MEDIAISM ....We upload short films ,Celebrity Shows,Short videos and web series,We post new videos every week, so subscribe to our channel and chill with us. We Upload New Short Films Every Week..Stay Tune To Us..Our Email ID is themediaism@gmail.com

DM FOR BUISNESS PROMOTION
GMAIL:THEMEDIAISM@GMAIL.COM

#contentcreator#digitalcreator #digitalmarketing #mediaism #kannada#kannadayoutuber#ANCHORJYOTHI


MEDIAISM

9 months ago | [YT] | 2

MEDIAISM

The hunt for justice begins!
#Bagheera roars into cinemas on October 31st 💥💥

@sriimurali #drsuri #PrashanthNeel @vkiragandur @rukminitweets @b_ajaneesh @hombalefilms @ChaluveG @GarudaRam @AJShetty @ChethanDsouza @yogigraj @prakashraaj @BagheeraTheFilm @pro_sudheendravenkatesh
@raghavendrachitravani
#bagheeraonoct31

1 year ago | [YT] | 4

MEDIAISM

ಕೋಣ" ಚಿತ್ರದಲ್ಲಿ ಕೋಮಲ್ ಕುಮಾರ್.
ಸ್ಯಾಂಡಲ್‌ವುಡ್:
ತಮ್ಮ ಸಹಜ ಅಭಿನಯದಿಂದ ಅಭಿಮಾನಿಗಳ ಮನ ಗೆದ್ದಿರುವ "ಕೋಮಲ್ ಕುಮಾರ್" ಅಭಿನಯದ "ಕೋಣ" ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ ಇತ್ತಿಚೆಗೆ ಅನಾವರಣವಾಯಿತು. ಈ ಚಿತ್ರ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ನಿರ್ಮಾಣವಾಗಲಿದೆ.


ಡಾರ್ಕ್ ಕಾಮಿಡಿ ಜಾನರ್ ಇರುವ ಈ ಚಿತ್ರವನ್ನು ಈ ಹಿಂದೆ ಜಗ್ಗೇಶ್ ಅವರು ಅಭಿನಯಿಸಿದ್ದ "8 MM" ಚಿತ್ರವನ್ನು ನಿರ್ದೇಶಿಸಿದ್ದ ಎಸ್ ಹರಿಕೃಷ್ಣ ನಿರ್ದೇಶಿಸುತ್ತಿದ್ದಾರೆ.

ಇದೊಂದು ನೈಜ ಘಟನೆ ಆಧಾರಿತ ಚಿತ್ರವಾಗಿದೆ. ಕೋಮಲ್ ಕುಮಾರ್ ಅವರು ಈವರೆಗೂ ಅಭಿನಯಿಸಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕನ್ನಡದಲ್ಲಿ ಆನೆ, ನಾಯಿ, ಕೋತಿ ಮೊದಲಾದ ಪ್ರಾಣಿಗಳನ್ನು ಬಳಸಿಕೊಂಡು ಸಾಕಷ್ಟು ಬಂದಿದ್ದು ಈ ಚಿತ್ರದಲ್ಲಿ "ಕೋಣ"(ಪ್ರಾಣಿ) ಮುಖ್ಯ ಪಾತ್ರವಾಗಿರುವುದು ವಿಶೇಷವಾಗಿರಲಿದೆ. ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಹರಿಕೃಷ್ಣ ಎಸ್ ತಿಳಿಸಿದ್ದಾರೆ.

ತೇಜ್ವಿನ್ ಪ್ರೊಡಕ್ಷನ್ ಲಾಂಛನದಲ್ಲಿ ವಿನೋದ್ ಕುಮಾರ್ ಹಾಗೂ ಸೆಲ್ವನ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ, ವಿನೋದ್ ಕುಮಾರ್ ಬಿ ಛಾಯಾಗ್ರಹಣ ಹಾಗೂ ಉಮೇಶ್ ಆರ್ ಬಿ ಅವರ ಸಂಕಲನವಿರುವ ಈ ಚಿತ್ರಕ್ಕಿದೆ. ಸಂಜಯ್ ಹಾಗೂ ಉತ್ತಮ್ ಸ್ವರೂಪ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.@komalkumarshivalingappa #konna
1 m

2 years ago | [YT] | 3

MEDIAISM

ಕುತೂಹಲ ಮೂಡಿಸಿದೆ ಅದಿತಿ ಪ್ರಭುದೇವ - ಪವನ್ ತೇಜ ಅಭಿನಯದ "ಅಲೆಕ್ಸಾ" ಟ್ರೇಲರ್

ಅದಿತಿ ಪ್ರಭುದೇವ ಹಾಗೂ ಪವನ್ ತೇಜ್ ನಾಯಕ - ನಾಯಕಿಯಾಗಿ‌ ನಟಿಸಿರುವ, ವಿ.ಚಂದ್ರು ನಿರ್ಮಾಣದ ಹಾಗೂ ಜೀವ ನಿರ್ದೇಶನದ "ಅಲೆಕ್ಸಾ" ಚಿತ್ರದ ಟ್ರೇಲರ್ ಹಾಗೂ ಆಡಿಯೋ (ಹಾಡುಗಳು) ಇತ್ತೀಚಿಗೆ ಬಿಡುಗಡೆಯಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಭಾ.ಮ.ಹರೀಶ್, ಹಿರಿಯ ಕಲಾವಿದರಾದ ಸುಂದರರಾಜ್, ಪ್ರಮೀಳಾ ಜೋಷಾಯಿ, ಐಪ್ಲೆಕ್ಸ್ ಆಡಿಯೋ ಸಂಸ್ಥೆಯ ಮೋಹನ್ ಮುಂತಾದ ಗಣ್ಯರು ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

2 years ago | [YT] | 3

MEDIAISM

​​ 100 ಕೋಟಿ ದಾಟುತ್ತಾ.ಕಾಂತಾರ ಪ್ರೀಕ್ವೆಲ್..!
‘ಕಾಂತಾರ’ ಪಾರ್ಟ್​ 2 ಶೂಟಿಂಗ್​ ಕ್ಷಣಗಣನೆ....

ಸ್ಯಾಂಡಲ್‌ವುಡ್:

‘ಕಾಂತಾರ’. ಅದೊಂದು ದಂತಕಥೆ, ಹಿಸ್ಟರಿ ಕ್ರಿಯೇಟ್​ ಮಾಡಬೇಕು ಅಂತ ತೆರೆಗೆ ಅಪ್ಪಳಿಸಿ, ರೆಕಾರ್ಡ್​ ಮೇಲೆ ರೆಕಾರ್ಡ್​ ಮಾಡಿ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿ ಮಾಡಿದೆ.. ಕಾಂತಾರ ಅನ್ನೋ ಒಂದು ಸಿನಿಮಾ, ಬಜೆಟ್​ಗಿಂತಲೂ ಕಂಟೆಂಟ್​ ಇಂಪೊರ್ಟೆಂಟ್​ ಅಂತ ಪ್ರಪಂಚಕ್ಕೆ ಸಾರಿ ಸಾರಿ ಹೇಳಿದ ಸಿನಿಮಾ. ಮೌತ್​ ಪಬ್ಲಿಸಿಟಿ ಮೂಲಕ ಕರಾವಳಿ ಸೊಗಡಿನ ಕಾಂತಾರ ಸಿನಿಮಾ ಇಡೀ ವರ್ಲ್ಡ್​ ವೈಡ್​ ಸೌಂಡ್​ ಮಾಡಿದೆ..ಈ ಸಿನಿಮಾ ನೋಡಿದವರೆಲ್ಲಾ ವಾರೇ ವ್ಹಾ ಕಾಂತಾರ ಅಂತ ಮುಂದಿನ ವರ್ಷನ್​ಗಾಗಿ ವೇಟ್​ ಮಾಡ್ತಿದ್ದಾರೆ.. ರಿಷಬ್​ ಶೆಟ್ಟಿ ಹೇಳುವ ಪ್ರಕಾರ ಕಾಂತಾರ ಸೀಕ್ವೆಲ್​​ ಬರಲ್ಲ.. ಪ್ರೀಕ್ವೆಲ್​ ಬರುತ್ತೆ ಅಂತ.. ಈಗ ಅದೇ ಪ್ರೀಕ್ವೆಲ್​ಗಾಗಿ ಸಕಲ ಸಿದ್ಧತೆ ನಡೆಯುತ್ತಿದೆ...


ಕಾಂತಾರ ಸಿನಿಮಾಕ್ಕಿಂತ ಕಾಂತಾರ ಪ್ರೀಕ್ವೆಲ್​ ಹೈ ಬಜೆಟ್​​ನಲ್ಲಿ ಮೂಡಿಬರಲಿದೆಯಂತೆ. ಕೆಲ ಮೂಲಗಳ ಪ್ರಕಾರ ಬರೋಬರಿ 100 ಕೋಟಿಗೂ ಅಧಿಕ ಬಜೆಟ್​ ಮೂಡಿಬರಲಿದೆಯಂತೆ ಕಾಂತಾರ ನೆಕ್ಸ್ಟ್​​​ ವರ್ಷನ್​​​.. ಇನ್ನು ಕಾಂತಾರ ಸಿನಿಮಾದಲ್ಲಿ ಸಣ್ಣ ಪುಟ್ಟ ಪಾತ್ರಗಳಿಂದ ಹಿಡಿದು ಎಲ್ಲಾ ಪಾತ್ರಗಳು ನೋಡುಗರ ಗಮನ ಸೆಳೆದಿತ್ತು.. ಆದ್ರೆ ಪ್ರೀಕ್ವೆಲ್​ನಲ್ಲಿ ಕೆಲ ಕಲಾವಿದರು ಇರುವುದಿಲ್ವಂತೆ.. 50ರಷ್ಟು ಹಳೆ ಕಲಾವಿದರ ಜೊತೆ 50ರಷ್ಟು ಹೊಸ ಕಲಾವಿದರು ಇರ್ತಾರಂತೆ.. ಕಥೆಗೆ ತಕ್ಕಂತೆ ಪಾತ್ರಗಳು ಸಾಗುತ್ತಂತೆ..
ಇದೀಗ ಕಾಂತಾರ ಪ್ರಿಕ್ವೆಲ್​ನಲ್ಲಿ ತಲೈವಾ ರಜನಿಕಾಂತ್​ ಆ್ಯಕ್ಟ್​ ಮಾಡ್ತಾರಂತೆ. ಇನ್ನು ಕಾಂತಾರ ಪ್ರೀಕ್ವೆಲ್​​ನಲ್ಲಿ ಬ್ಯುಸಿಯಾಗಿರೋ ರಿಷಬ್​​ ಶೆಟ್ಟಿ, ಇನ್​ ಮೂರು ತಿಂಗಳುಗಳ ಕಾಲ ಮೊಬೈಲ್​​ ಸ್ವೀಚ್​ ಆಫ್​ ಮಾಡಲಿದ್ದಾರಂತೆ..

2 years ago | [YT] | 2

MEDIAISM

ಬೆಂಗಳೂರು ಬಂದ್ ಕಂಪ್ಲೀಟ್ ಸಕ್ಸಸ್.. ಸಕ್ಸಸ್...
ಕಾವೇರಿ ನೀರಿಗಾಗಿ ಭುಗಿಲೆದ್ದ ಅನ್ನದಾತರ ಕಿಚ್ಚು..!

ಬೆಂಗಳೂರು

ಕಾವೇರಿ ನೀರಿಗಾಗಿ ಬೆಂಗಳೂರು ಬಂದ್​​​​​ಗೆ ಕಂಪ್ಲೀಟ್ ಸಕ್ಸಸ್ ಆಗಿದೆ ,ರೈತ ಮುಖಂಡರಿಂದ ಬೆಂಗಳೂರು ಬಂದ್​​​​​​ಗೆ ಕರೆ ನೀಡಲಾಗಿತ್ತು. ನಗರದ ಫ್ರೀಡಂ ಪಾರ್ಕ್​ನಲ್ಲಿ ಕಾವೇರಿಗಾಗಿ ಅನ್ನದಾತರ ಆಕ್ರೋಶ ಭುಗಿಲೆದ್ದಿತ್ತು. ರಸ್ತೆ ರಸ್ತೆಯಲ್ಲಿ ಮಲಗಿ ಉರುಳು ಸೇವೆ ಮಾಡಿದ್ದಾರೆ. ಅಲ್ದೇ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಕೂಡಲೇ ನಿಲ್ಲಿಸಬೇಕೆಂದು ರಾಜ್ಯ ಸರ್ಕಾರದ ವಿರುದ್ಧ ರೈತ ಮುಖಂಡರು ​​ ಕಿಡಿಕಾರಿದ್ರು.

ಬೆಂಗಳೂರು ಬಂದ್ ಕಂಪ್ಲೀಟ್ ಸಕ್ಸಸ್ ಆಗಿದೆ. ಸ್ವಯಂಪ್ರೇರಿತವಾಗಿ ಬೆಂಗಳೂರಿನಲ್ಲಿ ಎಲ್ಲಾ ಬಂದ್​​ ಮಾಡಲಾಗಿದೆ. ಜನರಿಲ್ಲದೇ ರೋಡ್​​​​ ಫುಲ್​​ ಬಿಕೋ ಎನ್ನುತ್ತಿದ್ದು. ಕೆ.ಆರ್​ ಮಾರ್ಕೆಟ್, ಕೆ.ಆರ್​ ಸರ್ಕಲ್​ ಖಾಲಿ ಖಾಲಿ ಹೊಡೆಯುತ್ತಿತ್ತು. ಪ್ರಯಾಣಿಕರಿಲ್ಲದೇ BMTC, KSRTC ಬಸ್​ಗಳು ಓಡಾಡುತ್ತಿದ್ವು.
ಭುಗಿಲೆದ್ದ ಅನ್ನದಾತರ ಕಿಚ್ಚಿನಿಂದ ಕಾವೇರಿ ಹೋರಾಟ ಕೊನೆಗೂ ಸಕ್ಸಸ್​​​ ಆಗಿದೆ. ಆದ್ರೆ, ರಾಜ್ಯ ಸರ್ಕಾರ ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೋದನ್ನಾ ಕಾದುನೋಡ್ಬೇಕಿದೆ....

2 years ago | [YT] | 3

MEDIAISM

mediaism.in/garuda-purana-kannada-teaser-launched/


"ಗರುಡ ಪುರಾಣ" ಚಿತ್ರದ ಟೀಸರ್ ರಿಲೀಸ್ ..!
ಟೀಸರ್ ಲಾಂಚ್‌ ಮಾಡಿ ಶುಭ ಕೋರಿದ ಅಶ್ವಿನಿ ಪುನೀತ್ ರಾಜಕುಮಾರ್ ...
ಸ್ಯಾಂಡಲ್‌ವುಡ್‌:
27 ಫ್ರೇಮ್ ಕ್ರಿಯೇಷನ್ಸ್ ಲಾಂಛನದಲ್ಲಿ ಸಿಂಧು ಕೆ.ಎಂ ಮತ್ತು ಬಿ.ಎಲ್ ಯೋಗೇಶ್ ಕುಮಾರ್ ನಿರ್ಮಿಸುತ್ತಿರುವ, ಮಂಜುನಾಥ್ ಬಿ ನಾಗಬಾ ಕಥೆ, ಚಿತ್ರಕಥೆ ಬರೆದು ಸಂಕಲನ ಮಾಡಿ ನಿರ್ದೇಶಿಸಿರುವ " ಗರುಡ ಪುರಾಣ" ಚಿತ್ರದ ಟೀಸರ್ ಅನ್ನು ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ಮಾಜಿ ಶಾಸಕರಾದ ರಾಜು ಗೌಡ, ತಿಪ್ಪರಾಜು, ಡಿ.ಎಸ್.ಮ್ಯಾಕ್ಸ್ ನ ದಯಾನಂದ್, ನಿವೃತ್ತ ಪೊಲೀಸ್ ಅಧಿಕಾರಿ ಶ್ರೀನಿವಾಸ್ ಕೂಚ್ಚಣ್ಣ, ನಟ ಮಣಿಕಂಠ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ನಾನು "ಕಾಂತಾರ" ಸೇರಿದಂತೆ ಹದಿನೆಂಟು ಚಿತ್ರಗಳಿಗೆ ಆನ್ ಲೈನ್ ಎಡಿಟರ್ ಆಗಿ ಕಾರ್ಯ ನಿರ್ವಹಿಸಿದ್ದೇನೆ. "ಕಾಂತಾರ" ನನಗೆ ಹೆಸರು ತಂದುಕೊಟ್ಟ ಸಿನಿಮಾ. ಅವಕಾಶ ನೀಡಿದ ರಿಷಬ್ ಶೆಟ್ಟಿ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಇನ್ನು "ಗರುಡ ಪುರಾಣ" ಚಿತ್ರದ ಕುರಿತು ಹೇಳಬೇಕಾದರೆ, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇ ಬೇಕು ಎಂಬ ಅಂಶ ನಮ್ಮ ಸಿನಿಮಾದಲ್ಲಿರುವುದರಿಂದ "ಗರುಡ ಪುರಾಣ" ಎಂದು ಹೆಸರಿಟ್ಟಿದ್ದೇವೆ‌. ಮೂರು ಆಯಾಮಗಳಲ್ಲಿ ಚಿತ್ರದ ಕಥೆ ಸಾಗುತ್ತದೆ. ಚಿತ್ರೀಕರಣ ಮುಕ್ತಾಯವಾಗಿ, ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಹಾಗೂ ನಮಗೆ ಮೊದಲಿನಿಂದಲೂ ಪ್ರೋತ್ಸಾಹ ನೀಡುತ್ತಿರುವ ರಾಜು ಗೌಡ ಹಾಗೂ ತಿಪ್ಪರಾಜು ಅವರಿಗೆ ಧನ್ಯವಾದ ಎಂದರು ಚಿತ್ರದ ನಾಯಕ ಹಾಗೂ ನಿರ್ದೇಶಕ ಮಂಜುನಾಥ್ ನಾಗಬಾ.

ಚಿತ್ರದ ನಿರ್ಮಾಪಕರಾದ ಸಿಂಧು ಕೆ.ಎಂ ಹಾಗೂ ಬಿ.ಎಲ್ ಯೋಗೇಶ್ ಕುಮಾರ್ ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.

ನಾಯಕಿ ದಿಶಾ ಶೆಟ್ಟಿ , "ಭಜರಂಗಿ" ಖ್ಯಾತಿಯ ಚೆಲುವರಾಜು, ಸಂತೋಷ್ ಕರ್ಕಿ, ಕೆಂಚಣ್ಣ, ರಾಜಕುಮಾರ್, ಮಹೇಂದ್ರ ಗೌಡ ಮುಂತಾದವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಸಂಗೀತ ನಿರ್ದೇಶಕ ರಾಕೇಶ್ ಆಚಾರ್ಯ ಹಾಡುಗಳ ಬಗ್ಗೆ, ಸುನೀಲ್ ನರಸಿಂಹಮೂರ್ತಿ ಛಾಯಾಗ್ರಹಣದ ಕುರಿತು ಮಾಹಿತಿ ನೀಡಿದರು

2 years ago | [YT] | 1

MEDIAISM

ರಾಷ್ಟ್ರ ಪ್ರಶಸ್ತಿ ವಿಜೇತ ಅನಿರುದ್ಧ್ ಗೆ ಅಭಿಮಾನಿಗಳಿಂದ ಸನ್ಮಾನ ..!

"ಬಾಳೇ ಬಂಗಾರ" ಸಾಕ್ಷ್ಯ ಚಿತ್ರ ನಿರ್ದೇಶನಕ್ಕೆ ರಾಷ್ಟಪ್ರಶಸ್ತಿ......

ಸ್ಯಾಂಡಲ್‌ವುಡ್‌:
ಕನ್ನಡ ಹಿರಿತೆರೆ ಹಾಗೂ ಕಿರುತೆರೆತಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ನಟ ಅನಿರುದ್ಧ್ ಜತಕರ್ ಅವರಿಗೆ ರಾಷ್ಟ್ರ ಪ್ರಶಸ್ತಿ ಮನ್ನಣೆ ದೊರೆತಿದೆ, ಯೆಸ್ ನಮ್ಮ ಅನಿರುದ್ಧ್ ರವರ "ಬಾಳೇ ಬಂಗಾರ" ಸಾಕ್ಷ್ಯ ಚಿತ್ರದ ನಿರ್ದೇಶನಕ್ಕಾಗಿ ಅನಿರುದ್ಧ್ ಅವರಿಗೆ ರಾಷ್ಟಪ್ರಶಸ್ತಿ ದೊರೆತಿದೆ. ಈ ಸಂಭ್ರಮವನ್ನು ಅನಿರುದ್ಧ್ ಅವರ ಅಭಿಮಾನಿಗಳು ಸಂತೋಷದಿಂದ ಸಂಭ್ರಮಿಸಿದ್ದಾರೆ.
ಇತ್ತೀಚೆಗೆ ನಗರದ ಖಾಸಗಿ ಹೋಟೆಲ್ ನಲ್ಲಿ ಅನಿರುದ್ಧ್ ಜತಕರ ಅಭಿಮಾನಿ ಬಳಗದ ನಿಶಾದ್ (ಹೈದರಾಬಾದ್ ), ಗಾಯತ್ರಿ( ತಮಿಳುನಾಡು), ಸೋನಿ(ಸಿಂಗಾಪುರ), ಪುಷ್ಪ(ಬೆಂಗಳೂರು) ಸೇರಿದಂತೆ ಅನೇಕ ಅಭಿಮಾನಿಗಳು ಅನಿರುದ್ದ್ ಅವರಿಗೆ ಆತ್ಮೀಯ ಅಭಿನಂದನಾ ಸಮಾರಂಭವನ್ನು ಆಯೋಜಿಸಿ,‌ ನ್ಯಾಚುರಲ್ ಸ್ಟಾರ್ ಎಂಬ ಬಿರುದು ನೀಡಿದ್ದಾರೆ. ಹಿರಿಯ ನಟ ಬಿ.ಎಂ.ವೆಂಕಟೇಶ್ ಹಾಗೂ ನಿರ್ದೇಶಕ ಎಂ.ಆನಂದರಾಜ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅನಿರುದ್ಧ್ ಜತಕರ್ ಕುಟುಂಬದ ಸದಸ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಆತ್ಮೀಯ ಸನ್ಮಾನ ಸ್ವೀಕರಿಸಿ ಮಾತನಾಡಿದ ಅನಿರುದ್ಧ್, ಅಭಿಮಾನಿಗಳ ಈ ಪ್ರೀತಿಗೆ ಮನತುಂಬಿ ಬಂದಿದೆ. ಅವರಿಗೆ ನನ್ನ ಧನ್ಯವಾದ ಎಂದರು....

mediaism.in/kannada-actor-aniruddha-honored-nation…

2 years ago | [YT] | 6

MEDIAISM

#darshan invites Rajinikanth in aggressive to join Kaveri protest

2 years ago | [YT] | 1