Turuvekere_News

ಜಮೀನು ವಿವಾದ ಅಣ್ಣನಿಂದಲೇ ತಮ್ಮನ ಕೊಲೆ.

ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಬ್ಯಾಲಹಳ್ಳಿಯಲ್ಲಿ ಅಣ್ಣ ತಮ್ಮನ ನಡುವೆ ಜಮೀನು ವಿವಾದ ಕಾರಣದಿಂದ ಶ್ರೀನಿವಾಸ್ (50) ಕೊಲೆಯಯಾಗಿರುವ ಘಟನೆ ಗುರುವಾರ ನಡೆದಿದೆ.

ಮೃತನ ಅಣ್ಣ ಕೃಷ್ಣಪ್ಪ(65) ಮತ್ತು ಈತನ ಮಗ ಪ್ರಮೋದ ಆರೋಪಿಗಳು. ಬ್ಯಾಲಹಳ್ಳಿ ಗ್ರಾಮದ ರಾಮಯ್ಯನವರ ಮಕ್ಕಳಾದ ಕೃಷ್ಣಪ್ಪ ಮತ್ತು ಶ್ರೀನಿವಾಸ್ ನಡುವೆ ಪಿತ್ರಾರ್ಜಿತ ಆಸ್ತಿಯನ್ನು ಸಮನಾಗಿ ಹಂಚಿಕೆ ಮಾಡಿಲ್ಲ ಹಾಗು ತಮ್ಮ ಹೆಸರುಗಳಿಗೆ ಜಮೀನಿನ ದಾಖಲೆ ಮಾಡಿಕೊಟ್ಟಿಲ್ಲವೆಂದು ಗ್ರಾಮದಲ್ಲಿ ಆಗಾಗ ಜಜಗಳವಾಗುತ್ತಿತ್ತು ಎನ್ನಲಾಗಿದೆ.

ಗುರುವಾರ ಬೆಳಗ್ಗೆ ಶ್ರೀನಿವಾಸ್ ತನ್ನ ತೋಟಕ್ಕೆ ತೆರಳುವಾಗ ದಾರಿ ಮಧ್ಯೆ ಆತನ ಅಣ್ಣ ಆರೋಪಿ ಕೃಷ್ಣಪ್ಪ(65) ಮತ್ತು ಈತನ ಮಗ ಪ್ರಮೋದ(45)ರಿಬ್ಬರೂ ಜಮೀನಿನ ಸಂಬಂಧ ಪುನಃ ಜಗಳ ತೆಗೆದಿದ್ದಾರೆ. ಮಾತಿಗೆ ಮಾತು ಬೆಳೆ ಅದು ವಿಕೋಪಕ್ಕೆ ತಿರುಗಿ ಶ್ರೀನಿವಾಸ್ ನನ್ನು ಆರೋಪಿಗಳು ಮಚ್ಚಿನಿಂದ ಒಡೆದು ಪರಾರಿಯಾಗಿದ್ದಾರೆ

ತೋಟಕ್ಕೆ ಹೋದ ಶ್ರೀನಿವಾಸ್ ಮನೆಗೆ ಬಾರದಿರುವುದು ಕಂಡು ಕುಟುಂಬದವರು ಗಾಬರಿಯಿಂದ ಹುಡುಕಲಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶ್ರೀನಿವಾಸ್ ನನ್ನು ಕಂಡು ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ತುರುವೇಕೆರೆ ಸಿಪಿಐ ಲೋಹಿತ್, ಪಿಎಸ್.ಐ ಮೂರ್ತಿ ಪರಿಶೀಲನೆ ನಡೆಸಿ ಆರೋಪಿಗಳ ಸೆರೆಗೆ ಹುಡುಕಾಟ ನಡೆಸಿದ್ದಾರೆ. ಇದೇ ವೇಳೆ ತಿಪಟೂರು ಎ.ಎಸ್.ಪಿ ಯಶುಕುಮಾರ್ ಶರ್ಮಾ ಭೇಟಿ ನೀಡಿ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಈ ಸಂಬಂಧ ತುರುವೇಕೆರೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

3 months ago | [YT] | 0

Turuvekere_News

ಪಟ್ಟಣದಲ್ಲಿ ತಾಯಿ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ.

6 months ago | [YT] | 0