“JANARA KOOGU” Subscribe our channel for latest news updates and hit the bell icon for notify every updates from “JANARA KOOGU” WhatsApp No. 9448404133.
" ಜನರ ಕೂಗು " ಯೂಟ್ಯೂಬ್ ಚಾನಲ್ ನ ಸುದ್ದಿಗಳನ್ನು ನೇರವಾಗಿ ವೀಕ್ಷಿಸಲು ಸಬಸ್ಕ್ರೈಬ್ ಮಾಡಿ ಬೆಲ್ಲ ಬಟನ ವತ್ತಿ
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ-ವಾಟ್ಸಾಪ್ ನಂ: 94484 04133...ಗುಲಾಮ್ ದಫೇದಾರ,(ಚಾನಲ್ ಹೆಡ್)
Janara Koogu
ಮಠ,ಮಸೀದಿ, ಮಂದಿರದಲ್ಲಿ ನಿಸ್ವಾರ್ಥ ಸೇವೆ :
‘ಮಾತು ಬಾರದಿದ್ದರೂ ಭಾವೈಕ್ಯತೆಯ ಸಂದೇಶ ಬಿಟ್ಟು ಹೋದ ಮೂಕವ್ವ’
ಮುದ್ದೇಬಿಹಾಳ : ಕೆಲವರ ವ್ಯಕ್ತಿತ್ವವೇ ಹಾಗೆ,ಸಮಾಜದಲ್ಲಿ ಯಾವುದನ್ನೂ ತಲೆಗೇರಿಸಿಕೊಳ್ಳದೇ ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುವ ಸ್ವಭಾವದವರಿರುತ್ತಾರೆ.ಅಂತವರ ಸಂಖ್ಯೆ ವಿರಳ.ಅದರಲ್ಲೂ ಮಾತು ಬಂದವರು ಎಲ್ಲರೊಂದಿಗೆ ಬೆರೆಯಬಹುದು ಇಲ್ಲೊಬ್ಬ ಮಹಿಳೆ ಮಾತು ಬಾರದಿದ್ದರೂ ಮಠ, ಮಂದಿರ, ಮಸೀದಿಗಳಲ್ಲಿ ಸೇವೆ ಸಲ್ಲಿಸಿ ಭಾವೈಕ್ಯತೆಯ ಸಂದೇವನ್ನು ಸಮಾಜಕ್ಕೆ ಮೌನವಾಗಿದ್ದುಕೊಂಡೇ ಬಿಟ್ಟು ಹೋಗಿದ್ದಾಳೆ.
ಮುದ್ದೇಬಿಹಾಳ ಪಟ್ಟಣದ ಆಶ್ರಯ ಕಾಲನಿಯಲ್ಲಿ ಪುಟ್ಟ ಮನೆಯಲ್ಲಿ ವಾಸಿಸುತ್ತಿದ್ದ ಮೂಕವ್ವ ಲಮಾಣಿ ಎಂಬ ಮಹಿಳೆಯೇ ಭಾವೈಕ್ಯತೆಯ ಸಂದೇಶವನ್ನು ತನ್ನ ಅಂತ್ಯಕ್ರಿಯೆ ಸಮಯದಲ್ಲಿ ಜಗತ್ತಿಗೆ ತೋರಿಸಿದ್ದಾಳೆ.
ಮುದ್ದೇಬಿಹಾಳ ಪಟ್ಟಣದ ರಾಘವೇಂದ್ರ ಮಠದಲ್ಲಿ ಕಳೆದ 20 ವರ್ಷಗಳಿಗಿಂದ ಹೆಚ್ಚು ಕಾಲ ಸ್ವಚ್ಛತಾ ಕಾರ್ಯ ಮಾಡುವುದು, ಸಭೆ ಸಮಾರಂಭಗಳಿದ್ದಲ್ಲಿ ಬಂದ ಅತಿಥಿಗಳಿಗೆ ಕೈಮುಗಿದು ಗೌರವ ಕೊಡುವ ಕೆಲಸದಿಂದಲೇ ಆಕೆ ಹೆಸರಾಗಿದ್ದಳು.
ಅದು ಬಿಟ್ಟರೆ ಮುದ್ದೇಬಿಹಾಳ ಮಹಾಂತೇಶ ನಗರದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಕಳೆದ ಹತ್ತು ವರ್ಷಗಳಿಂದ ಸ್ವಚ್ಛತೆ ಕೆಲಸ ಮಾಡಿಕೊಂಡಿದ್ದಳು ಅದು ಅಲ್ಲದೇ ಆಶ್ರಯ ಕಾಲನಿಯಲ್ಲಿರುವ ಬಿಲಾಲ ಮಸೀದಿಯಲ್ಲೂ ತನ್ನ ಜಾತಿ,ಧರ್ಮದ ಗೊಡವೆಯನ್ನು ಲೆಕ್ಕಿಸದೇ ಸ್ವಚ್ಛತಾ ಕೆಲಸವನ್ನು ಮಾಡಿ
ಹಿಂದೂ,ಮುಸ್ಲಿಂ ಸಮಾಜದ ಧಾರ್ಮಿಕ ಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಾ ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ ಮೂಕವ್ವ ಲಮಾಣಿ ನ.20 ರಂದು ಅನಾರೋಗ್ಯದಿಂದ ನಿಧನರಾದರು.ಮೂಕವ್ವ ಲಮಾಣಿ ಪರಿಶಿಷ್ಟ ಜಾತಿಯವರಾಗಿದ್ದು ಅವರ ಅಂತ್ಯಕ್ರಿಯೆ ನಾಲತವಾಡ ರಸ್ತೆಯಲ್ಲಿದ್ದ ಪರಿಶಿಷ್ಟರ ಸ್ಮಶಾನ ಭೂಮಿಯಲ್ಲಿ ನ.21 ರಂದು ಪುರಸಭೆಯ ಪೌರಕಾರ್ಮಿಕರ ನೆರವಿನಿಂದ ನೆರವೇರಿಸಲಾಯಿತು.
ಅಂತ್ಯಕ್ರಿಯೆಲ್ಲಿ ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ರಾಘವೇಂದ್ರ ಮಠದ ವ್ಯವಸ್ಥಾಪಕ ಪ್ರಕಾಶ ದೇಶಪಾಂಡೆ, ವ್ಯವಸ್ಥಾಪನಾ ಸಮಿತಿಯ ಬಾಳು ಗಿಂಡಿ,ಆರ್ಚಕ ಗುರರಾಜ ರಾಜಪುರೋಹಿತ, ದಿಲೀಪ ದೇಶಪಾಂಡೆ, ಗಣಪತಿ ದೇವಸ್ಥಾನದ ರಾಜು ರಾಯಗೊಂಡ, ಆನಂದ ಕಾಮಟೆ, ಆಶ್ರಯ ಕಾಲನಿ ಹಜರತ್ ಬಿಲಾಲ್ ಮಸೀದಿಯ ಬಾಬುಸಾಬ ಬಿಜಾಪೂರ, ಅಸ್ಲಂ ನಾಗೂರ, ಅಬ್ದುಲಮಜೀದ ಶಿರೋಳ, ಮುನ್ನಾ, ಪರಿಶಿಷ್ಟ ಸಮಾಜದಿಂದ ಶರಣಪ್ಪ ಚಲವಾದಿ, ಕ್ರಿಶ್ಚಿಯನ್ ಸಮುದಾಯದ ಥಾಮಸ್,ಮುಖಂಡ ರಾಮಣ್ಣ ಪೂಜಾರಿ ಮೊದಲಾದವರು ಪಾಲ್ಗೊಂಡಿದ್ದರು.
ಸಮಾಜದಲ್ಲಿ ಮಾನವೀಯತೆ, ಭಾವೈಕ್ಯತೆಗೆ ಕೊಡಲಿಪೆಟ್ಟು ಬೀಳುತ್ತಿದೆ ಎಂದುಕೊಂಡಾಗ ಇಂತಹ ಸಂಗತಿಗಳು ಅವುಗಳ ಇರುವಿಕೆಯ ಜೀವಂತಿಕೆಯನ್ನು ಎತ್ತಿ ಹಿಡಿಯುತ್ತವೆ ಎಂಬುದಕ್ಕೆ ನಿದರ್ಶನವಾಯಿತು.
1 year ago (edited) | [YT] | 9
View 0 replies
Janara Koogu
ನ.17 ರಂದು ನವಜಾತ ಶಿಶುಗಳ ಆರೈಕೆ ಉಚಿತ ತರಬೇತಿ ಶಿಬಿರ
https://youtu.be/CNNw_r6_6qw
ಮುದ್ದೇಬಿಹಾಳ : ತಾಲ್ಲೂಕಿನ ಮದರಿ ಗ್ರಾಮದ ಚೈತ್ರಾ ಆರೋಗ್ಯ ಮತ್ತು ಶಿಕ್ಷಣ ಸೇವಾ ಟ್ರಸ್ಟ್ ಮತ್ತು ಅರ್ಜುನ ಆಸ್ಪತ್ರೆ ಇವರ ಸಹಯೋಗದಲ್ಲಿ ಆಶಾ ಕಾರ್ಯಕರ್ತೆಯರಿಗೆ ನವಜಾತ ಶಿಶುಗಳ ಆರೈಕೆ ಉಚಿತ ತರಬೇತಿ ಶಿಬಿರವನ್ನು ನ.17 ರಂದು ಬೆಳಗ್ಗೆ 11.30ಕ್ಕೆ ಪಟ್ಟಣದ ಬೆಂಗಳೂರು ಬೇಕರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ನಿರ್ದೇಶಕ ಕುಮಾರ ವಡ್ಡರ ಹೇಳಿದರು.
ಪಟ್ಟಣದ ಅರ್ಜುನ್ ಆಸ್ಪತ್ರೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ತಾಲ್ಲೂಕಿನ ಎಲ್ಲ ಪಿಎಚ್‌ಸಿ ಆಶಾಗಳಿಗೆ ತರಬೇತಿ ಏರ್ಪಡಿಸಲಾಗಿದ್ದು ಮೊದಲ ಹಂತದಲ್ಲಿ ಗರಸಂಗಿ ಹಾಗೂ ತಂಗಡಗಿ ಪಿ.ಎಚ್.ಸಿ ವ್ಯಾಪ್ತಿಯಲ್ಲಿ ಬರುವ ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗುತ್ತದೆ. ಚಿಕ್ಕಮಕ್ಕಳ ತಜ್ಞ ವೈದ್ಯರಾದ ಡಾ.ಪರಶುರಾಮ ವಡ್ಡರ ಅವರು ಮಾರ್ಗದರ್ಶನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಂ.ಜಿ.ಎಂ.ಕೆ ಕಾಲೇಜಿನ ಪ್ರಾಚಾರ್ಯ ಎಸ್.ಕೆ.ಹರನಾಳ, ಟ್ರಸ್ಟ್ ಅಧ್ಯಕ್ಷ ಯಮನಪ್ಪ ವಡ್ಡರ ಆಗಮಿಸುವರು ಎಂದು ಅವರು ತಿಳಿಸಿದರು.ಈ ಸಂದರ್ಭದಲ್ಲಿ ಅರ್ಜುನ ಆಸ್ಪತ್ರೆ ಸಿಬ್ಬಂದಿ ಇದ್ದರು.
1 year ago (edited) | [YT] | 9
View 0 replies
Janara Koogu
ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಸಾಗವಾನಿ ಕಟ್ಟಿಗೆಯ 25 ಅಡಿ ಎತ್ತರದ ರಥದ ನಿರ್ಮಾಣ ಕಾರ್ಯಕ್ಕೆ ಬುಧವಾರ ದೇವಸ್ಥಾನದ ಕಮೀಟಿಯವರು, ದೈವದವರು ಕೊಪ್ಪಳದಲ್ಲಿ ಚಾಲನೆ ನೀಡಿದರು.
ಕೊಪ್ಪಳದ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ತೇರು ನಿರ್ಮಾಣ ಕಾರ್ಯಕ್ಕೆ ವಿದ್ಯುಕ್ತ ಚಾಲನೆ ನೀಡಲಾಗಿದೆ ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರ ಶಿವಾಚಾರ್ಯರು ತಿಳಿಸಿದರು.
ಕೊಪ್ಪಳದ ರಥಶಿಲ್ಪಿ ಮಲ್ಲಪ್ಪ ಬಡಿಗೇರ ನೇತೃತ್ವದಲ್ಲಿರುವ ಎಂ.ಜಿ.ರಥಶಿಲ್ಪಿ ಕಲಾಕೇಂದ್ರದಲ್ಲಿ ತೇರಿನ ಕಟ್ಟಿಗೆಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ತೇರು ನಿರ್ಮಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗವಿಸಿದ್ದೇಶ್ವರ ಮಹಾಸ್ವಾಮಿಯವರು ರಥದ ಲೋಕಾರ್ಪಣೆ ಸಮಾರಂಭದಲ್ಲಿ ಉಪಸ್ಥಿತರಿರಲು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದರು.
ಬಸವೇಶ್ವರ ದೇವಸ್ಥಾನ ಕಮೀಟಿ ಅಧ್ಯಕ್ಷ ಗುರುಲಿಂಗಪ್ಪ ಸುಲ್ಲಳ್ಳಿ ಮಾತನಾಡಿ, 4 ಏಕಶಿಲೆಯ ಬೃಹತ್ ಚಕ್ರಗಳ ಮೇಲೆ 3 ಪೀಠಗಳುಳ್ಳ 25 ಅಡಿ ಎತ್ತರದ ಭವ್ಯ ತೇರು ಮುಂದಿನ ವರ್ಷ 2025ರ ಶ್ರಾವಣ ಮಾಸಕ್ಕೂ ಮುನ್ನ ಪೂರ್ಣಗೊಳ್ಳಲಿದ್ದು ಶ್ರಾವಣ ಮಾಸದ ಕೊನೆ ಮಂಗಳವಾರ ನಡೆಯಲಿರುವ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ನೂತನ ತೇರನ್ನು ಲೋಕಾರ್ಪಣೆಗೊಳಿಸಲಾಗುತ್ತದೆ ಎಂದರು.
ಗ್ರಾಮದ ಪ್ರಮುಖರಾದ ಶರಣು ಹಿರೇಮಠ,ಶಿವಪ್ಪ ಆರೇಶಂಕರ, ಮಾಜಿ ಸೈನಿಕ ನಾಗಲಿಂಗಯ್ಯ ಮಠ ಶಿವಲಿಂಗಪ್ಪ ಗಸ್ತಿಗಾರ, ಜುಮ್ಮಣ್ಣ ಹಿರೇಕುರುಬರ, ರಾಮಣ್ಣ ಹುಲಗಣಿ ಶಿವನಗೌಡ ಪಾಟೀಲ, ಕರಬಸ್ಸು ಬಿರಾದಾರ, ಎಂ.ಎಂ.ನಾಟೇಕಾರ, ಕಾಸಯ್ಯ ಮಠ, ಶಾಂತಗೌಡ ಬಿರಾದಾರ, ಸೋಮಣ್ಣ ಹೊಸಮನಿ, ಶ್ರೀಶೈಲ ಪಲ್ಲೇದ, ಊರ ದೈವಮಂಡಳಿಯವರು ಉಪಸ್ಥಿತರಿದ್ದರು.
1 year ago (edited) | [YT] | 19
View 0 replies
Janara Koogu
ಶಾಸಕ ನಾಡಗೌಡರಿಗೆ ಸನ್ಮಾನ
2 years ago | [YT] | 162
View 0 replies
Janara Koogu
2019
6 years ago | [YT] | 7
View 0 replies
Janara Koogu
ಹುಳು ಹತ್ತಿದ ಕಡಲೆ ನೀಡಬೇಡಿ ಎಂದರೆ ಗಂಡನಿಂದ ಆವಾಜ್
6 years ago | [YT] | 4
View 0 replies