VK18 News Kannada

ಕನ್ನಡಿಗರ ಆಶೀರ್ವಾದದೊಂದಿಗೆ ನೇರ ದಿಟ್ಟ ನಿರಂತರ ಸುದ್ದಿಗಾಗಿ ನೀವು ನೋಡ್ತಾ ಇರಿ

Welcome to VK18 NEWS KANNADA
ನಮ್ಮ ಚಾನೆಲ್ ಗೆ ಭೇಟಿ ಮಾಡಿದ್ದಕ್ಕೆ ಧನ್ಯವಾದಗಳು Subscribe ಆಗುವ ಮೂಲಕ ಈ ನಿಮ್ಮ ಕನ್ನಡ ಚಾನೆಲ್ ಬೆಳೆಸಿ, ಹರಸಿ, ಹಾರೈಸಿ ಆಶೀರ್ವದಿಸಿ.

ಸತ್ಯಮೇವ ಜಯತೆ ಕಾಲಾಯ ತಸ್ಸೇ ನಮಃ ಇಂದು ಸತ್ಯ ಮರೆಯಾಗಿ ಅಸತ್ಯ ಎಲ್ಲೆಡೆ ತಾಂಡವ ಆಡುತ್ತಿದೆ ಆದರೆ ಕಾಲ ಹೀಗೆ ಇರದು, ಸತ್ಯದ ಬಟ್ಟೆಯ ತೊಟ್ಟು ಮೆರೆಯುವ ಸುಳ್ಳು ಒಂದಲ್ಲ ಒಂದು ದಿನ ಸಿಕ್ಕಿ ಹಾಕಿಕೊಳ್ಳಲೇಬೇಕು ಸತ್ಯ ಬಯಲಿಗೆ ಬರಲೇಬೇಕು.

ಸತ್ಯದ ಮುಖವಾಡದ ಅಡಿಯಲ್ಲಿ ಅಡಗಿರುವ ಸುಳ್ಳನ್ನು ಹೊರಗೆಡೆದು ಕತ್ತಲ ಜಗದಲ್ಲಿ ಅಡಗಿರುವ ಸತ್ಯದ ಅನಾವರಣ ಮಾಡುವುದೇ ಈ ಅಪ್ಪಟ ಕನ್ನಡ ಚಾನಲ್ ನ ಉದ್ದೇಶ

ಇರುವ ಸುದ್ದಿ ಇದ್ದ ಹಾಗೆ ತಕ್ಷಣ ನಿಮ್ಮ ಮುಂದೆ ಬಿತ್ತರವಾಗುತ್ತದೆ ಕತ್ತಲ ಜಗದ ಅಡಿಯಲ್ಲಿ ಸಿಲುಕಿ ನರಳುವ ಜೀವಗಳನ್ನ ಹುಡುಕೋಣ ಕತ್ತಲ ಜಗದಿಂದ ಅವರನ್ನು ಹೊರ ತರೋಣ ನನ್ನ ಜೊತೆಗೆ ಜೊತೆಯಾಗಿ ನನ್ನ ಕೈಗೆ ಕೈ ಸೇರಿಸಿ ನಿಮ್ಮೊಂದಿಗೆ ನಾನಿದ್ದೇನೆ.

ಕನ್ನಡವೇ ಸತ್ಯ ಕನ್ನಡವೇ ನಿತ್ಯ ಸಿರಿಗನ್ನಡಂ ಗೆಲ್ಗೆ. ಕನ್ನಡವನ್ನು ಬಳಸಿ ಕನ್ನಡವನ್ನು ಉಳಿಸಿ❤️❤️❤️💛💛💛
email- vknewskannada@gmail.com





VK18 News Kannada

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
ಕಳೆದುಹೋದ ನೋವುಗಳು ಮಾಸಲಿ, ಹೊಸ ಭರವಸೆಗಳು ಚಿಗುರಲಿ. ಈ 2026 ನಿಮ್ಮ ಪಾಲಿಗೆ ಕೇವಲ ಯಶಸ್ಸನ್ನು ಮಾತ್ರವಲ್ಲದೆ, ನೆಮ್ಮದಿ ಮತ್ತು ಆತ್ಮಗೌರವದ ಬದುಕನ್ನು ನೀಡಲಿ. ಹೊಸ ಪಯಣ ಸುಖಮಯವಾಗಿರಲಿ🩷😊

3 weeks ago | [YT] | 7

VK18 News Kannada

ನೆಲಮಂಗಲ

ಯುವತಿಯನ್ನ ಸ್ನೇಹಿತೆ ರೂಂ ಗೆ ಕರೆದೊಯ್ದು ಕೊಲೆ ಮಾಡಿರುವ ಯುವಕ

ದೇವಿಶ್ರೀ 21 ವರ್ಷ ಕೊಲೆಯಾದ ಯುವತಿ ಮೂಲತಃ ಆಂಧ್ರದ ನಿವಾಸಿ

ಪ್ರೇಮ್ ವರ್ಧನ್ ಕೊಲೆ ಮಾಡಿರುವ ಆರೋಪಿ

ಬೆಂಗಳೂರು ಉತ್ತರ ವಲಯ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ತಮ್ಮೇನಹಳ್ಳಿಯಲ್ಲಿ ಘಟನೆ

ಪ್ರತಿಷ್ಠಿತ ಕಾಲೇಜಿನಲ್ಲಿ ಬಿಬಿಎಂ ವ್ಯಾಸಾಂಗ ಮಾಡುತ್ತಿದ್ದ ದೇವಿಶ್ರೀ

ಆಂಧ್ರ ಮೂಲದ ಯವತಿ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದಿದ್ದಳು

ನಿನ್ನೆ ಬೆಳಿಗ್ಗೆ ಪ್ರೇಮ್ ವರ್ಧನ ಎಂಬಾತನ ಜೊತೆ ಸ್ನೇಹಿತೆ ರೂಂಗೆ ತೆರಳಿದ್ದ ಯುವತಿ

ಯುವತಿ ಯನ್ನ ಕೊಲೆ ಮಾಡಿ ಯುವಕ ಒರ್ವನೇ ವಾಪಸ್ ಆಗಿದ್ದಾನೆ

ಇಂದು ಬೆಳಿಗ್ಗೆ ಘಟನೆ ಬೆಳಕಿಗೆ

ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು

ತಲೆಮರೆಸಿಕೊಂಡಿರುವ ಪ್ರೇಮ್ ವರ್ಧನ್ ಗೆ ತಲಾಶ್ ನಡೆಸುತ್ತಿರುವ ಪೊಲೀಸರು

ಸದ್ಯ ಯುವತಿ ಮೃತದೇಹ ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ

2 months ago | [YT] | 2

VK18 News Kannada

ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಇನ್ನಿಲ್ಲ

ಪರಿಸರ ಮಾತೆ, ವೃಕ್ಷಮಾತೆ ಸಾಲುಮರ ತಿಮ್ಮಕ್ಕ(114) ಇಂದು ವಿಧಿವಶರಾಗಿದ್ದಾರೆ. ಪದ್ಮಶ್ರೀ ಪುರಸ್ಕೃತೆ ತಿಮ್ಮಕ್ಕ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

2 months ago | [YT] | 5

VK18 News Kannada

ಕೋಲಾರ

ಸರ್ಕಾರದ ಪ್ರಶಸ್ತಿ, ಪುರಸ್ಕಾರಗಳಿಗೆ ಬೆಂಕಿ ಹಚ್ಚಿ ಆಕ್ರೋಶ.

ಸಾಹಿತಿ, ಬರಹಗಾರ, ಪುಸ್ತಕ ಮನೆಯ ನಿರ್ಮಾತೃ ಹರಿಹರಪ್ರಿಯ ಅವರಿಂದ ಆಕ್ರೋಶ.

ಕೋಲಾರ ಜಿಲ್ಲೆ ಮಾಲೂರು ಪಟ್ಟಣದ ತಮ್ಮ ಮನೆಯ ಬಳಿ ಬೆಂಕಿ ಹಚ್ಚಿ ಆಕ್ರೋಶ.

ಸರ್ಕಾರದಿಂದ ಪುಸ್ತಕ ಮನೆಗೆ ನಿರ್ಮಾಣಕ್ಕೆ ಹಾಗೂ ಚಿಕಿತ್ಸೆಗೆ ಅನುದಾನ ನೀಡದ ಹಿನ್ನೆಲೆ ಆಕ್ರೋಶ.

ಬೆಳಿಗ್ಗೆ ತಮಗೆ ಬಂದಿದ್ದ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿರುವ ಹರಿಹರ ಪ್ರಿಯ‌.

2 months ago | [YT] | 1

VK18 News Kannada

"ನಮಸ್ಕಾರ ನಮ್ಮ ಕನ್ನಡ ಬಂಧುಗಳೇ"

"ಸತ್ಯ, ಸವಾಲು, ಸಮಾಜದ ಸ್ವರ — VK18 News Kannada.

""ನಿಮ್ಮ ನಂಬಿಕೆಯ ಸುದ್ದಿ — VK18 News Kannada

ಜೊತೆಗಿರಿ"ತಾಜಾ ಸುದ್ದಿ, ನಿಖರ ಮಾಹಿತಿ — VK18 News Kannada."

"ಸುದ್ದಿಯ ನಿಜಸ್ವರೂಪ ಕನ್ನಡದಲ್ಲಿ — VK18 News Kannada."

"ನಮ್ಮ ಕನ್ನಡಿಗರ ಸ್ವರ — ನಿಮ್ಮ VK18 News Kannada! ಇಂದೇ subscribe ಮಾಡಿ."

"ಸತ್ಯಸಂಧ ಸುದ್ದಿ, ಕನ್ನಡಿಗರ ಹೆಮ್ಮೆ — VK18 News Kannada"

ನಮ್ಮ ನಾಡಿನ ಸುದ್ದಿ, ನಿಮ್ಮ ಮನೆಯವರೆಗೆ — VK18 News Kannada ಜೊತೆಗಿರಿ,

subscribe ಮಾಡಿ.""ಕನ್ನಡಿಗರಿಗೋಸ್ಕರ, ಕನ್ನಡದಲ್ಲೇ ಸುದ್ದಿ — VK18 News Kannada.

ಇಂದೇ ನಮ್ಮ ಕುಟುಂಬಕ್ಕೆ ಸೇರಿ."

"ನಿಮ್ಮ ಬೆಂಬಲವೇ ನಮ್ಮ ಶಕ್ತಿ! VK18 News Kannada subscribe ಮಾಡಿ,👇👇👇

youtube.com/@vk18newskannada?si=0SJZnjiBat

ಸುದ್ದಿ ಲೋಕದಲ್ಲಿ ನಮ್ಮ ಜೊತೆಯಾಗಿರಿ."

3 months ago | [YT] | 2

VK18 News Kannada

ಕುಲದೇವರ ವಿಚಾರಕ್ಕೆ ನಡೆಯಿತು ಕೊಲೆ.ಅತ್ತಿಗೆಯನ್ನೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ ಮೈದುನ..ಜೋಯಿಡಾ ತಾಲೂಕಿನ ರಾಮನಗರದಲ್ಲಿ ನಡೆದ ಘಟನೆ.ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ
ಕೊಲೆಯಾದ ಮಹಿಳೆ ಭಾಗ್ಯಶ್ರೀ ವರಕ(38).ಕೊಲೆ ಮಾಡಿ ಬಂಧನಕ್ಕೊಳಗಾದ ವ್ಯಕ್ತಿ ಧೋಂಡು ವರಕ.ಕಳೆದ ಐದಾರು ವರ್ಷದಿಂದ ನಡೆಯುತ್ತಿದ್ದ ಕೌಟುಂಬಿಕ ಕಲಹ.ಕುಲದೇವರು ತನ್ನ ತಮ್ಮನ ಮನೆಯಲ್ಲಿ ಇದೆ ತಮ್ಮ ತನಗೆ ಕುಲದೇವರ ಮೂಲಕ ಮಂತ್ರ ಮಾಡುತ್ತಾನೆ ಎಂದು ನಂಬಿದ್ದ ಕೊಲೆಗಾರ ಧೋಂಡು.ಗೌಳಿ ಸಮೂದಾಯದಲ್ಲಿ ಕಿರಿಯ ತಮ್ಮನ ಮನೆಯಲ್ಲೆ ಇರಬೇಕಂತೆ ಕುಲದೇವರು.ಆದ್ರೆ ಕುಲದೇವರಿಂದ ತನ್ನ ತಮ್ಮ ತನಗೆ ಹಾನಿ ಮಾಡುತ್ತಿದ್ದಾನೆ ಎಂದು ಮೂಢನಂಬಿಕೆ ಮತ್ತು ಸಂಶಯದಲ್ಲಿ ಇದ್ದ ಅಣ್ಣ ಧೋಂಡು.ಕೊನೆಯಲ್ಲಿ ಮಾತಿಗೆ ಮಾತು ಬೆಳೆದು ಕೊಲೆಯಲ್ಲಿ ಅಂತ್ಯ...ಕೊಲೆಯಾದ ಕೆಲವೇ ಗಂಟೆಗಳಲ್ಲಿ ಬಂಧಿಸಿದ ರಾಮನಗರ ಪೋಲಿಸರು...ರಾಮನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ...

4 months ago | [YT] | 1

VK18 News Kannada

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ ಮೂವರ ಸಾವು. ಗಂಡ ಮತ್ತು ಇಬ್ಬರು ಮಕ್ಕಳನ್ನ ಕೊಲೆ ಮಾಡಿ ತಾಯಿಯು ಆತ್ಮಹತ್ಯೆಗೆ ಯತ್ನ. ಅದೃಷ್ಟವಶಾತ್ ತಾಯಿ ಅಪಾಯದಿಂದ ಪಾರು ಆಸ್ವತ್ರೆಗೆ ದಾಖಲು. ಹೊಸಕೋಟೆ ತಾಲೂಕಿನ ಗೊಣಕನಹಳ್ಳಿ ಗ್ರಾಮದಲ್ಲಿ ಘಟನೆ.
ಗಂಡ ಶಿವು ( 32 ) ಮಗಳು ಚಂದ್ರಕಳಾ ( 11 ) ಮಗ ಉದಯ್ ಸೂರ್ಯ ( 07 ) ಮೃತರು. ತಾಯಿ ಮಂಜುಳಾ ಪ್ರಾಣಾಪಾಯದಿಂದ ಪಾರು.
ಗಂಡ ಅಪಘಾತದಲ್ಲಿ ಗಾಯಗೊಂಡಿದ್ದ ಕಾರಣ ಚಿಕಿತ್ಸೆಗಾಗಿ ಸಾಲ ಮಾಡಿಕೊಂಡಿದ್ದ ಕುಟುಂಬ.
ಸಾಲ ಹೆಚ್ಚಾಗಿ ಸಾಲಬಾದೆ ತಾಳಲಾರದೆ ಆತ್ಮಹತ್ಯೆಗೆ ನಿರ್ಧಾರ ಮಾಡಿದ್ದ ದಂಪತಿ.
ನಾವು ಸತ್ತರೆ ಮಕ್ಕಳು ತಬ್ಬಲಿಗಳಾಗುತ್ತಾರೆ ಅಂತ ಮಕ್ಕಳನ್ನು ಸಾಯಿಸುವ ನಿರ್ಧಾರ ಮಾಡಿದ್ದ ಗಂಡ ಹೆಂಡತಿ.ಅಂತೆ ಮೊದಲಿಗೆ ಗಂಡ ಮತ್ತು ಮಕ್ಕಳ ಕುತ್ತಿಗೆಯನ್ನ ವೇಲ್ ನಿಂದ ಬಿಗಿದು ಕೊಲೆ ಮಾಡಿದ್ದ ಪತ್ನಿ.ನಂತರ ಪತ್ನಿಯು ಹಗ್ಗದಿಂದ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನ ಹಗ್ಗ ತುಂಡಾದ ಕಾರಣ ಪ್ರಾಣಾಪಾಯದಿಂದ ಪಾರಾದ ಮಹಿಳೆ.
ಮಹಿಳೆಗೆ ಹೊಸಕೋಟೆ ಸರ್ಕಾರಿ ಆಸ್ವತ್ರೆಯಲ್ಲಿ‌ ಚಿಕಿತ್ಸೆ. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಗೊಣಕನಹಳ್ಳಿ ಗ್ರಾಮ.

4 months ago | [YT] | 1

VK18 News Kannada

ಕುಲದೇವರ ವಿಚಾರಕ್ಕೆ ನಡೆಯಿತು ಕೊ*ಲೆ.ಅತ್ತಿಗೆಯನ್ನೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ ಮೈದುನ..ಜೋಯಿಡಾ ತಾಲೂಕಿನ ರಾಮನಗರದಲ್ಲಿ ನಡೆದ ಘಟನೆ.ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ
ಕೊ*ಲೆಯಾದ ಮಹಿಳೆ ಭಾಗ್ಯಶ್ರೀ ವರಕ(38).ಕೊ*ಲೆ ಮಾಡಿ ಬಂಧನಕ್ಕೊಳಗಾದ ವ್ಯಕ್ತಿ ಧೋಂಡು ವರಕ.ಕಳೆದ ಐದಾರು ವರ್ಷದಿಂದ ನಡೆಯುತ್ತಿದ್ದ ಕೌಟುಂಬಿಕ ಕಲಹ.ಕುಲದೇವರು ತನ್ನ ತಮ್ಮನ ಮನೆಯಲ್ಲಿ ಇದೆ ತಮ್ಮ ತನಗೆ ಕುಲದೇವರ ಮೂಲಕ ಮಂತ್ರ ಮಾಡುತ್ತಾನೆ ಎಂದು ನಂಬಿದ್ದ ಕೊಲೆಗಾರ ಧೋಂಡು.ಗೌಳಿ ಸಮೂದಾಯದಲ್ಲಿ ಕಿರಿಯ ತಮ್ಮನ ಮನೆಯಲ್ಲೆ ಇರಬೇಕಂತೆ ಕುಲದೇವರು.ಆದ್ರೆ ಕುಲದೇವರಿಂದ ತನ್ನ ತಮ್ಮ ತನಗೆ ಹಾನಿ ಮಾಡುತ್ತಿದ್ದಾನೆ ಎಂದು ಮೂಢನಂಬಿಕೆ ಮತ್ತು ಸಂಶಯದಲ್ಲಿ ಇದ್ದ ಅಣ್ಣ ಧೋಂಡು.ಕೊನೆಯಲ್ಲಿ ಮಾತಿಗೆ ಮಾತು ಬೆಳೆದು ಕೊ*ಲೆಯಲ್ಲಿ ಅಂತ್ಯ...ಕೊ*ಲೆಯಾದ ಕೆಲವೇ ಗಂಟೆಗಳಲ್ಲಿ ಬಂಧಿಸಿದ ರಾಮನಗರ ಪೋಲಿಸರು...ರಾಮನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ...

4 months ago | [YT] | 1

VK18 News Kannada

ಪಾನಿಪೂರಿ ತಿನ್ನುವ ವೇಳೆ ಯುವಕರ ನಡುವೆ ಗಲಾಟೆ.
ಒಂದೇ ಪಂಚ್ ಗೆ ಪ್ರಜ್ಞೆ ಕಳೆದುಕೊಂಡ ಯುವಕ.
ಮೂರು ದಿನದ ಬಳಿ ಮನೆಯಲ್ಲೇ ಯುವಕನ ಸಾವು.
ಬಿಹಾರದ ಮೂಲದ ಭೀಮಕುಮಾರ (25) ಸಾವನ್ನಪ್ಪಿದ ಯುವಕ.
ಬೆಂಗಳೂರಿನ ಪುಟ್ಟೇನಹಳ್ಳಿಯ ಅರಕೆರೆಯಲ್ಲಿ ಘಟನೆ.
ಸಾವನ್ನಪ್ಪಿದ ಭೀಮಾಕುಮಾರ್ ಮನೆಗೆ ಸ್ನೇಹಿತರು ಬಂದಿದ್ರು.
ಮನೆಗೆ ಬಂದಿದ್ದ ಸ್ನೇಹಿತರನ್ನು ಕರೆದುಕೊಂಡು ಪಾನಿಪೂರಿ ತಿನ್ನಲು ಹೋಗಿದ್ದ ಭೀಮಾಕುಮಾರ್.
ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಸಲ್ಮಾನ್ ಅನ್ನೋ‌ ಯುವಕನ ಜೊತೆಗೆ ಕಿರಿಕ್.
ಗಲಾಟೆಯಲ್ಲಿ ಭೀಮಾಕುಮಾರ್ ಕತ್ತಿನ ಭಾಗಕ್ಕೆ ಬಲವಾಗಿ ಪಂಚ್ ಮಾಡಿದ್ದ ಸಲ್ಮಾನ್.
ಈ ವೇಳೆ ಪ್ರಜ್ಞೆ ತಪ್ಪಿ ಬಿದ್ದ ಭೀಮಕುಮಾರ್.
ಯುವಕನನ್ನು ಕರೆದುಕೊಂಡು ಮನೆಗೆ ಹೋಗಿ‌ ಮಲಗಿಸಿ ಹಾರೈಕೆ ಮಾಡಿದ ಸ್ನೇಹಿತರು.
ಮೂರು ದಿನದ ಬಳಿ ಸಾವನ್ನಪ್ಪಿದ ಯುವಕ ಭೀಮಾಕುಮಾರ್.
ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು.

4 months ago | [YT] | 1

VK18 News Kannada

ಕೋಲಾರ

ನಾಳೆ ಸೇನೆಗೆ ತೆರಳಬೇಕಿದ್ದ ಯೋಧ ಹೃದಯಾಘಾತದಿಂದ ಸಾವು

ಕೋಲಾರ ಜಿಲ್ಲೆ ಮುಳಬಾಗಿಲು ತಾಲುಕಿನ ಆಚಂಪಲ್ಲಿ ಗ್ರಾಮದಲ್ಲಿ ಘಟನೆ

ಮುನಿನಾರಾಯಣ (36) ಸಾವನ್ನಪ್ಪಿರುವ ಯೋಧ

ಆ.18 ರಿಂದ, ಸೆಪ್ಟೆಂಬರ್ 18 ವರೆಗೂ ರಜೆಯ ಮೇಲೆ ಬಂದಿದ್ದ ಮುನಿನಾರಾಯಣ

ಬರ್ಮಾ ಗಡಿಯಲ್ಲಿ ಕೆಲಸಕ್ಕೆ ನಿಯೋಜನೆ ಆಗಿದ್ದರು

ಸೆಪ್ಟೆಂಬರ್ 18 ಕ್ಕೆ ಕರ್ತವ್ಯಕ್ಕೆ ವಾಪಾಸ್ ಆಗಲು, ನಾಳೆ ಹೊರಡಬೇಕಿದ್ದ ಮುನಿನಾರಾಯಣ

ಇಂದು ಮನೆಯಲ್ಲಿ ನಿದ್ರಾಸ್ತಿತಿಯಲ್ಲಿಯೇ ಹೃದಯಾಘಾತ

ಕಳೆದ 17 ವರ್ಷದಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮುನಿನಾರಾಯಣ

ಮದುವೆಯಾಗಿ ಪತ್ನಿ, ಇಬ್ಬರು ಮಕ್ಕಳು, ತಾಯಿಯನ್ನ ಅಗಲಿದ ಮುನಿನಾರಾಯಣ

ಯೋಧ ಮುನಿನಾರಾಯಣ ನಿಧನಕ್ಕೆ ಸ್ನೇಹಿತರು ಗ್ರಾಮಸ್ತರ ಸಂತಾಪ

4 months ago | [YT] | 3