JANAPARA VAANI NEWS ಜನಪರ ವಾಣಿ ನ್ಯೂಸ್

ಸುದ್ದಿ ಜಗತ್ತು, ನೇರ, ವಾಸ್ತವ ಜನ ಮನ ದ್ವನಿ...
YouTube Channel: @JanaparavaaniNews

Welcome to Janaparavaani News, your trusted source for the latest updates, breaking news, and authentic stories. Bringing you truthful, live, and impactful journalism that resonates with the voice of the people. 🌍📰

Stay informed about current affairs, political insights, cultural stories, and much more with our engaging and factual reporting. We are dedicated to keeping you connected with the pulse of reality.

Subscribe to our channel and join us in exploring the world of news as it unfolds. Don’t forget to like, share, and comment to let your voice be heard!

📌 Slogan: ಸುದ್ದಿ ಜಗತ್ತು, ನೇರ, ವಾಸ್ತವ ಜನ ಮನ ದ್ವನಿ...

Stay updated. Stay aware. Stay with Janaparavaani News. 🎥✅


JANAPARA VAANI NEWS ಜನಪರ ವಾಣಿ ನ್ಯೂಸ್

ಪೋಕ್ಸೋ ಕೇಸ್ ನಲ್ಲಿ ಚಿತ್ರದುರ್ಗದ ಕೋರ್ಟ್ ನಿಂದ ಮಹತ್ವದ ತೀರ್ಪು
ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ನಿರ್ದೋಷಿ ಎಂದು
ಮೊದಲ ಕೇಸ್ ನಲ್ಲಿ ಕೋರ್ಟ್ ತೀರ್ಪು

3 weeks ago | [YT] | 0

JANAPARA VAANI NEWS ಜನಪರ ವಾಣಿ ನ್ಯೂಸ್

*ಸಾಲುಮರದ ತಿಮ್ಮಕ್ಕ ನವರಿಗೆ ಶ್ರದ್ಧಾಂಜಲಿ*

*ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹಾಗೂ ಪರಿಸರಾ ಸಕ್ತರು, ಶಿವಮೊಗ್ಗ ಇವರಿಂದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕನವರ ಸೇವೆಯನ್ನು ಸ್ಮರಿಸಿ, ಮತ್ತೊಮ್ಮೆ ಹುಟ್ಟಿ ಬನ್ನಿ ಮಹಾತಾಯಿ, ನಿಮಗಿದು ಕೋಟಿ ಪ್ರಣಾಮಗಳು ಎಂದು ದೇವರಲ್ಲಿ ಪ್ರಾರ್ಥನೆಯನ್ನು ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಶ್ರದ್ಧಾಂಜಲಿ ಸಭೆಯಲ್ಲಿ ಕೆ.ವಿ. ವಸಂತಕುಮಾರ್, ಡಾ. ಎ. ಸತೀಶ್ ಕುಮಾರ್ ಶೆಟ್ಟಿ, ಬಿ. ಗೋಪಿನಾಥ್, ಎಸ್. ಆರ್. ಗೋಪಾಲ್, ಸುರೇಶ್, ಜನಾರ್ಧನ್ ಪೈ, ಗಿರೀಶ್, ಸೀತಾರಾಂ, ವಿನೋದ್ ಪೈ, ಮಹಮ್ಮದ್ ಇಕ್ಬಾಲ್, ಆನಂದ್, ಸ್ವಾಮಿ ಹಾಗೂ ಇತರರು ಹಾಜರಿದ್ದರು.

1 month ago | [YT] | 0

JANAPARA VAANI NEWS ಜನಪರ ವಾಣಿ ನ್ಯೂಸ್

ಎಸ್. ಕೆ. ಮರಿಯಪ್ಪ ನವರಿಗೆ ಸಹಕಾರ ರತ್ನ ಪ್ರಶಸ್ತಿ ಪ್ರಧಾನ...

ಸಹಕಾರ ಕ್ಷೇತ್ರದ ಬೆಳವಣಿಗೆ ಮತ್ತು ಸಹಕಾರ ಸಂಸ್ಥೆಗಳ ಅಭಿವೃದ್ಧಿಗೆ ಸೇವೆ ಸಲ್ಲಿಸಿರುವುದನ್ನು ಗುರುತಿಸಿ "72ನೇ ಅಖಿಲ ಭಾರತ ಸಹಕಾರ ಸಪ್ತಾಹ" 2025 ಆಚರಣೆ ಸಂದರ್ಭದಲ್ಲಿ *ಸಹಕಾರ ರತ್ನ* ಪ್ರಶಸ್ತಿಯನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯವರಿಂದ ಸ್ವೀಕರಿಸಲಾಯಿತು.

1 month ago | [YT] | 1

JANAPARA VAANI NEWS ಜನಪರ ವಾಣಿ ನ್ಯೂಸ್

ಮಕ್ಕಳಲ್ಲಿ ಶಿಸ್ತು ಬೆಳೆಸುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ*

ಶಿವಮೊಗ್ಗ: ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಶಿಸ್ತಿನ ಸಂಸ್ಥೆಯಾಗಿದ್ದು, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸುತ್ತಿರುವ ಸಂಸ್ಥೆಯಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ನ ಜಿಲ್ಲಾ ಸಂಸ್ಥೆಯ ಅಧ್ಯಕ್ಷರು ಗುರುದತ್ ಹೆಗಡೆ ಹೇಳಿದರು.

ಜಿಲ್ಲಾಧಿಕಾರಿಗಳ ಆವರಣದಲ್ಲಿ
ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆಯಲ್ಲಿ ಧ್ವಜ ಚೀಟಿ ಬಿಡುಗಡೆಗೊಳಿಸಿ ಮಾತನಾಡಿ, ಸಂಸ್ಥೆಯು ಅನೇಕ ರೀತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎತ್ತರಕ್ಕೆ ಬೆಳೆಯುತ್ತಿದ್ದು, ಅದರ ಬೆಳವಣಿಗೆಗೆ ನಾವೆಲ್ಲರೂ ಕೈ ಜೋಡಿಸೋಣ, ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ ಎಂದು ತಿಳಿಸಿದರು. ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ನ ಜಿಲ್ಲಾ ಪ್ರಧಾನ ಆಯುಕ್ತರಾದ ಶಕುಂತಲಾ ಚಂದ್ರಶೇಖರ್ ಮಾತನಾಡುತ್ತಾ
ಸಂಸ್ಥಾಪನಾ ದಿನಾಚರಣೆ ಮಹತ್ವವನ್ನು ತಿಳಿಸುತ್ತ ಸ್ಕೌಟ್ಸ್ ಇತಿಹಾಸದ ಬಗ್ಗೆ ವಿವರಿಸಿದರು.

ಭಾರತದಲ್ಲಿ ಸ್ಕೌಟಿಂಗ್ ಗೈಡಿಂಗ್ ಬೆಳೆದು ಬಂದ ದಾರಿ ತಿಳಿಸಿ ಭಾರತಕ್ಕೆ ಸ್ವಾತಂತ್ರ್ಯ ಬರುವ ಮುನ್ನ ನ್ಯಾಷನಲ್ ಸ್ಕೌಟ್ ಅಸೋಸಿಯೇಷನ್, ಹಿಂದೂಸ್ತಾನ ಸ್ಕೌಟ್ಸ್ ಅಸೋಸಿಯೇಷನ್, ಗರ್ಲ್ ಗೈಡ್ ಅಸೋಸಿಯೇಷನ್ ಹೀಗೆ ಅನೇಕ ಸಂಘಟನೆಗಳಿದ್ದು, ಇವೆಲ್ಲವನ್ನು ಒಂದುಗೂಡಿ ಒಂದೇ ಸಂಘಟನೆ ಆಗಬೇಕೆಂದು ನಿರ್ಧರಿಸಿ ಪ್ರತಿಫಲವಾಗಿ 1950 ನವೆಂಬರ್ 7 ರಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಅಸ್ತಿತ್ವಕ್ಕೆ ಬಂದಿತು ಎಂದು ತಿಳಿಸಿದರು.

ಮಾತನಾಡಿದರು. ಎ.ವಿ.ರಾಜೇಶ್ ಮಾತನಾಡಿದರು. ಜಿಲ್ಲಾ ಆಯುಕ್ತ(ಸ್ಕೌಟ್ಸ್) ಎಸ್.ಜಿ.ಆನಂದ್ ಮತ್ತು ಜಿಲ್ಲಾ ಕೇಂದ್ರ ಸ್ಥಾನಿಕಆಯುಕ್ತ , ಜಿ ವಿಜಯಕುಮಾರ್ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಚಂದ್ರಶೇಖರಯ್ಯ, ಸಹ ಕಾರ್ಯದರ್ಶಿ ವೈ.ಆರ್.ವೀರೇಶಪ್ಪ, ಜಿಲ್ಲಾ ಸಹಾಯಕ ಆಯುಕ್ತರು ಮಲ್ಲಿಕಾರ್ಜುನ ಕಾನೂರು, ಕೃಷ್ಣಸ್ವಾಮಿ, ಶಿವಶಂಕರ್.. ಹೇಮಲತಾ ಗೈಡ್ ಆಯುಕ್ತರಾದ. ಲಕ್ಷ್ಮೀ ರವಿ. ಗುರುಮೂರ್ತಿ ಟಿಜಿ. ರುದ್ರಪ್ಪ ಚೀಲೂರು. ನ್ಯಾಷನಲ್ ಪಬ್ಲಿಕ್ ಶಾಲೆಯ ಶಿಕ್ಷಕ. ಸೋಮಣ್ಣ

ಸುನಂದಮ್ಮ ನಗರದ ವಿವಿಧ ಶಾಲೆಯ 200 ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಉಪಸ್ಥಿತರಿದ್ದರು.

1 month ago | [YT] | 0

JANAPARA VAANI NEWS ಜನಪರ ವಾಣಿ ನ್ಯೂಸ್

ಮಾಜಿ ಮುಖ್ಯಮಂತ್ರಿಗಳು ಹಾಗು ಅಹಿಂದ ನಾಯಕರಾದ ಶ್ರೀ ಎಸ್. ಬಂಗಾರಪ್ಪ ಅವರ ಜನ್ಮದಿನದಂದು ಶಿವಮೊಗ್ಗ ಜಿಲ್ಲಾ N S U I ವತಿಯಿಂದ ನಗರದಲ್ಲಿನ ಹಾಸ್ಟೆಲ್ ಗಳಲ್ಲಿ ನೋಟ್ ಬುಕ್ ವಿತರಿಸಿ ಸಿಹಿ ಹಂಚಲಾಯಿತು

ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಜವಳಿ ನಿಗಮದ ಅಧ್ಯಕ್ಷರಾದ ಚೇತನ್ ಕೆ ,ಯುವ ಮುಖಂಡರಾದ ಸಿ ಜಿ ಮಧುಸೂದನ್ ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಗಳಾದ ಚಿನ್ನಪ್ಪ ಯುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಯಾದ ಗೌತಮ್ N S U I ನ ಅಧ್ಯಕ್ಷರಾದ ವಿಜಯ್ ಕಾರ್ಯಾಧ್ಯಕ್ಷರಾದ ರವಿ ಕಾಟಿಕೆರೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಾಜಿ ರಾವ್ ನಗರ ಉಪಾದ್ಯಕ್ಷರಾದ ಆದಿತ್ಯ, ಸುಭಾನ್ , ಫರಾಜ್,ಶ್ರೀಕಾಂತ್, ಯೂಸುಫ್, ಪಂಕಜ್, ಮಯೂರ್, ಅಲ್ಹಾನ್ , ಇಂದ್ರಸೆನಾ,ಪವನ್, ಸಾದ್ ಉಲ್ಲಾ ,ರಿಹಾನ್ , ಫಾರೂಕ್ , ರಯಾನ್, ಸಗೀರ್, ಗುಫ್ರಾನ್ ಹಾಗೂ N S U I ನ ಪದಾಧಿಕಾರಿಗಳು ಹಾಸ್ಟೆಲ್ ನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

1 month ago | [YT] | 0

JANAPARA VAANI NEWS ಜನಪರ ವಾಣಿ ನ್ಯೂಸ್

ಒಡ್ಡಿನಕೊಪ್ಪದಲ್ಲಿ ಮನೆಗಳ್ಳತನ.

ಕರಿಯಪ್ಪ ಯಶೋದಮ್ಮ ಇವರ ಮನೆಯ ಬಾಗಿಲು ಬೀಗ ಒಡೆದು ಕಳ್ಳರು ಮನೆಯಲ್ಲಿದ್ದ 80000 ನಗದು ಒಂದುವರೆ ತೊಲ ಬಂಗಾರ ಕದ್ದಿದ್ದಾರೆ ಎಂದು ಮಾಲೀಕರು ತಿಳಿಸಿದ್ದು ತುಂಗಾನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ದೀಪಾವಳಿ ಹಬ್ಬಕ್ಕೆ ಅವರು ಸಂಬಂಧಿಕರ ಮನೆಗೆ ತೆರಳಿದ್ದರು. ರಾತ್ರಿ ಹೊತ್ತು ಈ ಘಟನೆ ನಡೆದಿದ್ದು ಬೆಳಗಿನ ಜಾವ ಪಕ್ಕದ ಎದುರುಗಡೆ ಮನೆಯವರು ಬೀಗ ಹೊಡೆದದ್ದನ್ನು ನೋಡಿ ಮಾಲೀಕರ ಗಮನಕ್ಕೆ ತಂದಿದ್ದಾರೆ.

2 months ago | [YT] | 1

JANAPARA VAANI NEWS ಜನಪರ ವಾಣಿ ನ್ಯೂಸ್

ಶ್ರೀ ಹಾಸನಾಂಬ ದೇವಿ ಮತ್ತು ಶ್ರೀಸಿದ್ದೇಶ್ವರಸ್ವಾಮಿ ದೇವರ ದರ್ಶನವನ್ನು ಮಾಜಿ ಉಪ ಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಇ. ಕಾಂತೇಶ್ ಕುಟುಂಬ ಸಮೇತವಾಗಿ ತೆರಳಿ ದೇವಿಯ ದರ್ಶನವನ್ನು ಪಡೆದರು...

2 months ago | [YT] | 0

JANAPARA VAANI NEWS ಜನಪರ ವಾಣಿ ನ್ಯೂಸ್

ಜಿಲ್ಲೆಯ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸಲು "ಕಾಯಕ ಸೇತು" ಜಾಬ್ ಪೋರ್ಟಲ್ ಲೋಕಾರ್ಪಣೆ

ರಾಜ್ಯದಲ್ಲಿ 4,430 ಪದವಿ ಕಾಲೇಜುಗಳು ಹಾಗೂ 26 ವಿಶ್ವವಿದ್ಯಾಲಯಗಳಿವೆ. ಪ್ರತಿ ವರ್ಷ ಸುಮಾರು 3 ಲಕ್ಷ ವಿದ್ಯಾರ್ಥಿಗಳು ಪದವಿ ಮುಗಿಸಿ ಹೊರಬರುತ್ತಾರೆ. ಬಹುತೇಕರು ಉದ್ಯೋಗದ ಭಾಗ್ಯ ಕಾಣದೆ ಪರಿತಪಿಸುತ್ತಾರೆ. ನಿರುದ್ಯೋಗದ ಸಮಸ್ಯೆ ಕರ್ನಾಟಕದ ಯುವಕ-ಯುವತಿಯರಿಗೆ ಅತಿಯಾಗಿ ಬಾಧಿಸುತ್ತಿದೆ. ಕೆಲವರು ತಮ್ಮ ಓದಿಗೆ ಸಂಬಂಧವೇ ಇಲ್ಲದ ಕೆಲಸ ಪಡೆದು ಹೊಟ್ಟೆ ಪಾಡು ಸಾಗಿಸುತ್ತಿದ್ದರೆ, ಇನ್ನು ಕೆಲವರು ಮತ್ತೆ ಊರಿನ ದಾರಿ ಹಿಡಿಯುತ್ತಿದ್ದಾರೆ. ವಿದ್ಯಾರ್ಹತೆಗೆ ತಕ್ಕ ಉದ್ಯೋಗವಿಲ್ಲ. ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯ ಪದವೀಧರ ಯುವಕ ಯುವತಿಯರಿಗೆ ಜಿಲ್ಲೆಯ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗ ಕಲ್ಪಿಸಿಕೊಡಬೇಕು ಹಾಗೂ ಅವರಿಗೊಂದು ವೇದಿಕೆ ನಿರ್ಮಾಣ ಮಾಡಬೇಕೆಂದು ಶಿವಮೊಗ್ಗ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ "ಕಾಯಕ ಸೇತು" ಎಂಬ ಉಚಿತ ಜಾಬ್ ಪೋರ್ಟಲ್ ನಿರ್ಮಿಸಿ ಉದ್ಯೋಗ ಕಲ್ಪಿಸಿಕೊಡುವ ಮಹತ್ತರವಾದ ಕಾರ್ಯವನ್ನು ಡಾ. ಧನಂಜಯ ಸರ್ಜಿಯವರು ತಮ್ಮ ಎಂ ಎಲ್ ಸಿ ಸಂಪರ್ಕ ಕಚೇರಿಯಿಂದ ಮಾಡುತ್ತಿದ್ದಾರೆ. ಮುಂದೆ ಇದನ್ನು ತಮ್ಮ ಕ್ಷೇತ್ರದ ಉಳಿದೆಲ್ಲ ಜಿಲ್ಲೆಗಳಿಗೂ ವಿಸ್ತರಿಸಿ ನಂತರ ಅವಶ್ಯಕತೆ ಇದ್ದಲ್ಲಿ ರಾಜ್ಯಾದ್ಯಂತ ವಿಸ್ತರಿಸುವ ಯೋಜನೆ ಅವರ ಮುಂದಿದೆ.

ಸ್ಥಳೀಯ ಪ್ರತಿಭೆಗಳಿಗೆ ಸ್ಥಳೀಯವಾಗಿ ಉದ್ಯೋಗ ದೊರಕಿಸುವ ಹಾಗು ಅಭ್ಯರ್ಥಿಗಳಲ್ಲಿ ಇರುವ ತಾಂತ್ರಿಕತೆ ಮತ್ತು ಕೌಶಲ್ಯದ ಕೊರತೆಯನ್ನು ಗಮನಿಸಿ ಅವುಗಳನ್ನು ಬಲಪಡಿಸುವ ಕೆಲಸವೂ ಕೂಡ ಡಾ. ಧನಂಜಯ ಸರ್ಜಿಯವರ ಕಚೇರಿಯು ನಿರ್ವಹಿಸಲಿದೆ.

ವಿಶೇಷವಾದ ಈ ಪ್ರಯತ್ನವು ಉದ್ಯೋಗ ನೀಡುವವರಿಗೂ ಉದ್ಯೋಗ ಬಯಸುವವರಿಗೂ ಉಚಿತವಾಗಿರಲಿದೆ.

ಜಾಬ್ ಪೋರ್ಟಲ್ ಹೇಗೆ ಕಾರ್ಯ ನಿರ್ವಹಿಸುತ್ತದೆ.

ಶಿವಮೊಗ್ಗದ ಎಲ್ಲಾ ಪ್ರತಿಷ್ಠಿತ ಸಂಸ್ಥೆಗಳ ಹೆಚ್.ಆರ್ ಗಳು ಈ ಜಾಬ್ ಪೋರ್ಟಲ್ ಅಲ್ಲಿ ಉದ್ಯೋಗದ ಮಾಹಿತಿ ಹಂಚಿಕೊಳ್ಳುತ್ತಾರೆ.

ಪದವೀಧರರು ತಮ್ಮ ರೆಸ್ಯುಮ್ ಅಥವಾ ಸಿ.ವಿ ಯನ್ನು (ವೈಯಕ್ತಿಕ ವಿವರ) ಹಿಡಿದು ಸಂಸ್ಥೆಗಳಿಗೆ ತಿರುಗಾಡುವ ಬದಲು ಈ ಜಾಬ್ ಪೋರ್ಟಲ್ ಅಲ್ಲಿ ತಮ್ಮ ರೆಸ್ಯುಮ್ ಅಥವಾ ಸಿ.ವಿಯನ್ನು ಅಪ್ಲೋಡ್ ಮಾಡಿದರೆ ವಿದ್ಯಾರ್ಹತೆಗೆ ತಕ್ಕ ಉದ್ಯೋಗಕ್ಕಾಗಿ ಪ್ರತಿಷ್ಠಿತ ಸಂಸ್ಥೆಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಆಯ್ಕೆಯಾದ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಜಾಬ್ ಪೋರ್ಟಲ್ ಅಲ್ಲಿ ಎಲ್ಲ ಹೆಚ್.ಆರ್‌ಗಳಿಗೆ ಮಾಹಿತಿ ರವಾನೆಯಾಗುತ್ತದೆ.

ಆಯ್ಕೆಯಾಗದ ಅಭ್ಯರ್ಥಿಗಳಲ್ಲಿ ಯಾವ ಕೌಶಲ್ಯದ ಕೊರತೆ ಇದೆ ಎಂದು ಪರಿಗಣಿಸಿ ಅವರನ್ನು ಸರ್ಜಿ ಫೌಂಡೇಶನ್ ವತಿಯಿಂದ ಆ ಕೌಶಲ್ಯಗಳನ್ನೂ ಕಲಿಸುವ ಚಿಂತನೆಯನ್ನು ಕೂಡ ಮಾಡಲಾಗಿದೆ.

ಕೇವಲ ರೆಸ್ಯುಮ್ ಅಪ್ಲೋಡ್ ಮಾಡಿ ವರ್ಷವಾದರೂ ಅದನ್ನು ಅಷ್ಟೇಟ್ ಮಾಡದೇ ಹಾಗೆ ಉಳಿದಿರುವುದನ್ನು ಸಾಕಷ್ಟು ಪಾವತಿ ಜಾಬ್ ಪೋರ್ಟಲ್ ಗಳಲ್ಲಿ ನೋಡಿದ್ದೇವೆ. ಆದ್ದರಿಂದ ಈ ಕಾಯಕ ಸೇತು ಜಾಬ್ ಪೋರ್ಟಲ್ ಅಲ್ಲಿ ಆಯ್ಕೆ ಆಗದೆ ಹಾಗೆ ಉಳಿದ ಅಭ್ಯರ್ಥಿಗಳು ಪ್ರತಿ 6 ತಿಂಗಳಿಗೊಮ್ಮೆ ತಮ್ಮ ಪ್ರೊಫೈಲ್ ಅಷ್ಟೇಟ್ ಮಾಡಬೇಕು.

ಆನ್ ಲೈನ್ ಎಂಟ್ರೆನ್ಸ್ ಟೆಸ್ಟ್ ಮುಖಾಂತರ ಅಭ್ಯರ್ಥಿಯ ಆಯ್ಕೆಗೆ ಅವಕಾಶವಿರುತ್ತದೆ.

2 months ago | [YT] | 0

JANAPARA VAANI NEWS ಜನಪರ ವಾಣಿ ನ್ಯೂಸ್

ಗೋವರ್ಧನ ಟ್ರಸ್ಟ್ ವತಿಯಿಂದ ಗೊಂದಿಚಟ್ನಹಳ್ಳಿಯಲ್ಲಿ ಗೋಮಾತೆಗಾಗಿ ಮೇವು ಬೆಳೆಯುವ ಕಾರ್ಯಕ್ರಮದ ಭೂಮಿ ಪೂಜೆಯನ್ನು ಜಗದ್ಗರು ಸ್ವಸ್ತಿಶ್ರೀ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮಿಗಳವರು ಶ್ರೀಕ್ಷೇತ್ರ ಹೊಂಬುಜ ದಿಗಂಬರ ಜೈನ್ ಮಠ ಇವರ ಅಮೃತ ಹಸ್ತದಿಂದ ಬೀಜ ಬಿತ್ತುವ ಮೂಲಕ ಚಾಲನೆ ನೀಡಲಾಯಿತ್ತು.

ಉಪಸ್ಥಿತಿ- ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ ಕೆ.ಎಸ್.ಈಶ್ವರಪ್ಪ,ಶಿವಶಂಕರ್,ಉಮಾಪತಿ,ಯೋಗ ಗುರು ರುದ್ರರಾಧ್ಯರು, ನಟರಾಜ್ ಭಾಗವತ್,ಉಮೇಶ್ ಆರಾಥ್ಯ, ಕೆ.ಈ.ಕಾಂತೇಶ್,ಶೇಶಾಚಲ, ಗುರುಗುಹನಾಗರಾಜ್,ಪಾಂಡೆ,ಶಿವಾನಂದಪ್ಪ,ನವ್ಯಶ್ರೀನಾಗೇಶ್,ಕುಬೇರಪ್ಪ,ಸತ್ಯಣ್ಣ,ಸೋಮಣ್ಣ,ಜಾಥವ್ ,ವಿನೋದ್,ರಮೇಶ್ ಬಾಬು,ವಿರೂಪಾಕ್ಷ,ಅರುಣ್,ಉಮಾಮೂರ್ತಿ,ಶುಭರಾಘವೇಂದ್ರ,ಸಂಧ್ಯಾ,ಹಾಗೂ ಜ್ಞಾನೇಶ್ವರಿ ಗೋಶಾಲೆಯ ಹಾಗೂ ಗೋವರ್ಥನ ಟ್ರಸ್ಟ್ ನ ಸದ್ಯಸರು ಭಾಗವಹಿಸಿದರು.
ಗೋವರ್ಧನ ಟ್ರಸ್ಟ್ ವತಿಯಿಂದ ಗೊಂದಿಚಟ್ನಹಳ್ಳಿಯಲ್ಲಿ ಗೋಮಾತೆಗಾಗಿ ಮೇವು ಬೆಳೆಯುವ ಕಾರ್ಯವನ್ನು ಮೆಚ್ಚಿ ಮಠದ ವತಿಯಿಂದ ಎರಡು ಲಕ್ಷ ರೂಪಾಯಿಯನ್ನು ಜಗದ್ಗರು ಸ್ವಸ್ತಿಶ್ರೀ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮಿಗಳವರು ಶ್ರೀಕ್ಷೇತ್ರ ಹೊಂಬುಜ ದಿಗಂಬರ ಜೈನ್ ಮಠ ನೀಡಿದರು
ಜೊತೆಗೆ ಹುಬ್ಬಳ್ಳಿಯ ಜೈನಸಮಾಜದ ಸಹಕಾರದಿಂದ ಗೋವರ್ಧನ್ ಟ್ರಸ್ಟ್ ನೊಂದಿಗೆ ಶ್ರೀ ಮಠದ ಸಂಯುಕ್ತ ಆಶ್ರಯದಲ್ಲಿ ಮನುಷ್ಯನಿಗೆ ಕೃತಕವಾಗಿ ಕೈಕಾಲು ಜೋಡಣೆ ಮಾಡುವಂತೆ ಗೋವುಗಳಿಗೊ ಕೃತಕ ಕೈಕಾಲುಗಳ ಜೋಡಣೆ ಸಹಕಾರನೀಡುಲು ಭರವಸೆ ನೀಡಿದರು...

2 months ago | [YT] | 1

JANAPARA VAANI NEWS ಜನಪರ ವಾಣಿ ನ್ಯೂಸ್

ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆತ್ಮೀಯತೆಯಿಂದ ಬೆಂಗಳೂರಿನ ಕಾರ್ಯಕ್ರಮಕ್ಕೆ ಬರಮಾಡಿಕೊಂಡ ಸಂದರ್ಭದ ಚಿತ್ರ...

4 months ago | [YT] | 12