This channel is all about travelling, Discover new places, Cooking , Meeting people, Telling Stories , information about agriculture and technology .
One and only kannada ❤ಕನ್ನಡ🔥
If u don't subscribe to
Let's Pack & Go definitely you will miss something in ur future!!!
Dyavanoor Manjunath
ಹಾಸನಾಂಬ ದೇವಿ ದರ್ಶನ...
2 months ago | [YT] | 2
View 0 replies
Dyavanoor Manjunath
ಹಾಸನಾಂಬ ದೇವಿ ದರ್ಶನ...
2 months ago | [YT] | 1
View 0 replies
Dyavanoor Manjunath
Freedom was hard-earned; let's cherish it by being responsible citizens.
.
🇮🇳 Happy Republic Day! 🇮🇳
.
#republicday #proudindian #unityindiversity #jaihind #indiacelebration #republicday2025 #indianvibes #nationfirst #indialove #patrioticfeels ##celebratingindia #hassan #mysore #baby #babyphotography #babyphotoshoot #babygirl #onemonthbaby #oneyearold #oneyearbaby
11 months ago | [YT] | 4
View 0 replies
Dyavanoor Manjunath
ದ್ಯಾವನೂರು ಮಂಜುನಾಥ್ ರವರ "ಎಣ್ಣೆ ಪಾರ್ಟಿ ಡಿಜೆ" ಹಾಡಿನ ಪೋಸ್ಟರ್ ಬಿಡುಗಡೆ!
ಕನ್ನಡ ಸಂಗೀತ ಪ್ರಪಂಚದಲ್ಲಿ ಮತ್ತೊಂದು ಹೊಸ ಸಂಭ್ರಮ! ಹಾಸನದ ದ್ಯಾವನೂರು ಮಂಜುನಾಥ್ ಅವರು ತಮ್ಮ ಪ್ರೀತಿಯ ಅಭಿಮಾನಿಗಳಿಗೆ ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ವಿಶೇಷ ಉಡುಗೊರೆ ನೀಡಿ, ತಮ್ಮ ಹೊಸ ಹಾಡು "ಎಣ್ಣೆ ಪಾರ್ಟಿ ಡಿಜೆ"ಯ ಪೋಸ್ಟರ್ ಅನ್ನು ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.
ಈ ಹೊಸ ಹಾಡು ಆಧುನಿಕ ಸಂಗೀತದ ಝಲಕ್ ನೀಡುತ್ತಾ, ಪಾರ್ಟಿ ವಾತಾವರಣಕ್ಕೆ ತಕ್ಕಂತೆ ಸಂಭ್ರಮದ ಮನೋಭಾವವನ್ನು ಸೃಷ್ಟಿಸುತ್ತದೆ. ಹೊಸ ವರ್ಷದ ಸಂಭ್ರಮವನ್ನು ಮೆರೆಯಲು ಈ ಹಾಡು ದೊಡ್ಡ ಹಿಟ್ ಆಗಿ ಸಿದ್ಧವಾಗಿದೆ. ದ್ಯಾವನೂರು ಮಂಜುನಾಥ್ ಅವರು ತಮ್ಮ ಶ್ರಾವಣಶೀಲ ಪದಗಳು ಮತ್ತು ಆಕರ್ಷಕ ತಾಳಗಳಿಂದ ಕೇಳುಗರನ್ನು ರಂಜಿಸುತ್ತಿದ್ದಾರೆ.
ಹಾಡಿನ ಹೈಲೈಟ್ಸ್:
• ಈ ಹಾಡಿನಲ್ಲಿ "ಮಿನಿ ಮಿನಿ ಕಣ್ಣಿಗೆ ಕ್ಯಾಟ್ ವಾಕ್ ಡ್ಯಾನ್ಸ್", "ಗ್ಲಾಸ್ ಎತ್ತಿ ಹೇಳು ಚಸ್", "ಹೊಸ ವರ್ಷಕ್ಕೆ ಬೇಕೆ ಬೇಕು ಎಣ್ಣೆ ಪಾರ್ಟಿ ಡಿಜೆ" ಇಂತಹ ಅದ್ಧೂರಿ ಸಾಲುಗಳು ಭರ್ಜರಿ ಸಂಭ್ರಮವನ್ನು ಹೊತ್ತೊಯ್ಯುತ್ತವೆ.
• ಹಾಡು ಪಾರ್ಟಿ ಸಂಭ್ರಮದ ಝಲಕ್ ನೀಡುವ ಡಿಜೆ ಬೀಟ್ಸ್ ಮತ್ತು ರೋಮಾಂಚಕ ಸೌಂಡ್ ಎಫೆಕ್ಟ್ಸ್‌ಗಳಿಂದ ತುಂಬಿದೆ.
ಹಾಡು ಬಿಡುಗಡೆ ವಿವರಗಳು:
• ಹಾಡಿನ ಹೆಸರು : ಎಣ್ಣೆ ಪಾರ್ಟಿ ಡಿಜೆ
• ಹಾಡಿನ ಪ್ರಾರಂಭ ದಿನಾಂಕ : 29/12/2024
• ಹಾಡು ಬಿಡುಗಡೆ : Let's Pack & Go ಯೂಟ್ಯೂಬ್ ಚಾನಲ್
youtube.com/@LetsPackandGo
1 year ago | [YT] | 4
View 0 replies
Dyavanoor Manjunath
ಹಾಸನಾಂಬೋತ್ಸವ-2024
ಸಪ್ತಮಾತೃಕೆಯರಲ್ಲಿ ವೈಷ್ಣವಿ, ಕೌಮಾರಿ, ಮಾಹೇಶ್ವರೀ ಧರ್ಮ ದರ್ಶನ 24 ಅಕ್ಟೋಬರ್ 2024
#hassan #hasanambha #hasanambhothsava2024 #hasanambhothsava #hassansime
1 year ago | [YT] | 0
View 0 replies
Dyavanoor Manjunath
ಗ್ರಾಮ ಪುರಾಣ | ಇದು ನಮ್ಮ ನಿಮ್ಮ ಊರಿನ ಕಥೆಗಳು... | ಕತ್ತರಿಘಟ್ಟ ಭಾಗ-1 | ದ್ಯಾವನೂರು ಮಂಜುನಾಥ್
👇
https://www.youtube.com/watch?v=4AX6o...
1 year ago | [YT] | 0
View 0 replies
Dyavanoor Manjunath
ಗೃಹಲಕ್ಷ್ಮಿ ಯೋಜನೆ ತಿರಸ್ಕಾರ : ಯುವಕರಿಗೆ ಉದ್ಯೋಗದ ಅಗತ್ಯ - ಜನಾಭಿಪ್ರಾಯ
ಇಂದು ಸಂಜೆ 5:30ಕ್ಕೆ ತಪ್ಪದೇ ನೋಡಿ
https://youtu.be/KePFDvtoNXM
1 year ago | [YT] | 0
View 0 replies
Dyavanoor Manjunath
https://youtu.be/gUx3o259kV0
.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿ ಹೋಬಳಿಯ ಹೆಗ್ಗಡಿಗೆರೆ ಗ್ರಾಮ ಈಗ ಜಯಮ್ಮ ಎಂಬಾಕೆಯಿಂದ, ಎಲ್ಲರ ಗಮನ ಸೆಳೆಯುತ್ತಿದೆ. ಈ ಜಯಮ್ಮ ಎಂಬ ಮಹಿಳೆ ಕಳೆದ 1999 ರಿಂದ ಅನ್ನ-ನೀರು ಮುಟ್ಟಿಲ್ಲ. ಹಾಸಿಗೆ ಬಿಟ್ಟು ಎದ್ದಿಲ್ಲ! ಆಕೆಯನ್ನು ಸಾಕ್ಷಾತ್ ಚೌಡೇಶ್ವರಿದೇವಿ ಎಂದು ನಂಬುವ ಮಂದಿ ಗ್ರಾಮದಲ್ಲಿ ಪೂಜಿಸುತ್ತಾರೆ.
ಈ ಕಾಲದಲ್ಲೂ ಇದೆಲ್ಲ ಏನ್ರೀ? ಚಂಡಿಯಂತೆ? ಚೌಡೇಶ್ವರಿಯಂತೆ ಎಂದು ಬಾಯಿ ಸೊಟ್ಟಗೆ ಮಾಡಬೇಡಿ. ವಿಜ್ಞಾನ ಲೋಕಕ್ಕೆ ಸವಾಲು ಹಾಕುವಂತಹ ನಿದರ್ಶನವೊಂದು ನಮ್ಮ ನಡುವೆಯೇ ಇದೆ!!! ನಂಬೋರು ನಂಬಬಹುದು. ನಂಬಲ್ಲ ಅನ್ನೋರು, ಕಾರಣ ಕೊಟ್ಟರೇ, ಒಳ್ಳೆಯದು. ಕಾರಣ ಸದ್ಯಕ್ಕೆ ತೋಚುತ್ತಿಲ್ಲ ಎಂದ ಮಾತ್ರಕ್ಕೆ ವಿಚಾರವಂತರೆಲ್ಲರೂ, ದೇವರಿಗೆ ಅಡ್ಡಡ್ಡ ಬೀಳಿ ಎಂದು ಹೇಳುವುದು ನನ್ನ ಉದ್ದೇಶವಲ್ಲ. ಹೀಗೂ ಉಂಟು? ಅದೇ, ಯಾಕೆ ಹೀಗೆ ಎಂಬುದು ಜಗತ್ತಿಗೆ ಗೊತ್ತಾದರೆ ಒಳ್ಳೆಯದು.
ಕತ್ತಲ ಕೋಣೆಯ ಹಾಸಿಗೆ ಮೇಲೆ ದಪ್ಪನೆಯ ಉಲ್ಲನ್ ರಗ್ಗಿನಡಿ ಮಲಗಿರುವ 41 ವರ್ಷದ ಜಯಮ್ಮ, ವರ್ಷಕ್ಕೆ 3 ಸಲ ಮಾತ್ರ ಹಾಸಿಗೆ ಬಿಟ್ಟು ಎದುಳುತ್ತಾರೆ. ಬಯಲಿಗೆ ಬರುವುದು. ಊರಲ್ಲಿ ಚೌಡೇಶ್ವರಿ ಉತ್ಸವವಿದ್ದರೇ ಮಾತ್ರ, ಇವರು ಹಾಸಿಗೆ ಬಿಟ್ಟು ಮೇಲಕ್ಕೆ ಏಳುತ್ತಾರೆ. ದೇವಸ್ಥಾನಕ್ಕೆ ಬರುತ್ತಾರೆ. ಆಮೇಲೆ ತಾನುಂಟು, ತನ್ನ ಹಾಸಿಗೆಯುಂಟು. ಸದಾ ಹಾಸಿಗೆ ಮೇಲೆ ಮಲಗುವ ಇವರು ಬದುಕಿದ್ದಾರೆ ಅನ್ನುವುದಕ್ಕೆ ಒಂದೇ ನಿದರ್ಶನ, ಉಸಿರಾಟ! ಇಂಥದ್ದೊಂದು ವಿಲಕ್ಷಣ ಸಂಗತಿಯನ್ನು ವಿಡಿಯೋದಲ್ಲಿ ನಾವು ನೋಡುತ್ತಿದ್ದೆವೆ.
ಜಯಮ್ಮ ಮೊದಲು ಹೀಗಿರಲಿಲ್ಲ. ಎಲ್ಲ ಹೆಣ್ಣು ಮಕ್ಕಳಂತೆಯೇ ಇದ್ದರು. ಮನೆ ಹಿತಕ್ಕಾಗಿ ಕೂಲಿ ಮಾಡುತ್ತಿದ್ದರು. ಸಮಾಜದಲ್ಲಿ ನಮ್ಮದೂ ಒಂದು ಮನೆ ಅಂತ ಆಗಲಿ ಎಂದು ಕಾಸಿಗೆ ಕಾಸು ಸೇರಿಸುತ್ತಿದ್ದಳು. ಆಕೆ ದಿಟ್ಟ ಸ್ವಾಭಿಮಾನಿ. ಇನ್ನೂ ವಿಚಿತ್ರವೆಂದರೆ ಜಯಮ್ಮ ಮದುವೆ ಸಹಾ ಆಗಿದ್ದಾಳೆ. ಹೊಳೆ ನರಸೀಪುರದ ಗಂಡನ ಮನೆಯಲ್ಲಿ ಆಕೆ ಒಂದು ದಿನ ಸಹಾ ಸರಿಯಾಗಿ ಸಂಸಾರ ಮಾಡಿಲ್ಲ. ಪ್ರಥಮ ರಾತ್ರಿಯ ದಿನವೇ, ಜಯಮ್ಮನನ್ನು 'ಅಕ್ಕ' ಎಂದು ಸ್ವತಃ ಆಕೆಯ ಗಂಡನೇ ಹೇಳಿದ್ದಾರೆ. ಹೆಂಡತಿಯನ್ನು ತವರಿಗೆ ಬಿಟ್ಟು, ಈ ಸಂಸಾರ ಬೇಡ ಎಂದು ವಾಪಸ್ಸು ಹೋಗಿದ್ದಾನೆ.
ಜಯಮ್ಮ ಊಟ ಮಾಡುತ್ತಿಲ್ಲ ಎಂದು ಆಕೆಯ ಅಣ್ಣ ರಮೇಶ್ ಮತ್ತು ಮನೆಯವರು ತಲೆ ಕೆಡಿಸಿಕೊಂಡು. ಸಾಲ-ಶೂಲ ಮಾಡಿ, ಮನೆಯಲ್ಲಿರುವ ಚಿನ್ನಾಭರಣ ಮಾರಿ, ತಮಗೆ ಸಾಧ್ಯವಿರುವ ವೈದ್ಯರನ್ನೆಲ್ಲ ಸಂಪರ್ಕಿಸಿದ್ದಾರೆ. ವೈದ್ಯರೆಲ್ಲರೂ, ದಿಕ್ಕು ತೋಚದೇ ಆಕಾಶ ನೋಡಿದಾಗ ರಮೇಶ್ ಕಕ್ಕಾಬಿಕ್ಕಿಯಾಗಿ. ಕೊನೆಗೆ ತಂಗಿಯನ್ನು ಮನೆಗೆ ಕರೆತಂದರು. ಮಗಳ ಹಾಸಿಗೆಯ ಪಕ್ಕವೇ ಕೂತಿಲ ತಾಯಿಗೆ, ಮಗಳು ಸುಧಾರಿಸಿಕೊಂಡರೆ ಸಾಕು ಎನ್ನುವ ಆಸೆ. ಎದ್ದು ಊಟ ಮಾಡಿದರೆ ಸಾಕು ಎಂಬ ಬಯಕೆ.
ಚೌಡೇಶ್ವರಿ ಉತ್ಸವ ಮೂರ್ತಿ ಮನೆ ಬಳಿಗೆ ಬಂದರೆ, ಜಯಮ್ಮ ಎದ್ದು ಕೂರುತ್ತಾರೆ ಜನರು ಹೇಳುವಂತೆ, ಚೌಡೇಶ್ವರಿ ದೇವಿಯ ವಿಗ್ರಹ ಮನೆ ಬಾಗಿಲಿಗೆ ಬಂದ ತಕ್ಷಣ, ಹಾಸಿಗೆಯಿಂದ ತೆವಲಿಕೊಂಡು ಹೊರಬರುವ ಜಯಮ್ಮ ಭಕ್ತಿ ಭಾವದಿಂದ ನಡೆದುಕೊಳ್ಳುತ್ತಾರೆ. ನಂತರ ತಾವಾಗಿಯೇ ಎದ್ದು ನಿಲ್ಲುತ್ತಾರೆ. ಶುಭ್ರವಾಗಿ ಸ್ನಾನ ಮಾಡಿ, ಮಡಿ ಸೀರೆ ಉಟ್ಟು, ಚೌಡೇಶ್ವರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ದೇವಸ್ಥಾನದವರೆಗೂ ನಡೆದುಕೊಂಡು ಹೋಗುತ್ತಾರೆ. ಅವರ ಮುಖದಲ್ಲಿ ಆಯಾಸ ಕಾಣಿಸುವುದೇ ಇಲ್ಲ.
ಇನ್ನೂ ಜಯಮ್ಮ ರವರಿಗೆ ನೀರು ಕುಡಿಸಿದರೆ ಕೆಲವೇ ಸೆಕೆಂಡ್ಗಳಲ್ಲಿ ನೀರನ್ನೆಲ್ಲ ವಾಂತಿ ಮಾಡುತ್ತಾರೆ. ಜಯಮ್ಮನಿಗೆ ತಿನ್ನೋದಕ್ಕೆ ಆಸೆ. ಆದರೆ ತಿಂದದ್ದೆಲ್ಲ ವಾಂತಿಯಾಗುತ್ತೆ. ವಾಂತಿಯಲ್ಲಿ ರಕ್ತದ ಉಂಡೆಗಳು ಬೀಳುತ್ತವೆ ಎಂಬುದು ಅವರ ಸ್ಥಳಿಯರ ವಿವರಣೆ. ಇದೆಲ್ಲಾ ಯಾಕೆ ಅನ್ನೋ ಪ್ರಶ್ನೆಗೆ ಜಯಮ್ಮನ ಅಣ್ಣ ರಮೇಶ್ ರವರು ಹೀಗೆ ಉತ್ತರ ನೀಡಿದ್ದಾರೆ.
ಜಯಮ್ಮನ ಅಣ್ಣ ರಮೇಶ್ ರವರು ಹೇಳುವಂತೆ: ನಮ್ಮದು ಚೌಡೇಶ್ವರಿ ದೇವಿಯನ್ನು ಪೂಜಿಸುವ ಕುಟುಂಬ. ದೇವಿಗೆ ಅಪಚಾರ ಮಾಡಿದ ನಮ್ಮ ತಂದೆ ಕುಷ್ಟರೋಗಕ್ಕೆ ಬಲಿಯಾದರು. ದೇವಿಯ ಅವಕೃಪೆಯಿಂದ ಹೀಗೆಲ್ಲ ಆಗುತ್ತಿದೆ ಅನ್ನುತ್ತಾರೆ ರಮೇಶ್. ಜಯಮ್ಮನನ್ನು ಊರಿನ ಜನ ಚೌಡೇಶ್ವರಿಯೆಂದೇ ನಂಬಿದ್ದಾರೆ. ಆಕೆಯನ್ನು ಗೇಲಿ ಮಾಡಿದವರು ಅಷ್ಟಕಷ್ಟಗಳಿಗೆ ಸಿಲುಕಿದ ಉದಾಹರಣೆಗಳೂ ಇವೆಯಂತೆ. ಅವರವರ ನಂಬಿಕೆ ಅವರವರಿಗಿರಲಿ. 24 ವರ್ಷ ಏನನ್ನೂ ತಿನ್ನದೇ, ಕುಡಿಯದೇ ಜೀವಂತ ಶವದಂತೆ ಹಾಸಿಗೆ ಮೇಲೆ ಬದುಕಲು ಸಾಧ್ಯವೇ? ಅದು ಹೇಗೆ? ಚೌಡೇಶ್ವರಿ ಬಂದಾಗ ಜಯಮ್ಮನ ಮೈಗೆ ಎಲ್ಲಿಂದ ಅಷ್ಟೊಂದು ಶಕ್ತಿ ಬರುತ್ತದೆ? ಮೂರನೇ ಜಗತ್ತಿನ ಇಂಥ ವಿಪರೀತಗಳನ್ನು ಸೀಳಿನೋಡುವುದಕ್ಕೆ ಯಾವ ಪ್ರಯೋಗಾಲಯ, ಯಾವ ಸಂಶೋಧಕನಿಗೆ ಆಸಕ್ತಿಯಿದೆ? ಇಂತಹ ಪ್ರಶ್ನೆಗಳು ನಿಮ್ಮಲ್ಲಿ ಸಹ ಉಂಟಾಗುತ್ತದೆ ಅಲ್ಲವೆ ಅಲ್ಲವೇ ಇದರ ಬಗ್ಗೆ ಕಾಂಮೆಟ್ ನಲ್ಲಿ ತಿಳಿಸಿ
#travel #Vlog #kannadavlog #heggadigere #jayamma #dyavanoor_Manjunat
2 years ago | [YT] | 5
View 0 replies
Dyavanoor Manjunath
ಮೈಸೂರು ದಸರಾ ವೈಭವ 2023😍❤ ದಸರಾ ಮಹೋತ್ಸವಕ್ಕೆ ಕ್ಷಗಣನೆ ❤️😍 ಅಮ್ಮನವರ ಇಂದಿನ ಅಲಂಕಾರ ❤️😍
2 years ago | [YT] | 22
View 0 replies
Dyavanoor Manjunath
ಸವಿ ನೆನಪುಗಳು ಸಾವಿರ❤
ನಿಮ್ಮ ಮೊತ್ತ ಮೊದಲ ಬಾರಿ ಉಪಯೋಗಿಸಿದ ಮೊಬೈಲ್
ಇಲ್ಲಿದ್ದರೆ ಗುರುತಿಸಿ ಲೈಕ್ ಕೊಡಿ
🤔😍👍
2 years ago | [YT] | 3
View 0 replies
Load more