Namaste 🙏 my hobbies 🙏 Jai Kashi 🙏 Bharatêya Sanathani Hindu. 🙏Spiritual seeker.🙏 Music 🎵 ,🙏 love football updates,🙏 Traveling,tips 🙏Exploring, healthy cooking ideas 🙏A bit of photography 🙏 positive #nature love 🙏
namaste friends 🙏 Don't forget to like, share, and subscribe for more spiritual and nature-filled videos!🙏🚩
VasanthaaHarish 🙏
21 #ಮಂಗಳವಾರ ಮಾಡುವ #ಗಣಪತಿ ಪೂಜೆ :-
ಗಣಪತಿ ಪೂಜೆಗೆ ಜೋಡಿಸುವ ಅನುಕೂಲಗಳು:-
ಅರಿಶಿನ- ಕುಂಕುಮ -ಅಕ್ಷತೆ ಗಂಧ- ಅಗರಬತ್ತಿ- ಹೂವು ಕೆಂಪು ದಾಸವಾಳ ಶ್ರೇಷ್ಠ.
ಹೂವಿನ ಮಾಲೆ, ಪೂಜೆಗೆ ಬಿಡಿ ಹೂವು. ಆರತಿ ತಟ್ಟೆ ಎರಡು ಸೊಡಲಿಗೆ ತುಪ್ಪದ ಬತ್ತಿ ಹಾಕಬೇಕು. ಬಾಳೆ ಹಣ್ಣು ವೀಳ್ಯದೆಲೆ ಅಡಿಕೆ. ನೀರು,( ಎಕ್ಕದ ಹೂವು ಸಿಕ್ಕರೆ ಹಾರವನ್ನು ಹಾಕಬಹುದು ಅಥವಾ ಬಿಡಿ ಹೂವು ಏರಿಸಬಹುದು. 108 ಹೂವು ಸಿಕ್ಕರೆ ಅರ್ಚನೆಯ ಹೊತ್ತಿಗೆ ಗಣಪತಿ ಒಂದೊಂದು ನಾಮಕ್ಕೂ ಹಾಕಬಹುದು) ದೂರ್ವೆ ( ಗರಿಕೆ) ನೈವೇದ್ಯಕ್ಕೆ ಗಣಪ ಸಿಹಿತಿನಿಸು ಪ್ರಿಯ. ಪಂಚಕಜ್ಜಾಯ- ಮೋದಕ, ಯಾವುದಾದರೂ ಸಿಹಿ ಉಂಡೆ. ಸ್ವಲ್ಪ ನೆನೆಸಿದ ಇಡೀ ಕಡಲೆ ಕಲ್ಲು ಸಕ್ಕರೆ ದ್ರಾಕ್ಷಿ ಗೋಡಂಬಿ- ಖರ್ಜೂರ ಇವನ್ನೆಲ್ಲ ಪುಟ್ಟ ಬಟ್ಟಲಲ್ಲಿ ಇಡಿ.
( ಯಾವುದೇ ಒಂದು ಇದ್ದರೂ ಸಾಕು)
ಮನದಿಷ್ಟಾರ್ಥಕ್ಕಾಗಿ ಮಾಡುವ ಪೂಜೆ. 21 ಮಂಗಳವಾರ ಅಥವಾ ಅಮಾವಾಸ್ಯೆ ನಂತರ ಬರುವ ಮಂಗಳವಾರದಿಂದ 21 ದಿನ ಮಾಡಬಹುದು. ನಿತ್ಯ ಪೂಜೆಯ ದೇವರ ಕೋಣೆಯಲ್ಲಿ ಅಥವಾ ದೇವರನ್ನು ಇಡುವ ಜಾಗದಲ್ಲೇ ಸ್ವಲ್ಪ ಜಾಗ ಮಾಡಿ ಪೂಜೆಗೆ ಅನುಕೂಲತೆ ಮಾಡಿಕೊಳ್ಳಿ. ಗಣಪತಿ ಫೋಟೋ ( ಚಿಕ್ಕದಾದರೂ ಸಾಕು) ಒಂದು ಸ್ಥಳವನ್ನು ಶುಚಿ ಮಾಡಿ ರಂಗೋಲಿ ಬರೆದು ಮೇಲೆ ಮಣೆ ಪುಟ್ಟ ಟೇಬಲ್ ಇಟ್ಟು, ಗಣಪತಿ ಫೋಟೋ ಒರಗಿಸಿ, ಮುಂಭಾಗದಲ್ಲಿ ಪುಟ್ಟ ತಟ್ಟೆಗೆ ಅಕ್ಕಿ ಹಾಕಿ ಅಕ್ಕಿಯ ಮೇಲೆ ‘ಓಂ’ (ॐ) ಅಂತ ಕುಂಕುಮದಲ್ಲಿ ಬರೆದು ಅಕ್ಷತೆ ಕಾಳು ಹಾಕಿ ಇದರ ಮೇಲೆ ಗಣಪತಿ ವಿಗ್ರಹವನ್ನು ಕೂರಿಸಿ. ವಿಗ್ರಹದ ಬದಲು ಗೋಟಡಿಕೆ ಇಟ್ಟು ಗಣಪತಿ ಪೂಜೆ ಮಾಡಬಹುದು ಗಂಗೆ ಪೂಜೆ ಮಾಡಬೇಕು. ( ಕೆಲವರು ಅರಿಶಿನಕ್ಕೆ ಹಾಲು ಹಾಕಿ ಹೆಬ್ಬೆರಳು ಗಾತ್ರ ಗೋಪುರ ಮಾಡಿ ಗಣಪತಿ ಎಂದು ಇಡುತ್ತಾರೆ. ಆದರೆ ನಮ್ಮಲ್ಲಿ ಅರಿಶಿನದ ಗೋಪುರ ಮಂಗಳ ಗೌರಿ, ಗೌರಿ- ವರಮಹಾಲಕ್ಷ್ಮಿ, ಹಬ್ಬಗಳಲ್ಲಿ ಮಾತ್ರ ಅರಿಶಿನ ಗೌರಿ ಶ್ರೇಷ್ಠ ಎಂದು ಮಾಡುತ್ತಾರೆ) ಗಂಗೆ ಥಾಲಿ ಸುತ್ತ ಸುಣ್ಣದ ಒಂದು ಬೊಟ್ಟು ಎಳೆದು ಮೇಲೆ ಅರಿಶಿನ ಕುಂಕುಮ ಹಚ್ಚಿ. ಗಿಂಡಿ ಒಳಗೆ ಒಂದು ಕಾಯಿನ್ ಎರಡು ಅಡಿಕೆ ಚೂರು ಹಾಕಿ ಪೂಜೆಗೆ ಕೂರುವ ಮುನ್ನ ನೀರು ಹಾಕಿ ಅರಿಶಿಣ ಕುಂಕುಮ ಅಕ್ಷತೆ ಹಾಕಿ ಎರಡು ವೀಳ್ಯದೆಲೆ ಇಟ್ಟು ಮಧ್ಯದಲ್ಲಿ ಹೂವು ಇಡಬೇಕು. ಇದು ಗಂಗೆ ಪೂಜೆ ತಯಾರಿ.
ಪೂಜೆಗೆ ಕೂರುವುದು:- ದೇವರಿಗೆ ದೀಪ ಹಚ್ಚಿ ನಮಸ್ಕಾರ ಮಾಡಿ. ಸಂಕಲ್ಪ ಮಂತ್ರ ಬಂದರೆ ಹೇಳಿ, ಬರದಿದ್ದರೆ ನಿಮ್ಮ ಮನದ ಇಷ್ಟಾರ್ಥಗಳನ್ನು ಗಟ್ಟಿಯಾಗಿ ಹೇಳಿಕೊಂಡು ಪ್ರಾರ್ಥಿಸಿ ಪೂಜೆ ಆರಂಭ ಮಾಡಬೇಕು. ಮೊದಲು ಗಂಗೆ ಪೂಜೆ.
ಗಂಗೆ ಚ ಯಮುನೇ ಚೈವ ಗೋದಾವರಿ ಸರಸ್ವತಿ!
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು!!
ಎಂದು ಹೇಳಿ ಸಕ್ಕರೆ ನೈವೇದ್ಯ ಮಾಡಿ ಊದಿನ ಕಡ್ಡಿ ಹಚ್ಚಿ
ಅಕ್ಷತೆ ಹಾಕಿ ಕೈಮುಗಿದರೆ ಗಂಗೆ ಪೂಜೆ.
ಗಣಪತಿ ಪೂಜೆ:- “ವಕ್ರತುಂಡ ಮಹಾಕಾಯ; ಸೂರ್ಯಕೋಟಿ ಸಮಪ್ರಭ:
ನಿರ್ವಿಘ್ನಂ ಕುರು ಮೇ ದೇವ; ಸರ್ವ ಕಾರ್ಯೇಷು ಸರ್ವದಾ!!”
ಈ ಶ್ಲೋಕವನ್ನು ಜಪಿಸುವ ಮೂಲಕ ಗಣೇಶನನ್ನು ಸ್ಮರಿಸುವ ಶ್ರೇಷ್ಠ ಕ್ರಮ ಆಗಿದೆ. ಹೊಸ ಕಾರ್ಯ ಆರಂಭಿಸುವ ಮೊದಲು ಹೇಳಬೇಕು. ಏಕೆಂದರೆ ಈ ಸ್ತೋತ್ರಕ್ಕೆ ವಿಘ್ನಗಳನ್ನು ನಿವಾರಿಸಿ, ಯಶಸ್ಸನ್ನು ತಂದು ಕೊಡುವ ಶಕ್ತಿ ಇದೆ ಎಂಬ ನಂಬಿಕೆ.
ಗಣಪತಿ ವಿಗ್ರಹವಾದರೆ ಅದನ್ನು ಪುಟ್ಟ ಬಟ್ಟಲಲ್ಲಿ ಇಟ್ಟುಕೊಂಡು ಪಂಚಾಮೃತ ಅಭಿಷೇಕ ಮಾಡಿ, ಒರೆಸಿ. ಪಂಚಾಮೃತಕ್ಕೆ ಹಾಲು, ಮೊಸರು, ತುಪ್ಪ, ಜೇನುತುಪ್ಪ ಸಕ್ಕರೆ, ಬಾಳೆಹಣ್ಣು, ಗಂಧ ಇಟ್ಟು ಕೊಳ್ಳಿ. ಎಲ್ಲವನ್ನು ಸೇರಿಸಿ ಪುಟ್ಟ ಬಟ್ಟಲಲ್ಲಿ ಇಟ್ಟುಕೊಂಡರೆ ಸಾಕು.
ಮಹಾ ಗಣಪತಿಯೇ ನಮಃ ಕ್ಷೀರ ಸ್ನಾನಂ ಸಮರ್ಪಯಾಮಿ, ಒಂದು ಉದ್ಧರಣೆ ಪಂಚಾಮೃತ ಹಾಕಿ ನಂತರ ಕ್ಷೀರ ಸ್ನಾನ ನಂತರ ಶುದ್ಧೋದಕ ಸ್ನಾನಂ ಸಮರ್ಪ ಯಾಮಿ. ಇದೇ ರೀತಿ ಮೊಸರು -ತುಪ್ಪ -ಜೇನುತುಪ್ಪ- ಸಕ್ಕರೆ ಹಾಕುವಾಗ ಇದೇ ರೀತಿ ಹೇಳಿ ನಂತರ ಫಲ ಸ್ನಾನಂ ಸಮರ್ಪಯಾಮಿ ನಂತರ ಶುದ್ಧೋದಕ. ಪರಿಮಳ ಗಂಧ ಸ್ನಾನಂ ಸಮರ್ಪಯಾಮಿ ಒಂದು ಉದ್ಧರಣೆ ನೀರು ಹಾಕಿ ಶುದ್ಧೋದಕ ನೀರು ಹಾಕಿ ವಿಗ್ರಹವನ್ನು ಒರೆಸಿ. ( ಒಂದು ಹೂವನ್ನು ಪಂಚಾ ಮೃತದಲ್ಲಿ ಅದ್ದಿ ಪ್ರೋಕ್ಷಣೆ ಮಾಡಿದರು ಸಾಕು.) ಬೆಟ್ಟಡಿಕೆ ಅಥವಾ ಗೊಟಡಿಕೆ ಇಟ್ಟುಕೊಂಡರೆ ಹೀಗೆ ಮಾಡಬೇಕು.
ನಂತರ ಗಣಪತಿ ಫೋಟೋ ಕೆಂಪು ದಾಸವಾಳ ಅಥವಾ ಗುಲಾಬಿ ಏರಿಸಿ.
ವಿಗ್ರಹಕ್ಕೆ ವಸ್ತ್ರಂ ಸಮರ್ಪಯಾಮಿ ಕೆಂಪು ಹಚ್ಚಿದ ಗೆಜ್ಜೆ ವಸ್ತ್ರ ಏರಿಸಿ. ಶ್ರೀ ಮಹಾಗಣಪತಿಯೇ ನಮಃ ಯಜ್ಞ್ಯೊಪವೀತಂ( ಜನಿವಾರ) ಸಮರ್ಪಯಾಮಿ ಹೇಳಿ ಅಕ್ಷತೆ ಹಾಕಿ. ಗಂಧಂ ಸಮರ್ಪಯಾಮಿ ಹಣೆಗೆ ಹಚ್ಚಿ. ಆಮೇಲೆ ಅರಿಶಿನ ಕುಂಕುಮ ಅಕ್ಷತೆ ಸಮರ್ಪಯಾಮಿ ಅಂತ ಹೇಳುತ್ತಾ ಸ್ವಲ್ಪ ಹಾಕಿ. ಇದಾದ ಮೇಲೆ ಪುಷ್ಪಂ ಸಮರ್ಪಯಾಮಿ ಹೂ ಏರಿಸಿ. ಪುಷ್ಪ ಮಾಲಾಂ ಸಮರ್ಪಯಾಮಿ ಪುಷ್ಪಮಾಲೆ ಹಾಕಿ. 11 ಗರಿಕೆ ತೆಗೆದುಕೊಂಡು ಓಂ ಗಂ ಗಣಪತಯೇ ನಮಃ
ಎಂದು ಒಂದೊಂದೇ ಗರಿಕೆಯನ್ನು ಏರಿಸಿ. ಉಳಿದ ಗರಿಕೆಗಳನ್ನು ಗಣಪತಿಯ ಅಕ್ಕಪಕ್ಕ ಹೇಳಿ. ನಂತರ ಎರಡು ಊದಿನ ಕಡ್ಡಿ ಹಚ್ಚಿ ಗಂಟೆ ಬಾರಿಸುತ್ತಾ
ದೇವರ ಮುಂದೆ ಸುತ್ತಿಸಿ. “ ಧೂಪಂ ದಶಾಂಗಂ ಗುಗ್ಗುಲಂ ಕಪಿಲಾಘೃತ
ಸಂಯುಕ್ತಂ- ಧೂಪೋಯಂ ಪ್ರತಿಗೃಹ್ಯತಾಮ್ ಧೂಪ ಮಾಘ್ರಾಪಯಾಮಿ.”
ನಾಮ ಪೂಜೆ ಮಾಡಬೇಕು:-
ಓಂ ಸುಮುಕಾಯ ನಮಃ
ಓಂ ಏಕದಂತಾಯ ನಮಃ
ಓಂ ಕಪಿಲಾಯ ನಮಃ
ಓಂ ಗಜಕರ್ಣಕಾಯ ನಮಃ
ಓಂ ಲಂಬೋದರಾಯ ನಮಃ
ಓಂ ವಿಕಟಾಯ ನಮಃ
ಓಂ ವಿಘ್ನನ ರಾಜಾಯನಮಃ
ಓಂ ಗಣಾಧಿಪಾಯ ನಮಃ
ಓಂ ಧೂಮಕೇತವೆ ನಮಃ
ಓಂ ಗಣಾಧ್ಯಕ್ಷಾಯ ನಮಃ
ಓಂ ಈಶ ಪುತ್ರಾಯ ನಮಃ
ಓಂ ಪಾರ್ವತಿ ನಂದನಾಯ ನಮಃ
ಓಂ ಬಪಾಲಚಂದ್ರಾಯ ನಮಃ
ಓಂ ಗಜಾನನಾಯ ನಮಃ
ಓಂ ಮೂಷಕ ವಾಹನಾಯನಮಃ
ಓಂ ಕುಮಾರ ಗುರುವೇ ನಮಃ
ಓಂ ಸರ್ವಸಿದ್ಧಿ ಪ್ರಾಯ ಕಾಯ ನಮಃ
ಓಂ ಶ್ರೀ ಮಹಾಗಣಪತಯೇ ನಮಃ
ಪ್ರತಿಯೊಂದು ನಾಮಕ್ಕೂ ಅಕ್ಷತೆ ಕಾಳು ಅಕ್ಷತೆ ಹಾಕಬೇಕು.(ನಂತರ ಸಮಯವಿದ್ದರೆ ಅಷ್ಟೋತ್ತರ ಹೇಳಿ- ಓದಿ.)
ನೈವೇದ್ಯ ಮಾಡಿ ಕರ್ಪೂರ ಹಚ್ಚಿ, ಹಾಡು ಹೇಳಿಕೊಂಡು ಆರತಿ ಮಾಡಿ.
ಆರತಿ ದೇವರಿಗೆ ಸಮರ್ಪಿಸಿ ನೀವು ತೆಗೆದುಕೊಂಡು,
ನಂತರ ಕೈಯಲ್ಲಿ ಅಕ್ಷತೆ ಹೂವು ಹಿಡಿದು
ಮಂತ್ರ ಪುಷ್ಪಂ ಸಮರ್ಪಯಾಮಿ.
ಆತ್ಮಪ್ರದಕ್ಷಿಣೆ ನಮಸ್ಕಾರಂ ಸಮರ್ಪಯೋಮಿ
ಸರ್ವೋಪಚಾರ ಪೂಜಾಂ ಸಮರ್ಪಯಾಮಿ
ಎಂದು ಗಣಪತಿಗೆ ಸಮರ್ಪಿಸಿ
ಪ್ರದಕ್ಷಿಣೆ ನಮಸ್ಕಾರ ಮಾಡಬೇಕು.
5 ಅಥವಾ 11 ಅಥವಾ 21 ಗಣಪತಿಗೆ ನಮಸ್ಕಾರ ಮಾಡಿ.
ಮತ್ತೆ ಅಕ್ಷತೆ ಹಿಡಿದು:
ಗಣೇಶಾಯ ನಮಃ ಸ್ತುಭ್ಯಂ ಸರ್ವಕಾಮ ಫಲಪ್ರದ
ವಾಂಛಿತಂ ದೇಹಿ ಮೇ ನಿತ್ಯಂ ಗೃಹಾಣಾರ್ಘ್ಯಂ ನಮೋಸ್ತುತೇ!!
ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಗಣಾಧಿಪ
ಯತ್ಪೋಜಿತಂ ಮಯಾದೇವ ಪರಿಪೂರ್ಣಂ ತಥಸ್ತುತೇ!
ಅನಯಾ ಶೋಡಶೋಪಚಾರ ಪೂಜಾಯಾ ಭಗವಾನ್ ಸರ್ವಾತ್ಮಕ:
ಶ್ರೀ ಮಹಾಗಣಾಧಿಪತಿ ಸುಪ್ರಸನ್ನೋ ವರದೋ ಭವಂತು
ಎಂದು ಹೇಳಿ ಹೂವು ಅಕ್ಷತ ತೆಗೆದುಕೊಂಡು ನೀರು ಹಾಕಿ ಬಿಡಬೇಕು.
ಕಾಯೇನ ವಾಚಾ ಮನಸೇಂದ್ರಿಯ್ಯೆರ್ವಾ
ಬುಧ್ಯಾತ್ಮನಾ ಪ್ರಕೃತೇ ಸ್ವಭಾವಾತ್!
ಕರೋಮಿ ಯದ್ಯತ್ ಸಕಲಂ ಪರಸ್ಮೈ
ನಾರಾಯಣಯೇತಿ ಸಮರ್ಪಯಾಮಿ!!
ಓಂ ತತ್ಸತ್ ಶ್ರೀ ಕೃಷ್ಣಾರ್ಪಣ ಮಸ್ತು!!
ಓಂ ಶಾಂತಿ ಶಾಂತಿ ಶಾಂತಿಃ
ಎಂದು ಕೈ ಮುಗಿಯಬೇಕು.
ನಂತರ ತೀರ್ಥ ಪ್ರಸಾದ ತೆಗೆದುಕೊಳ್ಳಬೇಕು.
ಅಮಾವಾಸ್ಯೆ ಕಳೆದ ಮಂಗಳವಾರದಿಂದ ನೀವು 21 ದಿನ ಪೂಜೆ ಮಾಡುವುದಾದರೆ ಜೋಡಿಸಿಟ್ಟುಕೊಂಡ ಪೂಜೆಗೆ ಇಟ್ಟುಕೊಂಡ ಗಣಪತಿ ಎಲ್ಲವೂ ಹಾಗೆ ಇರಲಿ 21ನೇ ದಿನ ಗಣಪತಿ ಬಲಭಾಗ ಸ್ವಲ್ಪ ಕದಲಿಸಿ.
21 ಮಂಗಳವಾರ ಮಾಡುವುದಾದರೆ ಪ್ರತಿ ಮಂಗಳವಾರ ಜೋಡಿಸಿಕೊಳ್ಳಿ. ಹಾಗೆ ಸಾಯಂಕಾಲ ದೀಪ ಹಚ್ಚಿ ಗಣಪತಿ ಸ್ತೋತ್ರ ಹೇಳಿ ಸಕ್ಕರೆ ಇಟ್ಟು ನಮಸ್ಕರಿಸಿ.
ಗಣಪತಿ ಪೂಜೆ ಸಂಪನ್ನವಾಗುತ್ತದೆ.
#ಗಣಪತಿಪೂಜೆ
6 hours ago | [YT] | 1
View 0 replies
VasanthaaHarish 🙏
🙏#ಭೀಷ್ಮ ಅಷ್ಟಮಿ : #ಭೀಷ್ಮ #ಪಿತಾಮಹ ನೀಡಿದ ಪ್ರಮುಖವಾದ ಒಂಬತ್ತು ನೀತಿಬೋಧೆಗಳು 🌹🙏
ಸಾವಿರ ಹಸುಗಳಿದ್ದರೂ ಅವುಗಳ ನಡುವೆ ಕರು ತನ್ನ ತಾಯಿಯನ್ನು ಗುರುತಿಸುವಂತೆ ಅವರವರ ಕರ್ಮ ಅವರನ್ನು ಬೆಂಬಿಡದೆ ಹಿಡಿಯುತ್ತದೆ; ಬಟ್ಟೆ ಒಗೆದರೆ ಕೊಳೆ ಹೋಗುವಂತೆ, ಸತ್ಕರ್ಮಗಳಿಂದ ಪಾಪ ತೊಳೆದು ಇಷ್ಟಾರ್ಥಗಳು ಸಿದ್ಧಿಸುತ್ತವೆ.
1. ನಾವೆಲ್ಲರೂ ಎಲ್ಲಿಂದ ಬಂದೆವೋ ಅಲ್ಲಿಗೆ ಹಿಂತಿರುಗಿ ಹೋಗಬೇಕು. ಪ್ರತಿಯೊಬ್ಬರೂ ಅವರವರ ಕರ್ಮದ ಫಲವನ್ನು ಅನುಭವಿಸಬೇಕು. ಮಹಾಸಾಗರದಲ್ಲಿ ಎರಡು ಕಡ್ಡಿಗಳು ಬಂದು ಸೇರುವ ಹಾಗೆ; ನಾವು ಎಲ್ಲಿಂದಲೋ ಬಂದು ಈ ಲೋಕದಲ್ಲಿ ಸೇರುತ್ತೇವೆ, ಮತ್ತೆ ಬೇರ್ಪಟ್ಟು ಎಲ್ಲಿಗೋ ಹೋಗಿಬಿಡುತ್ತೇವೆ. ಹೀಗೆ ನಮ್ಮ ಬಂಧುಬಾಂಧವರ ವಿಯೋಗವು ಖಂಡಿತ ವಾಗಿರುವುದರಿಂದ ಸಂಬಂಧಗಳಿಗೆ ಅಂಟಿಕೊಳ್ಳಬಾರದು.
2. ಸುಖವಾದ ಮೇಲೆ ದುಃಖವೂ, ದುಃಖವಾದ ಮೇಲೆ ಸುಖವೂ ಚಕ್ರದಂತೆ ಸುತ್ತುತ್ತಿರುತ್ತವೆ. ಇಷ್ಟುದಿನವೂ ಸುಖವಿತ್ತು; ಈಗ ದುಃಖ ಬಂದಿದೆ, ಮುಂದೆ ಮತ್ತೆ ಸುಖ ಬರುತ್ತದೆ. ದುಃಖವೂ ನಿತ್ಯವಲ್ಲ, ಸುಖವೂ ನಿತ್ಯವಲ್ಲ.
3. ಸಂತೋಷಕ್ಕೆ ಸ್ನೇಹಿತರಾಗಲಿ, ದುಃಖಕ್ಕೆ ಶತ್ರುಗಳಾಗಲಿ, ಪ್ರಯೋಜನಗಳಿಗೆ ಬುದ್ಧಿಯಾಗಲಿ, ಸುಖಕ್ಕೆ ಹಣವಾಗಲಿ, ಹಣಕ್ಕೆ ಬುದ್ಧಿಯಾಗಲಿ ಕಾರಣವೆಂದೂ ಹೇಳುವಹಾಗಿಲ್ಲ. ಏಕೆಂದರೆ, ಜಾಣನಾಗಲಿ ದಡ್ಡನಾಗಲಿ, ಶೂರನಾಗಲಿ ಭೀರುವಾಗಲಿ,
ಮಂಕನಾಗಲಿ ಕವಿಯಾಗಲಿ, ಬಲಿಷ್ಠನಾಗಲಿ ಕೈಲಾಗದವನಾಗಲಿ, ಸುಖ ಬರುವವರಿಗೆ ಬಂದೇಬರುತ್ತದೆ.
4. ಪರಮ ಮೂಢನಿಗೆ, ಕಂಬಳಿ ಕವಚಿಕೊಂಡರೆ ಕಣ್ಣು ಕಾಣಿಸದಂತೆ, ಯಾವ ದುಃಖವೂ ಇಲ್ಲ; ಸುಖದುಃಖಗಳನ್ನು ಮೀರಿದ ಜ್ಞಾನಿಗಳಿಗೂ ದುಃಖವಿಲ್ಲ; ಜಂಜಡವೆಲ್ಲ ಇವೆರಡರ ನಡುವೆ ಇರುವವರಿಗೆ ಮಾತ್ರ.
5. ಸುಖವೋ ದುಃಖವೋ, ಇಷ್ಟವೋ ಅನಿಷ್ಟವೋ, ಬಂದಬಂದದ್ದನ್ನು ಎದೆಗುಂದದೆ ಅನುಭವಿಸಬೇಕು. ಆಮೆಯು ತನ್ನ ಅಂಗಗಳನ್ನೆಲ್ಲ ಒಳಗೆ ಎಳೆದುಕೊಳ್ಳುವಂತೆ ಕಾಮಕ್ರೋಧಗಳನ್ನು ಒಳಕ್ಕೆ ಅಡಗಿಸಿಕೊಂಡು ಶಾಂತನಾದರೆ ಆತ್ಮ ಸಂಪತ್ತು ದೊರೆಯುತ್ತದೆ, ಬೆಳಕು ಕಾಣುತ್ತದೆ. ಅದಕ್ಕೆ ಆಶೆಯನ್ನು ಬಿಡಬೇಕು; ಅದು ಮಂದಬುದ್ಧಿಗಳಿಗೆ ಸಾಧ್ಯವಿಲ್ಲ; ಆಶೆ ಎಂಬುದು ಮುಪ್ಪಿನಲ್ಲಿಯೂ ಮುದಿಯಾಗುವುದಿಲ್ಲ; ಬಂದರೆ ವಾಸಿಯಾಗದೆ ಪ್ರಾಣವನ್ನು ತೆಗೆಯುವ ರೋಗದಂತೆ, ಅದು ಕೊನೆಯವರೆಗೂ ಹೋಗುವುದಿಲ್ಲ.
6. ಒಳ್ಳೆಯದೆಂದು ತಿಳಿದಿರುವುದನ್ನು ಕೂಡಲೇ ಮಾಡಿಬಿಡಬೇಕು; ಇಲ್ಲದಿದ್ದರೆ ಮೃತ್ಯು ಅಡ್ಡ ಬಂದೀತು. ನಾಳೆ ಮಾಡುವುದನ್ನು ಇಂದೇ ಮಾಡಬೇಕು; ಮಧ್ಯಾಹ್ನ ಮಾಡುವುದನ್ನು ಬೆಳಗ್ಗೆಯೇ ಮಾಡಬೇಕು. ಇದನ್ನು ಮಾಡಿದನೇ ಬಿಟ್ಟನೇ ಎಂದು ಮೃತ್ಯುವು ನೋಡುವುದಿಲ್ಲ. ಅದಕ್ಕೆ ಅದು ಬೇಕಾಗಿಯೂ ಇರುವುದಿಲ್ಲ. ಆದ್ದರಿಂದ ಸದಾ ಧರ್ಮಶೀಲರಾಗಿರಬೇಕು.
7. ತ್ಯಾಗವಿಲ್ಲದೆ ಇಹಸುಖವಿಲ್ಲ, ತ್ಯಾಗವಿಲ್ಲದೆ ಪರವಿಲ್ಲ; ತ್ಯಾಗವಿಲ್ಲದೆ ನೆಮ್ಮದಿಯ ನಿದ್ರೆಯೂ ಬರುವುದಿಲ್ಲ; ಎಲ್ಲವನ್ನೂ ತ್ಯಜಿಸಿದವನಿಗೆ ಮಾತ್ರ ಸೌಖ್ಯ! ಭಾಗ್ಯವಂತನಿಗೆ ಮೃತ್ಯುವಿನ ಕೈಗೆ ಸಿಕ್ಕಿದವನ ಹಾಗೆ ಸದಾ ಕಳವಳವಿದ್ದೇ ಇರುತ್ತದೆ. ಹಣ ಕೈಗೆ ಸೇರಿತೆಂದರೆ ಕ್ರೋಧ ಲೋಭಗಳು ಅವನನ್ನು ಮೆಟ್ಟಿಕೊಳ್ಳ್ಳುತ್ತವೆ; ಬುದ್ಧಿ ಕೆಟ್ಟುಹೋಗುತ್ತದೆ; ಅಡ್ಡನೋಟ, ಸಿಡುಕುಮೋರೆ, ಹುಬ್ಬುಗಂಟು, ಕಚ್ಚುತುಟಿ, ಕಟು ಭಾಷಣಗಳು ಬರುತ್ತವೆ; ತಾನೇ ರೂಪವಂತ, ಧನವಂತ, ಕುಲವಂತ, ಸಿದ್ಧಪುರುಷ, ತಾನು ಮನುಷ್ಯಮಾತ್ರದವನಲ್ಲ ಎಂಬ ಮದವೇರುತ್ತದೆ. ವಿಷಯಸುಖಗಳಲ್ಲಿ ಹಣವೆಲ್ಲ ವೆಚ್ಚವಾಗಿ ಹೋದರೆ, ಮತ್ತೊಬ್ಬರ ಸ್ವತ್ತಿಗೆ ಕೈಹಾಕುತ್ತಾನೆ; ಶಿಕ್ಷೆಗೆ ಗುರಿಯಾಗುತ್ತಾನೆ.
8. ಒಂದು ವಿಧದಲ್ಲಿ ನೋಡಿದರೆ ಏನೂ ಇಲ್ಲದಿರುವುದು ರಾಜ್ಯ ಸಂಪತ್ತಿಗಿಂತ ಮೇಲು. ಈ ಸುಖದುಃಖಗಳನ್ನೂ ಗಮನಿಸುತ್ತ, ನಿತ್ಯಾನಿತ್ಯವಿಚಾರ ಮಾಡಬೇಕು. ಸುಖ ಬಂದರೆ ಹಿಗ್ಗಬಾರದು; ದುಃಖ ಬಂದರೆ ಕುಗ್ಗಬಾರದು.
9. ಕರ್ಮವು ಮನುಷ್ಯನನ್ನು ಅವನ ನೆರಳಿನಂತೆ ಎಡೆಬಿಡದೆ ಅನುಸರಿಸುತ್ತ, ಎದ್ದರೆ ಏಳುತ್ತ, ಕೂತರೆ ಕೂರುತ್ತ, ಓಡಿದರೆ ಓಡುತ್ತ, ಮಲಗಿದರೆ ಮಲಗುತ್ತ ಇರುತ್ತದೆ. ಅದರ ಕಾಲ ಬಂದಾಗ, ಯಾರ ಪ್ರೇರಣೆಯೂ ಇಲ್ಲದೆ, ಮರಗಳು ಹೂವು ಹಣ್ಣುಗಳನ್ನು ಬಿಡುವಂತೆ ಫಲ ಕೊಡುತ್ತದೆ.
||ಶ್ರೀಕೃಷ್ಣಾರ್ಪಣಮಸ್ತು||
(ಆಕರ: ವಚನ ಭಾರತ)
2 days ago | [YT] | 3
View 0 replies
VasanthaaHarish 🙏
#ಭೀಷ್ಮಾಷ್ಟಮಿ# ತರ್ಪಣ ನೀಡುವ ಮುಹೂರ್ತ, ಆಚರಣೆಯ ಮಹತ್ವ .
ಶರಶಯ್ಯೆಯ ಮೇಲೆ ಮಲಗಿರುವ ಭೀಷ್ಮ ಪಿತಾಮಹರು ಯುದ್ಧಿಷ್ಠಿರನಿಗೆ ವಿಷ್ಣು ಸಹಸ್ರನಾಮ ಬೋಧಿಸುತ್ತಿರುವ ಮಹಾಭಾರತದ ದೃಶ್ಯ
ಹಿರಿತನ, ಜ್ಞಾನ ಮತ್ತು ನಿಷ್ಠೆ- ವಿವೇಕದ ವಿಚಾರಕ್ಕೆ ಬಂದರೆ ಆದರ್ಶ ಎನಿಸುವ ಪಾತ್ರಗಳಲ್ಲಿ ಒಂದಾಗಿ ನಮಗೆ ಸಿಗುವುದು ವೇದವ್ಯಾಸರು ರಚಿಸಿದಂಥ ಮಹಾಭಾರತದಲ್ಲಿನ ಭೀಷ್ಮರ ಪಾತ್ರ. ಜಗತ್ತಿಗೆ ವಿಷ್ಣು ಸಹಸ್ರನಾಮವನ್ನು ನೀಡಿದಂಥವರು ಸಹ ಅವರೇ. ಪಿತಾಮಹ ಭೀಷ್ಮರಿಗೆ ಸಮರ್ಪಿತವಾದ ‘ಭೀಷ್ಮಾಷ್ಟಮಿ’ ಕುರಿತು ಮಾಹಿತಿ ಇಲ್ಲಿದೆ.
ಭೀಷ್ಮಾಷ್ಟಮಿ: ಪಿತಾಮಹನ ಪುಣ್ಯಸ್ಮರಣೆ
ಹಿಂದೂ ಪಂಚಾಂಗದ ಪ್ರಕಾರ, ಮಾಘ ಮಾಸದ ಶುಕ್ಲ ಪಕ್ಷದ ಅಷ್ಟಮಿಯಂದು ಭೀಷ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಇದು ಮಹಾಭಾರತದ ಅಪ್ರತಿಮ ವೀರ, ಧರ್ಮನಿಷ್ಠ ಭೀಷ್ಮ ಪಿತಾಮಹರು ತಮ್ಮ ದೇಹವನ್ನು ತ್ಯಜಿಸಿ ಮೋಕ್ಷವನ್ನು ಪಡೆದ ಪವಿತ್ರ ದಿನವಾಗಿದೆ.
ಹಿನ್ನೆಲೆ ಮತ್ತು ಮಹತ್ವ
ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನ ಬಾಣಗಳಿಗೆ ತುತ್ತಾಗಿ ಶರಶಯ್ಯೆಯ ಮೇಲೆ ಮಲಗಿದ್ದ ಭೀಷ್ಮರಿಗೆ ‘ಇಚ್ಛಾ ಮರಣ’ದ ವರವಿತ್ತು. ಅಂದರೆ ಅವರು ಬಯಸಿದಾಗ ಮಾತ್ರ ಸಾವು ಅವರನ್ನು ಸ್ಪರ್ಶಿಸಬಹುದಿತ್ತು.
ಉತ್ತರಾಯಣದ ಕಾಯುವಿಕೆ: ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಚಲಿಸುವ ಕಾಲವು ಅತ್ಯಂತ ಪವಿತ್ರವೆಂದು ನಂಬಲಾಗಿತ್ತು. ಹಾಗಾಗಿ ಭೀಷ್ಮರು ಸುಮಾರು 58 ದಿನಗಳ ಕಾಲ ಬಾಣದ ಹಾಸಿಗೆಯ ಮೇಲೆ ಮಲಗಿ ಸೂರ್ಯನು ಉತ್ತರಾಯಣಕ್ಕೆ ಪ್ರವೇಶಿಸುವವರೆಗೆ ಕಾಯುತ್ತಿದ್ದರು.
ಮೋಕ್ಷ ಪ್ರಾಪ್ತಿ: ಅಂತಿಮವಾಗಿ ಮಾಘ ಶುಕ್ಲ ಅಷ್ಟಮಿಯಂದು ಅವರು ಪ್ರಾಣತ್ಯಾಗ ಮಾಡಿದರು. ಈ ಕಾರಣಕ್ಕಾಗಿ ಈ ದಿನವನ್ನು ಅವರ ನಿರ್ವಾಣ ದಿನ ಅಥವಾ ಪುಣ್ಯತಿಥಿ ಎಂದು ಆಚರಿಸಲಾಗುತ್ತದೆ.
ಆಚರಣೆಗಳು ಮತ್ತು ಸಂಪ್ರದಾಯ
ಈ ದಿನದಂದು ಮುಖ್ಯವಾಗಿ ಭೀಷ್ಮರಿಗೆ ತರ್ಪಣ ನೀಡುವುದು ವಿಶೇಷವಾದ ಸಂಪ್ರದಾಯವಾಗಿದೆ.
ಭೀಷ್ಮ ತರ್ಪಣ: ಭೀಷ್ಮರು ಆಜನ್ಮ ಬ್ರಹ್ಮಚಾರಿಗಳಾಗಿದ್ದರಿಂದ ಅವರಿಗೆ ಸಂತತಿ ಇರಲಿಲ್ಲ. ಆದ್ದರಿಂದ ಸನಾತನ ಧರ್ಮದಲ್ಲಿ ಯಾರೇ ಆದರೂ (ತಂದೆ ಇದ್ದವರೂ ಸಹ) ಈ ದಿನದಂದು ಭೀಷ್ಮರಿಗೆ ಅರ್ಘ್ಯ ಅಥವಾ ತರ್ಪಣವನ್ನು ನೀಡಬಹುದು. ಇದು ಅವರಿಗೆ ಗೌರವ ಸಲ್ಲಿಸುವ ಮಾರ್ಗವಾಗಿದೆ.
ಪುಣ್ಯ ಸ್ನಾನ: ಈ ದಿನ ನದಿಗಳಲ್ಲಿ ಅಥವಾ ಪವಿತ್ರ ಜಲಮೂಲಗಳಲ್ಲಿ ಸ್ನಾನ ಮಾಡುವುದು ಪುಣ್ಯದಾಯಕ ಎಂದು ನಂಬಲಾಗಿದೆ.
ವಿಷ್ಣು ಸಹಸ್ರನಾಮ ಪಠಣ: ಭೀಷ್ಮರು ಶರಶಯ್ಯೆಯ ಮೇಲಿದ್ದಾಗ ಶ್ರೀಕೃಷ್ಣನ ಸ್ತುತಿಯಾಗಿ ‘ವಿಷ್ಣು ಸಹಸ್ರನಾಮ’ವನ್ನು ಬೋಧಿಸಿದರು. ಆದ್ದರಿಂದ ಈ ದಿನ ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದು ಶ್ರೇಷ್ಠ.
ಈ ದಿನದ ವಿಶೇಷ ಫಲ
“ಯಾರು ಭೀಷ್ಮಾಷ್ಟಮಿಯಂದು ಭೀಷ್ಮರಿಗೆ ತರ್ಪಣವನ್ನು ನೀಡುತ್ತಾರೋ ಅವರ ಪಾಪಗಳು ಕಳೆದು ಸದ್ಗತಿ ಪ್ರಾಪ್ತಿಯಾಗುತ್ತದೆ” ಎಂಬ ನಂಬಿಕೆ ಇದೆ. ಭೀಷ್ಮರ ಬದುಕು ನಮಗೆ ತ್ಯಾಗ, ಪ್ರತಿಜ್ಞಾಬದ್ಧತೆ ಮತ್ತು ಹಿರಿಯರಿಗೆ ನೀಡಬೇಕಾದ ಗೌರವವನ್ನು ಕಲಿಸಿಕೊಡುತ್ತದೆ. ಒಬ್ಬ ಅಪ್ರತಿಮ ವೀರನಾಗಿ ಧರ್ಮದ ಹಾದಿಯಲ್ಲಿ ಅವರು ಸವೆಸಿದ ದಾರಿ ಇಂದಿಗೂ ಆದರ್ಶಪ್ರಾಯವಾಗಿದೆ.
ಪ್ರತಿ ವರ್ಷ ಮಾಘ ಮಾಸದ ಶುಕ್ಲ ಪಕ್ಷದ ಅಷ್ಟಮಿಯಂದು ಈ ಪವಿತ್ರ ದಿನವನ್ನು ಆಚರಿಸಲಾಗುತ್ತದೆ.
ಭೀಷ್ಮಃಶಾಂತನವೊ ವೀರಃ ಸತ್ಯವಾದೀ ಜಿತೇಂದ್ರಿಯಃ |
ಆಭಿರದ್ಭಿರವಾಪ್ನೋತಿ ಪುತ್ರಪೌತ್ರೋಚಿತಾಂ ಕ್ರಿಯಾಂ |
ವೈಯಾಘ್ರಪಾದಗೋತ್ರಾಯ ಸಾಂಕೃತಿಪ್ರವರಾಯ ಚ |
ಅಪುತ್ರಾಯ ದದಾಮ್ಯೇತಜ್ಜಲಂ ಭೀಷ್ಮಾಯ ವರ್ಮಣೇ |
ಗಂಗಾಪುತ್ರಾಯ ಭೀಷ್ಮಾಯ ಇದಮರ್ಘ್ಯಮ್ ||
ವಸೂನಾಮವತಾರಾಯ ಶಂತನೋರಾತ್ಮಜಾಯ ಚ |
ಅರ್ಘ್ಯಂ ದದಾಮಿ ಭೀಷ್ಮಾಯ ಆಬಾಲಬ್ರಹ್ಮಚಾರಿಣೇ |
ಗಂಗಾಪುತ್ರಾಯ ಭೀಷ್ಮಾಯ ಇದಮಸ್ತು ತಿಲೋದಕಮ್ |
▬▬ஜ۩۞۩ஜ▬▬▬*▬▬▬ஜ۩۞۩ஜ▬▬
ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು
ಸರ್ವಜನಾಃ ಸುಖಿನೋಭವತು
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
2 days ago | [YT] | 3
View 1 reply
VasanthaaHarish 🙏
#ಸಪ್ತ ಸಪ್ತ ಮಹಾಸಪ್ತ
#ಸಪ್ತದ್ವೀಪಾ ವಸುಂಧರಾ|
#ಸಪ್ತಾರ್ಕ ಪರ್ಣಮಾದಾಯ
#ಸಪ್ತಮೀ ರಥಸಪ್ತಮೀ ||
#ಕ್ಷಣಕ್ಷಣವೂ ಕೋಟಿ ಕಿರಣಗಳನು ಜಗಕೆ ನೀಡಿ ಸಕಲ #ಜೀವರಾಶಿಗಳಲ್ಲೂ ನಿತ್ಯ ಚೈತನ್ಯವನ್ನು ತುಂಬುವ #ಸೂರ್ಯ ನಾರಾಯಣ ಪ್ರತ್ಯಕ್ಷ ದೈವವೇ ಸರಿ.
#ಸರ್ವಚೇತನ ಸ್ವರೂಪಿಯಾದ ಭಗವಾನ್ #ಸೂರ್ಯನಾರಾಯಣ ಎಲ್ಲರಿಗೂ ದೀರ್ಘಾಯುಷ್ಯ, ಉತ್ತಮ ಆರೋಗ್ಯ ಹಾಗೂ ಉತ್ತರೋತ್ತರ ಶ್ರೇಯಸ್ಸು ನೀಡಿ ಹರಸಲಿ ಎಂದು ಪ್ರಾರ್ಥಿಸೋಣ.
ಸೂರ್ಯೋಪಾಸನೆಯ ಪವಿತ್ರ ದಿನವಾದ ರಥಸಪ್ತಮಿ ಎಲ್ಲರಿಗೂ ಶುಭವನ್ನು ತರಲಿ.🚩🙏🔱
3 days ago (edited) | [YT] | 7
View 0 replies
VasanthaaHarish 🙏
ನಾಳೆ #ರಥಸಪ್ತಮಿ ಪ್ರಯುಕ್ತ ರಥ ಸಪ್ತಮಿ ಶ್ಲೋಕಾಃ
ಅರ್ಕಪತ್ರ ಸ್ನಾನ ಶ್ಲೋಕಾಃ |
ಸಪ್ತಸಪ್ತಿಪ್ರಿಯೇ ದೇವಿ ಸಪ್ತಲೋಕೈಕದೀಪಿಕೇ |
ಸಪ್ತಜನ್ಮಾರ್ಜಿತಂ ಪಾಪಂ ಹರ ಸಪ್ತಮಿ ಸತ್ವರಂ || 1 ||
ಯನ್ಮಯಾತ್ರ ಕೃತಂ ಪಾಪಂ ಪೂರ್ವಂ ಸಪ್ತಸು ಜನ್ಮಸು |
ತತ್ಸರ್ವಂ ಶೋಕಮೋಹೌ ಚ ಮಾಕರೀ ಹಂತು ಸಪ್ತಮೀ || 2 ||
ನಮಾಮಿ ಸಪ್ತಮೀಂ ದೇವೀಂ ಸರ್ವಪಾಪಪ್ರಣಾಶಿನೀಂ |
ಸಪ್ತಾರ್ಕಪತ್ರಸ್ನಾನೇನ ಮಮ ಪಾಪಂ ವ್ಯಾಪೋಹತು || 3 ||
ಅರ್ಘ್ಯ ಶ್ಲೋಕಂ |
ಸಪ್ತ ಸಪ್ತಿ ವಹಪ್ರೀತ ಸಪ್ತಲೋಕ ಪ್ರದೀಪನ |
ಸಪ್ತಮೀ ಸಹಿತೋ ದೇವ ಗೃಹಾಣಾರ್ಘ್ಯಂ ದಿವಾಕರ || 1 ||
ಅನ್ಯ ಪಾಠಃ –
ಯದಾ ಜನ್ಮಕೃತಂ ಪಾಪಂ ಮಯಾ ಜನ್ಮಸು ಜನ್ಮಸು |
ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ || 1
ಏತಜ್ಜನ್ಮ ಕೃತಂ ಪಾಪಂ ಯಚ್ಚ ಜನ್ಮಾಂತರಾರ್ಜಿತಂ |
ಮನೋ ವಾಕ್ಕಾಯಜಂ ಯಚ್ಚ ಜ್ಞಾತಾಜ್ಞಾತೇ ಚ ಯೇ ಪುನಃ || 2
ಇತಿ ಸಪ್ತವಿಧಂ ಪಾಪಂ ಸ್ನಾನಾನ್ಮೇ ಸಪ್ತ ಸಪ್ತಿಕೇ |
ಸಪ್ತವ್ಯಾಧಿ ಸಮಾಯುಕ್ತಂ ಹರ ಮಾಕರಿ ಸಪ್ತಮೀ || 3
ಸಪ್ತ ಸಪ್ತ ಮಹಾಸಪ್ತ ಸಪ್ತ ದ್ವೀಪಾ ವಸುಂಧರಾ |
ಶ್ವೇತಾರ್ಕ ಪರ್ಣಮಾದಾಯ ಸಪ್ತಮೀ ರಥ ಸಪ್ತಮೀ || 4
ಅರ್ಥ
ರಥ ಸಪ್ತಮಿ ಶ್ಲೋಕಗಳು ಸೂರ್ಯ ದೇವನ ಅಪಾರ ಮಹಿಮೆ ಮತ್ತು ಸಪ್ತಮಿ ತಿಥಿಯ ಪಾವಿತ್ರ್ಯತೆಯನ್ನು ಸಾರುವ ಭಕ್ತಿಪೂರ್ವಕ ಪ್ರಾರ್ಥನೆಗಳಾಗಿವೆ. ರಥ ಸಪ್ತಮಿ, ಸೂರ್ಯ ಜಯಂತಿ ಎಂದೂ ಆಚರಿಸಲ್ಪಡುತ್ತದೆ, ಇದು ಸೂರ್ಯನು ತನ್ನ ರಥವನ್ನು ಉತ್ತರ ದಿಕ್ಕಿಗೆ ತಿರುಗಿಸಿ, ಸೃಷ್ಟಿಗೆ ನವಚೈತನ್ಯ ಮತ್ತು ಉಷ್ಣತೆಯನ್ನು ತರುವ ಶುಭ ದಿನವಾಗಿದೆ. ಈ ದಿನದಂದು ಅರ್ಕಪತ್ರ (ಬಿಳಿ ಎಕ್ಕದ ಎಲೆ) ಸ್ನಾನ ಮತ್ತು ಸೂರ್ಯಾರಾಧನೆಯು ಸಕಲ ಪಾಪಗಳನ್ನು ನಿವಾರಿಸಿ, ಆರೋಗ್ಯ, ಐಶ್ವರ್ಯ ಮತ್ತು ದೀರ್ಘಾಯುಷ್ಯವನ್ನು ಕರುಣಿಸುತ್ತದೆ ಎಂಬುದು ಹಿಂದೂ ಧರ್ಮದ ನಂಬಿಕೆ. ಈ ಶ್ಲೋಕಗಳು ಭಕ್ತನು ಸೂರ್ಯ ದೇವ ಮತ್ತು ಸಪ್ತಮಿ ದೇವಿಯ ಅನುಗ್ರಹವನ್ನು ಬೇಡುವ ಮಾರ್ಗವಾಗಿದೆ.
ಈ ಸ್ತೋತ್ರದ ಮೊದಲ ಭಾಗವು ಸಪ್ತಮಿ ದೇವಿಯನ್ನು ಉದ್ದೇಶಿಸಿ ಪ್ರಾರ್ಥನೆಯಾಗಿದೆ. “ಸಪ್ತಸಪ್ತಿಪ್ರಿಯೆ ದೇವಿ ಸಪ್ತಲೋಕೈಕದೀಪಿಕೆ | ಸಪ್ತಜನ್ಮಾರ್ಜಿತಂ ಪಾಪಂ ಹರ ಸಪ್ತಮಿ ಸತ್ವరం || 1 ||” ಎಂಬ ಶ್ಲೋಕವು ಸಪ್ತಮಿ ದೇವಿಯನ್ನು, ಸೂರ್ಯನ ಸಪ್ತ ಅಶ್ವಗಳಿಗೆ ಪ್ರಿಯಳಾದವಳು ಮತ್ತು ಸಪ್ತ ಲೋಕಗಳಿಗೆ ಏಕೈಕ ಬೆಳಕನ್ನು ನೀಡುವವಳು ಎಂದು ಸ್ತುತಿಸುತ್ತದೆ. ಭಕ್ತನು ತನ್ನ ಏಳು ಜನ್ಮಗಳಲ್ಲಿ ಮಾಡಿದ ಪಾಪಗಳನ್ನು ತಕ್ಷಣವೇ ನಿವಾರಿಸುವಂತೆ ಪ್ರಾರ್ಥಿಸುತ್ತಾನೆ. ನಂತರದ ಶ್ಲೋಕ “ಯನ್ಮಯಾತ್ರ ಕೃತಂ ಪಾಪಂ ಪೂರ್ವಂ ಸಪ್ತಸು ಜನ್ಮಸು | ತತ್ಸರ್ವಂ ಶೋಕಮೋಹೌ ಚ ಮಾಕರೀ ಹಂತು ಸಪ್ತಮೀ || 2 ||” ಎಂಬುದು, ಈ ಜನ್ಮದಲ್ಲಿ ಮತ್ತು ಹಿಂದಿನ ಏಳು ಜನ್ಮಗಳಲ್ಲಿ ಮಾಡಿದ ಎಲ್ಲಾ ಪಾಪಗಳು, ದುಃಖಗಳು ಮತ್ತು ಭ್ರಮೆಗಳನ್ನು 'ಮಾಕರೀ ಸಪ್ತಮಿ' (ರಥ ಸಪ್ತಮಿಯ ಇನ್ನೊಂದು ಹೆಸರು) ಯ ಶಕ್ತಿಯು ನಾಶಪಡಿಸಲಿ ಎಂದು ಬೇಡುತ್ತದೆ. ಮೂರನೇ ಶ್ಲೋಕ “ನಮಾಮಿ ಸಪ್ತಮೀಂ ದೇವೀಂ ಸರ್ವಪಾಪಪ್ರಣಾಶಿನೀಂ | ಸಪ್ತಾರ್ಕಪತ್ರಸ್ನಾನೇನ ಮಮ ಪಾಪಂ ವ್ಯಾಪೋಹತು || 3 ||” ಸಕಲ ಪಾಪಗಳನ್ನು ನಾಶಮಾಡುವ ಸಪ್ತಮಿ ದೇವಿಗೆ ನಮಸ್ಕರಿಸಿ, ಏಳು ಎಕ್ಕದ ಎಲೆಗಳಿಂದ ಮಾಡುವ ಸ್ನಾನದಿಂದ ತನ್ನ ಪಾಪಗಳು ದೂರವಾಗಲಿ ಎಂದು ಪ್ರಾರ್ಥಿಸುತ್ತದೆ. ಈ ಅರ್ಕಪತ್ರ ಸ್ನಾನವು ಕೇವಲ ದೈಹಿಕ ಶುದ್ಧಿಯಲ್ಲದೆ, ಮಾನಸಿಕ ಮತ್ತು ಆಧ್ಯಾತ್ಮಿಕ ಶುದ್ಧಿಗೂ ಕಾರಣವಾಗುತ್ತದೆ.
ಸ್ತೋತ್ರದ ಎರಡನೇ ಭಾಗವು ಸೂರ್ಯ ದೇವನಿಗೆ ಅರ್ಘ್ಯವನ್ನು ಸಮರ್ಪಿಸುವ ಮಹತ್ವವನ್ನು ತಿಳಿಸುತ್ತದೆ. “ಸಪ್ತ ಸಪ್ತಿ ವಹಪ್ರೀತ ಸಪ್ತಲೋಕ ಪ್ರದೀಪನ | ಸಪ್ತಮೀ ಸಹಿತೋ ದೇವ ಗೃಹಾಣಾರ್ಘ್ಯಂ ದಿವಾಕರ || 1 ||” ಎಂಬ ಅರ್ಘ್ಯ ಶ್ಲೋಕವು, ಸೂರ್ಯನ ಏಳು ಕುದುರೆಗಳಿಗೆ ಪ್ರಿಯನಾದ, ಸಪ್ತ ಲೋಕಗಳನ್ನು ಪ್ರಕಾಶಗೊಳಿಸುವ ದೇವನಾದ ಸೂರ್ಯ ಭಗವಂತನು, ಸಪ್ತಮಿ ತಿಥಿಯೊಂದಿಗೆ ತಾನು ಅರ್ಪಿಸುವ ಅರ್ಘ್ಯವನ್ನು ಸ್ವೀಕರಿಸಲಿ ಎಂದು ಪ್ರಾರ್ಥಿಸುತ್ತದೆ. ರಥ ಸಪ್ತಮಿಯಂದು ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದರಿಂದ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿ ಲಭಿಸುತ್ತದೆ ಎಂದು ನಂಬಲಾಗಿದೆ.
ಅನ್ಯ ಪಾಠದಲ್ಲಿರುವ ಶ್ಲೋಕಗಳು ಪಾಪಗಳ ವಿನಾಶದ ಕುರಿತು ಹೆಚ್ಚು ಸ್ಪಷ್ಟವಾಗಿ ಪ್ರಸ್ತಾಪಿಸುತ್ತವೆ. “ಯದಾ ಜನ್ಮಕೃತಂ ಪಾಪಂ ಮಯಾ ಜನ್ಮಸು ಜನ್ಮಸು | ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ || 1 ||” ಇದು ಅನೇಕ ಜನ್ಮಗಳಲ್ಲಿ ಮಾಡಿದ ಪಾಪಗಳು, ರೋಗಗಳು ಮತ್ತು ದುಃಖಗಳನ್ನು ಮಾಕರೀ ಸಪ್ತಮಿ ನಾಶಮಾಡಲಿ ಎಂದು ಪ್ರಾರ್ಥಿಸುತ್ತದೆ. “ಏತಜ್ಜನಮ ಕೃತಂ ಪಾಪಂ ಯಚ್ಚ ಜನ್ಮಾಂತರಾರ್ಜಿತಂ | ಮನೋ ವಾಕ್ಕಾಯಜಂ ಯಚ್ಚ ಜ್ಞಾತಾಜ್ಞಾತೇ ಚ ಯೇ ಪುನಃ || 2 || ಇತಿ ಸಪ್ತವಿಧಂ ಪಾಪಂ ಸ್ನಾನಾನ್ಮೇ ಸಪ್ತ ಸಪ್ತಿಕೇ | ಸಪ್ತವ್ಯಾಧಿ ಸಮಾಯುಕ್ತಂ ಹರ ಮಾಕರಿ ಸಪ್ತಮೀ || 3 ||” ಎಂಬ ಶ್ಲೋಕಗಳು, ಈ ಜನ್ಮದಲ್ಲಿ ಅಥವಾ ಪೂರ್ವ ಜನ್ಮಗಳಲ್ಲಿ ಮಾಡಿದ, ಮನಸ್ಸು, ಮಾತು ಮತ್ತು ದೇಹದಿಂದ ಮಾಡಿದ, ತಿಳಿದೋ ಅಥವಾ ತಿಳಿಯದೆಯೋ ಮಾಡಿದ ಏಳು ವಿಧದ ಪಾಪಗಳನ್ನು, ಏಳು ರೋಗಗಳೊಂದಿಗೆ ಸೇರಿ, ಸಪ್ತಮಿ ದೇವಿಯು ಸ್ನಾನದ ಮೂಲಕ ನಾಶಮಾಡಲಿ ಎಂದು ಬೇಡುತ್ತದೆ. ಅಂತಿಮವಾಗಿ, “ಸಪ್ತ ಸಪ್ತ ಮಹಾಸಪ್ತ ಸಪ್ತ ದ್ವೀಪಾ ವಸುಂಧರಾ | ಶ್ವೇತಾರ್ಕ ಪರ್ಣಮಾದಾಯ ಸಪ್ತಮೀ ರಥ ಸಪ್ತಮೀ || 4 ||” ಎಂಬ ಶ್ಲೋಕವು 'ಸಪ್ತ ಸಪ್ತ ಮಹಾಸಪ್ತ' ಎಂಬ ಪದಗಳ ಮೂಲಕ ಸೃಷ್ಟಿಯ ಸಪ್ತ ಲೋಕಗಳು, ಸಪ್ತ ದ್ವೀಪಗಳು ಇತ್ಯಾದಿಗಳನ್ನು ಸೂಚಿಸಿ, ಈ ತಿಥಿಯ ಬ್ರಹ್ಮಾಂಡದ ಮಹತ್ವವನ್ನು ತಿಳಿಸುತ್ತದೆ. ಬಿಳಿ ಎಕ್ಕದ ಎಲೆಗಳೊಂದಿಗೆ ರಥ ಸಪ್ತಮಿಯಂದು ಸ್ನಾನ ಮಾಡುವುದು ಸಮಸ್ತ ದೋಷಗಳನ್ನು ನಿವಾರಿಸುತ್ತದೆ ಎಂಬುದು ಇದರ ಸಾರಾಂಶ.
ಪ್ರಯೋಜನಗಳು (Benefits):
ಏಳು ಜನ್ಮಗಳ ಪಾಪಕ್ಷಯ: ಈ ಶ್ಲೋಕಗಳ ಪಠಣ ಮತ್ತು ಅರ್ಕಪತ್ರ ಸ್ನಾನದಿಂದ ಹಿಂದಿನ ಏಳು ಜನ್ಮಗಳಲ್ಲಿ ಮಾಡಿದ ಎಲ್ಲಾ ಪಾಪಗಳು ನಾಶವಾಗುತ್ತವೆ.
ಶಾರೀರಿಕ ಶುದ್ಧಿ ಮತ್ತು ಮಾನಸಿಕ ಶಾಂತಿ: ಅರ್ಕಪತ್ರ ಸ್ನಾನವು ದೇಹವನ್ನು ಶುದ್ಧೀಕರಿಸುವುದಲ್ಲದೆ, ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿಯನ್ನು ನೀಡುತ್ತದೆ, ಆರೋಗ್ಯವನ್ನು ವೃದ್ಧಿಸುತ್ತದೆ.
ಸಪ್ತವ್ಯಾಧಿ ನಾಶ ಮತ್ತು ಕರ್ಮದೋಷ ನಿವಾರಣೆ: ಏಳು ವಿಧದ ಪಾಪಗಳಿಂದ ಉಂಟಾಗುವ ರೋಗಗಳು ಮತ್ತು ಕರ್ಮದೋಷಗಳು ಸಪ್ತಮಿ ದೇವಿಯ ಕೃಪೆಯಿಂದ ದೂರವಾಗುತ್ತವೆ.
ಶೋಕ, ಮೋಹ, ದುಃಖ ನಿವೃತ್ತಿ: ಜೀವನದಲ್ಲಿ ಎದುರಾಗುವ ದುಃಖ, ಭ್ರಮೆ ಮತ್ತು ಚಿಂತೆಗಳು ಸಪ್ತಮಿ ದೇವಿಯ ಆರಾಧನೆಯಿಂದ ದೂರವಾಗಿ ಸಂತೋಷ ಲಭಿಸುತ್ತದೆ.
ಸೂರ್ಯಕೃಪ, ದೀರ್ಘಾಯುಷ್ಯ ಮತ್ತು ಶುಭಲಕ್ಷ್ಮಿ: ಸೂರ್ಯ ದೇವನ ಅನುಗ್ರಹದಿಂದ ಉತ್ತಮ ಆರೋಗ್ಯ, ದೀರ್ಘಾಯುಷ್ಯ, ಸಂಪತ್ತು ಮತ್ತು ಸಮೃದ್ಧಿ ಪ್ರಾಪ್ತಿಯಾಗುತ್ತದೆ.
ರಥ ಸಪ್ತಮಿ ಶ್ಲೋಕಗಳು ಎಂದರೇನು?
ರಥ ಸಪ್ತಮಿ ಶ್ಲೋಕಗಳು ಸೂರ್ಯ ದೇವ ಮತ್ತು ಸಪ್ತಮಿ ದೇವಿಯನ್ನು ಸ್ತುತಿಸುವ ಪವಿತ್ರ ಪ್ರಾರ್ಥನೆಗಳಾಗಿವೆ. ಇವು ಸಪ್ತಮಿ ತಿಥಿಯ ಮಹತ್ವ ಮತ್ತು ಅರ್ಕಪತ್ರ ಸ್ನಾನದ ಪ್ರಯೋಜನಗಳನ್ನು ವಿವರಿಸುತ್ತವೆ.
ಈ ಶ್ಲೋಕಗಳನ್ನು ಯಾವಾಗ ಪಠಿಸಬೇಕು?
ಈ ಶ್ಲೋಕಗಳನ್ನು ರಥ ಸಪ್ತಮಿ ದಿನದಂದು, ವಿಶೇಷವಾಗಿ ಸೂರ್ಯೋದಯದ ಸಮಯದಲ್ಲಿ, ಅರ್ಕಪತ್ರ ಸ್ನಾನ ಮಾಡಿದ ನಂತರ ಸೂರ್ಯಾರಾಧನೆಯ ಭಾಗವಾಗಿ ಪಠಿಸುವುದು ಅತ್ಯಂತ ಶುಭಕರ.
ರಥ ಸಪ್ತಮಿ ಶ್ಲೋಕಗಳನ್ನು ಪಠಿಸುವುದರಿಂದ ಆಗುವ ಪ್ರಯೋಜನಗಳೇನು?
ಈ ಶ್ಲೋಕಗಳನ್ನು ಪಠಿಸುವುದರಿಂದ ಏಳು ಜನ್ಮಗಳ ಪಾಪಗಳು ನಾಶವಾಗುತ್ತವೆ, ದೇಹ ಶುದ್ಧಿಯಾಗುತ್ತದೆ, ಮಾನಸಿಕ ಶಾಂತಿ ಲಭಿಸುತ್ತದೆ, ರೋಗಗಳು ಮತ್ತು ಕರ್ಮದೋಷಗಳು ನಿವಾರಣೆಯಾಗಿ ಸೂರ್ಯ ದೇವನ ಕೃಪೆ ದೊರೆಯುತ್ತದೆ.
ಯಾರು ಈ ಶ್ಲೋಕಗಳನ್ನು ಪಠಿಸಬಹುದು?
ಸೂರ್ಯ ದೇವನ ಅನುಗ್ರಹವನ್ನು ಬಯಸುವ, ಪಾಪಗಳಿಂದ ಮುಕ್ತಿ ಪಡೆಯಲು ಇಚ್ಛಿಸುವ, ಉತ್ತಮ ಆರೋಗ್ಯ ಮತ್ತು ಸಮೃದ್ಧಿ ಬೇಕೆನ್ನುವ ಯಾವುದೇ ಭಕ್ತರು ಈ ಶ್ಲೋಕಗಳನ್ನು ಪಠಿಸಬಹುದು.
ಈ ಶ್ಲೋಕಗಳನ್ನು ಎಷ್ಟು ಬಾರಿ ಪಠಿಸಬೇಕು?
ಸಾಮಾನ್ಯವಾಗಿ, ಈ ಶ್ಲೋಕಗಳನ್ನು 1, 3, 7, 11, ಅಥವಾ 108 ಬಾರಿ ಪಠಿಸುವುದು ರೂಢಿ. ಭಕ್ತಿಯಿಂದ ಮತ್ತು ಏಕಾಗ್ರತೆಯಿಂದ ಪಠಿಸುವುದು ಮುಖ್ಯ.
ಈ ಶ್ಲೋಕಗಳ ಮೂಲ ಯಾವುದು?
ಈ ಶ್ಲೋಕಗಳು ಹಿಂದೂ ಧರ್ಮದ ಪುರಾಣಗಳು ಮತ್ತು ಧಾರ್ಮಿಕ ಗ್ರಂಥಗಳಲ್ಲಿ ರಥ ಸಪ್ತಮಿ ಆಚರಣೆಯ ಸಂದರ್ಭದಲ್ಲಿ ಉಲ್ಲೇಖಿಸಲ್ಪಟ್ಟಿವೆ. ಇವು ಸೂರ್ಯಾರಾಧನೆಯ ಪ್ರಾಚೀನ ಸಂಪ್ರದಾಯದ ಭಾಗವಾಗಿವೆ.
3 days ago | [YT] | 2
View 1 reply
VasanthaaHarish 🙏
#ಮಾಘ #ಲಲಿತಾ #ಪಂಚಮಿ ವಿಶೇಷ
ಶ್ರೀ ಲಲಿತಾ ಪ್ರಾತಃ ಸ್ಮರಣ ಪಂಚರತ್ನ ಸ್ತೋತ್ರಂ
#ಪ್ರಾತಃ ಸ್ಮರಾಮಿ ಲಲಿತಾವದನಾರವಿಂದಂ
ಬಿಂಬಾಧರಂ ಪೃಥುಲಮೌಕ್ತಿಕಶೋಭಿನಾಸಮ್ |
ಆಕರ್ಣದೀರ್ಘನಯನಂ ಮಣಿಕುಂಡಲಾಢ್ಯಂ
ಮಂದಸ್ಮಿತಂ ಮೃಗಮದೋಜ್ಜ್ವಲಫಾಲದೇಶಮ್ || 1 ||
#ಪ್ರಾತರ್ಭಜಾಮಿ ಲಲಿತಾಭುಜಕಲ್ಪವಲ್ಲೀಂ
ರಕ್ತಾಂಗುಳೀಯಲಸದಂಗುಳಿಪಲ್ಲವಾಢ್ಯಾಮ್ |
ಮಾಣಿಕ್ಯಹೇಮವಲಯಾಂಗದಶೋಭಮಾನಾಂ
ಪುಂಡ್ರೇಕ್ಷುಚಾಪಕುಸುಮೇಷುಸೃಣೀರ್ದಧಾನಾಮ್ || 2 ||
#ಪ್ರಾತರ್ನಮಾಮಿ ಲಲಿತಾಚರಣಾರವಿಂದಂ
ಭಕ್ತೇಷ್ಟದಾನನಿರತಂ ಭವಸಿಂಧುಪೋತಮ್ |
ಪದ್ಮಾಸನಾದಿಸುರನಾಯಕಪೂಜನೀಯಂ
ಪದ್ಮಾಂಕುಶಧ್ವಜಸುದರ್ಶನಲಾಂಛನಾಢ್ಯಮ್ || 3 ||
#ಪ್ರಾತಃ ಸ್ತುವೇ ಪರಶಿವಾಂ ಲಲಿತಾಂ ಭವಾನೀಂ
ತ್ರಯ್ಯಂತವೇದ್ಯವಿಭವಾಂ ಕರುಣಾನವದ್ಯಾಮ್ |
ವಿಶ್ವಸ್ಯ ಸೃಷ್ಟವಿಲಯಸ್ಥಿತಿಹೇತುಭೂತಾಂ
ವಿದ್ಯೇಶ್ವರೀಂ ನಿಗಮವಾಙ್ಮಮನಸಾತಿದೂರಾಮ್ || 4 ||
#ಪ್ರಾತರ್ವದಾಮಿ ಲಲಿತೇ ತವ ಪುಣ್ಯನಾಮ
ಕಾಮೇಶ್ವರೀತಿ ಕಮಲೇತಿ ಮಹೇಶ್ವರೀತಿ |
ಶ್ರೀಶಾಂಭವೀತಿ ಜಗತಾಂ ಜನನೀ ಪರೇತಿ
ವಾಗ್ದೇವತೇತಿ ವಚಸಾ ತ್ರಿಪುರೇಶ್ವರೀತಿ || 5 ||
#ಯಃ ಶ್ಲೋಕಪಂಚಕಮಿದಂ ಲಲಿತಾಂಬಿಕಾಯಾಃ
ಸೌಭಾಗ್ಯದಂ ಸುಲಲಿತಂ ಪಠತಿ ಪ್ರಭಾತೇ |
ತಸ್ಮೈ ದದಾತಿ ಲಲಿತಾ ಝಟಿತಿ ಪ್ರಸನ್ನಾ
ವಿದ್ಯಾಂ ಶ್ರಿಯಂ ವಿಮಲಸೌಖ್ಯಮನಂತಕೀರ್ತಿಮ್ ||
🙏🙏🙏🙏🙏🙏🙏🙏🙏🙏🙏🙏
5 days ago | [YT] | 5
View 1 reply
VasanthaaHarish 🙏
#ವಸಂತ #ಪಂಚಮಿ ಅಥವಾ #ಸರಸ್ವತಿ #ಪಂಚಮಿ:-
ಇದೇ #ಮಾಘ ಮಾಸದ ಶುಕ್ಲ ಪಕ್ಷದ ಐದನೇ ದಿನ ಅಂದರೆ ಪಂಚಮಿ ತಿಥಿಯ ಈ ದಿನ (23-01-2026) ‘#ವಸಂತ ಪಂಚಮಿ’ ಹಬ್ಬ ಎಂದು ಸರಸ್ವತಿಯನ್ನು ಆರಾಧಿಸುತ್ತಾರೆ. ಈ ದಿನದಿಂದಲೇ ವಸಂತನ ಆಗಮನವಾಗುತ್ತದೆ. ಶ್ರೀ ಕೃಷ್ಣ ಪರಮಾತ್ಮ ವಸಂತನನ್ನು #ಋತುಗಳ ರಾಜ ಎಂದು ಹೊಗಳಿದ್ದಾನೆ. #ವಸಂತ ಋತುವಿನಲ್ಲಿ ಸೂರ್ಯನು ಪ್ರಕಾಶಮಾನವಾಗಿ ಬೆಳಕನ್ನು ಚೆಲ್ಲುತ್ತಾನೆ. ಹೊಳೆವ ಬೆಳಕಿನ ಕಿರಣಗಳಿಂದ ಪ್ರಕೃತಿಯು ಕಂಗೊಳಿಸುತ್ತದೆ. ಇಂಥ ವಿಶೇಷಗಳಿಗಾಗಿ ‘ವಸಂತ ಋತು’ ವನ್ನು ಸಂಭ್ರಮದಿಂದ ಸ್ವಾಗತಿಸುತ್ತಾರೆ. ಇದು ಉತ್ತರ ಭಾರತದ ವರೆಗೆ ಬಹಳ ವಿಶೇಷ ವಾದ ದಿನ. ಶುಭ ಕಾರ್ಯಗಳಿಗೆ ಪ್ರಶಸ್ತವಾದ ದಿನ. ಮುಹೂರ್ತವನ್ನು ನೋಡು ವುದೇ ಬೇಡ. ಇಡೀ ದಿನವೂ ಸರ್ವಾರ್ಥಕ ಸಿದ್ಧಯೋಗವಿದೆ. ದೇವಿ ಭಾಗವತದ ಪ್ರಕಾರ ಸರಸ್ವತಿ ದೇವಿ ಆದಿಶಕ್ತಿಯ ಮೂರು ರೂಪಗಳಲ್ಲಿ ಒಬ್ಬಳಾಗಿದ್ದಾಳೆ. ಜ್ಞಾನ ಸಂಗೀತ, ಕಲೆಗಳ, ಅಧಿದೇವತೆ ಸರಸ್ವತಿಯಾಗಿದ್ದಾಳೆ. ಬುದ್ಧಿ ಚುರುಕಾಗಲು ಕಂಠ ಮಧುರವಾಗಲು, ವಿದ್ಯೆ ಬುದ್ಧಿ ನೆನಪಿನ ಶಕ್ತಿ, ಸಿದ್ಧಿಸಲು ಸರಸ್ವತಿಯನ್ನು ಆರಾಧಿಸುತ್ತೇನೆ.
ವಸಂತ ಋತುವಿನ ದಿನವೇ ಸರಸ್ವತಿ ದೇವಿ ಹುಟ್ಟಿದ ದಿನ ಎನ್ನುತ್ತಾರೆ. ಬ್ರಹ್ಮ ಬ್ರಹ್ಮಾಂಡವನ್ನು ಸೃಷ್ಟಿಸಿದ. ಆದರೆ ಎಲ್ಲೆಲ್ಲೂ ನಿಶಬ್ದ ಶಬ್ದವೇ ಇರದ ಬ್ರಹ್ಮಾಂ ಡದಿಂದ ಬ್ರಹ್ಮನಿಗೆ ಬಹಳ ಬೇಸರವಾಯಿತು. ಬ್ರಹ್ಮಾಂಡವೇ ಖಾಲಿ ಖಾಲಿ ಎನಿಸಿ
ಬ್ರಹ್ಮ ತನ್ನ ಶಂಖದಲ್ಲಿದ್ದ ನೀರನ್ನು ತೆಗೆದು ಭೂಮಿಯ ಮೇಲೆ ಸಿಂಪಡಿಸಿದಾಗ
ಭೂಮಿಗೆ ಬಿಟ್ಟ ನೀರಿನಿಂದ ಭೂಮಿ ಕಂಪಿಸಿತು. ಆಗ ಭೂಮಿಯೊಳಗಿಂದ ದೇವಿ ಉದ್ಭವಿಸಿದಳು. ಆಕೆ ತನ್ನ ನಾಲ್ಕು ಕೈಗಳಲ್ಲಿ, ವೀಣೆ, ಪುಸ್ತಕ, ಜಪದಮಣಿ, ಕಮಂಡಲ, ಹಿಡಿದುಕೊಂಡು ಉದ್ಭವಿಸದ ದೇವಿಯೇ ‘ಸರಸ್ವತಿ’ ಸರಸ್ವತಿ. ವೀಣೆಯಿಂದ ನಾದ ನುಡಿಸುತ್ತಿದ್ದಂತೆ, ಬ್ರಹ್ಮಾಂಡದಲ್ಲಿ ಶಬ್ದ ಉಗಮವಾಗಿ ಬ್ರಹ್ಮಾಂಡವೇ ಲವಲವಿಕೆಯಿಂದ ತುಂಬುತ್ತದೆ. ಹೀಗೆ ‘ ದೇವಿ ಸರಸ್ವತಿ’ ಜನಿಸಿದ ದಿನ ಮಾಘ ಮಾಸದ ಶುಕ್ಲ ಪಕ್ಷದ ವಸಂತ ಮಾಸದ ಆರಂಭದ ದಿನವಾಗಿದ್ದು ‘ಲಕ್ಷ್ಮಿ ಪೂಜೆ’ ಎಂದು ಸರಸ್ವತಿ ಪೂಜೆಯನ್ನು ಆಚರಿಸುವ ಪದ್ಧತಿ ಹಿಂದಿನಿಂದಲೂ ನಡೆದು ಬಂದಿದೆ.
ಸರಸ್ವತಿ ಪಂಚಮಿ ಯನ್ನು‘ ಶ್ರೀ ಪಂಚಮಿ’ ಎಂದು ಕರೆಯುತ್ತಾರೆ. ಈ ದಿನ ಮಕ್ಕಳು ಸರಸ್ವತಿ ದೇವಿ ಯನ್ನು ಆರಾಧಿಸಿ ಸ್ತೋತ್ರ ಪಠಿಸಿದರೆ ಮಕ್ಕಳಿಗೆ ಜ್ಞಾನ ವೃದ್ಧಿಯಾಗುತ್ತದೆ. ಸಾಹಿತ್ಯ, ಸಂಗೀತ, ಕಲೆ, ನೃತ್ಯ, ಶಿಲ್ಪ ಕಲೆ, ಸಕಲ ವಿದ್ಯೆಗಳನ್ನು ಅನುಗ್ರಹಿಸುತ್ತಾಳೆ. ಶಾಲೆಗಳಲ್ಲಿ ವಾರ್ಷಿಕ ಪರೀಕ್ಷೆಗೆ ಮುನ್ಸೂಚಕವಾಗಿ ಸರಸ್ವತಿ ಪೂಜೆಯನ್ನು ಇದೇ ದಿನ ಆಚರಣೆ ಮಾಡುತ್ತಾರೆ. ಮಕ್ಕಳಿಗೆ ಸ್ತೋತ್ರ, ಹಾಡು, ಕಂಠಪಾಠದ ಪದ್ಯಗಳನ್ನು, ಹೇಳಿಸುತ್ತಾರೆ. ರಾಮಾಯಣದಲ್ಲಿ ಈ ಸಂಗತಿಯನ್ನು ಉಲ್ಲೇಖಿಸಿದ್ದಾರೆ ಶ್ರೀ ರಾಮನ ಬರಬೇಕೆಗಾಗಿ ಕಾಯುತ್ತಿದ್ದ ಶಬರಿಯನ್ನು ‘ವಸಂತ ಪಂಚಮಿ’ ಯಂದೇ ಭೇಟಿಯಾಗಿ ಪ್ರೀತಿಯಿಂದ ಕೊಟ್ಟ ಹಣ್ಣುಗಳನ್ನು ತಿಂದು ಶಬರಿಯ ಅಪೇಕ್ಷೆಯಂತೆ ಮುಕ್ತಿ ಕರುಣಿಸಿದನು. ಸಗರ ಚಕ್ರವರ್ತಿಯ ಅರವತ್ತು ಸಾವಿರ ಮಕ್ಕಳು ಕಪಿಲ ಮುನಿಗಳ ಶಾಪದಿಂದ ಸದ್ಗತಿ ದೊರೆಯದೆ ಅಲೆಯುತ್ತಿ ದ್ದರು. ಅವರ ಮೋಕ್ಷಕ್ಕಾಗಿ ಕಠಿಣ ತಪಸ್ಸು ಮಾಡುತ್ತಿದ್ದ ಭಗೀರಥನ ಭಕ್ತಿಗೆ ಮೆಚ್ಚಿ -ಒಪ್ಪಿ, ತಾಯಿ ಗಂಗೆ ಧರೆಗಿಳಿದು ಬಂದು ಇಡೀ ಭೂಮಿಯನ್ನು ತಂಪಾಗಿಸಿ, ಸಗರ ಚಕ್ರವರ್ತಿ ಮಕ್ಕಳಿಗೆ ಮೋಕ್ಷ ಕರುಣಿಸಿದ್ದು ಮಾಘ ಮಾಸ ‘ವಸಂತ ಪಂಚಮಿ’ ದಿನ ಆದುದರಿಂದ ಇಂದು ಗಂಗೆಯಲ್ಲಿ ಸ್ನಾನ ಮಾಡಿದರೆ ಪುಣ್ಯ ಲಭಿಸುತ್ತದೆ.
ದಕ್ಷ ಪುತ್ರಿ ದಾಕ್ಷಾಣಿಯ ಸಾವಿನಿಂದ ಕಂಗೆಟ್ಟ ಶಿವನು ಧ್ಯಾನದಲ್ಲಿ ಮುಳುಗಿರುವಾಗ ಪರ್ವತರಾಜನ ಪುತ್ರಿ ಪಾರ್ವತಿ ಶಿವನನ್ನು ಒಲಿಸಿಕೊಳ್ಳಲು ಕಠಿಣ ತಪಸ್ಸಿನಲ್ಲಿ ನಿರತಳಾಗಿದ್ದಳು. ಇತ್ತ ದೇವತೆಗಳಿಗೆ ಕಂಠಕನಾಗಿದ್ದ ಅಸುರ ತಾರಕಾಸುರನ ಸಂಹಾರಕ್ಕಾಗಿ ಶಿವ ಪಾರ್ವತಿಯರ ವಿವಾಹ ಅನಿವಾರ್ಯವಾಗಿತ್ತು. ದೇವಾನು ದೇವತೆಗಳೆಲ್ಲ ನಿರ್ಧರಿಸಿ ಮನ್ಮಥನನ್ನು ಭೂಮಿಗೆ ಕಳಿಸಿ ಶಿವನ ಧ್ಯಾನ ಭಂಗ ಮಾಡಿ ಪಾರ್ವತಿಯತ್ತ ಮನಸ್ಸು ಒಲಿಯುವಂತೆ ಮಾಡಲು ಪ್ರೇರೇಪಿಸಿದರು. ದೇವತೆಗಳ ಅಪೇಕ್ಷೆಯಂತೆ, ವಸಂತನೊಂದಿಗೆ ಬಂದ ಮನ್ಮಥ ಹೊ ಬಾಣವನ್ನು ಹೂಡಿ ಶಿವನನ್ನು ಎಚ್ಚರಿಸಿದ ದಿನ ಇದೆ ಆಗಿತ್ತು. ಕೋಪಗೊಂಡ ಶಿವನು ತನ್ನ ಮೂರನೇ ಕಣ್ಣು ತೆರೆದು. ಮನ್ಮಥನನ್ನು ಕಳೆದುಕೊಂಡ ರತಿಯ ರೋದನ ಹಾಗೂ ಪ್ರಾರ್ಥನೆಗೆ ಮಣಿದ ಶಿವನು ಮನ್ಮಥನನ್ನು ಬದುಕಿಸಿದನು.
ಈ ಮೂಲಕ ‘ಶಿವ ಪಾರ್ವತಿಯರ’ ಕಲ್ಯಾಣಕ್ಕೆ ಮನ್ಮಥನು ಕಾರಣನಾದನು.
ಹೀಗಾಗಿ ಇದನ್ನು ‘ಮದನ ಪಂಚಮಿ’ ಎಂದು ಕರೆಯುತ್ತಾರೆ. ಇಂದು ಮನೆಗಳಲ್ಲಿ ‘ರತಿ ಮನ್ಮಥರ’ ಫೋಟೋ ಇಟ್ಟು ಮದುವೆಯಾದ ಹೆಣ್ಣು ಮಕ್ಕಳು ಪೂಜೆ ಮಾಡಿ ಪ್ರಾರ್ಥಿಸಿದರೆ, ದಾಂಪತ್ಯ ಜೀವನ ಸುಖಕರವಾಗಿರುತ್ತದೆ ಎಂದೂ, ಹಾಗೆಯೇ ವಿವಾಹ ಆಗುವ ಹೆಣ್ಣು ಮಕ್ಕಳು ಪೂಜಿಸಿದರೆ, ಮನ್ಮಥನಂತ ಸುಂದರ ರೂಪ, ಶಿವನಂತ ಶಕ್ತಿಶಾಲಿ ಯಾದ ಪತಿ ದೊರೆಯುತ್ತಾನೆ ಎಂಬ ನಂಬಿಕೆ ಇದೆ.‘ವಸಂತ ಋತು’ ಆರಂಭವಾಗಿ, ಚಳಿ ಕಡಿಮೆಯಾಗುತ್ತದೆ ವಸಂತ ಕಾಲದ ವಾತಾವರಣ ಮೈ ಮನಕ್ಕೆ ಹಿತಕರವಾಗಿರುತ್ತದೆ. ಮನಸ್ಸು ಉಲ್ಲಾಸವಾಗಿರುತ್ತದೆ.
ವಿಶೇಷವಾಗಿ ಸರಸ್ವತಿ ಪೂಜೆ ಮಾಡುತ್ತಾರೆ. ಪೂಜೆಗೆ ಸರಸ್ವತಿ ಫೋಟೋವನ್ನು ಇಟ್ಟು, ಮುಂದೆ ಗಣಪತಿ, ಜೊತೆಗೆ ಮಕ್ಕಳ ಕೆಲವು ಪುಸ್ತಕಗಳು ಪೆನ್ನು ಪೆನ್ಸಿಲ್ಲು ಕಂಪಾಸ್ ಬಾಕ್ಸ್ ಇವುಗಳನ್ನು ಜೋಡಿಸುತ್ತಾರೆ. ಸರಸ್ವತಿ ದೇವಿಗೆ ಹಳದಿ ಬಟ್ಟೆ ಇಷ್ಟವಾದ್ದರಿಂದ ಆ ಬಟ್ಟೆಯನ್ನು ಧರಿಸುತ್ತಾರೆ. ಹಳದಿ ಬಣ್ಣದ ಸೇವಂತಿಗೆ, ಗುಲಾಬಿ, ದಾಸವಾಳ, ಮುಂತಾದ ಹೂಗಳಿಂದ ಅಲಂಕರಿಸುತ್ತಾರೆ. ಮೊದಲು ವಿದ್ಯಾಧಿಪತಿ ಗಣಪತಿ ಪೂಜೆ ಮಾಡಿ, ವಿದ್ಯಾದೇವಿ ಸರಸ್ವತಿಗೆ ಮಂಗಳ ದ್ರವ್ಯ ಗಳನ್ನು ಅರ್ಪಿಸಿ ವಿಶೇಷವಾಗಿ ಆರಾಧಿಸುತ್ತಾರೆ. ನೆರೆಹೊರೆ ಮಕ್ಕಳೆಲ್ಲ ಸೇರಿ ಹಾಡುತ್ತಾರೆ. ಪುಟ್ಟ ಮಕ್ಕಳು ಗಟ್ಟಿಯಾಗಿ ಸ್ತೋತ್ರವನ್ನು ಹೇಳುತ್ತಾರೆ. ಸರಸ್ವತಿ ಅಷ್ಟೋತ್ತರ ಹೇಳಿ ಅರ್ಚನೆ ಮಾಡುತ್ತಾರೆ. ಚಿಕ್ಕ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಆರಂಭಿಸುತ್ತಾರೆ. ಈ ದಿನ ಎಷ್ಟು ಶುಭ ಎಂದರೆ, ಗುದ್ದಲಿ ಪೂಜೆ, ಗೃಹಪ್ರವೇಶ, ಮಕ್ಕಳಿಗೆ ಚೌಲ, ಅಕ್ಷರಾಭ್ಯಾಸ, ನೃತ್ಯ ಕಲೆ ಅಥವಾ ಸಂಗೀತ ಅಭ್ಯಾಸ ಇನ್ನು ಏನಾದರೂ ಹೊಸತಾಗಿ ಕಲಿಯಲು ಶುಭಾರಂಭದ ದಿನವಾಗಿದೆ. ವೇದಿಕೆ ಮೇಲೆ ಮೊಟ್ಟಮೊದಲು ನೃತ್ಯ ಪ್ರದರ್ಶನ, ಸಂಗೀತ ಅಥವಾ ಬೇರೆ ಯಾವುದೇ ಕಲೆಯನ್ನು ಆರಂಭ ಮಾಡಲು ಶುಭದಿನ ಶುಭ ಮಹೂರ್ತ. ಸರಸ್ವತಿ ನೈವೇದ್ಯಕ್ಕೆ
ವಿಶೇಷವಾಗಿ ಕೇಸರಿಬಾತು ಮಾಡುತ್ತಾರೆ ಅಥವಾ ಪಂಚಕಜ್ಜಾಯ, ಸಿಹಿ ಅವಲಕ್ಕಿ ಯನ್ನು ಮಾಡಿ ಹಂಚುತ್ತಾರೆ. ಈ ದಿನ ವಸಂತಾಗಮನದ ಸಂತೋಷ ಜೊತೆಗೆ ಪೂಜೆಯ ಕಾರಣ ಒಗ್ಗಟ್ಟಾಗಿ ಸಂಭ್ರಮಿಸುತ್ತಾರೆ.
ವಸಂತ / ಸರಸ್ವತಿ ಪಂಚಮಿ ಜ್ಞಾನ, ಕಲಿಕೆ ಮತ್ತು ಹೊಸ ಆರಂಭಗಳ ಸಂಕೇತವಾಗಿದೆ. ವಸಂತನ ಆಗಮನದೊಂದಿಗೆ ಮನಸ್ಸಿಗೆ ಉಲ್ಲಾಸ, ಜೀವನಕ್ಕೆ ಹೊಸ ಚೈತನ್ಯ ದೊರೆಯುತ್ತದೆ. ಸರಸ್ವತಿ ದೇವಿಯ ಕೃಪೆಯಿಂದ ವಿದ್ಯೆ, ಬುದ್ಧಿ ಮತ್ತು ಸೃಜನಶೀಲತೆ ವೃದ್ಧಿಯಾಗಿ ಎಲ್ಲರ ಬದುಕು ಸಾರ್ಥಕವಾಗಲಿ.
|| ಸರಸ್ವತಿ ಸ್ತೋತ್ರ ||
ಶ್ವೇತಪದ್ಮಾಸನಾ ದೇವೀ
ಶ್ವೇತಪುಷ್ಪಪಶೋಭಿತಾ |
ಶ್ವೇತಾಂಬರಧರಾ ನಿತ್ಯಾ
ಶ್ವೇತಗಂಧಾನುಲೇಪನಾ ॥೧॥
ಶ್ವೇತಾಕ್ಷಸೂತ್ರಹಸ್ತಾ ಚ
ಶ್ವೇತಚಂದನಚರ್ಚಿತಾ |
ಶ್ವೇತವೀಣಾಧರಾ ಶುಭ್ರಾ
ಶ್ವೇತಾಲಂಕಾರಭೂಷಿತಾ ||೨||
ವಂದಿತಾ ಸಿದ್ಧಗಂಧವೈ೯ರಂಚಿತಾ
ಸುರದಾನವೈಃ |
ಪೂಜಿತಾ ಮುನಿಭಿಃ ಸರ್ವೈಕೃಷಿಭಿಃ
ಸೂಯತೇ ಸದಾ ||೩||
ಸ್ತೋತ್ರೇಣಾನೇನ ತಾಂ
ದೇವೀಂ ಜಗದ್ಧಾತ್ರೀಂ ಸರಸ್ವತೀಂ |
ಯೇ ಸ್ಮರಂತಿ ತ್ರಿಸಂಧ್ಯಾಯಾಂ ಸರ್ವಾಂ
ವಿದ್ಯಾಂ ಲಭಂತೇ ತೇ ||೪||
#ವಸಂತಪಂಚಮಿ #ಪಂಚಮಿ
5 days ago (edited) | [YT] | 8
View 4 replies
VasanthaaHarish 🙏
#ಅಯೋಧ್ಯ ಎಂಬ #ಹೃದಯ ಮಂದಿರದಲ್ಲಿ ಶುದ್ಧ ಪರಬ್ರಹ್ಮನೆಂಬ ದಶರಥನಿಗೆ ಇಚ್ಚಾಶಕ್ತಿ, ಕ್ರಿಯಾಶಕ್ತಿ, ಜ್ಞಾನಶಕ್ತಿ ಎಂಬ ಮೂರು ಜನ ಹೆಂಡತಿಯರು . ಜ್ಞಾನಶಕ್ತಿ ಎಂಬ ಕೌಶಲ್ಯಯಲ್ಲಿ ಆತ್ಮಜ್ಯೋತಿಸ್ವರೂಪನೆಂಬ ಶ್ರೀರಾಮ ಅವತರಿಸಿದ, ಆತ್ಮಸ್ವರೂಪ ಶ್ರೀರಾಮನಿಗೆ ತತ್ವದ್ವಯರಾದ ವಸಿಷ್ಠ, ವಿಶ್ವಾಮಿತ್ರ ಇಬ್ಬರು ಸೇರಿ ಮುಕ್ತಿಕಾಂತ ಎಂಬ ಸೀತೆಯನ್ನು ತಂದು ಆತ್ಮಜ್ಯೋತಿ ಶ್ರೀರಾಮ ಜೊತೆ ಮದುವೆ ಮಾಡಿ ಸೇರಿಸಿದರು, ಇಚ್ಚಾಶಕ್ತಿ ಎಂಬ ಕೈಕೆಯ ಜೊತೆ ಪ್ರಾರಬ್ಧ ಎಂಬ ಮಂಥರೆ ಸೇರಿ ಕಷ್ಟ ಎಂಬ ಕಾಡಿಗೆ ರಾಮನ ಅಟ್ಟಿದರು, ಕಷ್ಟ ಎಂಬ ಕಾಡಿಗೆ ಆತ್ಮ ಹೋಗುವಾಗ ಮುಕ್ತಿ ಹೇಳಿತ್ತಂತೆ ಆತ್ಮ ಎಲ್ಲಿ ಮುಕ್ತಿ ಅಲ್ಲಿ, ಆತ್ಮ ಜೊತೆ ಮುಕ್ತಿ ಹೊರಡುವಾಗ ಕ್ರಿಯಾಶುದ್ದಿ ಎಂಬ ಲಕ್ಷ್ಮಣ. ಆತ್ಮ, ಮುಕ್ತಿ ಇರುವಲ್ಲಿ ಕ್ರಿಯಾ ಇರಬೇಕು ಎಂದು ಅವರ ಜೊತೆ ಹೋರಟ,ಮೂವರು ಕಷ್ಟ ಎಂಬ ಕಾಡಲ್ಲಿ ಅಲೆಯುವಾಗ (ರುಧಿರ,ಮಾಂಸ,ಮೇದಸ್ಸು,ಸ್ನಾಯು,ಅಸ್ತಿ,ಮಜ್ಜೆ ಶುಕ್ಲ) ಸಪ್ತದಾತು ಎಂಬ ಸಮುದ್ರದ ಮದ್ಯೆ ಅಜ್ಞಾನ ಎಂಬ ಲಂಕಾಪಟ್ಟಣದಲ್ಲಿ ದಶಮಮಕಾರ ಎಂಬ ದಶಾನನಾ ರಾಜ, ಸ್ವತಃ ತಾನೇ ಬರಲಾರದೇ ಇದ್ದ ಮುಕ್ತಿಕಾಂತಿನ್ನು ಮಾಯೆ (ಮಾಯಾಜಿಂಕೆ ) ಎಂಬ ಬಲೆ ಬಿಸಿ ಕದ್ದು ಹೊತ್ತು ತಂದು ಅಜ್ಞಾನ ಎಂಬ ಲಂಕಾಪಟ್ಟಣದಲ್ಲಿಯ ಶೋಕವನ ಎಂಬ ಅಶೋಕವನದಲ್ಲಿ ಬಚ್ಚಿಟ್ಟ. ಮುಕ್ತಿ ಮಾಯವಾದ ಕೂಡಲೇ ಆತ್ಮಜ್ಯೋತಿಗೆ ದುಃಖ ಆವರಿಸಿತು, ಆತ್ಮಜ್ಯೋತಿ ಎಂಬ ರಾಮ ಕ್ರಿಯಾಶುದ್ದಿ ಎಂಬ ಲಕ್ಷ್ಮಣ ಕೂಡ ಮುಕ್ತಿಕಾಂತಿಯನ್ನು ಹುಡುಕಾಡುವಾಗ ಮನಸ್ಸು ಎಂಬ ಸುಗ್ರೀವ ಬುದ್ದಿ ಎಂಬ ಆಂಜೆನೇಯ ಸಿಕ್ಕರು, ಮನಸ್ಸಿಗೆ ಇದ್ದ ಮದ ಎಂಬ ವಾಲಿಯ ಭಯ ಹೋಗಲಾಡಿಸಿ ಮನಸ್ಸುನು ಶುದ್ಧಗೊಳ್ಳಿಸಿದ, ಬುದ್ದಿ ಎಂಬ ಆಂಜೆನೇಯ ಅಜ್ಞಾನ ಲಂಕೆ ಹೊಕ್ಕು ಮುಕ್ತಿ ಕಂಡು ಆತ್ಮಕ್ಕೆ ಮುಕ್ತಿ ಸ್ಥಳ ಹುಡಿಕಿಕೊಟ್ಟು 77 ಕೋಟಿ ನರನಾಡಿ ಎಂಬ ಕಪಿವೀರನ್ನು ಸೇರಿಸಿಕೊಂಡು ಸಪ್ತದಾತುಗಳ ಮದ್ಯೆ ಇರುವ ಅಜ್ಞಾನ ಲಂಕೆಗೆ ಭಕ್ತಿ ಎಂಬ ಸೇತುವೆ ಕಟ್ಟಿ ವಿವೇಕ ಎಂಬ ವಿಭೀಷಣನ ಸಹಾಯದಿಂದ ಅರಿಷಡರಿಪು (ಕಾಮ, ಕ್ರೋದ, ಮದ, ಮತ್ಸರ, ಲೋಭ, ಮೋಹ ) ಎಂಬ ರಾಕ್ಷಸ ವೀರನ್ನು ಕೊಂದು ಆತ್ಮಜ್ಯೋತಿ ಎಂಬ ರಾಮನಿಂದ ದಶಮಮಕಾರ ರಾವಣನ್ನು ಸಂಹಾರ ಮಾಡಿಸಿದ. ಅಜ್ಞಾನ ದಿಂದ ಮುಕ್ತಿನ್ನು ಕಾಪಾಡಿಕೊಂಡು ಅಯೋದ್ಯೆ ಎಂಬ ಜ್ಞಾನ ಹೃದಯ ಮಂದಿರದಲ್ಲಿ ಸದಾ ಪಟ್ಟಾಭಿಷೇಕನಾಗಿ ಪ್ರಕಾಶತಿರುವನೇ ಆತ್ಮಜ್ಯೋತಿ ಶ್ರೀರಾಮ.
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಮೇಲಿನ ಆಧ್ಯಾತ್ಮಿಕ ರಾಮಾಯಣದ ಅತ್ಯಂತ ಸೂಕ್ಷ್ಮ ಲಕ್ಷಾರ್ಥ.
🌿 1️⃣ ಅಯೋಧ್ಯೆ – ಹೃದಯ ಮಂದಿರ
ಅಯೋಧ್ಯೆ = ಯುದ್ಧವಾಗದ ನಗರ ➡️ ಇಲ್ಲಿ ಅರ್ಥ:
ಹೊರಗಿನ ಪಟ್ಟಣವಲ್ಲ
ಸಾಧಕನ ಶುದ್ಧ ಹೃದಯವೇ ಅಯೋಧ್ಯೆ
ಜ್ಞಾನ ಉಂಟಾದಾಗ ಹೃದಯದಲ್ಲಿ ಸಂಘರ್ಷವಿಲ್ಲ
👉 “ಯುದ್ಧವಿಲ್ಲದ ಮನಸ್ಸು = ಅಯೋಧ್ಯೆ”
🌿 2️⃣ ದಶರಥ – ಶುದ್ಧ ಪರಬ್ರಹ್ಮ
ದಶರಥ = ದಶ ದಿಕ್ಕುಗಳಲ್ಲಿ ಪ್ರಕಾಶಿಸುವ ಚೈತನ್ಯ ➡️
ಶುದ್ಧ ಚೈತನ್ಯ / ಪರಬ್ರಹ್ಮ
ಆತ್ಮದ ಮೂಲ
🌿 3️⃣ ಮೂರು ಹೆಂಡತಿಯರು – ಮೂರು ಶಕ್ತಿಗಳು
🔸 ಕೌಶಲ್ಯ = ಜ್ಞಾನಶಕ್ತಿ
🔸 ಕೈಕೇಯಿ = ಇಚ್ಛಾಶಕ್ತಿ
🔸 ಸುಮಿತ್ರೆ = ಕ್ರಿಯಾಶಕ್ತಿ
➡️ ಮಾನವ ಜೀವನದಲ್ಲಿ:
ಜ್ಞಾನ (ತಿಳಿವು)
ಇಚ್ಛೆ (ಬಯಕೆ)
ಕ್ರಿಯೆ (ಕರ್ಮ)
ಈ ಮೂರು ಶಕ್ತಿಗಳಿಂದಲೇ ಜೀವನ ನಡೆಯುತ್ತದೆ.
🌿 4️⃣ ಶ್ರೀರಾಮ – ಆತ್ಮಜ್ಯೋತಿ
ಕೌಶಲ್ಯೆಯಲ್ಲಿ ಜನಿಸಿದ ರಾಮ = ಆತ್ಮಸ್ವರೂಪ ➡️
ಶುದ್ಧ ಜ್ಞಾನದಿಂದ ಹುಟ್ಟುವ ಆತ್ಮ
“ನಾನು ದೇಹವಲ್ಲ – ಚೈತನ್ಯ” ಎಂಬ ಬೋಧೆ
🌿 5️⃣ ವಸಿಷ್ಠ – ವಿಶ್ವಾಮಿತ್ರ : ತತ್ವದ್ವಯ
ವಸಿಷ್ಠ = ಶಾಂತ ಜ್ಞಾನ (ಸ್ಥಿರ ವಿವೇಕ)
ವಿಶ್ವಾಮಿತ್ರ = ತಪಸ್ಸಿನಿಂದ ಹುಟ್ಟಿದ ಜ್ಞಾನ
➡️ ಈ ಇಬ್ಬರೂ ಸೇರಿ ಆತ್ಮವನ್ನು ಮುಕ್ತಿಯ ಕಡೆಗೆ ನಡೆಸುತ್ತಾರೆ.
🌿 6️⃣ ಸೀತೆ – ಮುಕ್ತಿ
ಸೀತೆ = ಮುಕ್ತಿಕಾಂತ ➡️
ಆತ್ಮದ ಸಹಜ ಸ್ಥಿತಿ
ಬಂಧನವಿಲ್ಲದ ಚೈತನ್ಯ
👉 ಆತ್ಮ + ಮುಕ್ತಿ = ಪೂರ್ಣತೆ
🌿 7️⃣ ಮಂಥರೆ – ಪ್ರಾರಬ್ಧ
ಮಂಥರೆ = ಹಿಂದಿನ ಕರ್ಮದ ವಾಸನೆ ➡️
ಸಾಧಕನ ಮನಸ್ಸನ್ನು ಮರುಳುಮಾಡುವ ಸಂಸ್ಕಾರ
ಇಚ್ಛಾಶಕ್ತಿಯನ್ನು ತಪ್ಪು ದಿಕ್ಕಿಗೆ ತಿರುಗಿಸುವುದು
🌿 8️⃣ ಕಾಡು – ದುಃಖ / ಸಾಧನಾ ಹಂತ
ಅರಣ್ಯ = ಜೀವನದ ಕಷ್ಟದ ಹಂತ ➡️
ಸಾಧಕನ ಒಳಗಿನ ತಪಸ್ಸು
ಒಂಟಿತನ, ಪರೀಕ್ಷೆಗಳು
🌿 9️⃣ ಲಕ್ಷ್ಮಣ – ಕ್ರಿಯಾಶುದ್ಧಿ
ಲಕ್ಷ್ಮಣ = ಶುದ್ಧ ಕ್ರಿಯೆ ➡️
ಆತ್ಮ ಮತ್ತು ಮುಕ್ತಿಯ ಜೊತೆಗೆ ಸದಾ ಇರಬೇಕಾದುದು
ಯೋಗ, ಜಪ, ಧ್ಯಾನ, ನಿಯಮ
👉 ಕ್ರಿಯೆ ಇಲ್ಲದೆ ಜ್ಞಾನ ಫಲಿಸುವುದಿಲ್ಲ
🌿 🔟 ಮಾಯಾಜಿಂಕೆ – ಮಾಯೆ
➡️
ಸುಂದರವಾಗಿ ಕಾಣುವ ವಿಷಯಾಸಕ್ತಿ
ಇಂದ್ರಿಯ ಸುಖ
ಇದನ್ನು ಬೆನ್ನಟ್ಟಿದಾಗ ಮುಕ್ತಿ ಅಪಹರಣವಾಗುತ್ತದೆ.
🌿 1️⃣1️⃣ ಲಂಕೆ – ಅಜ್ಞಾನ
ಲಂಕೆ = ದೇಹ–ಮನಸ್ಸಿನ ಒಳಗಿನ ಅಜ್ಞಾನ ರಾಜ್ಯ ➡️
ಸಪ್ತಧಾತುಗಳ ಮಧ್ಯೆ ಬಂಧನ
“ನಾನು ದೇಹ” ಎಂಬ ಭ್ರಮೆ
🌿 1️⃣2️⃣ ರಾವಣ – ದಶಮಮಕಾರ
ರಾವಣ = ಅಹಂಕಾರದ ದಶ ರೂಪಗಳು ➡️
“ನಾನು ಮಾಡುತ್ತೇನೆ”
“ನಾನು ತಿಳಿದವನು”
“ನಾನೇ ಸರ್ವ”
👉 ಅಹಂಕಾರವೇ ಅತಿದೊಡ್ಡ ಶತ್ರು
🌿 1️⃣3️⃣ ಸುಗ್ರೀವ – ಶುದ್ಧಗೊಂಡ ಮನಸ್ಸು
ಸುಗ್ರೀವ = ನಿಯಂತ್ರಿತ ಮನಸ್ಸು ➡️
ವಾಲಿ (ಮದ/ಅಹಂಕಾರ) ಹೋಗಿದ ಮೇಲೆ
ಮನಸ್ಸು ಸಾಧಕನ ಮಿತ್ರವಾಗುತ್ತದೆ
🌿 1️⃣4️⃣ ಹನುಮಾನ್ – ಬುದ್ಧಿ
ಹನುಮಾನ್ = ಶುದ್ಧ ಬುದ್ಧಿ ➡️
ಲಂಕೆ ಪ್ರವೇಶಿಸುವ ಶಕ್ತಿ
ಸೂಕ್ಷ್ಮ ಸತ್ಯವನ್ನು ಕಂಡು ತರುವುದು
👉 ಬುದ್ಧಿ ಇಲ್ಲದೆ ಮುಕ್ತಿ ಕಾಣುವುದಿಲ್ಲ
🌿 1️⃣5️⃣ ಸೇತು – ಭಕ್ತಿ
ಭಕ್ತಿ = ಸೇತುವೆ ➡️
ಅಜ್ಞಾನದಿಂದ ಜ್ಞಾನಕ್ಕೆ ಹೋಗುವ ಮಾರ್ಗ
ನಿರಂತರ ನಾಮಸ್ಮರಣೆ
🌿 1️⃣6️⃣ ವಿಭೀಷಣ – ವಿವೇಕ
➡️
ಸತ್ಯವನ್ನು ಒಪ್ಪಿಕೊಳ್ಳುವ ಶಕ್ತಿ
ಶತ್ರುವಿನಲ್ಲಿಯೇ ಹುಟ್ಟಿದ ಜ್ಞಾನ
🌿 1️⃣7️⃣ ರಾಕ್ಷಸರು – ಅರಿಷಡ್ರಿಪು
➡️
ಕಾಮ
ಕ್ರೋಧ
ಲೋಭ
ಮೋಹ
ಮದ
ಮತ್ಸರ
ಇವು ನಾಶವಾದಾಗ ಮಾತ್ರ ಮುಕ್ತಿ ಸ್ಥಿರವಾಗುತ್ತದೆ.
🌿 1️⃣8️⃣ ಪಟ್ಟಾಭಿಷೇಕ – ಸಹಜ ಸಮಾಧಿ
ಅಯೋಧ್ಯೆಗೆ ಮರಳುವುದು = ಜ್ಞಾನ ಸ್ಥಿತಿ ➡️
ಆತ್ಮ ಸದಾ ಪ್ರಕಾಶಿಸುವುದು
ಹೋಗುವುದು–ಬರುವುದು ಇಲ್ಲ
👉 ಇದೇ ಜೀವನ್ಮುಕ್ತಿ
🌸 ಅಂತಿಮ ಸಾರಾಂಶ
👉 ಈ ರಾಮಾಯಣ ಬಾಹ್ಯ ಕಥೆಯಲ್ಲ 👉 ಇದು ನಮ್ಮ ಒಳಗಿನ ಯಾತ್ರೆ 👉 ಪ್ರತಿ ಪಾತ್ರವೂ ನಮ್ಮ ಮನಸ್ಸಿನ ಸ್ಥಿತಿ
“ಈ ರಾಮಾಯಣ ನಡೆಯುವುದು ನಮ್ಮ ಹೃದಯದಲ್ಲೇ”
ವಾಟ್ಸಾಪ್ ಸಂಗ್ರಹ 🙏
🙏🙏🙏🙏🙏🙏🙏🙏🙏🙏🙏🙏🙏🙏
1 week ago | [YT] | 3
View 1 reply
VasanthaaHarish 🙏
*#ದೇವಸ್ಥಾನಕ್ಕೆ ಹೋಗ ಬೇಕೆ ?*
#ದೇವಸ್ಥಾನಗಳಿಗೆ ಹೆಚ್ಚೆಚ್ಚು ಹೋಗುವುದರಿಂದ ಆರೋಗ್ಯ ವರ್ಧಿಸುತ್ತದೆ...!!!
ವೈಜ್ಞಾನಿಕ ಸಂಶೋಧನೆಯಿಂದ ದೃಢಪಟ್ಟ ವಿಷಯ..
ಗೆಳೆಯರೇ..
ನಿಜಕ್ಕೂ ಅಚ್ಚರಿಯಾಗಬಹುದು... ದೇವಸ್ಥಾನಗಳಿಗೆ
ಹೋಗುವುದನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಿ..
ಇದರಿಂದ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ
ವೃದ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ..
ದೇವಸ್ಥಾನಗಳನ್ನು ಕಟ್ಟಿದ ಜಾಗಗಳಲ್ಲಿ ಅಯಸ್ಕಾಂತೀಯ
ತರಂಗಗಳು (Magnetic Waves) ಸದಾ ಪ್ರವಹಿಸುತ್ತಲೇ
ಇರುತ್ತವೆ... ಹೇಗೆ ಗೊತ್ತೇ...?? ದೇವರ ಮೂಲಸ್ಥಾನ
ಗರ್ಭಗುಡಿ... ಆ ಗರ್ಭಗುಡಿಗೆ ಅಥವಾ ಮೇಲ್ಛಾವಣಿಗೆ
ಹೊದೆಸಿರುವ ತಾಮ್ರದ ಹೊದಿಕೆಗಳನ್ನು ನೀವು
ನೋಡಿರಬಹುದು... ಆ ತಾಮ್ರದ ಹೊದಿಕೆಗಳಲ್ಲೇ ಸದಾ
ಸಕಾರಾತ್ಮಕ ಶಕ್ತಿ (Positive energy) ಪ್ರವಹಿಸುತ್ತಲೇ
ಇರುತ್ತದೆ... ನಾವು ದೇವಸ್ಥಾನಕ್ಕೆ ಅಥವಾ ದೇವಸ್ಥಾನದ
ಪ್ರದಕ್ಷಿಣೆ ಹಾಕುವಾಗ ಈ ಶಕ್ತಿ ನಮ್ಮ ಶರೀರದಲ್ಲೂ
ಪ್ರವಹಿಸುತ್ತದೆ... ದೇವಸ್ಥಾನದಲ್ಲಿ ಜಾಸ್ತಿ ಹೊತ್ತು ಕುಳಿತು
ಜಪ ಅಥವಾ ಧ್ಯಾನ ಮಾಡುವುದರಿಂದ ದೇಹದ ಆಯಾಸ ಕಡಿಮೆಯಾಗಿರುವುದು ನಿಮ್ಮ ಗಮನಕ್ಕೂ ಬಂದಿರಬಹುದು...
ಅದಕ್ಕೆ ಕಾರಣ ಇದೇ Positive energy. ದೇವಸ್ಥಾನದಲ್ಲಿನ ಶಾಂತತೆಯಿಂದ ನಮ್ಮ ಮನಸ್ಸೂ ಪ್ರಶಾಂತವಾಗುತ್ತದೆ
ಎಂಬುದಕ್ಕೆ ಯಾವುದೇ ಅನುಮಾನವಿಲ್ಲ.
ಇನ್ನೂ ಇದೆ... ಪವಿತ್ರವಾದ ಗರ್ಭಗೃಹ ಮೂರೂ ಕಡೆಯಿಂದ ಮುಚ್ಚಲಾಗಿರುತ್ತದೆ... ಮುಖ್ಯದ್ವಾರವೊಂದೇ
ತೆರೆದಿರುತ್ತದೆ... ಗರ್ಭಗುಡಿಯಲ್ಲಿ ಪ್ರವಹಿಸುವ ಅಯಸ್ಕಾಂತೀಯ ತರಂಗಗಳು (Magnetic Waves) ಮುಖ್ಯದ್ವಾರದ ಮೂಲಕ
ಜೋರಾಗಿ ಚಿಮ್ಮುತ್ತದೆ... ಆದ್ದರಿಂದ ಮುಖ್ಯದ್ವಾರದ
ಮುಂದೆ ನಿಂತಷ್ಟೂ ನಮಗೆ ಸಮಾಧಾನವಾಗುತ್ತದೆ... ಒಂದೆಡೆ ದೇವರ ದರ್ಶನ , ಇನ್ನೊಂದೆಡೆ ಆಯಾಸ ಪರಿಹಾರ... ಹೇಗಿದೆ
ನೋಡಿ..!!
ಹಾಗೇ ದೀಪಗಳಿಂದ ಬೆಳಕಿನ ಶಕ್ತಿ (Light energy),
ಘಂಟಾನಾದದಿಂದ ಹಾಗೂ ಮಂತ್ರಘೋಷಗಳಿಂದ ಶಬ್ದ ಶಕ್ತಿ (Sound Energy), ಹೂಗಳ ಪರಿಮಳದಿಂದ, ಕರ್ಪೂರದ
ಸುವಾಸನೆಯಿಂದ ರಾಸಾಯನಿಕ ಶಕ್ತಿ (Chemical Energy),
ಇವೆಲ್ಲಕ್ಕಿಂತಲೂ ಪ್ರಮುಖವಾದದ್ದು ದೇವರ ಪ್ರತಿಮೆಯಿಂದ
ಹಾಗೂ ಗರ್ಭಗುಡಿಯಲ್ಲಿ ಇಟ್ಟಿರುವ ತಾಮ್ರದ ಹರಿವಾಣ,
ತಾಮ್ರದ ಪೂಜಾಸಾಮಗ್ರಿಗಳಿಂದ ಬರುವ, ಉತ್ತರ ದಕ್ಷಿಣ ಧೃವಗಳಿಂದ (South north pole) ಪ್ರವಹಿಸುವ ಸಕಾರಾತ್ಮಕ
ಶಕ್ತಿ..!! ಇನ್ನು ತೀರ್ಥಸೇವನೆ...
ತೀರ್ಥವನ್ನು ಮಾಡುವುದು ಹೇಗೆ...???
ಯಾಲಕ್ಕಿ , ತುಳಸಿ , ಲವಂಗ ಮುಂತಾದವುಗಳಿಂದ...
ಇವುಗಳನ್ನು ನೀರಿಗೆ ಹಾಕುವುದರಿಂದ ನೀರಿನಲ್ಲಿಯೂ
ಸಕಾರಾತ್ಮಕ ಶಕ್ತಿಯ ಉದ್ಭವವಾಗುತ್ತದೆ...
ತೀರ್ಥಸೇವನೆಯಿಂದ ದೇಹ ಆಹ್ಲಾದವಾಗುತ್ತದೆ... ಚೈತನ್ಯ ಮೂಡುತ್ತದೆ... ಆರೋಗ್ಯಕರವೂ ಹೌದು... ಹೇಗೆಂದರೆ, ಲವಂಗ
ನಮ್ಮ ಹಲ್ಲುಗಳ ಆರೋಗ್ಯವನ್ನು ವರ್ಧಿಸುತ್ತದೆ, ತುಳಸಿ ನೆಗಡಿ,
ಕೆಮ್ಮು, ಬರದಂತೇ ತಡೆಯುತ್ತದೆ, ಯಾಲಕ್ಕಿ ಅಥವಾ
ಪಂಚಕರ್ಪೂರ ಬಾಯಿಯನ್ನು ಶುದ್ಧವಾಗಿಸುತ್ತದೆ... ಇನ್ನೂ ಅನೇಕ ಔಷದೀಯ ಗುಣಗಳು ತೀರ್ಥದಲ್ಲಿರುತ್ತವೆ...
ದೀಪಾರಾಧನೆ, ವಿಶೇಷಪೂಜೆಗಳ ದಿನಗಳಲ್ಲಿ ದೇವಾಲಯಗಳಲ್ಲಿ
ಹೆಚ್ಚು - ಹೆಚ್ಚು ಸಕಾರಾತ್ಮಕಶಕ್ತಿಯ ಸಂಚಾರವಾಗುತ್ತಿರು
ತ್ತದೆ...ಇನ್ನು ದೇವಸ್ಥಾನಗಳಲ್ಲಿ ಶುದ್ಧಿಗಾಗಿ ನೀರನ್ನು ದೇಹದ
ಮೇಲೆ ಚಿಮುಕಿಸುತ್ತಿರುವುದನ್ನು ನೋಡಿರಬಹುದು...
ಇದರಿಂದ ನಮ್ಮ ಶರೀರದ ಶುದ್ಧಿ ಹಾಗೂ ಆಯಾಸದ
ನಿವಾರಣೆಯಾಗುತ್ತದೆ... ಆ ಕಾರಣದಿಂದಲೇ ಪುರುಷರು
ದೇವಸ್ಥಾನಕ್ಕೆ ಹೋಗುವಾಗ ಅಂಗಿಯನ್ನು ಕಳಚಿಟ್ಟು
ಹೋಗುವುದು ಒಳ್ಳೆಯದು... ಮಹಿಳೆಯರು ಜಾಸ್ತಿ ಒಡವೆಗಳನ್ನು ಹಾಕಿಕೊಂಡು ಹೋಗುವುದು ಒಳ್ಳೆಯದು... ಏಕೆಂದರೆ
ಲೋಹಗಳಿಂದ ಶಕ್ತಿಯ ಸಂಚಾರ ದೇಹದಲ್ಲಾಗುತ್ತದೆ..
ಸಾಕಲ್ಲವೇ ಇಷ್ಟು ವೈಜ್ಞಾನಿಕ ಆಧಾರ...??
ಆದ್ದರಿಂದ ಸ್ನೇಹಿತರೇ ದೇವಸ್ಥಾನಗಳಿಗೆ ಹೆಚ್ಚೆಚ್ಚು ಭೇಟಿ
ನೀಡಿ...
ನಿಮ್ಮ ಗೆಳೆಯರಿಗೂ ತಿಳಿಸಿ....
*ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ....ನಮ್ಮ ಸಂಸ್ಕೃತಿ ಮರೆಯಬೇಡಿ*
1 week ago | [YT] | 4
View 1 reply
VasanthaaHarish 🙏
🕉️ ಓಂ ಶ್ರೀ ಗುರುಭ್ಯೋ ನಮಃ 🕉️ *#ಮಾಘ ನವರಾತ್ರಿ* ಅಥವಾ *#ಶ್ಯಾಮಲಾ ನವರಾತ್ರಿ* ಮಾಘ #ಗುಪ್ತ ನವರಾತ್ರಿ ಎಂದು ಕರೆಯಲಾಗುತ್ತದೆ.
#ಹಿಂದೂ #ಪಂಚಾಂಗದ #ಮಾಘ ಚಾಂದ್ರಮಾನ ಮಾಸದ ಶುಕ್ಲ ಪಕ್ಷದ ಮೊದಲ ಒಂಬತ್ತು ರಾತ್ರಿಗಳನ್ನು ಮಾಘ #ಶ್ಯಾಮಲಾ #ನವರಾತ್ರಿ ಎಂದೂ ಕರೆಯಲಾಗುತ್ತದೆ ಮತ್ತು ಇದನ್ನು ದೇವಿ ಶ್ರೀ ಮಾತಂಗಿಯ ಆರಾಧನೆಗೆ ಮತ್ತು #ದಶಮಹಾವಿದ್ಯೆಯಂತಹ ಶ್ರೀ ಕಾಳಿಯ ಎಲ್ಲಾ ಅಂಶಗಳಿಗೆ ಸಮರ್ಪಿಸಲಾಗಿದೆ. ಶ್ರೀ ಮಾತಂಗಿ ದೇವಿಯು ತಾಂತ್ರಿಕ ಸರಸ್ವತಿ ಅಥವಾ ಜ್ಞಾನದ ದೇವತೆಯಾಗಿದ್ದಾಳೆ. ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ, ಮಾತು, ಬರವಣಿಗೆ, ಹಾಗೆಯೇ ಎಲ್ಲಾ ವೈಜ್ಞಾನಿಕ ಮತ್ತು ಸಾಹಿತ್ಯಿಕ ಕಲಾ ಪ್ರಕಾರಗಳು. ತಿಳಿದಿರುವ ಮತ್ತು ತಿಳಿದಿಲ್ಲದ ಎಲ್ಲವೂ ಅವಳೇ.
#ರಾಜಾ #ಶ್ಯಾಮಲಾ #ದೇವಿಯನ್ನು ಈ ನವರಾತ್ರಿಯ ಸಮಯದಲ್ಲಿ ಅಂದರೆ ಮಾಘ ಶುದ್ಧ ಪ್ರತಿಪದೆಯಿಂದ ಮಾಘ ಪೂರ್ಣಿಮೆಯವರೆಗೆ ಶ್ರೀವಿದ್ಯೋಪಾಸಕರಿಂದ ಪೂಜಿಸಲಾಗುತ್ತದೆ. ಒಬ್ಬರ ಸಂಪ್ರದಾಯವನ್ನು ಅವಲಂಬಿಸಿ, ಪ್ರತಿ ನವರಾತ್ರಿಯನ್ನು #9 ದಿನಗಳು ಅಥವಾ #15 ದಿನಗಳವರೆಗೆ ಆಚರಿಸಲಾಗುತ್ತದೆ. ಶ್ಯಾಮಲಾ ದೇವಿಯು #ಲಲಿತಾ #ಪರಭಟ್ಟಾರಿಕಾದ #ಆಕರ್ಷಣ ಶಕ್ತಿಯಾಗಿದ್ದು, ಈ ನವರಾತ್ರಿಯ ಸಮಯದಲ್ಲಿ ತನ್ನ ಗೇಯ ಚಕ್ರದಲ್ಲಿ ತನ್ನ ಪರಿವಾರದವರೊಂದಿಗೆ ಪೂಜಿಸಲ್ಪಡುತ್ತಾಳೆ. ಯಾರಾದರೂ #ಲಲಿತೋಪಾಸನೆಯಲ್ಲಿ ಉಪಾಸನಾ ಸಿದ್ಧಿಯನ್ನು ಹೊಂದಲು ಬಯಸಿದರೆ, ಅವನು ರಾಜ ಶ್ಯಾಮಲಾ ದೇವಿಯ ಮೂಲಕ ಪರಭಟ್ಟಾರಿಕವನ್ನು ಸಂಪರ್ಕಿಸಬೇಕು. ಬೇರೆ ರೀತಿಯಲ್ಲಿ ಹೇಳುವುದಾದರೆ, ಶ್ಯಾಮಲೆಯ ಕೃಪೆಯು ಪರಮ ದೇವಿಯನ್ನು ಮೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
*#ಲಲಿತೆಯ ಅನುಗ್ರಹ ಶಕ್ತಿ* ಸಹಾನುಭೂತಿಯಿಂದ, ಲಲಿತೆಯ ಅನುಗ್ರಹವು ಉಪಾಸಕನ ಕಡೆಗೆ ಶ್ಯಾಮಲಾ ರೂಪದಲ್ಲಿ ಅವನ ಉಪಾಸನೆಯ ಮಾರ್ಗವನ್ನು ಮೇಲೆತ್ತಲು ಇಳಿಯುತ್ತದೆ. ಇದನ್ನು ಶಕ್ತಿಪಾತ ಎಂದೂ ಕರೆಯುತ್ತಾರೆ.
*#ಲಲಿತೆಯ ಆಕರ್ಷಣ ಶಕ್ತಿ* - ಪರಾಂಬಿಕಾ ಶ್ಯಾಮಲಾ ಮೂಲಕ ತನ್ನ ಭಕ್ತರನ್ನು ತನ್ನ ಹತ್ತಿರಕ್ಕೆ ಸೆಳೆಯುತ್ತಾಳೆ. ತನ್ನ ಭಕ್ತರು ಲೌಕಿಕ ಗೊಂದಲಗಳಿಂದ ದೂರ ಹೋಗದಂತೆ ಮತ್ತು ಅವಳ ಹಾದಿಯಲ್ಲಿ ಸ್ಥಿರವಾಗಿ ನಡೆಯುವುದನ್ನು ಅವಳು ಖಚಿತಪಡಿಸುತ್ತಾಳೆ.
*#ಲಲಿತೆಯ ಬುದ್ಧಿ ಶಕ್ತಿ ಅವಳು ಲಲಿತೆಯ ಬುದ್ಧಿಯಿಂದ ಜನಿಸಿದಳು. ನಿಜವಾದ ಆಧ್ಯಾತ್ಮಿಕ ಜ್ಞಾನವು ಬುದ್ಧಿ ಶಕ್ತಿಯ ಮೇಲೆ ನಿಂತಿದೆ, ಇದು ಸತ್ಯವನ್ನು ಸುಳ್ಳಿನಿಂದ, ಶಾಶ್ವತದಿಂದ ಶಾಶ್ವತವಾದ, ಅವಾಸ್ತವಿನಿಂದ ನೈಜ ಮತ್ತು ಕತ್ತಲೆಯಿಂದ ಬೆಳಕನ್ನು ಗ್ರಹಿಸುವ ಉನ್ನತ ಮನಸ್ಸಿನ ಶಕ್ತಿಯಾಗಿದೆ. ಅವಳು ಭಕ್ತನನ್ನು ಅಂತಃಪ್ರಜ್ಞೆಯ ರೂಪದಲ್ಲಿ ನಿರ್ದೇಶಿಸುತ್ತಾಳೆ.
*#ಲಲಿತೆಯ ಸಂಕಲ್ಪ ಶಕ್ತಿ* - ಅವಳು ದೇವಿಯ ಇಚ್ಛಾ ಶಕ್ತಿ, ಬ್ರಹ್ಮಾಂಡದ ಪ್ರತಿಯೊಂದು ಪರಮಾಣುವಿನಲ್ಲಿಯೂ ಇದೆ. ಒಬ್ಬರ ಆಳವಾದ ಪ್ರೇರಣೆಯನ್ನು ಅರಿತುಕೊಳ್ಳಲು ಮತ್ತು ಸಾಧಿಸಲು ಅವಳ ಅನುಗ್ರಹವು ಮುಖ್ಯವಾಗಿದೆ. ಸಂಕಲ್ಪವೆಂದರೆ ಸಂಕಲ್ಪ. ಇಚ್ಛಾ ಶಕ್ತಿಯು ಒಂದು-ಬಿಂದುಗಳ ಮನಸ್ಸಿನ ಜೊತೆಗೆ ನಿರ್ಣಯವಾಗಿದೆ. ಅವಳನ್ನು ಆರಾಧಿಸುವುದು ನಮಗೆ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ (ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಎರಡೂ).
ಶ್ರೀ #ಮಾತಂಗಿ ಮಂತ್ರಗಳಲ್ಲಿ ದೀಕ್ಷೆ ಪಡೆದವರು ದೈವಿಕ ದರ್ಶನಗಳು ಅಥವಾ ಇಷ್ಟಾರ್ಥಗಳ ನೆರವೇರಿಕೆಯನ್ನು ಅನುಭವಿಸಬಹುದು. ಉಳಿದವರೆಲ್ಲರೂ 108 ನಾಮಗಳನ್ನು ಅಥವಾ ಸ್ತೋತ್ರವನ್ನು ಪಠಿಸಬಹುದು . ಅವಳ ಮಂತ್ರಗಳನ್ನು ಪಠಿಸುವವರಿಗೆ ಕವಚವು ಅತ್ಯಗತ್ಯವಾಗಿರುತ್ತದೆ . ಉಳಿದವರೆಲ್ಲರೂ ಈ ಒಂಬತ್ತು ರಾತ್ರಿಗಳಲ್ಲಿ ಕವಚವನ್ನು ಪಠಿಸಬಹುದು. ಶ್ರೀ ಶ್ಯಾಮಲಾ ದೇವಿಯ ಅನುಯಾಯಿಗಳು ಪ್ರಸಿದ್ಧ ಕವಿ ಕಾಳಿದಾಸರಿಂದ ಬರೆದ ಶ್ಯಾಮಲಾ ದಂಡಕಂ ಎಂಬ ಸ್ತೋತ್ರವನ್ನು ಸಹ ಪಠಿಸಬಹುದು.
ಶ್ರೀ ರಾಜ ಶ್ಯಾಮಲಾ ಅವರ ಮಂತ್ರಗಳಲ್ಲಿ ದೀಕ್ಷೆ ಪಡೆದವರು, ನವರಾತ್ರಿಯ ಪ್ರತಿ ದಿನ/ರಾತ್ರಿಗೆ ಈ ಕೆಳಗಿನ ರೀತಿಯಲ್ಲಿ ಅವಳ ಅಂಗ ದೇವತೆಗಳಿಗೆ ಮತ್ತು ಅವಳಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸಬಹುದು -
1 #ಲಘು ಶ್ಯಾಮಲಾ
2. #ವಾಗ್ವಾದಿನಿ ಶ್ಯಾಮಲಾ
3. #ನಕುಲಿ ಶ್ಯಾಮಲಾ
4. #ಹಸಂತಿ ಶ್ಯಾಮಲಾ
5. #ಸರ್ವಸಿದ್ಧಿ ಮಾತಂಗಿ
6. #ವಶ್ಯ ಮಾತಂಗಿ
7. #ಸಾರಿಕಾ ಶ್ಯಾಮಲಾ
8.# ಶುಕ ಶ್ಯಾಮಲಾ
9. #ಜಗದ್ ರಂಜನೀ
ದೈವಿಕ ತಾಯಿಯಾದ ಕಾಳಿಯ ಆರಾಧಕರು ಆಕೆಯ ಯಾವುದೇ ಕವಚ, ಸ್ತೋತ್ರಗಳನ್ನು ಪಠಿಸಬಹುದು. ಮಂತ್ರ ದೀಕ್ಷೆಯನ್ನು ಹೊಂದಿರುವವರು ಬಯಕೆಯ ನೆರವೇರಿಕೆ ಮತ್ತು ಎಲ್ಲಾ ಸುತ್ತಿನ ಸಂತೋಷ ಮತ್ತು ಸಮೃದ್ಧಿಯನ್ನು ಅನುಭವಿಸಬಹುದು. ಈ ಒಂಬತ್ತು ಪರ್ವದ ರಾತ್ರಿಗಳಲ್ಲಿ ಮಹಾಷೋಡನ್ಯಾಸವನ್ನು ಮಾಡುವುದು ಉತ್ತಮವಾಗಿದೆ.
🙏🚩🔱
1 week ago (edited) | [YT] | 9
View 3 replies
Load more