This channel caters the understanding and the knowledge gathered by my everyday expeditions into books, lectures and to my own heart.


P T C

ಗುರು ಮಂಗಲಮ್ — ಸದ್ಗುರು ಶ್ರೀ ಮಧುಸೂದನ ಸಾಯಿ ಕುರಿತಾದ ಪವಿತ್ರ ಸ್ತುತಿ

ಇದು ತ್ರಿಗುಣಾತ್ಮಕ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಮೂಲ ಸ್ವರೂಪವೇ ಆದ ಗುರುವಿನ ಮಹಿಮೆಯನ್ನು ಸ್ತುತಿಸುವ ವಿನೂತನ ಗಾನವಾಗಿದೆ.

ಸತ್ಯ ಸಾಯಿ ಗ್ರಾಮದ ಸುಕ್ಷೇತ್ರದಲ್ಲಿ ನೆಲೆನಿಂತಿರುವ 21 ನೇ ಶತಮಾನದ ಅಧ್ಯಾತ್ಮ ಗುರುಗಳಾದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಗುಣಗಳನ್ನು ಅವರ ಅವತಾರ ಧ್ಯೇಯವನ್ನು ವರ್ಣಿಸುತ್ತದೆ. ಇದು ಲೋಕಕ್ಷೇಮ, ಶಾಂತಿ ಮತ್ತು ಸಮಗ್ರ ಕಲ್ಯಾಣಕ್ಕಾಗಿ ಆಶೀರ್ವಾದವನ್ನು ಕೋರುವ ಪವಿತ್ರ ಪ್ರಾರ್ಥನೆಯಾಗಿದೆ. ✨

3 months ago | [YT] | 0

P T C

ಚಿರಸ್ಮರಣೀಯವೆಂಬಂತೆ, ಫಿಜಿ ದೇಶದ ಸರ್ಕಾರವು ಶ್ರೀ ಮಧುಸೂದನ ಸಾಯಿ ಅವರಿಗೆ ಫಿಜಿಯ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ' - ಘೋಷಿಸಿತು. ಅಲ್ಲಿನ ರಾಷ್ಟ್ರಪತಿಗಳಾದ ರಟು ನೈಕಮ ಲಾಲಬಲವು ಅವರು ಇಂದು ಪ್ರದಾನ ಮಾಡಿದರು.

ಪೆಸಿಫಿಕ್ ಸಮುದ್ರ ಮತ್ತು ಅದರಾಚೆಗಿನ ದೇಶಗಳಲ್ಲಿ ಮುನ್ನಡೆಸುತ್ತಿರುವ ಪರಿವರ್ತನಾತ್ಮಕ ಮಾನವೀಯ ಸೇವಾ ಯೋಜನೆಗಳಿಗಾಗಿ ಗುರುತಿಸಲ್ಪಟ್ಟ ಶ್ರೀ ಮಧುಸೂದನ ಸಾಯಿ ಅವರು ಈ ಪುರಸ್ಕಾರವನ್ನು ಒಂದು ಜಗತ್ತು ಒಂದು ಕುಟುಂಬ ಸೇವಾ ಅಭಿಯಾನದ ಭಾಗವಾಗಿರುವ ಎಲ್ಲಾ ನಿಷ್ಠಾವಂತ ಸ್ವಯಂಸೇವಕರು ಮತ್ತು ಬೆಂಬಲಿಗರಿಗೆ ಸಮರ್ಪಿಸಿದರು.

ಫಿಜಿ ದೇಶದ ಮೊದಲ ಸಂಪೂರ್ಣ ಉಚಿತ ಮಕ್ಕಳ ಹೃದ್ರೋಗ ಆಸ್ಪತ್ರೆಯನ್ನು ನಿರ್ಮಿಸುವುದರಿಂದ ಹಿಡಿದು ಜಾಗತಿಕ ಪೋಷಣೆ ಮತ್ತು ಆರೋಗ್ಯಸೇವಾ ಉಪಕ್ರಮಗಳಲ್ಲಿ ಶ್ರೇಷ್ಠ ಪ್ರವರ್ತಕರಾಗುವವರೆಗೆ, ಈ ಗೌರವವು ಪ್ರೇಮ, ಸೇವೆ, ನಿಸ್ವಾರ್ಥತೆಗೆ ಸಮರ್ಪಿತವಾದ ಜೀವನಕ್ಕೆ ರಾಷ್ಟ್ರಗೌರವ ನೀಡಿದಂತಾಗಿದೆ.

8 months ago | [YT] | 11

P T C

ಮಲೇಷಿಯಾದಲ್ಲಿ 'ವ್ಯಷ್ಟಿ' ಯಿಂದ 'ಪರಮೇಷ್ಟಿ' (i to I) ಎಂಬ ವಿಷಯಾಧಾರಿತವಾಗಿ ಏರ್ಪಡಿಸಲಾಗಿದ್ದ ಯುವ ಸಮಾವೇಶದಲ್ಲಿ ಶ್ರೀ ಮಧುಸೂದನ ಸಾಯಿ ಜಾಗತಿಕ ಮಾನವೀಯ ಸೇವಾ ಅಭಿಯಾನದ ಮೂಲಕ ಜಗತ್ತಿನ ಹಲವು ದೇಶಗಳಲ್ಲಿ ಕೈಗೊಳ್ಳಲಾಗುತ್ತಿರುವ ಅನೇಕ ಸೇವಾ ಚಟುವಟಿಕೆಗಳ ಬಗ್ಗೆ ಯುವಕ-ಯುವತಿಯರು ತಮಗಾದ ಅನುಭವಗಳನ್ನು ಹಂಚಿಕೊಂಡರು.

ಇದೇ ಸಮಯದಲ್ಲಿ ಕ್ರಿಯಾಲಕ್ಷ್ಮೀ ಗುರುಕುಲದ ಗುರುಮಾ, ಮಲೇಷಿಯಾದ ರಾಮಕೃಷ್ಣ ಮಠದ ಸ್ವಾಮಿ ಸುಪ್ರಿಯಾನಂದ, ಧರ್ಮ ಶಕ್ತಿ ವೇದಾಂತ ಆಶ್ರಮದ ಪೂಜ್ಯ ಶ್ರೀ ಶ್ಯಾಮಲಾನಾಥನ್ ಐಯ್ಯಂಗಾರ್, ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಶ್ರೀ ಬಿ ಎನ್ ನರಸಿಂಹಮೂರ್ತಿ ಮತ್ತು ಜಾಗತಿಕ ಸಹಯೋಗ ಕೇಂದ್ರದ ಮುಖ್ಯಸ್ಥರಾದ ಭುವನಾ ಸಂತಾನಮ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಅಧ್ಯಾತ್ಮ ಸಾಧನೆ ಮತ್ತು ಆತ್ಮ ಪರಿವರ್ತನೆಯಂತಹ ಹಲವು ವಿಷಯಗಳ ಮೇಲೆ ತಮಗಿರುವ ಜ್ಞಾನವನ್ನು ಹಂಚಿಕೊಂಡರು.

ಈ ಸಮಾವೇಶದ ಭಾಗವಾಗಿ ನಡೆದ ಪರಸ್ಪರ ಸಂವಾದ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ತಮ್ಮ ಅಧ್ಯಾತ್ಮ ಸಾಧನೆಯ ಅನುಭವಗಳನ್ನು ಹಂಚಿಕೊಂಡರು. ತಮ್ಮ ದೈನಂದಿನ ಕಾರ್ಯಗಳಲ್ಲಿ, ನಾವು ದೈವೀ ಸ್ವರೂಪರೆಂದು ತಿಳಿದು, ವರ್ತಿಸುವ ಬಗ್ಗೆ ವಿವರವಾಗಿ ಚರ್ಚಿಸಲಾಯಿತು.

ಕೊನೆಯ ದಿನ ಶ್ರೀ ಮಧುಸೂದನ ಸಾಯಿಯವರೊಂದಿಗೆ ಪ್ರಶ್ನೋತ್ತರ ಸಂವಾದವು ನಡೆಯಿತು. ಅಧ್ಯಾತ್ಮ ಪಥದಲ್ಲಿ ಎದುರು ಬರುವ ಸವಾಲುಗಳು, ನಮ್ಮ ಜನ್ಮಜಾತ ಗುಣಗಳು, ಬುದ್ಧಿ ಮತ್ತು ಅಂತರ್ವಾಣಿಗಳನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡು ಜೀವಿಸುವ ಬಗೆ, ಪ್ರಾಯೋಗಿಕ ಅಧ್ಯಾತ್ಮಗಳಂತಹ ಹಲವು ವಿಚಾರಗಳ ಮೇಲೆ ಬೆಳಕು ಚೆಲ್ಲಲಾಯಿತು.

ಮೂರು ದಿನಗಳ ಯಶಸ್ವಿ ಸಮಾವೇಶದ ನಂತರ, ಅಭ್ಯರ್ಥಿಗಳು ಇಂದಿಗೂ ಮರೆಯಲಾಗದ ಅನುಭವವನ್ನು ತಮ್ಮದಾಗಿಸಿಕೊಂಡು, ನಿಸ್ವಾರ್ಥತೆ, ನಿರ್ಭಯತೆ ಮತ್ತು ನಿರ್ಲಜ್ಜತೆಯ ನಿಜಾರ್ಥವನ್ನು ತಿಳಿದು, ಅತ್ಯುತ್ಸುಕರಾಗಿ ಹೊರಹೊಮ್ಮಿದರು.

#srimadhusudansai #smsghm #malaysia #srimadhusudansaikannada #smsghmkannada #youth #youthmeet #spirituality #fest #trend #transformation

1 year ago | [YT] | 6

P T C

ನವರಾತ್ರಿಯ ಆರನೇ ದಿನ ಸಾಯಂಕಾಲದ ಕಾರ್ಯಕ್ರಮದಲ್ಲಿ ಶಾಸಕರು ಮತ್ತು ಶ್ರೀ ಮಧುಸೂದನ ಸಾಯಿ ಜಾಗತಿಕ ಮಾನವೀಯ ಸೇವಾ ಅಭಿಯಾನದ ಬಹುಕಾಲದ ಹಿತೈಷಿಗಳಾದ ಡಾ ಟಿ ಬಿ ಜಯಚಂದ್ರ ಅವರು ಮತ್ತು ಉನ್ನತ ಶಿಕ್ಷಣ ಮಂತ್ರಿಗಳು ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಂ ಸಿ ಸುಧಾಕರ್ ಅವರು ಭಾಗಿಯಾಗಿದ್ದರು.

ಶ್ರೀ ಸತ್ಯ ಸಾಯಿ ವಿದ್ಯಾಸಂಸ್ಥೆಗಳ ಹಿರಿಯ ವಿದ್ಯಾರ್ಥಿಯಾದ ಶ್ರೀ ಎಂ ಸಿ ಸುಧಾಕರ್ ಅವರು ತಾವು ಪಡೆದ ಮೌಲ್ಯಾಧಾರಿತ ವಿದ್ಯೆಯ ಉಡುಗೊರೆಗೆ ಪ್ರತಿಯಾಗಿ ಸಂಸ್ಥೆಗೆ ಸೇವೆ ಸಲ್ಲಿಸುವ ಸುದಿನ ಒದಗಿ ಬಂದಿದೆ ಎಂದು ನುಡಿದರು. ಇದರ ಜೊತೆಗೆ ಮುದ್ದೇನಹಳ್ಳಿಯ ಆಶ್ರಮಕ್ಕೆ ಅಗತ್ಯವಾದ ನೀರು ಪೂರೈಕೆ ಮಾಡುವಲ್ಲಿ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದರು.

ಇದೇ ಸಮಯದಲ್ಲಿ ಮಾತನಾಡಿದ ಶ್ರೀ ಮಧುಸೂದನ ಸಾಯಿ ಅವರು, ಪೂರ್ವಜರಿಗೆ ಶಾಂತಿ ನೀಡಲು ಭೂಮಿಗೆ ಗಂಗೆಯನ್ನು ತರಿಸಿದ ಭಗೀರಥನಂತೆ, ಬರ ಪ್ರದೇಶಗಳಿಗೆ ಅಗತ್ಯವಾದ ನೀರು ಒದಗಿಸುವ ಮೂಲಕ ಲೋಕ ಕಲ್ಯಾಣದ ಕಾರ್ಯದಲ್ಲಿ ಭಾಗಿಯಾಗುವಂತೆ ಅತಿಥಿಯರಿಗೆ ಕರೆ ನೀಡಿದರು.

#SriMadhusudanSaikannada #SMSGHMkannada #Navaratri2024 #Gratitude #WaterForAll #SathyaSaiGrama #Bhagiratha #GlobalHumanitarianMission #Chikkaballapura #WaterProjects #CommunityService #EducationAndService

1 year ago | [YT] | 10

P T C

*'ದಿ ಸ್ಟೋರಿ ಡಿವೈನ್'* - ಶ್ರೀ ಮಧುಸೂದನ ಸಾಯಿ ಅವರ ಆತ್ಮ ಚರಿತ್ರೆಯ ಹೊಚ್ಚ ಹೊಸ ಪುಸ್ತಕದ ಆಂಗ್ಲ ಆವೃತ್ತಿಯನ್ನು ಇಂದೇ ಖರೀದಿಸಿ: www.saiprakashana.org/product/the-story-divine-an-…

1 year ago | [YT] | 7

P T C

*"ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ"* ಎನ್ನುವ ರೀತಿಯಲ್ಲಿ ಮಹಿಳಾ ಸಶಕ್ತೀಕರಣದ ಹಲವು ಯೋಜನೆಗಳಲ್ಲಿ ಮಹಿಳಾ ಉನ್ನತ ಶಿಕ್ಷಣವು ಬಹಳ ಪ್ರಾಧಾನ್ಯತೆಯನ್ನು ಹೊಂದಿದೆ.

*ಶ್ರೀ ಮಧುಸೂದನ ಸಾಯಿ ಅವರು ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹಧನವನ್ನು ಕೂಡ ನೀಡಿ, ಉಚಿತ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಿದ್ದಾರೆ.*

ಇದರ ಕುರಿತಾದ ಸಣ್ಣ ವೀಡಿಯೋ ತುಣುಕು ಇಲ್ಲಿದೆ.
youtube.com/shorts/kLkt7TkBBF...
*#ಶ್ರೀಮಧುಸೂದನಸಾಯಿ *#ಉನ್ನತಶಿಕ್ಷಣ* *#ಮಹಿಳಾಸಬಲೀಕರಣ*

2 years ago | [YT] | 3

P T C

https://youtu.be/fvtSzq8P8RA?si=MjpBc...

*"ತ್ಯಾಗದಿಂದ ಮಾತ್ರವೇ ನಾವು ಅಮರರಾಗಬಹುದು"* ಎಂಬ ವೇದವಾಕ್ಯದಂತೆ, ಈ ಜಗತ್ತಿನಲ್ಲಿ ದೇವಪಿತೃತ್ವ ಮತ್ತು ಮಾನವ ಸೋದರತ್ವದ ಸಂದೇಶವನ್ನು ಬದುಕಿ ತೋರುವ ನಿಟ್ಟಿನಲ್ಲಿ, ತಮ್ಮಲ್ಲಿರುವ ಸಂಪನ್ಮೂಲವನ್ನು ಇತರರ ಒಳಿತಿಗಾಗಿ ತ್ಯಾಗ ಮಾಡಿ, ಅವರ ಸುಖದಲ್ಲಿ ನಮ್ಮ ಸುಖವನ್ನು ಕಾಣುವುದು ಮಹಾಪುರುಷರ ಗುಣಲಕ್ಷಣ.

ಅಂತಹ ಮಹಾಮಹಿಮರ ಸಾಲಿನಲ್ಲಿ ಶ್ರೀ ಸತ್ಯ ಸಾಯಿ ಲೋಕ ಸೇವಾ ಗುರುಕುಲಂ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷರಾದ *ದಿವಂಗತ ಶ್ರೀ ಮಡಿಯಾಲ ನಾರಾಯಣ ಭಟ್ಟರು* ಅಗ್ರಗಣ್ಯರು.

ಗ್ರಾಮೀಣ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವ ಮೂಲಕ ನಿಸ್ವಾರ್ಥ ಜೀವನವನ್ನು ನಡೆಸಿ, ಭವ್ಯ ಭಾರತ ನವನಿರ್ಮಾಣದ ನಿರ್ಮಾತೃವಾಗಿ, ಅವರು ಕಂಡ ಕನಸನ್ನು, ಅವರ ಆರಾಧ್ಯದೈವವಾದ *ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ* ರವರು ಕೈಗೆತ್ತಿಕೊಂಡು, ಇಂದು ಅವರ ಶಿಷ್ಯರಾದ *ಸದ್ಗುರು ಶ್ರೀ ಮಧುಸೂದನ ಸಾಯಿ* ಯವರು ಸಾಕಾರಗೊಳಿಸುತ್ತಿದ್ದಾರೆ.

ಸದ್ಗುರುಗಳು ಹೇಳುವಂತೆ *"ಯಾರೊಬ್ಬರೂ ನಿಸ್ವಾರ್ಥವಾಗಿ ಇತರರ ಒಳಿತಿಗಾಗಿ ಶ್ರಮಿಸುವರೋ, ಅವರ ಆ ಕಾರ್ಯವನ್ನು ಭಗವಂತನೇ ಮುನ್ನಡೆಸುತ್ತಾನೆ"* ಎಂಬಂತೆ ಪ್ರಸ್ತುತವಾಗಿ, ಕರ್ನಾಟಕ, ತೆಲಂಗಾಣ, ತಮಿಳುನಾಡು ಸೇರಿದಂತೆ 28 ವಿದ್ಯಾನಿವೇಶನಗಳಲ್ಲಿ ಮೌಲ್ಯಾಧಾರಿತ ಸಂಪೂರ್ಣ ಉಚಿತ ವಿದ್ಯಾಭ್ಯಾಸವನ್ನು ನೀಡುವ ಮಹಾನ್ ಕಾರ್ಯವು ಅವಿರತವಾಗಿ ನಡೆಯುತ್ತಿದೆ.

ಅವರ ಜನ್ಮದಿನವಾದ ಇಂದು, ಅವರ ನಿತ್ಯಪ್ರಾರ್ಥನೆಯ ಭಾಗವಾಗಿ ಹಾಡುತ್ತಿದ್ದ *ಸತ್ಯವೂ ನಿತ್ಯವೂ ಆದಂಥ ಜೀವನವ* ಎಂಬ ಮನಕಲಕುವ ಹಾಡನ್ನು ಕೇಳಿ, ಆನಂದಿಸಿ, ಅವರ ಜೀವನದಿಂದ ಸ್ಫೂರ್ತಿ ಪಡೆಯೋಣ.‪@saiamrutadhara-9848‬ ‪@ಶ್ರೀಗುರುಅನುಗ್ರಹಜ್ಯೋತಿಷ್ಯಂ‬ ‪@smsghm‬ ‪@SriMadhusudanSaiKannada‬ ‪@srimadhusudansai‬

2 years ago | [YT] | 20

P T C

https://youtu.be/oOKurzb2OEc?si=xzkBq...

ಸದ್ಗುರುಗಳು ಮತ್ತವರ ವಿದ್ಯಾರ್ಥಿಗಳು ಅವಿನಾಭಾವ ಪ್ರೇಮಸಂಬಂಧವನ್ನು ಹಂಚಿಕೊಂಡಿದ್ದು, ಅನೇಕ ವಿದ್ಯಾಸಂಸ್ಥೆಗಳಲ್ಲಿ ತಮ್ಮ ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಂತೆ ಪಾಲಿಸಿ, ಪೋಷಿಸಿ, ಬೋಧಿಸಿ ಬೆಳೆಸುತ್ತಿದ್ದಾರೆ.

*"ನಾನು ನನ್ನ ಮಕ್ಕಳು - ಇಡೀ ವಿಶ್ವವನ್ನೇ ಒಳಿತಿಗಾಗಿ ಪರಿವರ್ತಿಸುವೆ" ಎಂಬುದು ಸ್ವಾಮಿಯವರ ಅನನ್ಯ ವಿಶ್ವಾಸ...*
‪@SriMadhusudanSaiKannada‬ ‪@srimadhusudansai‬ ‪@smsghm‬ ‪@SriSathyaSaiOfficial‬
#ಶ್ರೀಮಧುಸೂದನಸಾಯಿ
#ಪ್ರೇಮಪ್ರವಾಹ
#ವಿದ್ಯಾರ್ಥಿ

2 years ago | [YT] | 3

P T C

https://youtu.be/uMIIVaN0WFo?si=ELiOd...

ಸದ್ಗುರು ಶ್ರೀ ಮಧುಸೂದನ ಸಾಯಿಯವರ ತತ್ತ್ವದ್ವಯಗಳಾದ *ಸೇವೆ ಮತ್ತು ಅಧ್ಯಾತ್ಮಿಕತೆ* ಯ ಬಗ್ಗೆ ನೀಡಿರುವ ಸೊಗಸಾದ ಈ ವ್ಯಾಖ್ಯಾನವನ್ನು ವೀಕ್ಷಿಸಿ, _ಶ್ರೀ ಮಧುಸೂದನ ಸಾಯಿ - ಕನ್ನಡ_ ಚಾನೆಲ್ ನಲ್ಲಿ ಮಾತ್ರ..!!
🪷🪷🪷 ‪@SriMadhusudanSaiKannada‬‪@smsghm‬
#ಶ್ರೀಮಧುಸೂದನಸಾಯಿ
#ಸೇವೆ
#ಆಧ್ಯಾತ್ಮಿಕತೆ

2 years ago (edited) | [YT] | 2

P T C

youtube.com/shorts/09wdFZ4rp4...

*ರಾಷ್ಟ್ರೀಯ ಶಿಕ್ಷಣ ದಿನದ ವಿಶೇಷ ಸಂದೇಶ*

*ಶ್ರೇಷ್ಠತೆ ಎಂದರೇನು? ಮಾನವ ಅಭ್ಯುದಯ ಎಂಬುದರ ನಿಜ ಅಂತರಾರ್ಥವೇನು?*

ಈ ಎಲ್ಲಾ ಪ್ರಶ್ನೆಗಳಿಗೆ ಸರಳ ಸುಬೋಧ ಉತ್ತರ ನೀಡಿದ್ದಾರೆ ಸದ್ಗುರು ಶ್ರೀ ಮಧುಸೂದನ ಸಾಯಿ..!

ಕೇಳಿ...ಅನುಸರಿಸಿ...ಅನುಭವಿಸಿ...🪷

#ಶ್ರೀಮಧುಸೂದನಸಾಯಿ
#ಶ್ರಿಸತ್ಯಸಾಯಿಮಾನವಾಭ್ಯುದಯವಿಶ್ವವಿದ್ಯಾಲಯ
#ಶ್ರೇಷ್ಠತೆ
 @SaiVrindaOfficial   @SriMadhusudanSaiKannada   @srimadhusudansai 

2 years ago | [YT] | 2