eedina

ಸೆಂಗಾರ್ ಜಾಮೀನು ರದ್ದುಪಡಿಸಬೇಕು ಮತ್ತು ಅವನನ್ನು ಜೈಲಿಗೆ ಕಳುಹಿಸಬೇಕು. ನಾವು ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ. ಸುಪ್ರೀಂ ಕೋರ್ಟ್‌ನಲ್ಲಿ ನಮಗೆ ನಂಬಿಕೆ ಇದೆ. ಅವನು ಬಿಡುಗಡೆಯಾದನೆಂದು ತಿಳಿದ ಮೇಲೆ ನಮಗೆ ಭಯವಾಗಿದೆ. ಕೋರ್ಟ್ನ ಈ ನಿರ್ಧಾರ ʼಸಾವಿಗಿಂತ ಕಡಿಮೆಯಿಲ್ಲ’ ಎಂದು ಸಂತ್ರಸ್ತೆ ಭಾವುಕರಾಗಿದ್ದಾರೆ.

ಬರಹ : ಜಿ ಎಮ್‌ ಪವಿತ್ರಾ

#JusticeForSurvivor #CancelBail #SupremeCourt #RuleOfLaw #CrimeAgainstWomen #VictimRights #LegalBattle #DemandJustice #HumanRights #EndImpunity

1 hour ago | [YT] | 99

eedina

ಕಾಬೂಲ್‌ನ ‘ಏರಿಯಾನ’ ಅಸ್ತಂಗತ: ಇತಿಹಾಸದ ಮೇಲೆ ಉರುಳಿದ ತಾಲಿಬಾನ್ ಬುಲ್ಡೋಜರ್

ಕಾಬೂಲ್‌ನ ಹೃದಯಭಾಗದಲ್ಲಿ ನಿಂತಿದ್ದ ಒಂದು ಕಟ್ಟಡ ಕುಸಿದದ್ದು ಕೇವಲ ಇಟ್ಟಿಗೆ–ಸಿಮೆಂಟಿನ ನಾಶವಲ್ಲ; ಅದು ಒಂದು ರಾಷ್ಟ್ರದ ನೆನಪು, ಕನಸು ಮತ್ತು ಸಾಂಸ್ಕೃತಿಕ ಆತ್ಮದ ಧ್ವಂಸ. ಆಧುನಿಕತೆಯ ಸಂಕೇತವಾಗಿದ್ದ ‘ಏರಿಯಾನ’ ಸಿನಿಮಾ ಮಂದಿರದ ಮೇಲೆ ತಾಲಿಬಾನ್ ಬುಲ್ಡೋಜರ್‌ಗಳು ಹರಿದಾಗ, ಅಫ್ಘಾನಿಸ್ತಾನದ ಮುಕ್ತ ಮನಸ್ಸಿನ ಇತಿಹಾಸವೂ ಮಣ್ಣಿನಡಿಯಲ್ಲಿ ಮುಚ್ಚಿಹೋಯಿತು

ಬರಹ: ಕೆ ಚೇತನ್ ಕುಮಾರ್

#Kabul #ArianaCinema #TalibanRule #CulturalDestruction #AfghanistanHistory #LossOfHeritage #CinemaAndCulture #FreedomOfExpression #WarOnCulture #RememberAriana

1 hour ago | [YT] | 18

eedina

ಈ ದಿನ ಸಂಪಾದಕೀಯ | ಪ್ರಜಾಪ್ರಭುತ್ವ ಪೊರೆದ ಅಮೆರಿಕ; ಪುಡಿಗಟ್ಟುತ್ತಿರುವ ಭಾರತ

ಅಮೆರಿಕದಲ್ಲಿ 'ಎಪ್‌ಸ್ಟೀನ್‌ಗೂ-ಟ್ರಂಪ್‌ಗೂ ಏನು ಸಂಬಂಧ' ಎಂದು ಕೇಳಿದಂತೆಯೇ; ಭಾರತದಲ್ಲಿ 'ಪ್ರಧಾನಿಗೂ-ಅದಾನಿಗೂ ಇರುವ ಸಂಬಂಧ'ವೇನು ಎಂದು ಪ್ರಶ್ನಿಸಿದರು. ಅಲ್ಲಿ ಫೈಲ್ಸ್ ಬಹಿರಂಗವಾಯಿತು, ಇಲ್ಲಿ ವಿರೋಧ ಪಕ್ಷದ ನಾಯಕನನ್ನು ಲೋಕಸಭೆಯಿಂದಲೇ ಹೊರಹಾಕಲಾಯಿತು.

#Democracy #PressFreedom #PoliticalAccountability #IndiaPolitics #USPolitics #PowerAndQuestions #FreedomOfSpeech #DemocraticValues #EditorialOpinion #GlobalDemocracy

1 hour ago | [YT] | 55

eedina

ಮರ್ಯಾದೆಗೇಡು ಹತ್ಯೆ- ಅಪ್ಪನೆಂಬ ಸಂಬಂಧ ಅರ್ಥ ಕಳೆದುಕೊಂಡಿತೇ?

ಹೆಣ್ಣುಮಕ್ಕಳಿಗೆ ಅಪಾಯ ಹೊರಗಿನಿಂದ ಮಾತ್ರವಲ್ಲ, ಕೆಲವೊಮ್ಮೆ ಮನೆಯೊಳಗೇ ಹುಟ್ಟುತ್ತದೆ ಎಂಬುದು ಅತ್ಯಂತ ಭಯಾನಕ ಸತ್ಯ. ಅಪ್ಪ ಎಂಬ ನಂಬಿಕೆ, ಭದ್ರತೆಯ ಭಾವ ನಾನಾ ಕಾರಣಗಳಿಂದಾಗಿ ಪರೀಕ್ಷೆಗೆ ಒಳಗಾಗುತ್ತಿದೆ. ಅನ್ಯ ಜಾತಿ/ಧರ್ಮದ ಯುವಕನನ್ನು ಪ್ರೀತಿಸಿ ಮದುವೆಯಾದ ಮಗಳನ್ನು ಯಾವುದೇ ಕನಿಕರವಿಲ್ಲದೇ ಕೊಚ್ಚಿ ಹಾಕುತ್ತಿದೆ ಅದೇ ಆಡಿಸಿದ ಕೈಗಳು.

ಸಪನಾ ನಂದವಾಡಗಿ

#HonorKilling #CrimesAgainstWomen #HumanRights #EndPatriarchy #JusticeForWomen #GenderEquality #StopViolence #SocialAwareness #ProtectDaughters #BreakTheSilence

2 hours ago | [YT] | 103

eedina

ವಚನಯಾನ | ಅದ್ವೈತಿಗಳು ನಡೆ-ನುಡಿ ಒಂದಾಗದ ಡಾಂಭಿಕರು ಎನ್ನುತ್ತಾರೆ ಶರಣ ಮೋಳಿಗೆ ಮಾರಯ್ಯ

ನಡೆ-ನುಡಿ ಭಿನ್ನವಾಗಿ ಬದುಕಿ ತಾವು ಬಹುದೊಡ್ಡ ಸಾಧಕರೆನ್ನುವಂತೆ ವರ್ತಿಸಿದವರ ಪರಿಯನ್ನು ಮೋಳಿಗೆ ಮಾರಯ್ಯನವರು ತಮ್ಮ ವಚನದಲ್ಲಿ ತೀಕ್ಷ್ಣವಾಗಿ ವಿಡಂಬಿಸಿದ್ದಾರೆ. ಶಂಕರಾಚಾರ್ಯ ಮೊದಲ್ಗೊಂಡು ಅನೇಕ ಜನ ಅದ್ವೈತಿಗಳು ಮೋಳಿಗೆ ಮಾರಯ್ಯನವರು ಹೇಳಿದಂತೆ ತಮ್ಮ ಭಕ್ತರಿಗೆ ಬೋಧಿಸಿದ್ದೆ ಬೇರೆ, ತಾವು ಬದುಕಿದ್ದೇ ಬೇರೆ.

ಡಾ ಜೆ ಎಸ್‌ ಪಾಟೀಲ್‌

#VachanaYana #SharanaMovement #MoligeMarayya #AdvaitaPhilosophy #BasavaTradition #VachanaLiterature #SpiritualIntegrity #EthicsInPractice #IndianPhilosophy #SocialReform

3 hours ago | [YT] | 27

eedina

CPCB ವರದಿ | ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಯಲ್ಲಿ ಹಿಂದೆ ಬಿದ್ದ ಕರ್ನಾಟಕ

ದೇಶದ ಒಟ್ಟು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯ ಹೊಣೆಯಲ್ಲಿ ಶೇ.14 ರಷ್ಟನ್ನು ತಾನೇ ಹೊತ್ತುಕೊಳ್ಳುತ್ತಿರುವ ಕರ್ನಾಟಕ, ಉತ್ಪಾದನೆಯಲ್ಲಿ ಮೊದಲ ಸ್ಥಾನ ಪಡೆದಿದ್ದರೂ ಸಂಸ್ಕರಣೆಯಲ್ಲಿ ಕೊನೆಯ ಸಾಲಿಗೆ ಸರಿದಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(CPCB) ಯ ಇತ್ತೀಚಿನ ವರದಿಯೊಂದು ಈ ಆತಂಕಕಾರಿ ಅಂಕಿಅಂಶಗಳನ್ನು ಬಹಿರಂಗಪಡಿಸಿದೆ.

ವರದಿ: ನೀಲಾ ಎನ್

#PlasticWaste #CPCBReport #WasteManagement #EnvironmentalConcern #Karnataka #PlasticPollution #SustainableIndia #EnvironmentalAccountability #RecyclingCrisis #GreenFuture

3 hours ago | [YT] | 7

eedina

ಹೋರಾಟದ ಒಡನಾಡಿ ಕೆ ಪದ್ಮಾ ಇನ್ನಿಲ್ಲ

ನಾಲ್ಕೈದು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು

#Tribute #Condolences #RestInPeace #ComradeForever #PeopleMovement #Solidarity #SocialJustice #RememberingPadma #StrengthAndCourage #InMemoriam

6 hours ago | [YT] | 868

eedina

ಧುರಂಧರ್: ಪ್ರೊಪಗ್ಯಾಂಡ ಸಿನಿಮಾಗೆ ಹೊಸ ಚೌಕಟ್ಟು

ಸಿನಿಮಾ ಎನ್ನುವುದು ಕಲೆ, ಜನರ ಭಾವನೆಗಳ ಪ್ರತಿಬಿಂಬ. ಇದನ್ನು ಮಂಡಿಸುವಾಗ ನೈತಿಕತೆ ಮತ್ತು ಅನೈತಿಕತೆ ನಡುವೆ ಗೆರೆ ಇರುತ್ತದೆ. ಸತ್ಯದ ಪರವಾಗಿರಬೇಕಾಗುತ್ತದೆ. ಆದಿತ್ಯ ಧರ್‌ ನಂತಹ ನಿರ್ದೇಶಕರು ʼಧುರಂಧರ್ʼ ಥರದ ಪ್ರೊಪಗ್ಯಾಂಡ ಚಿತ್ರಗಳ ಮೂಲಕ ಈ ಗೆರೆಯನ್ನು ಅಳಿಸಿ ಹಾಕುತ್ತಾರೆ. ಸುಳ್ಳುಗಳನ್ನು ಸೃಷ್ಟಿಸಿ ಅದನ್ನೇ ಜನರ ಭಾವನೆಗಳು ಎಂದು ಬಿಂಬಿಸುತ್ತಾರೆ. ಚಿತ್ರದ ಗಳಿಕೆಯನ್ನೇ ಯಶಸ್ವಿ ಎಂದು ನಂಬಿಸುತ್ತಾರೆ.

#CinemaAsArt #TruthInCinema #EthicalFilmmaking #PropagandaFilms #FilmCriticism #CinemaAndPolitics #MediaNarratives #CulturalResponsibility #ArtVsPropaganda #NarrativeControl #PublicPerception #CriticalCinema #IdeologicalCinema

8 hours ago | [YT] | 17

eedina

ಅರಾವಳಿ | ಸುಪ್ರೀಂ ಕೋರ್ಟಿಗೆ CEC ನೀಡಿದ ವರದಿ ಏನು ಹೇಳುತ್ತದೆ?

ರಾಜಸ್ಥಾನದ 15 ಜಿಲ್ಲೆಗಳಲ್ಲಿ 100 ಮೀಟರ್‌ಗಿಂತ ಕಡಿಮೆ ಇರುವ ಪ್ರದೇಶಗಳನ್ನು ಕನಿಷ್ಠ 3 ಡಿಗ್ರಿಗಳಷ್ಟು ಇಳಿಜಾರಿನೊಂದಿಗೆ ಅರಾವಳಿ ಬೆಟ್ಟಗಳು ಇದೆ ಎಂದು ಎಫ್‌ಎಸ್‌ಐ ಗುರುತಿಸಿದೆ. ಈ ವ್ಯಾಖ್ಯಾನದ ಪ್ರಕಾರ, ಕೆಳಗಿನ ಬೆಟ್ಟಗಳನ್ನು ಅಂದರೆ 100 ಮೀಟರ್‌ಗಿಂತ ಕಡಿಮೆ ಇರುವುದನ್ನು ಸಹ ಅರಾವಳಿ ಎಂದು ಹೇಳಲಾಗಿದೆ.

ಮನೋಜ್‌ ಆರ್‌ ಕಂಬಳಿ

#AravalliHills #SupremeCourt #CECReport #EnvironmentalProtection #ForestSurveyOfIndia #EcoConservation #ClimateConcern #IndianJudiciary #SaveAravalli #EnvironmentalJustice

9 hours ago | [YT] | 22

eedina

ಧುರಂಧರ್: ಪ್ರೊಪಗ್ಯಾಂಡ ಸಿನಿಮಾಗೆ ಹೊಸ ಚೌಕಟ್ಟು

ಸಿನಿಮಾ ಎನ್ನುವುದು ಕಲೆ, ಜನರ ಭಾವನೆಗಳ ಪ್ರತಿಬಿಂಬ. ಇದನ್ನು ಮಂಡಿಸುವಾಗ ನೈತಿಕತೆ ಮತ್ತು ಅನೈತಿಕತೆ ನಡುವೆ ಗೆರೆ ಇರುತ್ತದೆ. ಸತ್ಯದ ಪರವಾಗಿರಬೇಕಾಗುತ್ತದೆ. ಧರ್‌ ತರಹದ ನಿರ್ದೇಶಕರು ʼಧುರಂಧರ್ʼ ಥರದ ಪ್ರೊಪಗ್ಯಾಂಡ ಚಿತ್ರಗಳ ಮೂಲಕ ಈ ಗೆರೆಯನ್ನು ಅಳಿಸಿ ಹಾಕುತ್ತಾರೆ. ಸುಳ್ಳುಗಳನ್ನು ಸೃಷ್ಟಿಸಿ ಅದನ್ನೇ ಜನರ ಭಾವನೆಗಳು ಎಂದು ಬಿಂಬಿಸಿ ಯಶಸ್ವಿಯಾಗುತ್ತಾರೆ.

ಬರೆಹ: ಬಿ. ಶ್ರೀಪಾದ ಭಟ್

#PropagandaCinema #FilmCriticism #CinemaAndPolitics #ArtAndTruth #EthicalFilmmaking #MediaManipulation #NarrativePolitics #CulturalDebate #CriticalThinking #IndianCinema

9 hours ago | [YT] | 27