Shodha (ಶೋಧ)

"Shodha is your digital investigation hub — where mystery meets truth. From real-life crime stories and unsolved cases to deep dives into hidden histories and conspiracies, we uncover the facts behind the fog. Subscribe for sharp analysis, compelling narratives, and a journey into the unknown."


Shodha (ಶೋಧ)

youtube.com/shorts/pdBw1X7xzO...

ಬೆಂಗಳೂರಲ್ಲಿ ಕಾರೊಂದರಲ್ಲಿ ಬರೋಬ್ಬರಿ 20 ಕೆಜಿ ಗಾಂಜಾ ಪತ್ತೆ..ನಿನ್ನೆ ಸಂಜೆ 4:30 ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ..ನಾಯಂಡಳ್ಳಿ ಭಾಗದಿಂದ ಬರುತ್ತಿದ್ದ ಅನುಮಾನಾಸ್ಪದ ಬಿಳಿ ಬಣ್ಣದ ಸ್ವಿಫ್ಟ್ ಕಾರ್..
ಈ ವೇಳೆ ಸಂಶಯದ ಹಿನ್ನೆಲೆ ಪರಿಶೀಲಿಸಿದ್ದ ಸಂಚಾರ ವಿಭಾಗ ಪೊಲೀಸರು.ಕಾರಿನಲ್ಲಿ ಡ್ರೈವರ್ ಸೇರಿ ಮೂವರು ವ್ಯಕ್ತಿಗಳು ಪ್ರಯಾಣ ಮಾಡ್ತಿದ್ದರು..ಡ್ರೈವರ್ ಬಿಟ್ಟು ಓಡಿಹೋದ ಇನ್ನಿಬ್ಬರು ಸಂಶಯಾಸ್ಪದ ವ್ಯಕ್ತಿಗಳು..ಡ್ರೈವರ್ ನಹೀಮ್ ಅಹ್ಮದ್ ನನ್ನು ವಶಕ್ಕೆ ಪಡೆದಿರೋ ಪೊಲೀಸರು..ಜೊತೆಗೆ ಕಾರಿನಲ್ಲಿದ್ದ ಬರೋಬ್ಬರಿ 20 ಕೆಜಿ ಗಾಂಜಾ ವಶಕ್ಕೆ ಪಡೆದ ಪೊಲೀಸರು..
ನಹೀಮ್ ಗೆ 5000 ಬಾಡಿಗೆ ಕೊಡುವುದಾಗಿ ಕಾರು ಬುಕ್ ಮಾಡಲಾಗಿತ್ತು..ತಲೆಮರೆಸಿಕೊಂಡಿರುವ ಇಮ್ರಾನ್ ಮತ್ತು ಮತ್ತೋರ್ವನಿಗೆ ಹುಡುಕಾಟ..ಪತ್ತೆಯಾಗಿರೋ ಗಾಂಜಾ ಬಗ್ಗೆ ಪೊಲೀಸರಿಂದ ಮುಂದುವರೆದ ತನಿಖೆ..ಗಿರಿನಗರ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲು .

ವೀರಭದ್ರನಗರ ಸಿಗ್ನಲ್ ಬಳಿ ಪತ್ತೆಯಾಗಿದ್ದ ಕಾರು..
ವೆಹಿಕಲ್ ಚೆಕ್ ಮಾಡ್ತಿದ್ದ ಬನಶಂಕರಿ ಟ್ರಾಫಿಕ್ ಪೊಲೀಸರು..
ಈ ವೇಳೆ ಬರ್ತಿದ್ದ ಸ್ವಿಫ್ಟ್ ಕಾರಿಗೆ ಟಿಂಟ್ ಗ್ಲಾಸ್ ಹಾಕಲಾಗಿತ್ತು..
ಈ ಹಿನ್ನೆಲೆ ಕಾರನ್ನ ತಡೆದು ನಿಲ್ಲಿಸಿದ್ದ ಟ್ರಾಫಿಕ್ ಪೊಲೀಸರು..ಪೊಲೀಸರು ಕಾರು ತಡೆಯುತ್ತಿದ್ದಂತೆ ಇಬ್ಬರು ಪರಾರಿಯಾಗಿದ್ದರು..
ಈ ಹಿನ್ನೆಲೆ ಗಿರಿನಗರ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು..
ಸ್ಥಳಕ್ಕೆ ಸೋಕೋ ಟೀಂ ಕರೆಸಿ ಪರಿಶೀಲಿಸಿದ ವೇಳೆ ಗಾಂಜಾ ಪತ್ತೆ.

3 months ago (edited) | [YT] | 0

Shodha (ಶೋಧ)

ಲಾಯರ್ ಜಗದೀಶ್ ಅರೆಸ್ಟ್.

ಬೆಂಗಳೂರು: ಜಾತಿ ನಿಂದನೆ ಪ್ರಕರಣದಲ್ಲಿ ಲಾಯರ್ ಜಗದೀಶ್ ಬೆಂಗಳೂರಲ್ಲಿ ಅರೆಸ್ಟ್ ಆಗಿದ್ದಾರೆ.ಕೊಡಗೇಹಳ್ಳಿ ಪೊಲೀಸರು ಲಾಯರ್ ಜಗದೀಶ್ ಬಂಧಿಸಿದ್ದಾರೆ. ಜಾತಿ ನಿಂದನೆ ಪ್ರಕರಣ ಸಂಬಂಧ ಲಾಯರ್ ಜಗದೀಶ್ ವಿರುದ್ಧ ದೂರು ದಾಖಲಾಗಿತ್ತು. ಈ ಸಂಬಂಧ ಬೆಂಗಳೂರು ಪೊಲೀಸರು ಆಗಸ್ಟ್ 21ರಂದು ಜಗದೀಶ್ ಮನೆಗೆ ತೆರಳಿ ಬರಿಗೈಯಲ್ಲಿ ವಾಪಾಸ್ಸಾಗಿದ್ದರು. ಮನೆ ಬಾಗಿಲು ತೆರೆಯದ ಸತಾಯಿಸಿದ್ದ ಜಗದೀಶ್ ಇಂದು ಅರೆಸ್ಟ್ ಆಗಿದ್ದಾರೆ.

ಮಂಜುನಾಥ್ ಅನ್ನೋ ವ್ಯಕ್ತಿ ನೀಡಿದ್ದ ದೂರಿನ ಆಧಾರದಲ್ಲಿ ಲಾಯ‌ರ್ ಜಗದೀಶ್ ವಿರುದ್ಧ ಪ್ರಕರಣ ದಾಖಲಾಗಿತ್ತು.

4 months ago | [YT] | 0