ನು ಎಂದೂ ಕಳೆದುಕೊಳ್ಳಬಾರದು...
ಸಿಟ್ಟು, ಲೋಭ, ಪ್ರೇಮ, ಮಾಯೆ,
ಆದರ, ಸಮ್ಮಾನ, ಮರ್ಯಾದೆ ಇವೆಲ್ಲ ತಮ್ಮ ತಮ್ಮ ಪ್ರಮಾಣದಲ್ಲಿ ಕೂಡಿದರೆ...
Ready ಆಯಿತು.... ರುಚಿಯಾದ ಊಟದ ತಟ್ಟೆ.

🙏🙏🙏

2 days ago | [YT] | 2

VasanthaaHarish 🙏

ಸ್ನೇಹಿತರೇ , ಇಂದು " #ವೈಕುಂಠ ಏಕಾದಶಿ " ಸನಾತನೀಯ ಭಾರತೀಯ ಆಚರಣೆಗಳು ಹಲವು ವೈಶಿಷ್ಟ್ಯಗಳಿಂದ ಕೂಡಿದ್ದು ಕೆಲವು ಆಚರಣೆಗಳಿಗೆ ಅದಕ್ಕೇ ಆದ ಪರ್ವ ಕಾಲವೂ ನಿಗದಿಯಾಗಿದೆ ಎನ್ನಬಹುದು - ಇಂತಹುದರಲ್ಲಿ " ವೈಕುಂಠ ಏಕಾದಶೀ ಆಚರಣೆಯೂ ಒಂದು !
ವೈಕುಂಠ ಏಕಾದಶಿ ಧನುರ್ಮಾಸದ ಶುಕ್ಲ ಏಕಾದಶಿ ತಿಥಿಯಂದು ಬರುತ್ತದೆ . ಈ ಏಕಾದಶಿಯಂದು ವೈಕುಂಠ ದ್ವಾರದ ಬಾಗಿಲು ತೆರೆದಿರುತ್ತದೆ ಎಂಬ ಧೃಢವಾದ ನಂಬಿಕೆ ಇದೆ ! ಇಂದು ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಜೊತೆಗೆ ವೈಕುಂಠದ್ವಾರದ ಮೂಲಕವೇ ಭಕ್ತಾದಿಗಳು ಹೋಗಿ ಪರಮಾತ್ಮನ ದಿವ್ಯದರ್ಶನ ಪಡೆದರೆ ಸರ್ವಪಾಪಗಳಿಂದಲೂ ವಿಮುಕ್ತಿ ಪಡೆಯಲು ಶ್ರೀನಿವಾಸನ ದೇವಸ್ಥಾನ ವಿರುವ ಎಲ್ಲಾ ಕಡೆಯೂ ಸುವ್ಯವಸ್ಥೆ ಮಾಡಿರುತ್ತಾರೆ !! " ಈ ವೈಕುಂಠ ಏಕಾದಶಿಯಂದು ಉಪವಾಸ ಮಾಡಿದರೆ ೨೩ ಏಕಾದಶಿ ವ್ರತ ಮಾಡಿದ ಫಲ ದೊರಕುವುದಂತೆ " !! ಹಾಗೂ ಮರೆಯದೇ " ಎಲ್ಲರೂ #ವಿಷ್ಣುಸಹಸ್ರನಾಮ ಪಾರಾಯಣವನ್ನು ಮಾಡಬೇಕು .
ಶ್ರೀ ಮನ್ಮಹಾವಿಷ್ಣುವು ಇಬ್ಬರು ಹರಿದ್ವೇಷಿಯಾಗಿದ್ದ ದೈತ್ಯರಿಗಾಗಿಯೇ ವೈಕುಂಠಧಾಮದ ಬಾಗಿಲನ್ನು ತೆರೆದನಂತೆ ! ದೈತ್ಯರ ಬೇಡಿಕೆಯಂತೆ ಯಾರು ಈ ಏಕಾದಶಿಯಂದು ತಮ್ಮ ಕಥೆಯನ್ನು ಕೇಳಿ ಮಹಾವಿಷ್ಣುವನ್ನು ವೈಕುಂಠದ್ವಾರದ ಮೂಲಕ ನೋಡುವರೋ ಅವರಿಗೆ ಮರಣಾನಂತರ ವೈಕುಂಠಪ್ರವೇಶಿಸಿ ಮುಕ್ತಿದೊರಕುವಂತಾಗಲಿ ಎಂದು ಬೇಡಿದರಂತೆ ! ಅಂದಿನಿಂದ ಮಾರ್ಗಶಿರ ಶುಕ್ಲಪಕ್ಷದ ಏಕಾದಶಿಯು ವೈಕುಂಠ ಏಕಾದಶಿ ಎಂದು ಪರಿಗಣಿತವಾಗಿ ಅದಕ್ಕೆ ಎಲ್ಲಾ ವಿಷ್ಣುವಿನ ದೇವಾಲಯಗಳಲ್ಲೂ ವೈಕುಂಠದ ಬಾಗಿಲು ನಿರ್ಮಿಸಿ ಅಲಂಕರಿಸಿ ಅದರ ಮೇಲ್ಗಡೆ ಪದ್ಮಾವತಿ ಲಕ್ಷ್ಮೀನಾರಾಯಣರ ಸುಂದರ ವಿಗ್ರಹಗಳಿಗೆ ಪೂಜಿಸಿ ಅಲಂಕರಿಸಿಟ್ಟು ಕೆಳಗೆ ವೈಕುಂಠದ್ವಾರದ ಮೂಲಕ ಭಕ್ತರು ಪ್ರವೇಶ ಮಾಡುತ್ತಾ ದೇವರ ದರ್ಶನ ಪಡೆದು ಪುನೀತರಾಗುವ ಸತ್ಸಂಪ್ರದಾಯ ನೆಡೆದುಬಂದಿದೆ !!
ಸ್ನೇಹಿತರೇ ಬೆಂಗಳೂರಿನಲ್ಲಿ ಎಲ್ಲೆಲ್ಲಿ ಶ್ರೀನಿವಾಸ ದೇವಸ್ಥಾನ , ಕೃಷ್ಣಮಂದಿರಗಳಿದೆಯೋ ಅಲ್ಲೆಲ್ಲಾ ವೈಕುಂಠದ ಬಾಗಿಲು ಮಾಡಿರುತ್ತಾರೆ ! ಧನುರ್ಮಾಸ ಎಲ್ಲರೂ ಬೇಗನೇ ಎದ್ದು ವೈಕುಂಠದ ದ್ವಾರದ ಮೂಲಕ ಹೋಗಿ ( ವಾಪಸ್ ಬರೋಣ !) ದೇವರದಿವ್ಯ ದರ್ಶನ ಪಡೆದು ಏಕಾದಶಿ ವ್ರತವನ್ನು ಅವರವರ ಆರೋಗ್ಯ ದೃಷ್ಟಿಗೆ ಅನುಕೂಲವಾಗುವಂತೆ ಆಚರಿಸಿ ಪುಣ್ಯ ಸಂಪಾದಿಸೋಣ ! ವೈಕುಂಠದ್ವಾರದ ಮೂಲಕ ಸ್ವಾಮಿಯ ದಿವ್ಯದರ್ಶನ ಪಡೆಯೋಣ !
ಇಂದು ವಿಶೇಷವಾಗಿ ಪ್ರತೀವರ್ಷವೂ ಲಕ್ಷಗಟ್ಟಲೆ ಲಾಡುಉಂಡೆ ಮಾಡಿಸಿ ನಗರದ ಎಲ್ಲಾ ದೇವಾಲಯಗಳಿಗೂ ತಲುಪಿಸುತ್ತಾರೆ ! ಸ್ನೇಹಿತರೇ ಮನೆಗೆ ಸಮೀಪವಿರುವ ದೇವಸ್ಥಾನಕ್ಕೆ ಹೋಗಿ ಈ ಸದವಕಾಶವನ್ನು ಉಪಯೋಗಿಸಿಕೊಂಡು ಪುಣ್ಯಫಲ ಪಡೆಯೋಣ .

2 weeks ago (edited) | [YT] | 10

VasanthaaHarish 🙏

#ಸುಬ್ರಹ್ಮಣ್ಯಾಯ ದೇವಾಯ ಸ್ಕಂದಾಯ ಬ್ರಹ್ಮಚಾರಿಣೇ ಕುಂಡಲಿನೀ ಸ್ವರೂಪಾಯ ವಲ್ಲೀಶಾಯ ನಮಃ "
#ಸ್ನೇಹಿತರೇ , ನಾಳೆ #ತುಳುವ ಷಷ್ಠಿ "#ಘಾಟಿ ಸುಬ್ರಮ್ಹಣ್ಯ ಸ್ವಾಮಿಯ ಬ್ರಹ್ಮರಥೋತ್ಸವ " ನೆಡೆಯಲಿದೆ ! ನಿಮಗೆ ಈ ಹಿಂದೆ ತಿಳಿಸಿದಂತೆ #ಚಂಪಾಷಷ್ಠಿ , #ತುಳುವ ಷಷ್ಠಿ , #ಕುಮಾರ ಷಷ್ಠಿ ಈ #ಮೂರೂ ಷಷ್ಠಿ ಗಳಿಗೆ ವಿಶೇಷ ಮಹತ್ವವಿದೆ !
₹ಚಂಪಾ ಷಷ್ಠೀ #ಕುಕ್ಕೆಯಲ್ಲಿ ಬ್ರಹ್ಮ ರಥೋತ್ಸವ ನೆಡೆದಿತ್ತು , ನಾಳೆ ಘಾಟಿಯಲ್ಲಿ , ಮುಂದಿನ ತಿಂಗಳು ನಮ್ಮ #ಶೇಷಾದ್ರಿಪುರದಲ್ಲಿರುವ #ಕುಮಾರ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬೆಳ್ಳಿ ರಥೋತ್ಸವ ಜರುಗಲಿದೆ .
ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ನೆಡೆಯುತ್ತದೆ , ಸುಮಾರು ೬೦೦ ವರ್ಷಗಳ ಇತಿಹಾಸವಿರುವ ಘಾಟಿ ಪುಣ್ಯಕ್ಷೇತ್ರ ದಲ್ಲಿ #ಸುಬ್ರಮಣ್ಯ ಸರ್ಪರೂಪದಲ್ಲಿ ನೆಲೆಸಿದ್ದಾನೆ ! ಗರ್ಭಗುಡಿಯಲ್ಲಿರುವ ಏಕಶಿಲೆ ವಿಗ್ರಹದ
ಮುಂಭಾಗದಲ್ಲಿ ಸುಬ್ರಮಣ್ಯ ಹಿಂಭಾಗದಲ್ಲಿ ನರಸಿಂಹಸ್ವಾಮಿ ನೆಲೆಸಿರುವುದು ಈ ಕ್ಷೇತ್ರದಲ್ಲಿ ಬಿಟ್ಟರೆ ಇನ್ನೆಲ್ಲೂ ಇಲ್ಲ !! ಸರ್ಪದೋಷ , ಕುಜದೋಷ ಇರುವವರು ದೇವಾಲಯ ಹಿಂಭಾಗದಲ್ಲಿರುವ ಕಲ್ಯಾಣಿಯಲ್ಲಿ ಸ್ನಾನಮಾಡಿ ಸ್ವಾಮಿಯ ಸೇವೆ ಮಾಡಿದರೆ ದೋಷನಿವಾರಣೆಯಾಗಿ ಸರ್ವರೋಗಗಳೂ ವಾಸಿಯಾಗುತ್ತದೆ ಎಂದೇ ಭಕ್ತರು ಬಲವಾಗಿ ನಂಬಿದ್ದಾರೆ ! ಇಂದಿನ ರಥೋತ್ಸವಕ್ಕೆ ರಾಜ್ಯದ ಎಲ್ಲಾಕಡೆಯಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸೇವೆಮಾಡಿ ಸ್ವಾಮಿಯ ದರ್ಶನ ಪಡೆದು
ತಮ್ಮ ಹರಕೆ ಸಲ್ಲಿಸುತ್ತಾ ಕೋರಿಕೆಗಳನ್ನು ಕೋರುತ್ತಾ ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಪಡುತ್ತಾರೆ !! ದೇವಾಲಯದ ಸುತ್ತಲೂ ಅನೇಕ ದೇವಸ್ಥಾನ ಗಳಿವೆ , #ಪ್ರಕೃತಿಯ ಮಡಿಲಲ್ಲಿ ಓಡಾಡುತ್ತಾ ಅನೇಕ ಇತಿಹಾಹ ಪ್ರಸಿದ್ಧ ಸ್ಥಳಗಳನ್ನು ವೀಕ್ಷಿಸಬಹುದು !
ದೇವಸ್ಥಾನದ ಸುತ್ತಮುತ್ತಲೂ ಬಹುದೊಡ್ಡ ಜಾತ್ರೆ ನೆರೆದಿರುತ್ತದೆ ! ತೇರಿನ ನಂತರ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆಯೂ ಇರುತ್ತದೆ ! ಸ್ವಾಮಿಯ ದರ್ಶನ ಪಡೆದು ತೇರಿನಲ್ಲಿ ಭಾಗವಹಿಸಿ , ಬೆಂಗಳೂರಿಗೆ ಬಹು ಹತ್ತಿರವಿರುವ ಘಾಟಿತೇರಿಗೆ ಜಾತ್ರೆಗೆ ಯಾರ್ಯಾರು ಹೊರಟಿದ್ದೀರಿ ?
#ರಥೋತ್ಸವದ ದಿವಸದ ಮತ್ತೊಂದು ಅತೀವಿಶೇಷವಾದದ್ದು -- " ಎತ್ತು ಎಮ್ಮೆ ಹಸುಗಳ ಜಾತ್ರೆ "
ಇಂದು ಇಲ್ಲಿಗೆ ರಾಜ್ಯದ ಎಲ್ಲಾ ಕಡೆಯಿಂದ ರಾಸುಗಳನ್ನು ಕರೆತರುತ್ತಾರೆ ! ರಾಸುಗಳ ವ್ಯಾಪಾರ ಬಹಳ ಜೋರಾಗಿರುತ್ತದೆ , ದಕ್ಷಿಣ ಭಾರತದಲ್ಲೇ ಬಹಳ ಪ್ರಸಿದ್ಧ ವಾದ "ದನಗಳ ಜಾತ್ರೆ " ಇದಾಗಿದೆ !! ಈಗಾಗಲೇ ಒಂದು ವಾರದ ಮೊದಲಿಂದಲೇ ಊರ ಹೊರಗಡೆ ದೊಡ್ಡ ಬಯಲಿನಲ್ಲಿ ಅವರಿಗೇ ನಿಗದಿ ಪಡಿಸಿರುವ ಸ್ಥಳಗಳಲ್ಲಿ ಎತ್ತುಗಳನ್ನು ಕಟ್ಟಿ , ಅದಕ್ಕೆ ಸಾಕಷ್ಟು ಮೇವುಗಳನ್ನು ಹಾಕುತ್ತಾ ಬೀಡು ಬಿಟ್ಟಿರುವವರು - ರಾಸುಗಳ ವ್ಯಾಪಾರ ವಹಿವಾಟು ನೆಡೆಸುತ್ತಾ ಛಳಿಯಲ್ಲಿ ಅಲ್ಲಲ್ಲಿ ತೆರೆದಿರುವ ಹೋಟೆಲ್ ಅಂಗಡಿಗಳಲ್ಲಿ ಚಾ ಮಂಡಕ್ಕಿ ಮೆಣಸಿನಕಾಯಿ ಬೋಂಡಾ ತಿನ್ನುತ್ತಾ ಉತ್ಸಾಹದಿಂದ ಓಡಾಡುತ್ತಾ ವ್ಯಾಪಾರ ಕುದುರಿಸುವಲ್ಲಿ ನಿರತರಾಗಿರುತ್ತಾರೆ !!
ಒಟ್ಟಿನಲ್ಲಿ ನಮ್ಮಲ್ಲಿ ಈ ರೀತಿಯ ಉತ್ಸವ ಜಾತ್ರೆಗಳು ನೆಂಟರಿಷ್ಟರು , ಸ್ನೇಹಿತರುಗಳು ಎಲ್ಲರನ್ನೂ ಒಟ್ಟಾಗಿ ಸೇರಿಸಲು , ದೇವರಸೇವೆ ಮಾಡಲು , ಜಾತ್ರೆಗಳಲ್ಲಿ ಸಂತಸದಿಂದ ಜೊತೆಜೊತೆಯಾಗಿ ಸುತ್ತಾಡಿ ಹೊಸ ಚೈತನ್ಯವನ್ನು ಮನಸ್ಸಿಗೆ ತುಂಬಲು ಅತ್ಯಂತ ಅವಶ್ಯಕ ಸಾಧನಗಳಾಗಿವೆ ಎನ್ನಬಹುದು ಅಲ್ಲವೇ ? ಏನಂತೀರಿ ?
ಮೂರು ಷಷ್ಠಿ ಗಳ ವಿಶೇಷತೆ ಬಗ್ಗೆ ಹಿಂದೆಯೇ ತಿಳಿಸಿದ್ದೆ - ನಾಳೆಯೂ ಬೆಳಗ್ಗೆ ಶುದ್ಧರಾಗಿ ಸುಬ್ರಮಣ್ಯ ಸ್ವಾಮಿಗೆ ಮನೆಯಲ್ಲಾಗಲೀ , ದೇವಸ್ಥಾನದಲ್ಲಿರುವ ಸುಬ್ರಮಣ್ಯ ಸ್ವಾಮಿಗಾಗಲೀ (ನಾಗರಕಲ್ಲಿಗೆ ) ತನಿ ಎರೆದು ( ಹಾಲು ಹಾಕಿ ) ತುಪ್ಪದ ದೀಪ ಬೆಳಗಿದರೆ ಸುಬ್ರಮಣ್ಯ ಸ್ವಾಮಿಯ ಅನುಗ್ರಹದಿಂದ ಎಲ್ಲಾ ದೋಷಗಳೂ , ಅನಾರೋಗ್ಯವೂ ಪರಿಹಾರವಾಗುವುದರಲ್ಲಿ ಸಂಶಯವೇ ಇಲ್ಲ !!!
" ಸುಬ್ರಹ್ಮಣ್ಯಾಯ ದೇವಾಯ ಸ್ಕಂದಾಯ ಬ್ರಹ್ಮಚಾರಿಣೇ
ಕುಂಡಲಿನೀ ಸ್ವರೂಪಾಯ ವಲ್ಲೀಶಾಯ ನಮಃ "
🙏🙏🙏🙏🙏🙏🙏🙏🙏🙏🙏🙏🙏🙏

2 weeks ago (edited) | [YT] | 7

VasanthaaHarish 🙏

ಸ್ನೇಹಿತರೇ , ನಾಳೆಯಿಂದ " #ಧನುರ್ಮಾಸ ವ್ರತ🚩🙏 ಪೂಜಾಚರಣೆ ಆರಂಭ " - #ಚೈತ್ರ ವೈಶಾಖ ಮಾಸದಿಂದ ಪ್ರತಿಯೊಂದು ಮಾಸಗಳಿಗೂ ಅದರದೇ ಆದಂತಹ ವೈಶಿಷ್ಟ್ಯವಿದೆ ! ದೇವರನ್ನು ಧ್ಯಾನಿಸಲು , ಪೂಜಿಸಲು ಪ್ರೀತಿಸಲು ಒಳ್ಳೆಯ ಕೆಲಸಮಾಡಲು ಧನುರ್ಮಾಸ ಅತಿಶ್ರೇಷ್ಠ ! ಧನುರ್ಮಾಸವನ್ನು ಶೂನ್ಯಮಾಸವೆಂದು ತಪ್ಪು ತಿಳಿದಿದ್ದಾರೆ , ಇದನ್ನು ಮಾರ್ಗಶೀರ್ಷ ಮಾಸವೆಂದೂ ಕರೆಯುತ್ತಾರೆ . ಹಿಂದೂಪಂಚಾಗದ ಹನ್ನೆರಡು ಮಾಸಗಳಲ್ಲಿ ಧನುರ್ಮಾಸಕ್ಕೆ ವಿಶೇಷ ಮಹತ್ವವಿದೆ ! ಶ್ರೀ ಕೃಷ್ಣನೂ ಸಹ #ಭಗವದ್ಗೀತೆಯಲ್ಲಿ " ಮಾಸಾನಾಂ ಮಾರ್ಗಶೀಷೋಸ್ಮಿ" ಎಂದೇ ಹೇಳಿರುವುದು ಭಗವಂತನಿಗೆ ಬಹುಪ್ರಿಯವಾದ ಮಾಸ ! ಸೂರ್ಯನು ಒಂದುರಾಶಿಯಿಂದ ಮತ್ತೊಂದಕ್ಕೆ ಪ್ರವೇಶಿಸಲು ಒಂದುತಿಂಗಳ ಅವಧಿಬೇಕಾಗುತ್ತದೆ ಅದರಂತೆ ಧನುರಾಶಿಯನ್ನು ಪ್ರವೇಶಿಸಿ ಮಕರರಾಶಿಗೆ ಬರಲು ತಿಂಗಳುಬೇಕು ಈ ತಿಂಗಳ ಅವಧಿಯನ್ನು #ಧನುರ್ಮಾಸವೆಂದು ಕರೆಯಲಾಗುತ್ತದೆ . #ಉತ್ಥಾನದ್ವಾದಶಿಯಂದು ಯೋಗನಿದ್ರೆಯಿಂದ ಏಳುವ #ಮಹಾವಿಷ್ಣುವಿಗೆ ಧನುರ್ಮಾಸವು ಅರುಣೋದಯದ ಕಾಲವೆಂದು ಹೇಳಲಾಗುತ್ತದೆ , ಹಾಗಾಗಿ ಈಮಾಸದಲ್ಲಿ ಶ್ರೀಹರಿಯ ಪೂಜೆಗೆ ಬಹಳ ಶ್ರೇಷ್ಠವಾದದ್ದು ಮತ್ತು ಶೈವ ಆರಾಧಕರು ಶಿವನ ಆರಾಧನೆಯನ್ನು ಮಾಡುತ್ತಾರೆ .
ಉತ್ತರಾಯಣ ಪುಣ್ಯಕಾಲ ಮತ್ತು ದಕ್ಷಿಣಾಯನ ಪುಣ್ಯಕಾಲ ಎಂದು ಹಿಂದೂಪಂಚಾಂಗವನ್ನು ವಿಭಜಿಸಿದ್ದಾರೆ - ನಮ್ಮ ಹಾಗು ದೇವತೆಗಳ ಕಾಲಗಣನೆಗೂ ವ್ಯತ್ಯಾಸವಿದೆ -- ದೇವತೆಗಳ ಒಂದುದಿನ ನಮಗೆ ಒಂದುವರ್ಷ ! ಮಾರ್ಗಶೀರಮಾಸ ದೇವತೆಗಳಿಗೆ ಶ್ರೇಷ್ಠ ಮಹೂರ್ತವಿರುವ ಸಮಯ, ಬ್ರಹ್ಮಮಹೂರ್ತವಿದ್ದಂತೆ ,ದೇವತೆಗಳಿಗೆ ಶ್ರೇಷ್ಠವಾದ ಸಮಯದಲ್ಲೇ ನಾವು ದೈವಾರಾಧನೆ ಮಾಡಬೇಕು , ಬ್ರಾಹ್ಮೀಮಹೂರ್ತದಲ್ಲೇ ಎದ್ದು ದೇಹವನ್ನು ದಂಡಿಸಿ ಛಳಿಯಲ್ಲಿ ಸ್ನಾನಮಾಡಿ ಮಡಿಯುಟ್ಟು ಭಕ್ತಿಯಿಂದ ಪೂಜಿಸಿ ಆರಾಧಿಸಿದರೆ ಸಕಲ ಇಷ್ಟಾರ್ಥಗಳೂ ಸಿದ್ಧಿಸುವುದು ಅಧಿಕಸ್ಯ ಅಧಿಕಫಲ ಸಿಗುವುದು ಖಂಡಿತ .
ಈ ಮಾಸದಲ್ಲಿ ಪ್ರತೀದಿವಸವೂ ಬೆಳಗಿನಜಾವದಲ್ಲೇ ಮಹಾವಿಷ್ಣುವಿನ ಜೊತೆ ಲಕ್ಷ್ಮೀದೇವಿಯ ಪೂಜೆಯನ್ನು ಮಾಡಿ ಹುಗ್ಗಿಯ ನೈವೇದ್ಯದ ಸಂಪ್ರದಾಯ ಆಚರಣೆ ನೆಡೆದುಬಂದಿದೆ -- " #ಧನುರ್ಮಾಸದಲ್ಲಿ ದೇವರಿಗೆ ಬೆಳಗಿನಜಾವದಲ್ಲೇ ಭಕ್ತಿಯಿಂದ ಪೂಜಿಸಿ ಹುಗ್ಗಿ #ನೈವೇದ್ಯ ಮಾಡುವುದರಿಂದ ಸಕಲ ಇಷ್ಟಾರ್ಥಗಳೂ ನೆರವೇರಿ ಉತ್ತರೋತ್ತರ ಅಭಿವೃದ್ಧಿ ಯಶಸ್ಸು ದೊರೆಯುವುದೆಂದು ತಿಳಿಸಿದ್ದಾರೆ "! ಪ್ರತೀದಿನವೂ ಬೆಳಗಿನಜಾವದಲ್ಲಿ ಎಲ್ಲಾ ದೇವಸ್ಥಾನ , ಮಠ ಮಂದಿರಗಳಲ್ಲೂ ಪೂಜೆ ಮಾಡಿ #ಹುಗ್ಗಿ #ಪೊಂಗಲ್ #ಸಿಹಿಹುಗ್ಗಿ #ನೈವೇದ್ಯ ಮಾಡಿ ಮಹಾಮಂಗಳಾರತಿ ಮಾಡಿ ೯ ಗಂಟೆಗೆಲ್ಲಾ ಬಾಗಿಲುಹಾಕೇ ಬಿಡುತ್ತಾರೆ ಈ ತಿಂಗಳುಪೂರ್ತಿ !!
ನಮ್ಮ ಹಿರಿಯರು #ಶಾಸ್ತ್ರಪುರಾಣಗಳು ಮಾಡಿರುವ ಆಚಾರ ಸಂಪ್ರದಾಯಗಳು ವಿಜ್ಞಾನಕ್ಕೂ ಹತ್ತಿರವಾಗೇ ಇರುತ್ತದೆ ! #ಚಳಿಗಾಲದಲ್ಲಿ ಬೇಗಎದ್ದು ಪೂಜಿಸಿ ದೇವರಿಗೆ ನೈವೇದ್ಯ ಮಾಡಿರುವ #ಹುಗ್ಗಿ - #ಮೆಣಸು ಜೀರಿಗೆ ಶುಂಠಿ ಹೆಸರುಬೇಳೆ ಅಕ್ಕಿಯ ಮಿಶ್ರಣದ ಹುಗ್ಗಿ ತಿಂದರೇ #ಶೀತ #ಕಫ ಕರಗಿ ಆರೋಗ್ಯದ ದೃಷ್ಟಿಯಿಂದ ಅದೆಷ್ಟು ಹಿತ ಅನುಕೂಲ ಅಲ್ಲವೇ ?
ಇನ್ನು #ತಿರುಪತಿಯಲ್ಲಿ ಮತ್ತು ಎಲ್ಲಾ ಶ್ರೀನಿವಾಸನ ಆಂಜನೇಯ ದೇವಸ್ಥಾನಗಳಲ್ಲಿ ಈ ಸಮಯದಲ್ಲಿ ತಿರುಪ್ಪಾವೈ ಭಜನೆ ಹಾಡು ಏರ್ಡಿಸಿರುತ್ತಾರೆ -- ಶ್ರೀನಿವಾಸ ದೇವರು ಭೂಲೋಕದಲ್ಲಿ ವೆಂಟೇಶನಾಗಿ ನೆಲೆಸಿದಾಗ ಭೂದೇವಿ ಸಾಮಾನ್ಯ ಹುಡುಗಿಯಾಗಿ ಜನಿಸಿ ಪ್ರತೀದಿವಸವೂ ಗಿಡದಿಂದ ಹೂಗಳನ್ನು ಬಿಡಿಸಿ ಮಾಲೆಕಟ್ಟಿ ಅದನ್ನು ಮೊದಲು ತಾನು ಹಾಕಿಕೊಂಡು ಚೆನ್ನಾಗಿದೆಯೆಂದು ಪರೀಕ್ಷಿಸಿದ ನಂತರವೇ ವೆಂಕಟೇಶನ ಕೊರಳಿಗೆ ಹಾಕುತ್ತಿದ್ದಳಂತೆ ! ಇದೇ ಧನುರ್ಮಾಸದಲ್ಲಿ ತನ್ನ ಪ್ರೀತಿಯ #ವೆಂಕಟೇಶನಿಗಾಗಿ ತಮಿಳಿನಲ್ಲಿ ತಿರುಪ್ಪಾವೈ ಮೂವತ್ತು ಕವಿತೆಗಳ ಗ್ರಂಥವನ್ನು ರಚಿಸಿದಳಂತೆ ! ಇಂದಿಗೂ #ಆಂಡಾಳ್ ರಚಿಸಿರುವ ಕೃತಿಗಳನ್ನೇ ಹಾಡಿ ದೇವರನ್ನು ಎಬ್ಬಿಸುತ್ತಾರೆ ಮತ್ತು #ಆಂಡಾಳ್ ರಚಿಸಿರುವ ಲಾಲಿಹಾಡು ಹಾಡೇ ಮಲಗಿಸುವುದು ಪದ್ಧತಿಯಾಗಿದೆ ಧನುರ್ಮಾಸದಲ್ಲಿ ವಿಶೇಷವಾಗಿ ಎಲ್ಲರೂ ಸೇರಿ ಸಾಮೂಹಿಕವಾಗಿ ತಿರುಪ್ಪಾವೈ ಪಠಿಸುತ್ತಾರೆ .
ಭಗವಂತನಿಗೆ ಪ್ರಿಯವಾದ ಧನುರ್ಮಾಸದ ಪೂಜಾ ಚರಣೆಯನ್ನು ಭಕ್ತಿಯಿಂದ ಮಾಡಿ ಸಕಲಪಾಪಗಳಿಂದ ಬಿಡುಗಡೆ ಪಡೆದು ಅಧಿಕಸ್ಯ ಅಧಿಕ ಪುಣ್ಯಫಲವನ್ನು ಪಡೆಯೋಣ , ಪ್ರತಿದಿನ #ವಿಷ್ಣುಸಹಸ್ರನಾಮ ಪಾರಾಯಣ , #ಲಕ್ಷ್ಮೀ ಸಹಸ್ರನಾಮ , #ಭಗವದ್ಗೀತಾ ಪಾರಾಯಣ ಮಾಡಬೇಕು. ಒಂದುದಿನ ಮಾಡುವ ಧನುರ್ಮಾಸದ ಪೂಜೆ ಆಚರಣೆಯಿಂದ ಸಾವಿರದಿನದ ಪೂಜಾಫಲ ದೊರೆಯುವುದಂತೆ ! ಬ್ರಾಹ್ಮೀಮಹೂರ್ತದಲ್ಲಿ ಪೂಜೆಮಾಡಿ ಶ್ರೀಹರಿಗೆ ಹುಗ್ಗಿ ಅರ್ಪಿಸಿದರೆ - ಶತ್ರುಜಯ , ಧನಲಾಭ , ಆಯುರಾರೋಗ್ಯ ಬಯಸಿದ ಇಷ್ಠಾರ್ಥ ದೊರಕುವುದೆಂದು ಪುರಾಣಗಳಲ್ಲಿ ಹಿರಿಯರು ತಿಳಿಸಿದ್ದಾರೆ .🙏🚩🔱🪔

4 weeks ago (edited) | [YT] | 3

VasanthaaHarish 🙏

|•|🪔🙏#ಚಂಡೀಶ್ವರ ಅಥವ #ಚಂಡಿಕೇಶ್ವರ |•|🪔🙏
ಚಂಡಿಕೇಶ್ವರನಿಗೆ "ಚಿಟಿಕೆ" ಹೊಡೆಯುವುದು ಅಥವ "ಚಪ್ಪಾಳೆ ತಟ್ಟುವುದು" ಏಕೆ.?

ಎಲ್ಲ ಶಿವಾಲಯಗಳಲ್ಲಿ, #ಶಿವ, #ಪಾರ್ವತಿ, #ವಿನಾಯಕ , #ಸುಬ್ರಹ್ಮಣ್ಯ , #ನಂದಿ , #ಬೃಂಗಿ ಹಾಗೂ #ಚಂಡಿಕೇಶ್ವರ ಮೂರ್ತಿಗಳನ್ನು ಕಾಣುವುದು ಸಾಮಾನ್ಯ.

|#ಚಂಡಿಕೇಶ್ವರ|

ಶಿವಾಲಯಗಳಲ್ಲಿ ಚಂಡಿಕೇಶ್ವರನ ದರ್ಶನಕ್ಕೆ ಬಂದಾಗ ಚಿಟಿಕೆ ಹೊಡೆದು, ಚಪ್ಪಾಳೆ ತಟ್ಟಿ ಚಂಡಿಕೇಶ್ವರನ ದರ್ಶನ ಮಾಡುವುದು ವಾಡಿಕೆ.
ಬಹುತೇಕ ಭಕ್ತಾದಿಗಳಿಗೆ ಚಂಡಿಕೇಶ್ವರನಿಗೆ "ಕಿವುಡು" ಎಂಬ ಅಭಿಪ್ರಾಯ.
ಆದರೆ ಚಂಡಿಕೇಶ್ವರನಿಗೆ ಕಿವುಡು ಎಂಬ ನಮ್ಮ ಅಭಿಪ್ರಾಯ, ತಪ್ಪಾದ ತಿಳುವಳಿಕೆ.

|ಈ #ಚಂಡಿಕೇಶ್ವರ ಯಾರು.? |

ದಕ್ಷಿಣ ಭಾರತದ '#ಮಣಿಯಾರ್' ನದಿಯ ತಟದಲ್ಲಿನ ಒಂದು ಅಗ್ರಹಾರ. ವೇದಾಧ್ಯಯನಕ್ಕೆ ಪ್ರಖ್ಯಾತವಾದ, ಪ್ರಶಸ್ತವಾದ, ಪ್ರದೇಶ.
ಅಲ್ಲಿ 'ಈಚದತ್ತ' ಎಂಬ ಪ್ರಖ್ಯಾತ ಬ್ರಾಹ್ಮಣ ಪಂಡಿತ ಇದ್ದ. ಅವನ ಮಗ #ಚಂದೇಶ ಶರ್ಮ (#ಚಂದ್ರೇಶ್ವರ ಶರ್ಮ). ವೇದಾಧ್ಯಯನದಲ್ಲಿ ತಂದೆಯಂತೆ ತಾನೂ ಪಾರಂಗತನು, ಆರಾಧ್ಯ ದೈವವಾದ ಪರಶಿವನ ಮಹಾ ಭಕ್ತ.

ಪ್ರತಿನಿತ್ಯವೂ #ಮಣಿಯಾರ್ ನದಿಯಲ್ಲಿ ಸ್ನಾನಮಾಡಿ ಹಿಂತಿರುಗಿ, #ದೇವತಾರಾಧನೆ, ವೇದಾಧ್ಯಯನದಲ್ಲಿ ತೊಡಗುತ್ತಿದ್ದ.

ಒಂದು ದಿನ ನಿತ್ಯಕರ್ಮಗಳನ್ನು ಮುಗಿಸಿ ಹಿಂತಿರುಗುವಾಗ ಒಬ್ಬ ಗೋಪಾಲಕ ತನ್ನ ಗೋವನ್ನು(ಹಸು) ಹಿಗ್ಗಾ ಮುಗ್ಗ ಹೊಡೆಯುತ್ತಿದ್ದ. ಇದನ್ನು ಕಂಡ ಚಂದೇಶ ಶರ್ಮನಿಗೆ ನೋವಾಯಿತು. ಅವನಲ್ಲಿಗೆ ಹೋಗಿ...!
ಎಲೈ #ಗೋಪಾಲಕನೇ, ಗೋವು ದೈವ ಸಮಾನವಾದುದು. ಅದನ್ನು ಹಿಂಸಿಸುವುದು ಸರಿಯಲ್ಲ. ನಿನಗೆ ಈ ಗೋಪಾಲನೆ ಕಷ್ಟವಾದಲ್ಲಿ , ನಾನು ಅದರ ಪಾಲನೆ ಮಾಡುವುದಾಗಿ ತಿಳಿಸಿದ.
ಮೊದಲೇ ಬಹಳ ಕೋಪದಲ್ಲಿದ್ದ #ಗೋಪಾಲಕ, ಸರಿ, ನನ್ನ ಎಲ್ಲ ಗೋವುಗಳ ಪೋಷಣೆಯ ಜವಾಬ್ದಾರಿ ಇಂದಿನಿಂದ ನಿನ್ನದು. ಆದರೆ, ಅದರ ಮೇಲಿನ ಹಕ್ಕು‌ ಅಥವ ಅವುಗಳಿಂದ ಉತ್ಪಾದನೆ ಆಗುವ ಹಾಲಿನಲ್ಲಿ ನಿನಗೆ ಯಾವುದೇ ಪಾಲು ಸಿಗದು ಎಂದು ತಿಳಿಸಿದ.

ಗೋಪಾಲಕನ ಷರತ್ತುಗಳಿಗೆ ಒಪ್ಪಿದ ಚಂದೇಶ ಶರ್ಮ, ಸಂತೋಷದಿಂದ ಗೋವುಗಳ ಪಾಲನೆಯ ಜೊತೆಗೆ ನದಿಯ ತಟದಲ್ಲಿ ವೇದಾಧ್ಯಯನ ಮುಂದುವರೆಸಿದ.
ಇವನ ಪೋಷಣೆ, ಪ್ರೀತಿಗೆ ಗೋವುಗಳು ಸಹಾ ಸಂತೋಷದಿಂದ ಚಂದೇಶ ಶರ್ಮನನ್ನು ಪ್ರೀತಿಸತೊಡಗಿದವು.

#ಚಂದೇಶ ಗೋವುಗಳಿಗೆ ಆಹಾರ ನೀಡುವಸಲುವಾಗಿ, ಎಲೆಗಳು, ಗಿಡಗಳನ್ನು ಕತ್ತರಿಸಲು ಸದಾಕಾಲ ತನ್ನಲ್ಲಿ ಕೊಡಲಿಯನ್ನ ಇಟ್ಟುಕೊಳ್ಳುತ್ತಿದ್ದ.
ದೇವಾಲಯಗಳಲ್ಲಿ ಚಂಡಿಕೇಶ್ವರ ಮೂರ್ತಿಯ ಕೈಯಲ್ಲಿ ಕೊಡಲಿ ಇರುವುದನ್ನು ನಾವು ಗಮನಿಸಬಹುದು.

#ಚಂದೇಶ ಶರ್ಮ ಗೋಪಾಲನೆಯ ವೇಳೆಯಲ್ಲಿ ಪಕ್ಕದ ನದಿಯಿಂದ ಮರಳು ತಂದು ಅದರಿಂದ ಒಂದು ಲಿಂಗಾಕೃತಿಯ ಶಿವಲಿಂಗವನ್ನು ತಯಾರಿಸಿ ಅಭಿಷೇಕ, ಪೂಜಾ ಕೈಂಕರ್ಯಗಳನ್ನು ಮಾಡಿ ವೇದಾಧ್ಯಯನದಲ್ಲಿ ತೊಡಗುತ್ತಿದ್ದ.

ಚಂದೇಶನ ಪೋಷಣೆಗೆ ಸಂತೋಷಗೊಂಡ ಗೋವುಗಳು, ಪ್ರೀತಿಯಿಂದ ತಾವಾಗಿಯೇ ಹಾಲು ಸುರಿಸಲು ಪ್ರಾಂಭಿಸಿದವು. ಗೋವುಗಳು ನೀಡಿದ ಹಾಲನ್ನು ಒಂದು ಮಣ್ಣಿನ ಮಡಕೆಯಲ್ಲಿ ಶೇಖರಿಸಿ ಮರಳಿನಿಂದ ತಯಾರಿಸಿದ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿದ್ದ.

ಒಂದು ದಿನ ಅಗ್ರಹಾರದ ಒಬ್ಬ ವ್ಯಕ್ತಿ, ಗೋವುಗಳು ತಾವಾಗಿಯೇ ಹಾಲು ನೀಡುತ್ತಿದ್ದು, ಅದನ್ನು ಚಂದೇಶನು ಲಿಂಗಕ್ಕೆ ಅಭಿಷೇಕ ಮಾಡುವುದನ್ನು ನೋಡಿದ. ಅಗ್ರಹಾರದಲ್ಲಿದ್ದ ಗೋವುಗಳ ಮಾಲೀಕನಿಗೆ ವಿಷಯ ತಿಳಿಸಿದ.

ವಿಷಯ ತಿಳಿದ ಗೋವುಗಳ ಮಾಲೀಕ, ಚಂದೇಶ ಶರ್ಮನ ತಂದೆಯ ಬಳಿ ದೂರು ನೀಡಿದ.

|ಅಲ್ಲಿ ನಡೆದದ್ದು ಏನು?|

ಮಗನ ಈ ವರ್ತನೆಯಿಂದ ಕೋಪಗೊಂಡ '#ಈಚದತ್ತ' ಮರುದಿನ ಅಲ್ಲಿ ಚಂದೇಶ ಮತ್ತು ಗೋವುಗಳ ವರ್ತನೆಯನ್ನು ನೋಡಲು ಖುದ್ದಾಗಿ ತೆರಳಿದ.
ಚಂದೇಶ ಇಹಲೋಕದ ಅರಿವೇ ಇಲ್ಲದೆ ಧ್ಯಾನ ಮಗ್ನನಾಗಿ ಮರಳಿನ ಲಿಂಗಕ್ಕೆ ಹಾಲಿನ ಅಭಿಷೇಕ ಮಾಡುತ್ತಿದ್ದ, ಗೋವುಗಳು ಸಹಾ ಇದನ್ನು ನೋಡುತ್ತಿದ್ದವು.
ಈಚದತ್ತ ಮಗನನ್ನು ಕರೆದ, ಕೂಗಿದ, ಅಲುಗಾಡಿಸಲು ಪ್ರಯತ್ನಿಸಿದ. ಧಾನ್ಯದಲ್ಲಿದ್ದ ಚಂದೇಶ ಯಾವುದಕ್ಕೂ ಎಚ್ಚರ ಆಗಲಿಲ್ಲ.
ಕೋಪಗೊಂಡ ಈಚದತ್ತ ಅಲ್ಲಿನ ಮಡಕೆಗಳಲ್ಲಿ ಇದ್ದ ಹಾಲನ್ನು ತನ್ನ ಕಾಲಿಂದ ಒದೆಯುತ್ತಾನೆ. ಹಾಲಿನ ಮಡಕೆ ಚೂರುಗಳು,ಮರಳಿನ ಲಿಂಗಕ್ಕೆ ತಾಗಿ ಲಿಂಗವು ಭಿನ್ನವಾಯಿತು.
ತಕ್ಷಣವೇ ಕಣ್ಣು ತೆರದ ಚಂದೇಶ, ತನ್ನ ಬಳಿ ಇದ್ದ ಕೊಡಲಿಯಿಂದ ತಂದೆಯ ಕಾಲುಗಳನ್ನು ಕತ್ತರಿಸಿದ.
ಯಾವ ಕಾಲಿನಿಂದ ಶಿವನ ಧ್ಯಾನವನ್ನು ಭಂಗ ಮಾಡಿ ಶಿವನಿಗೆ ಅಪಚಾರ ಮಾಡಿದೆಯೋ, ಆ ಕಾಲುಗಳಿಗೆ ಇದೇ ತಕ್ಕ ಶಾಸ್ತಿ ಎಂದ. ರಕ್ತದ ಮಡುವಿನಲ್ಲಿ ಈಚದತ್ತ ಒದ್ದಾಡುತ್ತಿದ್ದ.

|ಪ್ರತ್ಯಕ್ಷವಾದ ಪರಶಿವ|

ಚಂದೇಶ ಶರ್ಮ ತನ್ನ ಆರಾಧ್ಯದೈವವಾದ ಶಿವನ ಧ್ಯಾನಕ್ಕೆ ಅಪಚಾರ ಮಾಡಿದ ತನ್ನ ತಂದೆಯನ್ನೂ ಲೆಕ್ಕಿಸದೆ, ಕಾಲುಗಳನ್ನು ಕತ್ತರಿಸಿದ, ಚಂದೇಶನ ಪರಮ ಭಕ್ತಿಗೆ ಮೆಚ್ಚಿದ ಪರಶಿವ ಅಲ್ಲಿ ಪ್ರತ್ಯೇಕವಾದ.

| ಪರಶಿವನ ಕುಟುಂಬಕ್ಕೆ ಚಂದೇಶ ಶರ್ಮನ ಸೇರ್ಪಡೆ|
ಪ್ರತ್ಯೇಕ್ಷವಾದ ಪರಶಿವ, ಸಾಮಾನ್ಯ ಮಾನವನಾದ ಚಂದೇಶ ಶರ್ಮನ ಶ್ರದ್ಧೆ ಭಕ್ತಿಗೆ ಮೆಚ್ಚಿ, ಅಂದಿನಿಂದ ತನ್ನ ಕುಟುಂಬದ ಸದಸ್ಯರಾದ ಪಾರ್ವತಿ, ವಿನಾಯಕ, ಸುಬ್ರಹ್ಮಣ್ಯರ (ಮುರುಗ,ಮಣಿಕಂಟ) ಜೊತಗೆ, ಚಂದೇಶನನ್ನು ತನ್ನ ಮೂರನೇ ಮಗನಾಗಿ ಸ್ವೀಕರಿಸಿದ. ಈಚದತ್ತನಿಗೆ ಕಾಲುಗಳು ಮತ್ತೆ ಬರುವಂತೆ ಅನುಗ್ರಹಿಸಿದ.
ಪರಶಿವನು ಚಂದೇಶನಿಗೆ "ಚಂಡಿಕೇಶ್ವರ" ಎಂದು ಮರುನಾಮಕರಣ ಮಾಡಿದ.

|ಚಂಡಿಕೇಶ್ವರನಿಗೆ ಚಿಟಿಕೆ, ಚಪ್ಪಾಳೆ ಏಕೆ?|

ಶಿವ ಪುರಾಣದ ಉಲ್ಲೇಖದಂತೆ, ಚಂಡಿಕೇಶ್ವರ ಸದಾಕಾಲವೂ ಪರಶಿವನ ಧ್ಯಾನದಲ್ಲಿ ಮಗ್ನನಾಗಿರುತ್ತಾನೆ.

ಶಿವಾಲಕ್ಕೆ ತೆರಳುವ ಭಕ್ತರು, ಶಿವಾಲಯದಿಂದ ಚಂಡಿಕೇಶ್ವರನಿಗೆ ತಿಳಿಯದಂತೆ ಏನನ್ನೂ ಹೊರಗೆ ಕೊಂಡೊಯ್ಯುವಂತಿಲ್ಲ.

ಅದು ದೇವರ ಪ್ರಸಾದವಾಗಲಿ, ದೇವರ ನಿರ್ಮಾಲ್ಯವಾಗಲಿ, ಧ್ಯಾನದಲ್ಲಿ ಇರುವ ಚಂಡಿಕೇಶ್ವರನಿಗೆ ಚಿಟಿಕೆ, ಚಪ್ಪಾಳೆ ತಟ್ಟಿ, ನಮ್ಮತ್ತ ಚಂಡಿಕೇಶ್ವರನ ಗಮನ ಸೆಳೆದು, ನಂತರ ನಾವು ಹೊರಗೆ ತೆಗೆದುಕೊಂಡು ಹೋಗಬೇಕು.
ಹೊರಗೆ ಹೋಗುವ ನಿರ್ಮಾಲ್ಯಗಳಾದ ಬಿಲ್ವಪತ್ರೆ, ಹೂವ್ವು, ವಿಭೂತಿ ಅಥವ ಪ್ರಸಾದಗಳನ್ನು ಚಂಡಿಕೇಶ್ವರನಿಗೆ ತೋರಿಸಿಯೇ ಹೊರಗೆ ತೆಗೆದುಕೊಂಡು ಹೋಗಬೇಕೆಂಬ ನಿಯಮ ಉಂಟು.
ಹಾಗಾಗಿ ಚಂಡಿಕೇಶ್ವರನಿಗೆ ಚಿಟಿಕೆ, ಚಪ್ಪಾಳೆ ತಟ್ಟಿ, ನಿನಗೆ ತಿಳಿಯದಂತೆ ಏನನ್ನೂ ಇಲ್ಲಿಂದ ಹೊರಗೆ ತೆಗೆದುಕೊಂಡು ಹೋಗುತ್ತಿಲ್ಲ , ಎಂಬುದನ್ನು ತಿಳಿಸಿ ಹೊರಗೆ ಕೊಂಡೊಯ್ಯುವುದು‌ ಪದ್ದತಿ.

ಇಂದಿಗೂ ಶಿವಾಲಯಗಳಲ್ಲಿ ಹಿಂದಿನ ದಿನದ ಮೂರ್ತಿಗಳ ನಿರ್ಮಾಲ್ಯಗಳನ್ನು ತೆಗೆದು, ಚಂಡಿಕೇಶ್ವರನಿಗೆ ತೋರಿಸಿದ ನಂತರವೇ ವಿಸರ್ಜನೆ ಮಾಡುವ ಆಚಾರ ರೀತಿಯ ಪದ್ದತಿ ಉಂಟು.

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು
🙏🔱🚩🪔🙏🔱🚩🪔🙏🔱🚩🪔🙏🔱🚩🪔

4 weeks ago | [YT] | 5

VasanthaaHarish 🙏

#ಧನುರ್ಮಾಸ#ಆಚರಣೆ.🙏🔱
ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಮಾಸವೂ ಆತ್ಮೋನ್ನತಿಯ ಒಂದು ಹೆಜ್ಜೆಯಾಗಿದೆ. ಅವುಗಳಲ್ಲಿ ಧನುರ್ಮಾಸ (ಅಥವಾ #ಮಾರ್ಗಶಿರ ಮಾಸ) ವಿಶೇಷವಾದದ್ದು. ಈ ಮಾಸವು ಭೋಗಕ್ಕಿಂತ ಭಕ್ತಿಗೆ, ಆಸೆಗಿಂತ ಆತ್ಮಶುದ್ಧಿಗೆ ಪ್ರಾಮುಖ್ಯ ನೀಡುವ ಕಾಲವೆಂದು #ಪುರಾಣಗಳು ಸಾರುತ್ತವೆ.ಧನುರ್ಮಾಸ ಎಂದರೆ ಏನು?
#ಸೂರ್ಯನು ಧನು ರಾಶಿಗೆ ಪ್ರವೇಶಿಸುವ ಕ್ಷಣದಿಂದ ಆರಂಭವಾಗಿ ಮಕರ ರಾಶಿಗೆ ಪ್ರವೇಶಿಸುವವರೆಗೆ ಇರುವ ಅವಧಿಯೇ ಧನುರ್ಮಾಸ. ಸಾಮಾನ್ಯವಾಗಿ ಇದು #ಡಿಸೆಂಬರ್ ಮಧ್ಯದಿಂದ ಜನವರಿ ಮಧ್ಯವರೆಗೆ ಇರುತ್ತದೆ.
ಈ ಸಮಯದಲ್ಲಿ ದೇವತೆಗಳಿಗೆ ಬ್ರಹ್ಮ ಮುಹೂರ್ತವೇ
ಮಾನವರಿಗೆ ಅದು ಇನ್ನೂ ರಾತ್ರಿ,ಅದರರ್ಥ ಈ ಮಾಸವು ಆಧ್ಯಾತ್ಮಿಕ ಜಾಗೃತಿಯ ಕಾಲ.ಸೂರ್ಯನು ಧನು ರಾಶಿಗೆ ಪ್ರವೇಶಿಸುವ ಧನು ಸಂಕ್ರಾಂತಿದಿಂದ ಆರಂಭವಾಗುವ “#ಸೌರ ಮಾಸ” ಇದು; 2025–26ರಲ್ಲಿ ಧನುರ್ಮಾಸ ಡಿಸೆಂಬರ್ 16, 2025ರಿಂದ ಜನವರಿ 14, 2026ರವರೆಗೆ ಇರುವುದಾಗಿ ಪಂಚಾಂಗಗಳು ಸೂಚಿಸುತ್ತವೆ.ದೇವತೆಗಳ ಒಂದು ದಿನವು ಮಾನವ ಭೂಮಿಯಲ್ಲಿ ಒಂದು ವರ್ಷಕ್ಕೆ ಸಮ ಎಂದು ಹೇಳುವ ಕ್ರಮದಲ್ಲಿ, ಬೆಳಗಿನ ಬ್ರಹ್ಮ ಮುಹೂರ್ತ (ಸೂರ್ಯೋದಯಕ್ಕೂ ಸುಮಾರು 1.5 ಗಂಟೆ ಮೊದಲು) ‘#ದೇವರ ಪ್ರಭಾತ’ ಎಂದು ಧನುರ್ಮಾಸದಲ್ಲಿ ವಿಶೇಷ ಮಹತ್ವ ಹೊಂದಿದೆ.

ಧನುರ್ಮಾಸಕ್ಕೆ ಪುರಾಣಗಳಲ್ಲಿ ಅತ್ಯಂತ ಮಹತ್ವ ನೀಡಲಾಗಿದೆ.ಭಾಗವತ ಪುರಾಣದಲ್ಲಿ ಶ್ರೀಕೃಷ್ಣನು ಹೇಳುತ್ತಾನೆ. “#ಮಾಸಾನಾಂ #ಮಾರ್ಗಶೀರ್ಷೋಹಂ
ಅಂದರೆ – ಮಾಸಗಳಲ್ಲಿ ನಾನು ಮಾರ್ಗಶಿರ ಮಾಸವೇ. ಇದರಿಂದ ಈ ಮಾಸವು ಭಗವಂತನಿಗೆ ಅತ್ಯಂತ ಪ್ರಿಯವೆಂದು ತಿಳಿದುಬರುತ್ತದೆ.ಪದ್ಮ ಪುರಾಣದಲ್ಲಿ
ಧನುರ್ಮಾಸದಲ್ಲಿ ಮಾಡಿದ ಸ್ನಾನ, ದಾನ, ಜಪ, ಪೂಜೆಗಳು ಸಹಸ್ರಗುಣ ಫಲ ನೀಡುತ್ತವೆ ಎಂದು ಹೇಳಲಾಗಿದೆ.ವಿಷ್ಣು ಪುರಾಣದಲ್ಲಿ,ಪಾಪಕ್ಷಯ,ಮನಶುದ್ಧಿ
ಮೋಕ್ಷಸಾಧನೆ ಸಾಧ್ಯವೆಂದು ಉಲ್ಲೇಖವಿದೆ.

ಪ್ರತಿದಿನ ಬೆಳಗಿನ #ಬ್ರಹ್ಮಮುಹೂರ್ತದಲ್ಲಿ ಎದ್ದು, ಸಂತೋಷದಿಂದ ಸ್ನಾನ ಮಾಡಿ, ಮನೆಯ ದೇವರ ಬಳಿ ದೀಪ, ಧೂಪ, ಹೂ, ತಾಜಾ ತಂಬಿಟ್ಟು/ಪಾಯಸ/ಸಾತ್ವಿಕ ನೈವೇದ್ಯಗಳಿಂದ ಶ್ರೀವಿಷ್ಣು–ಲಕ್ಷ್ಮೀ ಪೂಜೆ ಮಾಡಬಹುದು.
#ವಿಷ್ಣು ಸಹಸ್ರನಾಮ, ₹ಪುರಷಸೂಕ್ತ,#ನಾರಾಯಣೋಪನಿ ಷತ್ #ಪಠಣ, #ತಿರುಪ್ಪಾವೈ #ಪಾರಾಯಣ, #ಭಗವದ್ಗೀತಾ ಅಧ್ಯಾಯ ಓದುವುದು ಇತ್ಯಾದಿ #ಜಪ,#ಧ್ಯಾನ, ಪಾರಾಯಣ ಕ್ಕೆ ಈ ಮಾಸವನ್ನು ಸಮರ್ಪಿಸುವುದು ಶ್ರೇಷ್ಠ. ದೇವಾಲಯ ಗಳಿಗೆ ದಾನ, ಅನ್ನಸಂತರ್ಪಣೆ, ಗೀತ–ಭಜನೆಗಳಲ್ಲಿ ಭಾಗವಹಿಸುವುದು, ಸಾದಾ ಸಾತ್ವಿಕ ಜೀವನ,ಅಹಿಂಸಾ, ಸತ್ಯಾಚರಣೆ, ಇಂದ್ರಿಯನಿಗ್ರಹ ಇವು ಧನುರ್ಮಾಸದ ಆಧುನಿಕ ರೂಪದ ತಪಸ್ಸಾಗಬಹುದು.

#ಧನುರ್ಮಾಸದ ಧಾರ್ಮಿಕ–ಆಧ್ಯಾತ್ಮಿಕ ಸಂದೇಶ
ಈ ಕಾಲವನ್ನು “ಭೌತಿಕ ಜೀವನಕ್ಕಿಂತ ಮೇಲೆ ಏರಿ, ಪ್ರಾತಃಕಾಲವನ್ನು ದೇವರಿಗಾಗಿ ಮೀಸಲಿಡುವ ಪರಿಶುದ್ಧ ಉಪವಾಸ,ಉತ್ಥಾನ,ಸ್ಮರಣೆಯ ಮಾಸವೆಂದು ಭಾವಿಸುವ ದರ್ಶನ ಶೈಲಿ ಇದೆ.ಶಾಸ್ತ್ರೋಕ್ತವಾಗಿ, ಧನುರ್ಮಾಸದಲ್ಲಿ ಪ್ರಾತಃಕಾಲೀನ ಪೂಜೆ–ಸ್ಮರಣೆ ಮಾಡಿದವರಿಗೆ ಆರೋಗ್ಯ, ಐಶ್ವರ್ಯ, ಸಂಪತ್ತು, ಸತ್ಸಂಸ್ಕಾರ ಸಂಸಾರ, ಹಲವಾರು ಜನ್ಮಗಳ ಮಟ್ಟಿಗೆ ಭಕ್ತರ ಜೀವನದಲ್ಲಿ ವಿಷ್ಣು ಸಾನ್ನಿಧ್ಯ ಇರುತ್ತದೆ ಎಂದು ಮಹಾತ್ಮ್ಯಗಳು ವರ್ಣಿಸುತ್ತವೆ.
✔️ ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ
✔️ ದೇವರ ನಾಮಸ್ಮರಣೆ
✔️ ಸಾತ್ವಿಕ ಆಹಾರ
✔️ ಇಂದ್ರಿಯ ನಿಯಂತ್ರಣ
✔️ ದಾನ ಮತ್ತು ಸೇವೆ,ಇದು ದೇಹವನ್ನು ಹಿಂಸಿಸುವ ವ್ರತವಲ್ಲ,ಮನಸ್ಸನ್ನು ಶುದ್ಧಗೊಳಿಸುವ ಸಾಧನೆ.ಇವತ್ತಿನ ಕಾಲದಲ್ಲಿ ಧನುರ್ಮಾಸವನ್ನು ಹೇಗೆ ಆಚರಿಸಬಹುದು ಎಂದರೆ ಇಂದಿನ ವೇಗದ ಜೀವನದಲ್ಲಿ ಶಾಸ್ತ್ರದ ಎಲ್ಲ ನಿಯಮಗಳನ್ನು ಅಕ್ಷರಶಃ ಪಾಲಿಸುವುದು ಕಷ್ಟ. ಆದರೆ ಆತ್ಮಾರ್ಥವನ್ನು ಉಳಿಸಿಕೊಂಡು ಆಚರಿಸುವುದೇ ಮುಖ್ಯ.
1. ಬೆಳಗಿನ ಹೊತ್ತಿನಲ್ಲಿ ಕನಿಷ್ಠ 10–15 ನಿಮಿಷ ಮೌನ ಅಥವಾ ಜಪ.
2. ದಿನಕ್ಕೆ ಒಮ್ಮೆ ಭಗವಂತನ ಸ್ಮರಣೆ ಅಥವಾ ಶ್ಲೋಕ ಪಠಣ.
3. ಸಾಧ್ಯವಾದಷ್ಟು ಸಾತ್ವಿಕ ಆಹಾರ
4. ಸಾಮಾಜಿಕ ಜಾಲತಾಣಕ್ಕಿಂತ ಸ್ವಲ್ಪ ಸಮಯ ಸ್ವಯಂ ಚಿಂತನೆಗೆ ಪ್ರಯತ್ನ.
5. ಕನಿಷ್ಠ ಒಬ್ಬರಿಗೆ ಸಹಾಯ – ಅನ್ನ, ಬಟ್ಟೆ, ಮಾತು ಅಥವಾ ಸಮಯ.ಇವುಗಳೇ ಇಂದಿನ ಧನುರ್ಮಾಸದ ನಿಜವಾದ ಆಚರಣೆ ಆಗಬಹುದು ನೀವು ಮಾಡಿದಲ್ಲಿ.

ಧನುರ್ಮಾಸದ ತಾತ್ವಿಕ ಅರ್ಥ ಧನುರ್ಮಾಸ ನಮಗೆ ಒಂದು ಮಹತ್ವದ ಪಾಠ ಕಲಿಸುತ್ತದೆ.“ಭೋಗದಿಂದಲ್ಲ, ಭಕ್ತಿಯಿಂದ ಬದುಕು ಶ್ರೀಮಂತವಾಗುತ್ತದೆ.
ಹೊರಗಿನ ತಂಪಿನ ನಡುವೆ,ಒಳಗಿನ ಅಹಂಕಾರ ಕರಗಬೇಕು.ಹೊರಗಿನ ಮೌನದ ನಡುವೆ,ಒಳಗಿನ ಶಬ್ದ ನಿಂತು,ಆತ್ಮ ಮಾತನಾಡಬೇಕು.ಧನುರ್ಮಾಸ ಎಂದರೆ ಕೇವಲ ಒಂದು ಕಾಲಘಟ್ಟವಲ್ಲ.ಅದು ನಮ್ಮೊಳಗಿನ ಅಶಾಂತಿಯನ್ನು ಶಮನಗೊಳಿಸುವ ಅವಕಾಶ.ಈ ಮಾಸದಲ್ಲಿ,ದೇವರನ್ನು ಹುಡುಕುವುದಕ್ಕಿಂತ
ನಮ್ಮೊಳಗಿನ ಮನುಷ್ಯನನ್ನು ಕಂಡುಕೊಳ್ಳುವುದು ಮುಖ್ಯ.
ಧನ್ಯವಾದಗಳು.🚩🙏🔱

1 month ago | [YT] | 5

VasanthaaHarish 🙏

#ಪೂಜಾ#ಸಂಕಲ್ಪ#ಮಂತ್ರ🙏🚩🔱

ಪೂಜಾ #ಸಂಕಲ್ಪ ಮಂತ್ರದ ಬಗ್ಗೆ ಓದುಗರೊಬ್ಬರು ಕೇಳಿದ್ದಾರೆ. ಪೂಜೆ ಆರಂಭದಲ್ಲಿ ಸಂಕಲ್ಪ ಮಾಡುತ್ತೀವಿ. ಸಂಕಲ್ಪ - ಅಂದರೆ ನಿರ್ಧಾರ, ನಿರ್ಣಯ, ಚಿತ್ತ. ಈ ದಿನ ಈ ಪೂಜೆ ಮಾಡುತ್ತ ಇದ್ದೀನಿ ಅಂತ ನಿರ್ಧಾರ
ಮಾಡುವುದೇ ಸಂಕಲ್ಪ. ಸಂಕಲ್ಪ ಮಾಡುವಾಗ
ಆ ದಿನದ ಸಂವತ್ಸರ, ಋತು , ಮಾಸ, ಪಕ್ಷ, ವಾರ, ತಿಥಿ,
ನಕ್ಷತ್ರವನ್ನು ಹೆಸರಿಸಬೇಕು.

#ಶ್ರೀ ಗಣೇಶಾಯ ನಮಃ || #ಶ್ರೀ ಗುರುಭ್ಯೋ ನಮಃ || #ಶ್ರೀ ಕುಲದೇವತಾಭ್ಯೋ ನಮಃ | #ಇಷ್ಟದೇವತಾಭ್ಯೋ ನಮಃ |  #ಗ್ರಾಮದೇವತಾಭ್ಯೋ ನಮಃ | #ಸ್ಥಾನದೇವತಾಭ್ಯೋ ನಮಃ | #ಆದಿತ್ಯಾದಿನವಗ್ರಹ ದೇವತಾಭ್ಯೋ ನಮಃ |    #ಸರ್ವೇಭ್ಯೋ ದೇವೇಭ್ಯೋ ನಮಃ | #ಸರ್ವೇಭ್ಯೋ ಬ್ರಾಹ್ಮಣೇಭ್ಯೋ ನಮಃ | #ಏತತ್ಕರ್ಮಪ್ರಧಾನದೇವತಾಭ್ಯೋ ನಮಃ |

(ಇಲ್ಲಿ #ಕುಲದೇವತಾ, #ಇಷ್ಟದೇವತಾ ಎಂದ ಕಡೆಯಲ್ಲಾ ನಿಮ್ಮ #ಮನೆ #ದೇವರ, ನಿಮ್ಮ #ಇಷ್ಟ #ದೇವರ ಹೆಸರನ್ನು ಹೇಳಬಹುದು)

#ಸಂಕಲ್ಪ:

( ಈ ದಿನ ಪೂಜೆಯನ್ನು ಮಾಡುತ್ತೇನೆ ಎಂದು ನಿರ್ಧಾರಿಸುವುದೇ ಸಂಕಲ್ಪ )
( ಹೂ ಮತ್ತು ಅಕ್ಷತೆಯನ್ನು ಕೈಯಲ್ಲಿ ಹಿಡಿದು, ಬಲ ತೊಡೆಯ ಮೇಲೆ ಎಡ ಕೈ ಕೆಳಗೆ ಬಲ ಕೈ ಮೇಲೆ ಇಟ್ಟುಕೊಂಡು )

#ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ
ದ್ವಿತೀಯ ಪರಾರ್ಧೇ ಶ್ವೇತ ವರಾಹ ಕಲ್ಪೇ ವೈವಸ್ವತ
ಮನ್ವಂತರೇ ಕಲಿಯುಗೇ ಪ್ರಥಮ ಪಾದೇ
ಜಂಬೋದ್ವೀಪೇ ಭರತವರ್ಷೇ ಭರತಖಂಡೇ
ಗೋದಾವರ್ಯಾಃ ದಕ್ಷಿಣೇ ತೀರೇ ಶಾಲೇವಾಹನಶಖೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಚಾಂದ್ರಮಾನೇ ಪ್ರಭವಾದಿ ಷಷ್ಟಿ
ಸಂವತ್ಸರಾಣಾಂ ಮಧ್ಯೇ .....ನಾಮ ಸಂವತ್ಸರೇ,
ಉತ್ತರಾಯನೇ/ದಕ್ಷಿಣಾಯನೇ ,... ಋತೌ , .... ಮಾಸೇ ,ಶುಕ್ಲ/ಕೃಷ್ಣ ಪಕ್ಷೇ , ... ತಿಥಿಯಾಂ , ... ವಾಸರ ಯುಕ್ತಾಯಾಂ , ಶುಭ ನಕ್ಷತ್ರ, ಶುಭಯೋಗ ಶುಭ ಕರಣ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ , ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮಸ್ಥೈರ್ಯ ವಿಜಯ ವೀರ್ಯ ಅಭಯ ಆಯುರಾರೋಗ್ಯ ಐಶ್ವರ್ಯಾಭಿವೃದ್ಧ್ಯರ್ಥಂ ಸಮಸ್ತ ದುರಿತೋಪಶಾಂತ್ಯರ್ಥಂ ಸಮಸ್ತ
ಸನ್ಮಂಗಳಾರ್ಥಂ ಸಮಸ್ತಾಭ್ಯುದಯಾರ್ಥಂ ಚ
ಧರ್ಮಾರ್ಥ ಕಾಮಮೋಕ್ಷ ಚತುರ್ವಿಧ ಫಲ
ಪುರುಷಾರ್ಥ ಸಿಧ್ಧ್ಯರ್ಥಂ ಶ್ರೀ ....(ದೇವರ ಹೆಸರು) ಪ್ರೀತ್ಯರ್ಥಂ ಯಾವಚ್ಛಕ್ತಿ
ಧ್ಯಾನಾವಾಹನಾದಿ ಷೋಡಶೋಪಚಾರ
ಪೂಜಾಂ ಕರಿಷ್ಯೇ.

#ಉದಾಹರಣೆ : ಈ ವರ್ಷ ವಿನಾಯಕ ಚತುರ್ಥಿ - ಭಾನುವಾರ ಬಂದಿತ್ತು.
ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ............ಚಾಂದ್ರಮಾನೇ ಪ್ರಭವಾದಿ ಷಷ್ಟಿ ಸಂವತ್ಸರಾಣಾಂ ಮಧ್ಯೇ ...... ನಾಮ ಸಂವತ್ಸರೇ, ದಕ್ಷಿಣಾಯನೇ ,ವರ್ಷ ಋತೌ , ಭಾದ್ರಪದ ಮಾಸೇ ,ಶುಕ್ಲ ಪಕ್ಷೇ, ಚತುರ್ಥಿ ತಿಥಿಯಾಂ ,
ಭಾನು ವಾಸರ ಯುಕ್ತಾಯಾಂ , ಶುಭ ನಕ್ಷತ್ರ, ಶುಭಯೋಗ ಶುಭ ಕರಣ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ ................ ಪುರುಷಾರ್ಥ ಸಿಧ್ಧ್ಯರ್ಥಂ ಶ್ರೀ ವರಸಿದ್ಧಿ ವಿನಾಯಕ ಸ್ವಾಮೀ (ದೇವರ ಹೆಸರು) ಪ್ರೀತ್ಯರ್ಥಂ ಯಾವಚ್ಛಕ್ತಿ ಧ್ಯಾನಾವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ.

#(days of the week) ವಾಸರ
#Sunday: ಭಾನು ವಾಸರ;
#Monday: ಇಂದು/ಸೊಮ ವಾಸರ;
#Tuesday: ಭೌಮ ವಾಸರ;
#Wednesday: ಸೌಮ್ಯ ವಾಸರ;
#Thursday: ಗುರು ವಾಸರ;
#Friday: ಬೃಗು ವಾಸರ;
#Saturday: ಸ್ಥಿರ ವಾಸರ

#ಮಾಸಗಳು - #12 ಋತುಗಳು - 6
1.
#ಚೈತ್ರ
2.
#ವೈಶಾಖ
#ವಸಂತ ಋತು
3.
#ಜ್ಯೇಷ್ಠ
4.
#ಆಷಾಢ
#ಗ್ರೀಷ್ಮ ಋತು
5.
#ಶ್ರಾವಣ
6.
#ಭಾದ್ರಪದ
#ವರ್ಷ ಋತು
7.
#ಆಶ್ವಯುಜ
8.
#ಕಾರ್ತಿಕ
#ಶರದ್ ಋತು
9.
#ಮಾರ್ಗಶಿರ
10.
#ಪುಷ್ಯ
#ಹಿಮಂತ ಋತು
11.
#ಮಾಘ
12.
#ಫಾಲ್ಗುಣ
#ಶಿಶಿರ ಋತು

1 #ಆಯನ = 6 #ತಿಂಗಳು ; 1 #ವರ್ಷದಲ್ಲಿ - 2 ಆಯನ;
#ಉತ್ತರಾಯನ - Jan to July 14/15 (#ಮಕರ ಸಂಕ್ರಾಂತಿ ಇಂದ ಶುರು ಆಗುತ್ತೆ)
₹ದಕ್ಷಿಣಾಯನ - July to January

#ಸಂವತ್ಸರ, ಮಾಸ, ಪಕ್ಷ , ತಿಥಿ - ಇವುಗಳ ಬಗ್ಗೆ ವಿವರ #ಪಂಚಾಂಗದಲ್ಲಿರುತ್ತದೆ.
🚩🙏🪔🚩🙏🔱🪔🚩🪔🙏🔱🚩🙏🪔

1 month ago (edited) | [YT] | 8